
Jio New Year 2025 Offer ಅಡಿಯಲ್ಲಿ ನಿಮಗೆ ಹೆಚ್ಚುವರಿಯ ಸೌಲಭ್ಯಗಳನ್ನು ನೀಡುತ್ತಿದೆ.
ಈ ಜಿಯೋ 2025 ರೂಗಳ ಯೋಜನೆಯಲ್ಲಿ ನಿಮಗೆ ಬರೋಬ್ಬರಿ 200 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ.
ರಿಲಯನ್ಸ್ ಜಿಯೋ ಗ್ರಾಹಕರಿಗೆ ಈ 2025 ರೂಗಳ ವಾರ್ಷಿಕ ಜಬರ್ದಸ್ತ್ ರಿಚಾರ್ಜ್ ಯೋಜನೆ ಇಂದು ಕೊನೆಗೊಳ್ಳಲಿದೆ.
Jio New Year 2025 Offer: ರಿಲಯನ್ಸ್ ಜಿಯೋ ಸೀಮಿತ ಅವಧಿಯ ಈ ಜಬರ್ದಸ್ತ್ 2025 ರೂಗಳ ಹೊಸ ವರ್ಷದ ಆಫರ್ ಪ್ರಿಪೇಯ್ಡ್ ಯೋಜನೆಯನ್ನು ಇಂದು ಸ್ಥಗಿತಗೊಳಿಸಲಿದೆ. ಆದ್ದರಿಂದ ಇಂದೇ ಈ ಜಬರ್ದಸ್ತ್ Jio ಯೋಜನೆಯನ್ನು ರಿಚಾರ್ಜ್ ಮಾಡಿಕೊಂಡು ಹೆಚ್ಚುವರಿ ಪ್ರಯೋಜನಗಳನ್ನು ಪಡೆಯಿರಿ. ಇದರಲ್ಲಿ ಇತರೆ ಅನೇಕ ಹೆಚ್ಚುವರಿ ಪ್ರಯೋಜನಗಳ ಜೊತೆಗೆ ಅನಿಯಮಿತ 5G ಅನ್ನು ನೀಡುತ್ತದೆ. ರಿಲಯನ್ಸ್ ಜಿಯೋ ಗ್ರಾಹಕರಿಗೆ ಈ 2025 ರೂಗಳ ವಾರ್ಷಿಕ ಜಬರ್ದಸ್ತ್ ರಿಚಾರ್ಜ್ ಯೋಜನೆ ಇಂದು ಕೊನೆಗೊಳ್ಳಲಿದೆ.
Jio New Year 2025 Offer Ending Today
ಕಳೆದ ವರ್ಷ ಡಿಸೆಂಬರ್‌ನಲ್ಲಿ ಘೋಷಿಸಿದ ಹೊಸ ವರ್ಷದ ಆಫರ್ ಮೂಲತಃ 11ನೇ ಜನವರಿ ರಂದು ಸ್ಥಗಿತಗೊಳಿಸುವುದಾಗಿ ಹೇಳಿತ್ತು ಆದರೆ ಜಿಯೋ ತನ್ನ ಮನಸ್ಸನ್ನು ಬದಲಾಯಿಸಿ ಇಂದು ಅಂದ್ರೆ 31ನೇ ಜನವರಿ 2025 ರಂದು ಕೊನೆಗೊಳಿಸಲಿದೆ. ರಿಲಯನ್ಸ್ ಜಿಯೋ ಈ ಯೋಜನೆಯನ್ನು ಜಿಯೋ ಲಿಮಿಟೆಡ್ ಸಮಯದವರೆಗೆ ನೀಡುತ್ತಿದ್ದು ಈಗ ಈ ಅತ್ಯಂತ ಜನಪ್ರಿಯ ಪ್ರಿಪೇಯ್ಡ್ ಯೋಜನೆಗಳಂತೆಯೇ ರೂ 2025 ಯೋಜನೆಯು ಅನಿಯಮಿತ ಕರೆಗಳು, 5G ಡೇಟಾ ಮತ್ತು ಪ್ರತಿದಿನ SMS ನೊಂದಿಗೆ ಬರುತ್ತದೆ.
