Jio Plan: ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋ ಹೊಸ ಕೈಗೆಟಕುವ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯನ್ನು ನೀಡುತ್ತಿದೆ. ರಿಲಯನ್ಸ್ ಜಿಯೋ ಹೆಚ್ಚುವರಿಯ ಡೇಟಾ ಮತ್ತು ಅನಿಯಮಿತ ಕರೆಗಳಿಂದ ಹೊರ ಬಂದು ಇದೀಗ ಉಚಿತ OTT ಚಂದಾದಾರಿಕೆಯನ್ನೂ ನೀಡುತ್ತಿದೆ. ನಿಮಗೆ ಡೇಟಾ ಕರೆಗಳೊಂದಿಗೆ ನೆಟ್‌ಫ್ಲಿಕ್ಸ್ ಮತ್ತು ಹಾಟ್‌ಸ್ಟಾರ್ ಚಂದಾದಾರಿಕೆಯೊಂದಿಗೆ ಅನೇಕ ಯೋಜನೆಗಳನ್ನು ಬಳಕೆದಾರರಿಗೆ ಪರಿಚಯಿಸಲಾಗಿದೆ. ಈ ಇತ್ತೀಚೀನ ಹೊಸ ಪ್ರಿಪೇಯ್ಡ್ ಯೋಜನೆ ಉಚಿತ ಓಟಿಟಿ ಚಂದಾದಾರಿಕೆಗಳೊಂದಿಗೆ ಪರಿಚಯಿಸಲಾಗಿದೆ. ಈ ಯೋಜನೆಯನ್ನು 84 ದಿನಗಳ ಮಾನ್ಯತೆ ಮತ್ತು ಓಟಿಟಿ ಸೌಲಭ್ಯದೊಂದಿಗೆ ಲಭ್ಯವಾಗುವಂತೆ ಮಾಡಲಾಗಿದೆ.
Also Read: 50MP ಕ್ಯಾಮೆರಾ ಮತ್ತು 5000mAh ಬ್ಯಾಟರಿಯ Redmi 13C 4G ಮೊದಲ ಸೇಲ್‌ನ ವಿಶೇಷತೆಗಳೇನು?
ರಿಲಯನ್ಸ್ ಜಿಯೋ ವೆಬ್‌ಸೈಟ್‌ನಲ್ಲಿ ತಿಳಿಸಲಾದ ವಿವರಗಳ ಪ್ರಕಾರ ನೀವು ಜಿಯೋ ತಂದಿರುವ ಹೊಸ ಪ್ರಿಪೇಯ್ಡ್ ಯೋಜನೆಯನ್ನು ರೂ.909 ನೊಂದಿಗೆ ರೀಚಾರ್ಜ್ ಮಾಡಿದರೆ ನೀವು ದಿನಕ್ಕೆ 2GB ಡೇಟಾವನ್ನು 84 ದಿನಗಳವರೆಗೆ ಪಡೆಯಬಹುದು. ಅಂದರೆ ಒಟ್ಟು 168GB ಡೇಟಾವನ್ನು 84 ದಿನಗಳವರೆಗೆ ಬಳಸಬಹುದು. ಅನಿಯಮಿತ ವಾಯ್ಸ್ ಕರೆಗಳು ಮತ್ತು ದಿನಕ್ಕೆ 100 ಮೆಸೇಜ್ ಪಡೆಯಿರಿ. ಈ ಯೋಜನೆಯು Sonyliv ಮತ್ತು G5 OTT ಚಂದಾದಾರಿಕೆಯೊಂದಿಗೆ ಬರುತ್ತದೆ.
ಇದಲ್ಲದೆ ನೀವು ಜಿಯೋ ಸಿನಿಮಾ, ಜಿಯೋ ಟಿವಿ ಮತ್ತು ಜಿಯೋ ಕ್ಲೌಡ್‌ಗೆ ಪ್ರವೇಶವನ್ನು ಪಡೆಯಬಹುದು. ಪ್ರತಿದಿನ 2GB ಡೇಟಾ ನೀಡುತ್ತಿದ್ದು ಇದರ ಕೋಟಾ ಪೂರ್ಣಗೊಂಡ ನಂತರ ಅನ್ಲಿಮಿಟೆಡ್ ಬಳಕೆಗೆ ಅವಕಾಶ ನೀಡುತ್ತದೆ. ಆದರೆ ಇದರ ಸ್ಪೀಡ್ 40kbps ಇಳಿಯುತ್ತದೆ. ನೀವು ಹೆಚ್ಚಿನ ವೇಗದ ಡೇಟಾ ಯೋಜನೆಗಳನ್ನು ಬಯಸಿದರೆ ನಂತರ ನೀವು ಡೇಟಾ ಆಡ್ ಆನ್ ಪ್ಲಾನ್‌ಗಳನ್ನು ತೆಗೆದುಕೊಳ್ಳಬಹುದು.
ಮೇಲಿನ ಯೋಜನೆಯಂತೆ ನೆಟ್‌ಫ್ಲಿಕ್ಸ್ ಚಂದಾದಾರಿಕೆಯೊಂದಿಗೆ ಜಿಯೋ 1,099 ರೂಗಳ ಮತ್ತು 1,499 ರೂಗಳ ಮತ್ತೇರಡು ಅತ್ಯುತ್ತಮ ಪ್ರಿಪೇಯ್ಡ್ ಯೋಜನೆಗಳನ್ನು ಜಿಯೋ ತಮ್ಮ ಬಳಕೆದಾರರಿಗೆ ನೀಡುತ್ತಿದೆ. ಇದರಲ್ಲಿ ನೀವು ಜಿಯೋದ ರೂ.1,099 ಪ್ಲಾನ್‌ನೊಂದಿಗೆ ರೀಚಾರ್ಜ್ ಮಾಡಿದರೆ ನೀವು ದಿನಕ್ಕೆ 2GB ಡೇಟಾ, ಅನಿಯಮಿತ ವಾಯ್ಸ್ ಕರೆಗಳು ಮತ್ತು ದಿನಕ್ಕೆ 100 SMS ಗಳನ್ನು 84 ದಿನಗಳ ಮಾನ್ಯತೆಯೊಂದಿಗೆ ಪಡೆಯಬಹುದು.
ಅದೇ ಮಾದರಿಯಲ್ಲಿನ 84 ದಿನಗಳ ಮಾನ್ಯತೆಯೊಂದಿಗೆ ಬರುವ ರೂ 1,499 ಪ್ಲಾನ್‌ನೊಂದಿಗೆ ರೀಚಾರ್ಜ್ ಮಾಡಿ ನೀವು ದಿನಕ್ಕೆ 3GB ಡೇಟಾ, ಅನಿಯಮಿತ ವಾಯ್ಸ್ ಕರೆಗಳು ಮತ್ತು ದಿನಕ್ಕೆ 100 SMS ಗಳನ್ನು ಪಡೆಯುತ್ತೀರಿ. ನೆಟ್‌ಫ್ಲಿಕ್ಸ್ ಚಂದಾದಾರಿಕೆಯೊಂದಿಗೆ ಬರುವ ಈ ಎರಡು ಯೋಜನೆಗಳೊಂದಿಗೆ ಜಿಯೋ ಅಪ್ಲಿಕೇಶನ್‌ಗಳು ಪೂರಕ ಚಂದಾದಾರಿಕೆಯನ್ನು ಸಹ ನೀಡುತ್ತಿದೆ.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