ಭಾರತದಲ್ಲಿ ನಂಬರ್ 1 ಆಗಿರುವ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ಮತ್ತು ಭಾರತದ ನಂಬರ್ 1 ಸ್ಮಾರ್ಟ್ಫೋನ್ ಬ್ರಾಂಡ್ ಆಗಿರುವ Xiaomi ಕೈಜೋಡಿಸಿ ಭಾರಿ ಕ್ಯಾಶ್ ಬ್ಯಾಕ್ ಮತ್ತು ಡೇಟಾ ಆಫರ್ ನೀಡುತ್ತಿದೆ. ಅಲ್ಲದೆ Redmi Note 7 ಅಥವಾ Redmi Note 7 Pro ಖರೀದಿಯಲ್ಲಿ ಭಾರಿ ಮಾತ್ರದ ಡೇಟಾವನ್ನು ಒದಗಿಸುತ್ತಿದೆ. ನೀವು ಈ ಫೋನ್ ಪಡೆದು 398 ರೂಪಾಯಿಗಳ ರೀಚಾರ್ಜ್ ಮಾಡಬೇಕಿದೆ.
ಇದರಲ್ಲಿ ನಿಮಗೆ ಪ್ರತಿ ದಿನಕ್ಕೆ 4GB ಯ ಡೇಟಾವನ್ನು ಪೂರ್ತಿ 70 ದಿನಗಳವರೆಗೆ ನೀಡುತ್ತದೆ. ಈ ಫೋನ್ಗಳ ಬೆಲೆ ನೋಡಬೇಕೆಂದರೆ Redmi Note 7 ಸ್ಮಾರ್ಟ್ಫೋನ್ 9,999 ರೂಗಳಾದರೆ Redmi Note 7 Pro ಸ್ಮಾರ್ಟ್ಫೋನ್ 13,999 ರೂಗಳಿದ ಶುರುವಾಗುತ್ತದೆ. ರಿಲಯನ್ಸ್ ಜಿಯೋ 70 ದಿನಗಳ ವರೆಗೆ ದಿನಕ್ಕೆ 4GB ಡೇಟಾವನ್ನು Redmi Note 7 ಮತ್ತು Redmi Note 7 Pro ಫೋನ್ ಬಳಕೆದಾರರು 398 ರೂಗಳ ಪ್ರಿಪೇಯ್ಡ್ ಪ್ಲಾನ್ ಭಾಗವಾಗಿ ನೀಡುತ್ತಿದೆ.
ಅಂದ್ರೆ ಒಟ್ಟಾರೆಯಾಗಿ 280 ದಿನಗಳು (4 ರಿಚಾರ್ಜ್ ಪ್ರತಿ ಬಾರಿ 398 ಸೇರಿಸಿ) ಡಬಲ್ ಡೇಟಾ ಸಹ ಇಲ್ಲಿ ಮಾನ್ಯವಾಗಿರುತ್ತವೆ. ಇದರರ್ಥ ಈ ಹೊಸ Redmi Note ಸರಣಿಯ ಗ್ರಾಹಕರು 280 ದಿನಗಳಿಗೆ ಒಟ್ಟಾರೆಯಾಗಿ 1592 ರೂಗಳನ್ನು ಪಾವತಿಸಬೇಕಾಗುತ್ತದೆ. ಇದರ ನಂತರವಷ್ಟೇ ಜಿಯೋ ಗ್ರಾಹಕರು MyJio ಅಪ್ಲಿಕೇಶನ್ ಅಲ್ಲಿ 2400 ರೂಗಳ ಮೌಲ್ಯದ ಕ್ಯಾಶ್ ಬ್ಯಾಕ್ ವೋಚರ್ಗಳನ್ನು 299 ರೂಪದಲ್ಲಿ ಜಿಯೋ ರೀಚಾರ್ಜ್ ಪಡೆದುಕೊಳ್ಳುತ್ತಾರೆ.
ಇದರ ನಂತರ ನಿಮಗೆ ಕೇವಲ 198 ರೂಗಳಿಗಿಂತ ಹೆಚ್ಚಿನ ಮೊತ್ತದ ಎಲ್ಲ ಜಿಯೋ ಮರುಚಾರ್ಜ್ಗಳ ಮೇಲೆ ಡಬಲ್ ಡೇಟಾ ಅನ್ವಯವಾಗುತ್ತದೆ ಎಂದು ಗಮನಿಸಬೇಕು. ಈ Redmi Note 7 ಮತ್ತು Redmi Note 7 Pro ಸ್ಮಾರ್ಟ್ಫೋನ್ ಫ್ಲಿಪ್ಕಾರ್ಟ್ ವೆಬ್ಸೈಟ್, ಮಿ.ಕಾಂ ಮತ್ತು ಮಿ ಹೋಮ್ ಸ್ಟೋರ್ಗಳ ಮೂಲಕ ಮಾರಾಟವಾತ್ತಿದೆ.