ರಿಲಯನ್ಸ್ ಜಿಯೋ (reliance jio) ತನ್ನ ಹೊಸ ಯೋಜನೆಗಳ ಬಗ್ಗೆ ಯಾವಾಗಲೂ ಚರ್ಚೆಯಲ್ಲಿದೆ. ನೀವು ಹೊಸ ಜಿಯೋ ಪೋಸ್ಟ್‌ಪೇಯ್ಡ್ ಯೋಜನೆಯನ್ನು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಈ ಹೊಸ ರಿಲಯನ್ಸ್ ಜಿಯೋ (reliance jio) ಯೋಜನೆಗಳಲ್ಲಿ ನೀವು ಅನೇಕ ಸೌಲಭ್ಯಗಳನ್ನು ಪಡೆಯುವ ಆಯ್ಕೆಯಾಗಿದೆ. ಏಕೆಂದರೆ ಇದರಲ್ಲಿ ಈ ಯೋಜನೆಗಳಲ್ಲಿ ನಿಮಗೆ ಡೇಟಾ ಮತ್ತು ಕರೆಗಳೊಂದಿಗೆ ಜನಪ್ರಿಯ OTT ಅಪ್ಲಿಕೇಶನ್ಗಳನ್ನು ಉಚಿತವಾಗಿಯೇ ಪಡೆಯಬವುದು. ಈ ವೈಶಿಷ್ಟ್ಯಗಳ ಕಾರಣದಿಂದಾಗಿ ಈ ಯೋಜನೆಗಳು ಯಾವಾಗಲೂ ಚರ್ಚೆಯಲ್ಲಿರುತ್ತವೆ. ರಿಲಯನ್ಸ್ ಜಿಯೋ (reliance jio) ಬಳಕೆದಾರರಾಗಿದ್ದರೆ ಈಗ ನಿಮಗೆ ನೆಟ್‌ಫ್ಲಿಕ್ಸ್ (Netfilx), ಅಮೆಜಾನ್ ಪ್ರೈಮ್ ವಿಡಿಯೋ (Amazon Prime Video), ಡಿಸ್ನಿ + ಹಾಟ್‌ಸ್ಟಾರ್ (Disney+ Hotstar) ನ ಯೋಜನೆಗಳ ಅದ್ದೂರಿಯ ಆಫರ್ಗಳನ್ನು ಪಡೆಯುವ ಅವಕಾಶ ಇಲ್ಲಿದೆ.
Jio 399 ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ ನೀವು 75GB ಡೇಟಾವನ್ನು ಪಡೆಯುತ್ತೀರಿ. ಅಲ್ಲದೆ ಅನಿಯಮಿತ ಧ್ವನಿ ಕರೆ ಮಾಡುವ ಸೌಲಭ್ಯವನ್ನು ನೀವು ಪಡೆಯುತ್ತೀರಿ. ಇದರೊಂದಿಗೆ ಎಸ್ ಎಂಎಸ್ ಕೂಡ ಇದರಲ್ಲಿ ಲಭ್ಯವಿದೆ. ಈ ಯೋಜನೆಯ ವಿಶೇಷತೆಯೆಂದರೆ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮತ್ತು ಡಿಸ್ನಿ + ಹಾಟ್‌ಸ್ಟಾರ್ ಅನ್ನು ಸಹ ಬಳಕೆದಾರರಿಗೆ ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುತ್ತದೆ. ಇದರರ್ಥ ನೀವು ಯಾವುದೇ ಹೆಚ್ಚುವರಿ ಹಣವನ್ನು ಪಾವತಿಸಬೇಕಾಗಿಲ್ಲ.
Jio 599 ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ ನೀವು 100GB ಡೇಟಾವನ್ನು ಪಡೆಯುತ್ತೀರಿ. ಅಲ್ಲದೆ ಅನಿಯಮಿತ ಕರೆ ಮಾಡುವ ಸೌಲಭ್ಯವನ್ನು ನೀವು ಪಡೆಯುತ್ತೀರಿ. ಇದರೊಂದಿಗೆ ನೀವು ಇದರಲ್ಲಿ SMS ಅನ್ನು ಸಹ ಪಡೆಯುತ್ತೀರಿ. ಇದಲ್ಲದೆ ನೀವು Netflix, Amazon Prime ಮತ್ತು Disney + Hotstar ಗೆ ಚಂದಾದಾರಿಕೆಯನ್ನು ಸಹ ಪಡೆಯುತ್ತೀರಿ. ಹೆಚ್ಚುವರಿಯಾಗಿ ನೀವು ಇದರಲ್ಲಿ 200GB ಡೇಟಾ ರೋಲ್‌ಓವರ್ ಅನ್ನು ಸಹ ಪಡೆಯುತ್ತೀರಿ. ಇದರಲ್ಲಿ ನೀವು ಕುಟುಂಬ ಸದಸ್ಯರಿಗೆ 1 ಸಿಮ್ ಅನ್ನು ಸಹ ಪಡೆಯುತ್ತೀರಿ.
Jio 799 ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ 150GB ಡೇಟಾ ಲಭ್ಯವಿದೆ. ಅಲ್ಲದೆ ಇದರಲ್ಲಿ ಅನ್‌ಲಿಮಿಟೆಡ್ ವಾಯ್ಸ್ ಕಾಲಿಂಗ್ ಕೂಡ ಲಭ್ಯವಿದೆ. ಇದರಲ್ಲಿ ನೀವು SMS ಸಹ ಪಡೆಯುತ್ತೀರಿ. ಈ ಯೋಜನೆಯು Netflix, Amazon Prime ಮತ್ತು Disney + Hotstar ಗೆ ಚಂದಾದಾರಿಕೆಯನ್ನು ಸಹ ನೀಡುತ್ತದೆ. ಇದು 200GB ಡೇಟಾ ರೋಲ್‌ಓವರ್‌ನೊಂದಿಗೆ ಬರುತ್ತದೆ. ಇದರಲ್ಲಿ ನೀವು ಕುಟುಂಬ ಸದಸ್ಯರಿಗೆ 2 ಹೆಚ್ಚುವರಿ ಸಿಮ್‌ಗಳನ್ನು ಪಡೆಯುತ್ತೀರಿ. ಈ ಸಿಮ್ ಕಾರ್ಡ್‌ನಲ್ಲಿ ಪ್ರಯೋಜನಗಳನ್ನು ಸಹ ವಿಂಗಡಿಸಲಾಗಿದೆ. ವಾಸ್ತವವಾಗಿ ಕಂಪನಿಯು ಈ ಎಲ್ಲಾ ಪೋಸ್ಟ್‌ಪೇಯ್ಡ್ ಯೋಜನೆಗಳನ್ನು ಫ್ಯಾಮಿಲಿ ಪ್ಲಾನ್ ಹೆಸರಿನಲ್ಲಿ ಬಿಡುಗಡೆ ಮಾಡಿತ್ತು. ಇದರೊಂದಿಗೆ ಕುಟುಂಬ ಯೋಜನೆಯ ಪ್ರಕಾರ ಇದರಲ್ಲಿ ದೊರೆಯುವ ಪ್ರಯೋಜನಗಳನ್ನೂ ನಿರ್ಧರಿಸಲಾಗಿದೆ.