Reliance Jio OTT: ರಿಲಯನ್ಸ್ ಜಿಯೋ (Reliance Jio) ಕಡಿಮೆ ಬೆಲೆಯಲ್ಲಿ ಹೆಚ್ಚಿನ ಪ್ರಯೋಜನಗಳನ್ನು ಗ್ರಾಹಕರಿಗೆ ನೀಡುವುದರಲ್ಲಿ ಮೊದಲಿನಿಂದಲೂ ಹೆಸರು ಮಾಡಿದೆ. Jio ಪೋಸ್ಟ್‌ಪೇಯ್ಡ್ ಯೋಜನೆಗಳು ಅನೇಕ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಈ ಯೋಜನೆಗಳಲ್ಲಿ OTT ಪ್ಲಾಟ್‌ಫಾರ್ಮ್‌ಗಳು ಉಚಿತವಾಗಿ ಸಿಗಲಿವೆ. Netflix, Amazon Prime ಮತ್ತು Disney + Hotstar ಗೆ ಉಚಿತ ಚಂದಾದಾರಿಕೆ ಇದರಲ್ಲಿ ಲಭ್ಯವಿದೆ. ಈ ಮೂರರ ಮಾಸಿಕ ಚಂದಾದಾರಿಕೆಯ ವೆಚ್ಚವು ಸುಮಾರು 667 ರೂ.ಗಳಷ್ಟಾಗಿರುತ್ತವೆ. ಆದರೆ Jio ನ ಈ ಯೋಜನೆಗಳಲ್ಲಿ ಮೂರೂ ಉಚಿತವಾಗಿ ಸಿಗಲಿದೆ.
ಜಿಯೋದ 399 ರೂ. ಯೋಜನೆಯಲ್ಲಿ (Jio Plan) ಬಳಕೆದಾರರಿಗೆ ಮಾಸಿಕ 75GB ಡೇಟಾವನ್ನು ನೀಡಲಾಗುತ್ತದೆ. ಇದಲ್ಲದೇ ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆ ಮತ್ತು ದಿನಕ್ಕೆ 100 SMS ಲಭ್ಯವಿದೆ. ಹೆಚ್ಚುವರಿ ವೈಶಿಷ್ಟ್ಯಗಳ ಕುರಿತು ಹೇಳಬೇಕಾದರೆ Netflix, Amazon Prime ಮತ್ತು Hotstar ಇದರಲ್ಲಿ ಸಂಪೂರ್ಣವಾಗಿ ಉಚಿತವಾಗಿ ಲಭ್ಯವಿದೆ. ಇದಲ್ಲದೆ ಜಿಯೋ ಅಪ್ಲಿಕೇಶನ್‌ಗಳಿಗೆ ಫ್ರೀ ಆಕ್ಸೆಸ್ ಲಭ್ಯವಿದೆ.
ಜಿಯೋದ 599 ರೂ. ಯೋಜನೆಯು ಒಂದು ಫ್ಯಾಮಿಲಿ ಪ್ಲಾನ್ ಆಗಿದೆ. ಇದರಲ್ಲಿ ಬಳಕೆದಾರರಿಗೆ ಹೊಸ ಸಿಮ್ ಕಾರ್ಡ್ (New Sim Card) ನೀಡಲಾಗುತ್ತದೆ. ಈ ಯೋಜನೆಯಲ್ಲಿ ಬಳಕೆದಾರರು 100GB ಡೇಟಾವನ್ನು ಪಡೆಯುತ್ತಾರೆ. ಇದಲ್ಲದೆ 200GB ರೋಲ್‌ಓವರ್ ಡೇಟಾ ಕೂಡಾ ಲಭ್ಯವಿದೆ. ಪ್ರತಿದಿನ ಅನಿಯಮಿತ ಕರೆ ಮತ್ತು 100 SMS ಸೌಲಭ್ಯ ಲಭ್ಯವಿದೆ. ಹೆಚ್ಚುವರಿ ವೈಶಿಷ್ಟ್ಯಗಳನ್ನು ನೋಡುವುದಾದರೆ Netflix, Amazon Prime ಮತ್ತು Hotstar ಇದರಲ್ಲಿ ಸಂಪೂರ್ಣವಾಗಿ ಉಚಿತವಾಗಿ ಸಿಗುತ್ತದೆ. ಲಭ್ಯವಿದೆ. ಇದಲ್ಲದೆ ಜಿಯೋ ಅಪ್ಲಿಕೇಶನ್‌ಗಳಿಗೆ ಫ್ರೀ ಆಕ್ಸೆಸ್ ಲಭ್ಯವಿದೆ.
ಈ ಯೋಜನೆಯಲ್ಲಿ ಬಳಕೆದಾರರಿಗೆ ಮಾಸಿಕ 150GB ಡೇಟಾವನ್ನು ನೀಡಲಾಗುತ್ತದೆ. ಇದಲ್ಲದೆ 200GB ರೋಲ್‌ಓವರ್ ಡೇಟಾ ಸಹ ಲಭ್ಯವಿದೆ. ಈ ಕುಟುಂಬ ಯೋಜನೆಯಲ್ಲಿ 2 ಸಿಮ್ ಕಾರ್ಡ್‌ಗಳು ಕೂಡಾ ಸಿಗುತ್ತವೆ. ಇದಲ್ಲದೆ ಅನಿಯಮಿತ ಕರೆ ಮತ್ತು 100 SMS ಪ್ರತಿದಿನ ಲಭ್ಯವಿದೆ. ಈ ಪಳನ ನಲ್ಲಿ ಸಿಗುವ ಹೆಚ್ಚುವರಿ ವೈಶಿಷ್ಟ್ಯಗಳೆಂದರೆ Netflix, Amazon Prime ಮತ್ತು Hotstar. ಈ ಪ್ಲಾನ್ ನಲ್ಲಿ ಕೂಡಾ ಇದು ಸಂಪೂರ್ಣವಾಗಿ ಉಚಿತವಾಗಿ ಲಭ್ಯವಿದೆ. ಇದಲ್ಲದೆ ಜಿಯೋ ಅಪ್ಲಿಕೇಶನ್‌ಗಳಿಗೆ (Jio App) ಫ್ರೀ ಆಕ್ಸೆಸ್ ಲಭ್ಯವಿದೆ.