Also Read: Learner’s License: ನಿಮಗೆ ಲರ್ನರ್ ಲೈಸೆನ್ಸ್ ಬೇಕಿದ್ದರೆ ಆನ್‍ಲೈನ್‍ನಲ್ಲಿ ಈ ರೀತಿ ಅರ್ಜಿ ಸಲ್ಲಿಸಿ ಸಾಕು!
ರಿಲಯನ್ಸ್ ಜಿಯೋ ರೂ. 2025 ರಿಚಾರ್ಜ್ ಪ್ಲಾನ್ ವಿವರಗಳು:
ಸದ್ದಿಲ್ಲದೇ ಬಿಡುಗಡೆಯಾಗಿದ್ದ ಈ ರಿಲಯನ್ಸ್ ಜಿಯೋ (Jio New Year 2025 Offer Plan) ರಿಚಾರ್ಜ್ ಯೋಜನೆಯಲ್ಲಿ ಈಗಾಗಲೇ ಮೇಲೆ ತಿಳಿಸಿರುವ ಬರೋಬ್ಬರಿ 200 ದಿನಗಳ ವ್ಯಾಲಿಡಿಟಿಯೊಂದಿಗೆ ಅನ್ಲಿಮಿಟೆಡ್ ವಾಯ್ಸ್ ಕರೆಗಳನ್ನು ಮತ್ತು ಪ್ರತಿದಿನಕ್ಕೆ 2.5GB ಕ್ರಮವಾಗಿ ಒಟ್ಟು 500GB ಡೇಟಾವನ್ನು ಸಹ ನೀಡುತ್ತಿದೆ. ಈ ರಿಲಯನ್ಸ್ ಜಿಯೋ ರೂ. 2025 ರಿಚಾರ್ಜ್ ಯೋಜನೆಯಲ್ಲಿ ದಿನದ ಡೇಟಾ ಅಂದ್ರೆ 2.5GB ಖಾಲಿಯಾದ ನಂತರ ನೀವು ಅನ್ಲಿಮಿಟೆಡ್ ಡೇಟಾ ಬಳಸಬಹುದು ಆದರೆ ಇದರ ಸ್ಪೀಡ್ ಮಾತ್ರ 64Kbps ವೇಗಕ್ಕೆ ಇಳಿಯುತ್ತದೆ. ನೀವು JioTV, JioCinema ಮತ್ತು JioCloud ಗೆ ಉಚಿತ ಪ್ರವೇಶವನ್ನು ಸಹ ಪಡೆಯುತ್ತೀರಿ.
ಜಿಯೋ ರೂ. 2025 ರಿಚಾರ್ಜ್ ಯೋಜನೆಯ ಹೆಚ್ಚ್ಚುವರಿ ಪ್ರಯೋಜನ:
ಹೆಚ್ಚುವರಿಯಾಗಿ ಈ ಯೋಜನೆಯನ್ನು ರಿಚಾರ್ಜ್ ಮಾಡುವುದರಿಂದ ಬರೋಬ್ಬರಿ ₹2150 ರೂಗಳ ಕೂಪನ್ ಸಹ ನೀಡುತ್ತಿದೆ. ಈ ಯೋಜನೆಯನ್ನು ಹೊಂದಿದ್ದ ನಂತರ Ajio ಮೂಲಕ ಸುಮಾರು ₹2999 ರೂಗಳ ಪ್ರಾಡಕ್ಟ್ ಖರೀದಿಸುವುದರಿಂದ ಬರೋಬ್ಬರಿ ₹500 ರೂಗಳ ಡಿಸ್ಕೌಂಟ್ ಪಡೆಯಬಹುದು. ಅಲ್ಲದೆ EaseMyTrip.com ಮೂಲಕ ಟಿಕೆಟ್ ಬುಕ್ ಮಾಡುವುದರಿಂದ ಸುಮಾರು ₹1500 ರೂಗಳ ಡಿಸ್ಕೌಂಟ್ ಪಡೆಯಬಹುದು. ಅಲ್ಲದೆ Swiggy ಮೂಲಕ ₹499 ರೂಗಳವರೆಗಿನ ಆರ್ಡರ್ ಮಾಡುವುದರಿಂದ ₹150 ರೂಗಳ ಡಿಸ್ಕೌಂಟ್ ಸಹ ಪಡೆಯಬಹುದು.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile