Jio ಪ್ರತಿದಿನ 3GB ಡೇಟಾದೊಂದಿಗೆ Unlimited ಕರೆಗಳನ್ನು ನೀಡುವ ಈ 4 ಯೋಜನೆಗಳು ಬೆಲೆ ಎಷ್ಟು?

Updated on 22-Sep-2023
HIGHLIGHTS

ರಿಲಯನ್ಸ್ ಜಿಯೋ (Reliance Jio) ಪ್ರತಿದಿನ 3GB ಡೇಟಾ ಮತ್ತು ಅನ್ಲಿಮಿಟೆಡ್ ಕರೆಗಳನ್ನು ಸಹ ನೀಡುತ್ತದೆ.

ರಿಲಯನ್ಸ್ ಜಿಯೋ (Reliance Jio) ರೂ.1499 ರಿಚಾರ್ಜ್ ಪ್ಲಾನ್ ನಿಮಗೆ Netflix ಬೇಸಿಕ್ ಚಂದಾದಾರಿಕೆಯನ್ನು ಸಹ ನೀಡುತ್ತಿದೆ.

ರಿಲಯನ್ಸ್ ಜಿಯೋ (Reliance Jio) ತಮ್ಮ ಬಳಕೆದಾರರಿಗೆ ಕೈಗಟಕುವ ಬೆಲೆಗೆ ಅತ್ಯುತ್ತಮ ರೀಚಾರ್ಜ್ ಯೋಜನೆಗಳನ್ನು ನೀಡುತ್ತಿವೆ.

ಭಾರತದಲ್ಲಿ ರಿಲಯನ್ಸ್ ಜಿಯೋ (Reliance Jio) ತಮ್ಮ ಬಳಕೆದಾರರಿಗೆ ಹಲವಾರು ಕೈಗಟಕುವ ಬೆಲೆಗೆ ಅತ್ಯುತ್ತಮ ರೀಚಾರ್ಜ್ ಯೋಜನೆಗಳನ್ನು ನೀಡುತ್ತಿವೆ. ಅಲ್ಲದೆ ನಿಮ್ಮ ಬಜೆಟ್‌ಗೆ ಅನುಗುಣವಾಗಿ ಪ್ರಿಪೇಯ್ಡ್ ಪ್ಯಾಕ್ ಅನ್ನು ಆಯ್ಕೆ ಮಾಡಲು ಸುಲಭಗೊಳಿಸುತ್ತದೆ. ದೈನಂದಿನ ಆಧಾರದ ಮೇಲೆ ಸಾಕಷ್ಟು ಡೇಟಾ ಮತ್ತು ಅನಿಯಮಿತ ಕರೆ ಪ್ರಯೋಜನಗಳನ್ನು ಬಯಸುವವರು ಕೆಳಗೆ ತಿಳಿಸಲಾದ ಯೋಜನೆಗಳನ್ನು ಪರಿಶೀಲಿಸಬಹುದು. ಇವುಗಳಲ್ಲಿ ರಿಲಯನ್ಸ್ ಜಿಯೋ (Reliance Jio) ನಿಮಗೆ ಪ್ರತಿದಿನ 3GB ಡೇಟಾ ಮತ್ತು ಅನ್ಲಿಮಿಟೆಡ್ ಕರೆಗಳನ್ನು ಸಹ ನೀಡುತ್ತದೆ. ರಿಲಯನ್ಸ್ ಜಿಯೋ (Reliance Jio) ಕನಿಷ್ಠ 3GB ಪ್ರತಿದಿನ ಹೈ ಸ್ಪೀಡ್ ಡೇಟಾ ಮತ್ತು ಇತರ ಪ್ರಯೋಜನಗಳನ್ನು ಕೈಗೆಟಕುವ ಯೋಜನೆಗಳ ಮಾಹಿತಿಯನ್ನು ತಿಳಿಯಿರಿ.

ಜಿಯೋ ರೂ.219 ರಿಚಾರ್ಜ್ ಪ್ಲಾನ್ ವಿವರಗಳು

ರಿಲಯನ್ಸ್ ಜಿಯೋ (Reliance Jio) ಈ ಯೋಜನೆಯಲ್ಲಿ ಹೈ ಸ್ಪೀಡ್ 3GB ದೈನಂದಿನ 5G ಡೇಟಾವನ್ನು ನೀಡುತ್ತಿದೆ. ಅಂದ್ರೆ ಒಟ್ಟಾರೆಯಾಗಿ ನಿಮಗೆ 42GB ಡೇಟಾವನ್ನು ನೀಡುತ್ತಿದೆ. ಇದರೊಂದಿಗೆ ನಿಮಗೆ ಅನ್ಲಿಮಿಟೆಡ್ ವಾಯ್ಸ್ ಕರೆಗಳನ್ನು ದಿನಕ್ಕೆ 100 SMS ಮತ್ತು 14 ದಿನಗಳ ಮಾನ್ಯತೆಯನ್ನು ಹೊಂದಿದೆ. ಅಲ್ಲದೆ ಬಳಕೆದಾರರು ಯೋಜನೆಯ ಪ್ರಯೋಜನಗಳಲ್ಲಿ ವಿಶೇಷ ಕೊಡುಗೆಯಾಗಿ ಇದರಲ್ಲಿ ನಿಮಗೆ JioTV, JioCinema, JioSecurity ಮತ್ತು JioCloud ಅಪ್ಲಿಕೇಶನ್‌ಗಳಿಗೆ ಉಚಿತವಾಗಿ ಪ್ರವೇಶವನ್ನು ಒದಗಿಸುತ್ತಿದೆ.

ಜಿಯೋ ರೂ.399 ರಿಚಾರ್ಜ್ ಪ್ಲಾನ್ ವಿವರಗಳು

ರಿಲಯನ್ಸ್ ಜಿಯೋದ ಮತ್ತೊಂದು ವಿಶೇಷ ಯೋಜನೆಯನ್ನು ನೋಡುವುದಾದರೆ ಜಿಯೋ ರೂ.399 ರಿಚಾರ್ಜ್ ಪ್ಲಾನ್ ಇದರಲ್ಲೂ ಕಂಪನಿ ಹೈ ಸ್ಪೀಡ್ 3GB ದೈನಂದಿನ 5G ಡೇಟಾವನ್ನು ನೀಡುತ್ತಿದ್ದು ಅಂದ್ರೆ ಒಟ್ಟಾರೆಯಾಗಿ ನಿಮಗೆ 90GB ಡೇಟಾವನ್ನು ನೀಡುತ್ತಿದೆ. ಇದರೊಂದಿಗೆ ನಿಮಗೆ ಅನ್ಲಿಮಿಟೆಡ್ ವಾಯ್ಸ್ ಕರೆಗಳನ್ನು ದಿನಕ್ಕೆ 100 SMS ಮತ್ತು 28 ದಿನಗಳ ಮಾನ್ಯತೆಯನ್ನು ಹೊಂದಿದೆ. ಅಲ್ಲದೆ ಬಳಕೆದಾರರು ಯೋಜನೆಯ ಪ್ರಯೋಜನಗಳಲ್ಲಿ ವಿಶೇಷ ಕೊಡುಗೆಯಾಗಿ ಇದರಲ್ಲಿ ನಿಮಗೆ JioTV, JioCinema, JioSecurity ಮತ್ತು JioCloud ಅಪ್ಲಿಕೇಶನ್‌ಗಳಿಗೆ ಉಚಿತವಾಗಿ ಪ್ರವೇಶವನ್ನು ಒದಗಿಸುತ್ತಿದೆ.

ಜಿಯೋ ರೂ.999 ರಿಚಾರ್ಜ್ ಪ್ಲಾನ್ ವಿವರಗಳು

ನೀವು ಜಿಯೋ ಪ್ರೈಮ್ ಸದಸ್ಯತ್ವಕ್ಕೆ ಚಂದಾದಾರರಾಗಿದ್ದರೆ ನಿಮಗೆ ಈ  ರಿಲಯನ್ಸ್ ಜಿಯೋ (Reliance Jio) ರೂ 999 ರೀಚಾರ್ಜ್‌ನೊಂದಿಗೆ ಭಾರಿ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಅಂದ್ರೆ ಒಟ್ಟಾರೆಯಾಗಿ ನಿಮಗೆ 252GB ಡೇಟಾವನ್ನು ನೀಡುತ್ತಿದೆ. ಇದರೊಂದಿಗೆ ನಿಮಗೆ ಅನ್ಲಿಮಿಟೆಡ್ ವಾಯ್ಸ್ ಕರೆಗಳನ್ನು ದಿನಕ್ಕೆ 100 SMS ಮತ್ತು 84 ದಿನಗಳ ಮಾನ್ಯತೆಯನ್ನು ಹೊಂದಿದೆ. ಅಲ್ಲದೆ ಬಳಕೆದಾರರು ಯೋಜನೆಯ ಪ್ರಯೋಜನಗಳಲ್ಲಿ ವಿಶೇಷ ಕೊಡುಗೆಯಾಗಿ ಇದರಲ್ಲಿ ನಿಮಗೆ JioTV, JioCinema, JioSecurity ಮತ್ತು JioCloud ಅಪ್ಲಿಕೇಶನ್‌ಗಳಿಗೆ ಉಚಿತವಾಗಿ ಪ್ರವೇಶವನ್ನು ಒದಗಿಸುತ್ತಿದೆ.

ಜಿಯೋ ರೂ.1499 ರಿಚಾರ್ಜ್ ಪ್ಲಾನ್ ವಿವರಗಳು

ಈ ಪಟ್ಟಿಯ ಕೊನೆಯ ಪ್ಲಾನ್ ಬಗ್ಗೆ ಮಾತನಾಡುವುದಾದರೆ ಜಿಯೋ ರೂ.1499 ರಿಚಾರ್ಜ್ ಪ್ಲಾನ್ ನಿಮಗೆ Netflix ಬೇಸಿಕ್ ಚಂದಾದಾರಿಕೆಯೊಂದಿಗೆ ವೀಕ್ಷಕರು ತಮ್ಮ ನೆಚ್ಚಿನ ವಿಷಯವನ್ನು ಮೊಬೈಲ್ ಫೋನ್‌ಗಳು, ಟ್ಯಾಬ್ಲೆಟ್‌ಗಳು, ಲ್ಯಾಪ್‌ಟಾಪ್‌ಗಳಲ್ಲಿ ವೀಕ್ಷಿಸಬಹುದು. ಮೊಬೈಲ್ ಪ್ಲಾನ್‌ನಂತೆಯೇ ಈ ಬೇಸಿಕ್ ಪ್ಲಾನ್ ಅನ್ನು ಒಮ್ಮೆಗೆ ಒಂದೇ ಡಿವೈಸ್‌ನಲ್ಲಿ ಬಳಸಬಹುದು ಅಷ್ಟೇ. ಈ ರೀಚಾರ್ಜ್ ಪ್ಯಾಕ್‌ ದಿನಕ್ಕೆ 3GB ಡೇಟಾದೊಂದಿಗೆ 100 SMS ಮತ್ತು ಅನಿಯಮಿತ ಕರೆಗಳನ್ನು ಹೊಂದಿದೆ. ಈ ಯೋಜನೆ 5G ಬೆಂಬಲಿತ ಮೊಬೈಲ್ ಫೋನ್ ಹೊಂದಿರುವ ಬಳಕೆದಾರರು ಅನಿಯಮಿತ ಹೈ-ಸ್ಪೀಡ್ 5G ಇಂಟರ್ನೆಟ್‌ನ ಲಾಭವನ್ನು ಪಡೆಯಲು MyJio ಅಪ್ಲಿಕೇಶನ್ ಮೂಲಕ ವೆಲ್‌ಕಮ್ ಆಫರ್ ಅನ್ನು ಆಯ್ಕೆ ಮಾಡಬಹುದು. ಅಲ್ಲದೆ ಈ ಯೋಜನೆಯು 84 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :