ಮುಖೇಶ್ ಅಂಬಾನಿ ಒಡೆತನದ ಜನಪ್ರಿಯ ಮತ್ತು ದೇಶದ ನಂಬರ್ ಒನ್ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ (Reliance Jio) ಮಾರುಕಟ್ಟೆಗೆ ಕಾಲಿಟ್ಟಾಗಿನಿಂದ ಟೆಲಿಕಾಂ ಉದ್ಯಮದಲ್ಲಿ ಸಂಚಲನ ಸೃಷ್ಟಿಸಿದೆ. ರಿಲಯನ್ಸ್ ಜಿಯೋ (Reliance Jio) ಒಂದೇ ಪ್ರಿಪೇಯ್ಡ್ ಯೋಜನೆಯಲ್ಲಿ ಅತ್ಯಂತ ಕಡಿಮೆ ಬೆಲೆಯ ದರದಲ್ಲಿ ಅನ್ಲಿಮಿಟೆಡ್ 5G ಡೇಟಾ ಮತ್ತು ವಾಯ್ಸ್ ಕರೆಗಳೊಂದಿಗೆ ಇನ್ನೂ ಇತರೆ ಕಾಂಬೊ ಪ್ರಯೋಜನಗಳನ್ನು ನೀಡುವ ಬೆಸ್ಟ್ ರೀಚಾರ್ಜ್ ಯೋಜನೆಗಳನ್ನು ನೀಡುತ್ತಿರುವ ಈ 3333 ರೂಗಳ ರಿಚಾರ್ಜ್ ಪ್ಲಾನ್ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾದಂತಹ ಟೆಲಿಕಾಂ ಕಂಪನಿಗಳ ಗ್ರಾಹಕರಿಗೆ ಚುಡಹಿಸುವಂತಿದೆ.3
Also Read: Truecaller ನಿಮ್ಮ ಕರೆಗಳಿಗೆ ಉತ್ತರಿಸುವ Azure AI ಆಧಾರಿತ ವಾಯ್ಸ್ ರೆಕಾರ್ಡ್ ಮಾಡುವ ಹೊಸ ಫೀಚರ್ ಪರಿಚಯ!
ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ವಿವಿಧ ಬೆಲೆಗಳೊಂದಿಗೆ ಹಲವಾರು ಪ್ರಿಪೇಯ್ಡ್ ಮತ್ತು ಪೋಸ್ಟ್ಪೇಯ್ಡ್ ರೀಚಾರ್ಜ್ ಯೋಜನೆಗಳನ್ನು ಹೊಂದಿದೆ. ಜಿಯೋ ಇತ್ತೀಚೆಗೆ ರೂ 3333 ರ ಜಿಯೋ ಯೋಜನೆಯನ್ನು ಪ್ರಾರಂಭಿಸಿದೆ. ರಿಲಯನ್ಸ್ ಜಿಯೋ (Reliance Jio) ಈ ಯೋಜನೆಯಲ್ಲಿ 912GB ಗಿಂತ ಹೆಚ್ಚು ಡೇಟಾ ಲಭ್ಯವಿದೆ. ಇದರ ಹೊರತಾಗಿ ಈ ಯೋಜನೆಯನ್ನು ರೀಚಾರ್ಜ್ ಮಾಡುವ ಗ್ರಾಹಕರಿಗೆ OTT ಅಪ್ಲಿಕೇಶನ್ ಫ್ಯಾನ್ಕೋಡ್ಗೆ ಪ್ರವೇಶವನ್ನು ಸಹ ನೀಡಲಾಗುತ್ತದೆ ಈ ಜಿಯೋದ ಇತ್ತೀಚಿನ ಪ್ಲಾನ್ ಬಗ್ಗೆ ವಿವರವಾಗಿ ತಿಳಿಯಿರಿ.
ರಿಲಯನ್ಸ್ ಜಿಯೋದ ಈ 3,333 ರೂಗಳ ರೀಚಾರ್ಜ್ ಯೋಜನೆಯ ಮಾನ್ಯತೆಯು 1 ವರ್ಷ ಅಂದರೆ ಬರೋಬ್ಬರಿ 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಜಿಯೋದ ಈ ರೀಚಾರ್ಜ್ ಪ್ಯಾಕ್ನಲ್ಲಿ ಪ್ರತಿದಿನ 2.5 GB ದೈನಂದಿನ ಡೇಟಾ ಲಭ್ಯವಿದೆ ಅಂದರೆ ಗ್ರಾಹಕರು ಒಟ್ಟು 912.5 GB ಡೇಟಾವನ್ನು ಖರ್ಚು ಮಾಡಬಹುದು. ಪ್ರತಿದಿನ ಸ್ವೀಕರಿಸಿದ ಡೇಟಾ ಖಾಲಿಯಾದ ನಂತರ ಇಂಟರ್ನೆಟ್ ವೇಗವು 64kbps ಗೆ ಕಡಿಮೆಯಾಗುತ್ತದೆ.
ರಿಲಯನ್ಸ್ ಜಿಯೋ (Reliance Jio) ಈ ಯೋಜನೆಯಲ್ಲಿ ಅನಿಯಮಿತ ವಾಯ್ಸ್ ಕರೆಗಳನ್ನು ನೀಡಲಾಗುತ್ತದೆ. ಅಂದರೆ ದೇಶಾದ್ಯಂತ ಯಾವುದೇ ನೆಟ್ವರ್ಕ್ನಲ್ಲಿ ಅನಿಯಮಿತ ಕರೆಗಳು ಈ ಯೋಜನೆಯಲ್ಲಿ ಪ್ರತಿದಿನ 100 SMS ಅನ್ನು ಪಡೆಯುತ್ತವೆ. ರಿಲಯನ್ಸ್ ಜಿಯೋ ಗ್ರಾಹಕರು ಈ ಯೋಜನೆಯಲ್ಲಿ Fancode OTT ಯ ಉಚಿತ ಚಂದಾದಾರಿಕೆಯನ್ನು ಸಹ ಪಡೆಯುತ್ತಾರೆ. ಇದಲ್ಲದೆ ಈ ಯೋಜನೆಯಲ್ಲಿ JioCinema, JioTV ಮತ್ತು JioCloud ಚಂದಾದಾರಿಕೆಯೂ ಉಚಿತವಾಗಿದೆ.
ಅಲ್ಲದೆ JioTV ಮೊಬೈಲ್ ಅಪ್ಲಿಕೇಶನ್ ಮೂಲಕ ಗ್ರಾಹಕರು ಫ್ಯಾನ್ಕೋಡ್ನ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು. ರಿಲಯನ್ಸ್ ಜಿಯೋ (Reliance Jio)ದ ಈ ಯೋಜನೆಯಲ್ಲಿ ಹಲವು ಹೆಚ್ಚುವರಿ ಪ್ರಯೋಜನಗಳು ಸಹ ಲಭ್ಯವಿವೆ. ಬಳಕೆದಾರರು 5G ನೆಟ್ವರ್ಕ್ನಲ್ಲಿದ್ದರೆ ಈ ಯೋಜನೆಯೊಂದಿಗೆ ಅನಿಯಮಿತ 5G ಡೇಟಾವನ್ನು ನೀಡಲಾಗುತ್ತದೆ. ರಿಲಯನ್ಸ್ ಜಿಯೋ (Reliance Jio) ಈ ಯೋಜನೆಯಲ್ಲಿ JioCinema ಪ್ರೀಮಿಯಂ ಚಂದಾದಾರಿಕೆ ಲಭ್ಯವಿಲ್ಲ ಎಂಬುದು ಗಮನಾರ್ಹವಾಗಿದೆ.