Jio 7th Anniversary Offer: ಜಿಯೋದ ಈ 3 ಯೋಜನೆಗಳಲ್ಲಿ 21GB ಬೋನಸ್ FREE ಡೇಟಾವನ್ನು ನೀಡುತ್ತಿದೆ

Updated on 06-Sep-2023
HIGHLIGHTS

ರಿಲಯನ್ಸ್ ಜಿಯೋ 7ನೇ ವಾರ್ಷಿಕೋತ್ಸವದ (Jio 7th Anniversary 2023) ಪ್ರಯುಕ್ತ ತಮ್ಮೇಲ್ಲಾ ಗ್ರಾಹಕರಿಗೆ 21GB ವರೆಗೆ 5G ಬೋನಸ್ ಡೇಟಾವನ್ನು ನೀಡುತ್ತಿದೆ

ನೀವು 5ನೇ ಸೆಪ್ಟೆಂಬರ್ 2023 ರಿಂದ 30ನೇ ಸೆಪ್ಟೆಂಬರ್ 2023 ಒಳಗೆ ಪಡೆಯಬಹುದು.

ರಿಲಯನ್ಸ್ ಜಿಯೋ ತನ್ನ 7ನೇ ಹುಟ್ಟುಹಬ್ಬದಂದು ಗ್ರಾಹಕರಿಗೆ ರಿಲಯನ್ಸ್ ಜಿಯೋ ತನ್ನ ರೂ 299, ರೂ 749 ಮತ್ತು ರೂ 2999 ಯೋಜನೆಗಳೊಂದಿಗೆ ಬೋನಸ್ ಡೇಟಾವನ್ನು ಘೋಷಿಸಿದೆ

ಈ ಬಾರಿ ರಿಲಯನ್ಸ್ ಜಿಯೋ ತನ್ನ ಹುಟ್ಟುಹಬ್ಬದಂದು ಜಿಯೋದ 7ನೇ ವಾರ್ಷಿಕೋತ್ಸವದ (Jio 7th Anniversary 2023) ಪ್ರಯುಕ್ತ ತಮ್ಮೇಲ್ಲಾ ಗ್ರಾಹಕರಿಗೆ 21GB ವರೆಗೆ 5G ಬೋನಸ್ ಡೇಟಾವನ್ನು ನೀಡುತ್ತಿದೆ. ಇದನ್ನು ನೀವು 5ನೇ ಸೆಪ್ಟೆಂಬರ್ 2023 ರಿಂದ 30ನೇ ಸೆಪ್ಟೆಂಬರ್ 2023 ಒಳಗೆ ಪಡೆಯಬಹುದು. ಕಂಪನಿಗೆ ಈ ವಿಶೇಷ ಸಂದರ್ಭದಲ್ಲಿ ಜಿಯೋ ತನ್ನ ಈ ರೂ 299, ರೂ 749 ಮತ್ತು ರೂ 2999 ಮೂರು ಪ್ರಿಪೇಯ್ಡ್ ಯೋಜನೆಗಳಲ್ಲಿ ಬೋನಸ್ ಡೇಟಾವನ್ನು ಘೋಷಿಸಿದೆ. 

ಜಿಯೋದ 7ನೇ ಹುಟ್ಟುಹಬ್ಬದ FREE ಡೇಟಾ ಪಡೆಯುವುದು ಹೇಗೆ?

ರಿಲಯನ್ಸ್ ಜಿಯೋ ಬೋನಸ್ ಡೇಟಾ ಆಫರ್ ತನ್ನ 7ನೇ ಹುಟ್ಟುಹಬ್ಬದಂದು ಗ್ರಾಹಕರಿಗೆ ರಿಲಯನ್ಸ್ ಜಿಯೋ ತನ್ನ ರೂ 299, ರೂ 749 ಮತ್ತು ರೂ 2999 ಯೋಜನೆಗಳೊಂದಿಗೆ ಬೋನಸ್ ಡೇಟಾವನ್ನು ಘೋಷಿಸಿದೆ. ಬೋನಸ್ ಡೇಟಾ ಮಾತ್ರವಲ್ಲದೆ ನಿಮಗೆ AJIO, Netmeds ಮತ್ತು ಹೆಚ್ಚಿನವುಗಳಲ್ಲಿ ಹೆಚ್ಚಿನ ಡಿಸ್ಕೌಂಟ್ ಕೂಪನ್‌ಗಳಂತಹ ಇತರ ಪ್ರಯೋಜನಗಳನ್ನು ಸಹ ಟೆಲ್ಕೊ ನೀಡುತ್ತಿದೆ.

ಜಿಯೋದ 7ನೇ ಹುಟ್ಟುಹಬ್ಬದ ಬೋನಸ್ ಡೇಟಾ ಯೋಜನೆಗಳು

ಬೋನಸ್ ಡೇಟಾವನ್ನು ಘೋಷಿಸಿದ ರಿಲಯನ್ಸ್ ಜಿಯೋದ ರೂ 299 ಯೋಜನೆ ಕೇವಲ 28 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ ಆದರೆ ಗ್ರಾಹಕರಿಗೆ 2GB ದೈನಂದಿನ ಡೇಟಾ, 100 SMS/ದಿನ ಮತ್ತು ಅನಿಯಮಿತ ಧ್ವನಿ ಕರೆಗಳನ್ನು ನೀಡುತ್ತದೆ. ಆಫರ್ ಅವಧಿಯ ಅಡಿಯಲ್ಲಿ ಕಂಪನಿಯು ಗ್ರಾಹಕರಿಗೆ 7GB ಬೋನಸ್ ಡೇಟಾವನ್ನು ನೀಡುತ್ತದೆ.

ಎರಡನೇಯದಾಗಿ ರಿಲಯನ್ಸ್ ಜಿಯೋದ ರೂ 749 ಯೋಜನೆ ಗ್ರಾಹಕರು 2GB ದೈನಂದಿನ ಡೇಟಾ, 100 SMS/ದಿನ ಮತ್ತು ಅನಿಯಮಿತ ಧ್ವನಿ ಕರೆಯನ್ನು 90 ದಿನಗಳವರೆಗೆ ಪಡೆಯುತ್ತಾರೆ. ಆಫರ್ ಅವಧಿಯಡಿಯಲ್ಲಿ ಈ ಯೋಜನೆಯೊಂದಿಗೆ ನೀಡಲಾಗುವ ಹೆಚ್ಚುವರಿ ಪ್ರಯೋಜನವೆಂದರೆ 14GB ಅನ್ನು ಪಡೆಯಬಹುದು. ಅಲ್ಲದೆ ನೀವು MyJio ಅಪ್ಲಿಕೇಶನ್‌ನಲ್ಲಿನ ಗ್ರಾಹಕರ ಖಾತೆಯ ಮೂಲಕ ಡೇಟಾ ವೋಚರ್‌ಗಳನ್ನು ಕ್ಲೈಮ್ ಮಾಡಬಹುದು.

ಕೊನೆಯದಾಗಿ ರಿಲಯನ್ಸ್ ಜಿಯೋದ ರೂ 2999 ಯೋಜನೆ ಗ್ರಾಹಕರು 2.5GB ದೈನಂದಿನ ಡೇಟಾ, ಅನಿಯಮಿತ ಧ್ವನಿ ಕರೆ ಮತ್ತು 100 SMS/ದಿನವನ್ನು ಪಡೆಯುತ್ತಾರೆ. ಈ ಯೋಜನೆಯು 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಯೋಜನೆಯೊಂದಿಗೆ ನೀಡಲಾಗುವ ಹೆಚ್ಚುವರಿ ಪ್ರಯೋಜನಗಳೆಂದರೆ 21GB ಡೇಟಾ (7GB x 3 ಕೂಪನ್‌ಗಳು), ನೆಟ್‌ಮೆಡ್ಸ್‌ನಲ್ಲಿ 20% ರಿಯಾಯಿತಿ (ರೂ. 800 ವರೆಗೆ), ಸ್ವಿಗ್ಗಿಯಲ್ಲಿ ರೂ 100 ರಿಯಾಯಿತಿ, ರೂ. 149 ಮತ್ತು ಅದಕ್ಕಿಂತ ಹೆಚ್ಚಿನ ಖರೀದಿಗೆ ಉಚಿತ ಮೆಕ್‌ಡೊನಾಲ್ಡ್ ಊಟ, 10% ರಿಯಾಯಿತಿ ರಿಲಯನ್ಸ್ ಡಿಜಿಟಲ್‌ನಲ್ಲಿ ಯಾತ್ರಾದೊಂದಿಗೆ ಫ್ಲೈಟ್‌ಗಳಲ್ಲಿ ರೂ 1500 ವರೆಗೆ ಮತ್ತು ಹೋಟೆಲ್‌ಗಳಲ್ಲಿ 15% ರಿಯಾಯಿತಿ ರೂ 4000 ವರೆಗೆ ಲಭ್ಯವಿದೆ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :