FREE JioHotstar: ನೀವು ಈ ಬಾರಿ ಭಾರತದಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಐಪಿಎಲ್ ವೀಕ್ಷಿಸಲು ಇಷ್ಟಪಡುತ್ತಿದ್ದರೆ ರಿಲಯನ್ಸ್ ಜಿಯೋ ಜಬರ್ದಸ್ತ್ ಉಡುಗೊರೆಯೊಂದನ್ನು ಪರಿಚಯಿಸಿದೆ. ಈ ಐಪಿಎಲ್ ಕ್ರಿಕೆಟ್ ಮ್ಯಾಚ್ ಇದೆ 22ನೇ ಮಾರ್ಚ್ 2025 ರಿಂದ ಜಿಯೋ ಹಾಟ್‌ಸ್ಟಾರ್ (JioHotstar) ಮೂಲಕ ಪ್ರಸಾರವಾಗಲಿದ್ದು ಮೊದಲ ಮ್ಯಾಚ್ ಬೆಂಗಳೂರು ಮತ್ತು ಕೊಲ್ಕೊತ್ತಾದ ನಡುವೆ ಸಂಜೆ 7:30 ಗಂಟೆಗೆ ಶುರುವಾಗಲಿದೆ. ಈ ಜಿಯೋ ಹಾಟ್‌ಸ್ಟಾರ್ ಆಫರ್ 17ನೇ ಮಾರ್ಚ್ ರಿಂದ 31ನೇ ಮಾರ್ಚ್ 2025 ವರೆಗೆ ಮಾತ್ರ ಲಭ್ಯವಿರುತ್ತದೆ.
ಹೊಸ ಮತ್ತು ಅಸ್ತಿತ್ವದಲ್ಲಿರುವ ರಿಲಯನ್ಸ್ ಜಿಯೋ ಬಳಕೆದಾರರು ₹299 ಅಥವಾ ಅದಕ್ಕಿಂತ ಹೆಚ್ಚಿನ ರೀಚಾರ್ಜ್ ಯೋಜನೆಗಳನ್ನು ಹೊಂದುವ ಮೂಲಕ ಐಪಿಎಲ್ ಕ್ರಿಕೆಟ್ ಬರೋಬ್ಬರಿ 90 ದಿನಗಳವರೆಗೆ ಸಂಪೂರ್ಣವಾಗಿ ಆನಂದಿಸಬಹುದು. ಈ ಕೊಡುಗೆಯಡಿಯಲ್ಲಿ ಜಿಯೋ ಹಲವು ಉತ್ತಮ ಸೌಲಭ್ಯಗಳನ್ನು ಒದಗಿಸಿದೆ. ಇದರಿಂದ ನೀವು ಯಾವುದೇ ಅಡೆತಡೆಯಿಲ್ಲದೆ ಉತ್ತಮ ಗುಣಮಟ್ಟದಲ್ಲಿ ಕ್ರಿಕೆಟ್ ಅನ್ನು ಆನಂದಿಸಬಹುದು. ಹಾಗಾದ್ರೆ ಇದನ್ನು ಪಡೆಯುವುದು ಹೇಗೆ ಮತ್ತು ಈ ಆಫರ್ ಬಗ್ಗೆ ಒಂದಿಷ್ಟು ಮಾಹಿತಿಗಳು ಇಲ್ಲಿವೆ.
Also Read: 50MP ಸೆಲ್ಫಿ ಕ್ಯಾಮೆರಾ ಮತ್ತು 6000mAh ಬ್ಯಾಟರಿಯ Vivo V50 5G ಬೆಲೆ ಕಡಿತ! ಹೊಸ ಆಫರ್ ಬೆಲೆ ಎಷ್ಟು ಗೊತ್ತಾ!
ಈ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಕೊಡುಗೆಯನ್ನು ಪಡೆಯಲು ಅಸ್ತಿತ್ವದಲ್ಲಿರುವ ಜಿಯೋ ಸಿಮ್ ಬಳಕೆದಾರರು ಕನಿಷ್ಠ 299 ರೂಗಳನ್ನು ರೀಚಾರ್ಜ್ ಮಾಡಬೇಕಾಗುತ್ತದೆ. ಅದೇ ಸಮಯದಲ್ಲಿ ಹೊಸ ರಿಲಯನ್ಸ್ ಜಿಯೋ ಸಿಮ್ ಗ್ರಾಹಕರು 299 ರೂ ಅಥವಾ ಅದಕ್ಕಿಂತ ಹೆಚ್ಚಿನ ಯೋಜನೆಯೊಂದಿಗೆ ಹೊಸ ಜಿಯೋ ಸಿಮ್ ಪಡೆಯಬೇಕಾಗುತ್ತದೆ.
ರಿಲಯನ್ಸ್ ಜಿಯೋ 17ನೇ ಮಾರ್ಚ್ ಮೊದಲು 299 ರೂಗಳ ಮೇಲ್ಪಟ್ಟ ಯೋಜನೆಗಳನ್ನು ಜಿಯೋ ರೀಚಾರ್ಜ್ (Jio Recharge) ಮಾಡಿರುವ ಗ್ರಾಹಕರು ಕೇವಲ 100 ರೂಗಳ ಡೇಟಾ ಆಡ್-ಆನ್ ಪ್ಯಾಕ್ ತೆಗೆದುಕೊಳ್ಳುವ ಮೂಲಕ 90 ದಿನಗಳ ರಿಲಯನ್ಸ್ ಜಿಯೋ ಹಾಟ್‌ಸ್ಟಾರ್ (JioHotstar) ಚಂದಾದರಿಕೆಯ ಹೊಸ ಕೊಡುಗೆಯ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ.
ಈ ಆಫರ್ ಜಿಯೋಫೈಬರ್ / ಜಿಯೋಏರ್ ಫೈಬರ್ ಗ್ರಾಹಕರಿಗೂ ಲಭ್ಯವಿದ್ದು ಸುಮಾರು 50 ದಿನಗಳವರೆಗೆ ಉಚಿತ ಜಿಯೋಫೈಬರ್ / ಜಿಯೋಏರ್ ಫೈಬರ್ ಪ್ರಯೋಗದಡಿಯಲ್ಲಿ ಮನೆಯಲ್ಲಿ ಅತಿ ವೇಗದ ಇಂಟರ್ನೆಟ್ ಮತ್ತು 4K ಗುಣಮಟ್ಟದಲ್ಲಿ ಅದ್ಭುತ ಕ್ರಿಕೆಟ್ ವೀಕ್ಷಣೆಯನ್ನು ಆನಂದಿಸಲು ಜಿಯೋ ತನ್ನ ಗ್ರಾಹಕರಿಗೆ ಜಿಯೋಫೈಬರ್ / ಜಿಯೋಏರ್ ಫೈಬರ್‌ನ 50 ದಿನಗಳ ಉಚಿತ ಪ್ರಯೋಗವನ್ನು ಸಹ ಪಡೆಯಬಹುದು.
ಈ ಪ್ರಯೋಗದ ಭಾಗವಾಗಿ ಜಿಯೋಫೈಬರ್ / ಜಿಯೋಏರ್ ಫೈಬರ್ ಗ್ರಾಹಕರಿಗೆ 800+ ಟಿವಿ ಚಾನೆಲ್‌ಗಳು, 11+ ಅಧಿಕ OTT ಅಪ್ಲಿಕೇಶನ್‌ಗಳು ಮತ್ತು ಅನಿಯಮಿತ ವೈಫೈ ಅನ್ನು ನೀಡುತ್ತಿದೆ. ನೀವು ಈ ಆಫರ್ ಪಡೆಯಲು ಅರ್ಹರಾಗಿದ್ದಿರರ ಇಲ್ಲವ ಎನ್ನುವ ವಿವರಗಳಿಗಾಗಿ 60008-60008 ನಂಬರ್ಗೆ ಮಿಸ್ಡ್ ಕಾಲ್ ನೀಡುವ ಮೂಲಕ ಈ ಆಫರ್‌ನ ಸಂಪೂರ್ಣ ವಿವರಗಳನ್ನು ಪಡೆಯಬಹುದು.