Reliance Jio ಅತಿ ಕಡಿಮೆ ಬೆಲೆಯಲ್ಲಿ ಪ್ರತಿದಿನ 2.5gb ಡೇಟಾದೊಂದಿಗೆ ಅನ್ಲಿಮಿಟೆಡ್ ಕರೆಗಳನ್ನು ನೀಡುತ್ತಿದೆ!

Reliance Jio ಅತಿ ಕಡಿಮೆ ಬೆಲೆಯಲ್ಲಿ ಪ್ರತಿದಿನ 2.5gb ಡೇಟಾದೊಂದಿಗೆ ಅನ್ಲಿಮಿಟೆಡ್ ಕರೆಗಳನ್ನು ನೀಡುತ್ತಿದೆ!
HIGHLIGHTS

ರಿಲಯನ್ಸ್ ಜಿಯೋ ತನ್ನ ರೂ 349 ಪ್ಯಾಕೇಜ್‌ ಅನ್ನು ಪ್ರಾರಂಭಿಸಿತು. ಈ ಯೋಜನೆಯಡಿಯಲ್ಲಿ ಇಂಟರ್ನೆಟ್ ಬಳಕೆಗಾಗಿ ಕಂಪನಿಯು ಪ್ರತಿದಿನ 2.5 GB ಡೇಟಾವನ್ನು ಒದಗಿಸುತ್ತಿದೆ.

Airtel ಮತ್ತು Vodafone-ldea (Vi ಸಹ ಬಳಕೆದಾರರಿಗೆ ದೈನಂದಿನ 2.5 GB ಡೇಟಾದೊಂದಿಗೆ ಯೋಜನೆಯನ್ನು ನೀಡುತ್ತಿವೆ.

ಈ ಮೂರು ಕಂಪನಿಗಳಲ್ಲಿ ಯಾವುದು ಗ್ರಾಹಕರಿಗೆ ದಿನಕ್ಕೆ 2.5 GB ಡೇಟಾದೊಂದಿಗೆ ಉತ್ತಮ ಯೋಜನೆಯನ್ನು ಒದಗಿಸುತ್ತಿದೆ.

Reliance Jio: ಬಳಕೆದಾರರನ್ನು ಆಕರ್ಷಿಸಲು ದೇಶದ ಟೆಲಿಕಾಂ ಸಂಸ್ಥೆಗಳು ಹೊಸ ಪ್ಲಾನ್ಗಳನ್ನು ಪರಿಚಯಿಸುತ್ತಿವೆ. ಈ ಸಂಚಿಕೆಯಲ್ಲಿ ರಿಲಯನ್ಸ್ ಜಿಯೋ ತನ್ನ ರೂ 349 ಪ್ಯಾಕೇಜ್‌ ಅನ್ನು ಪ್ರಾರಂಭಿಸಿತು. ಈ ಯೋಜನೆಯಡಿಯಲ್ಲಿ ಇಂಟರ್ನೆಟ್ ಬಳಕೆಗಾಗಿ ಕಂಪನಿಯು ಪ್ರತಿದಿನ 2.5 GB ಡೇಟಾವನ್ನು ಒದಗಿಸುತ್ತಿದೆ. ಈ ಪ್ಲಾನ್‌ನಲ್ಲಿ ಉಚಿತ ಕರೆಗಳ ಜೊತೆಗೆ ಅನೇಕ ಉತ್ತಮ ಪ್ರಯೋಜನಗಳು ನೀಡುತ್ತದೆ. ಮತ್ತೊಂದು ಕಡೆ ಬಳಕೆದಾರರು Airtel ಮತ್ತು Vodafone-ldea (Vi ಸಹ ಬಳಕೆದಾರರಿಗೆ ದೈನಂದಿನ 2.5 GB ಡೇಟಾದೊಂದಿಗೆ ಯೋಜನೆಯನ್ನು ನೀಡುತ್ತಿವೆ. ಈ ಎರಡು ಕಂಪನಿಗಳಿಗಿಂತ ವಿಶೇಶವಾಗಿ ಜಿಯೋ ಯೋಜನೆಯು ಕಡಿಮೆ ವೆಚ್ಚದಾಯಕವಾಗಿದೆ. ಆದ್ದರಿಂದ ಈ ಮೂರು ಕಂಪನಿಗಳಲ್ಲಿ ಯಾವುದು ಗ್ರಾಹಕರಿಗೆ ದಿನಕ್ಕೆ 2.5 GB ಡೇಟಾದೊಂದಿಗೆ ಉತ್ತಮ ಯೋಜನೆಯನ್ನು ಒದಗಿಸುತ್ತಿದೆ.

ಜಿಯೋ ರೂ 349 ಯೋಜನೆ-

ಜಿಯೋದ ಇತ್ತೀಚಿನ ಯೋಜನೆಯು 30 ದಿನಗಳ ಮಾನ್ಯತೆಯ ಅವಧಿಯೊಂದಿಗೆ ಬರುತ್ತದೆ. ಈ ಯೋಜನೆಯಲ್ಲಿ ಇಂಟರ್ನೆಟ್ ಬಳಕೆಗಾಗಿ ಕಂಪನಿಯು ದಿನಕ್ಕೆ 2.5 GB ಡೇಟಾವನ್ನು ಒಳಗೊಂಡಿದೆ. ಅದರಂತೆ ಈ ಯೋಜನೆಯಲ್ಲಿ ನಿಮಗೆ ಒಟ್ಟು 75 GB ಡೇಟಾ ಸಿಗಲಿದೆ. ಈ ಯೋಜನೆಯ ಚಂದಾದಾರರು ದೇಶಾದ್ಯಂತ ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನ್‌ಲಿಮಿಟೆಡ್ ಕರೆಗಳನ್ನು ಮಾಡಬಹುದು. ಪ್ರತಿದಿನ 100 ಉಚಿತ SMS ನೊಂದಿಗೆ ಈ ಪ್ಯಾಕೇಜ್ ಅನ್ನು ಬಳಸಿಕೊಂಡು ನೀವು Jio TV ಮತ್ತು Jio ಸಿನಿಮಾಗೆ ಉಚಿತ ಪ್ರವೇಶವನ್ನು ಸಹ ಪಡೆಯಬಹುದಾಗಿದೆ.

ಏರ್‌ಟೆಲ್‌ನ 399 ರೂ ಯೋಜನೆ-

ಏರ್‌ಟೆಲ್‌ನ ರೂ 399 ಪ್ಲಾನ್ ಪ್ರತಿದಿನ 2.5 GB ಡೇಟಾವನ್ನು ಒಳಗೊಂಡಿರುತ್ತದೆ. ಈ ಯೋಜನೆಯಲ್ಲಿ ಅನ್‌ಲಿಮಿಟೆಡ್ ಸ್ಥಳೀಯ ಮತ್ತು STD ಕರೆಗಳ ಜೊತೆಗೆ ಪ್ರತಿದಿನ 100 ಉಚಿತ SMS ಪಡೆಯುತ್ತೀರಿ. ಇದು 28 ದಿನಗಳ ವ್ಯಾಲಿಡಿಟಿ ಹೊಂದಿದ್ದು ಈ ಯೋಜನೆಯಲ್ಲಿ ಮೂರು ತಿಂಗಳವರೆಗೆ ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್‌ನ ಉಚಿತ ಚಂದಾದಾರಿಕೆಯನ್ನು ಸಹ ನೀಡುತ್ತಿದೆ. ಅಷ್ಟೇ ಅಲ್ಲದೆ ಈ ಪ್ಯಾಕೇಜ್ Wynk ಮ್ಯೂಸಿಕ್ ಉಚಿತ ಚಂದಾದಾರಿಕೆಯನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ ಚಂದಾದಾರರು FASTag ನಲ್ಲಿ 100 ರೂ ಕ್ಯಾಶ್‌ಬ್ಯಾಕ್ ಅನ್ನು ಪಡೆಯುತ್ತಾರೆ. 

ವೊಡಾಫೋನ್ ಐಡಿಯಾ 399 ರೂ ಯೋಜನೆ-

ವೊಡಾಫೋನ್ ಐಡಿಯಾ ಯೋಜನೆಯು 28 ದಿನಗಳ ಮಾನ್ಯತೆಯ ಅವಧಿಯನ್ನು ಹೊಂದಿದೆ. ಇಂಟರ್ನೆಟ್ ಅನ್ನು ಬಳಸಲು ನೀವು ಪ್ರತಿದಿನ 2.5 GB ಡೇಟಾವನ್ನು ಪಡೆಯುದರ ಜೊತೆಗೆ ಈ ಯೋಜನೆಯಲ್ಲಿ 5 GB ಹೆಚ್ಚುವರಿ ಡೇಟಾವನ್ನು ಸಹ ನೀಡಲಾಗುತ್ತದೆ. ಈ ವೊಡಾಫೋನ್ ಐಡಿಯಾ ಯೋಜನೆಯು ಪ್ರತಿದಿನ 100 ಉಚಿತ SMS ಮತ್ತು ಅನ್‌ಲಿಮಿಟೆಡ್ ಕರೆಗಳನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ ಈ ಯೋಜನೆಯಲ್ಲಿ ಮೂರು ತಿಂಗಳ ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನು ಉಚಿತವಾಗಿ ಪಡೆಯುತ್ತೀರಿ. Binge All Night, Weekend DataRollover ಮತ್ತು Data Delights ಯೋಜನೆಯಲ್ಲಿ ಲಭ್ಯವಿರುವ ಹೆಚ್ಚುವರಿ ಪ್ರಯೋಜನಗಳಾಗಿವೆ. ಈ ಯೋಜನೆಯು Vi ಮೂವೀಸ್ ಮತ್ತು ಟಿವಿಗೆ ಉಚಿತ ಪ್ರವೇಶವನ್ನು ನೀಡುತ್ತದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo