Jio New Plan: ಕೇವಲ 234 ರೂಗಳಿಗೆ 56 ದಿನಗಳ ರಿಚಾರ್ಜ್ ಪ್ಲಾನ್ ತಂದಿರುವ ರಿಲಯನ್ಸ್ ಜಿಯೋ!

Jio New Plan: ಕೇವಲ 234 ರೂಗಳಿಗೆ 56 ದಿನಗಳ ರಿಚಾರ್ಜ್ ಪ್ಲಾನ್ ತಂದಿರುವ ರಿಲಯನ್ಸ್ ಜಿಯೋ!
HIGHLIGHTS

Reliance Jio New Plan ಕೇವಲ 234 ರೂಗಳ ಬೆಸ್ಟ್ ಪ್ರಿಪೇಯ್ಡ್ ಯೋಜನೆಯನ್ನು ಬಿಡುಗಡೆಗೊಳಿಸಿದೆ.

ಈ ಯೋಜನೆಯನ್ನು ಕೇವಲ ಮತ್ತು ಮುಖ್ಯವಾಗಿ JioBharat Phone ಬಳಕೆದಾರರಿಗಾಗಿದೆ ಮಾತ್ರವಾಗಿದೆ.

Reliance Jio New Plan ಈಗ 234 ರೂಗಳ ಯೋಜನೆಯಲ್ಲಿ ಪೂರ್ತಿ 56 ದಿನಗಳ ಮಾನ್ಯತೆಯ ಪ್ಲಾನ್ ನೀಡಿದೆ.

Reliance Jio New Plan: ಭಾರತದಲ್ಲಿ ಅತಿದೊಡ್ಡ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ (Reliance Jio) ಈಗ ತಮ್ಮ 4G ಫೀಚರ್ ಫೋನ್ ಬಳಸುವವರನ್ನು ಗಮನದಟ್ಟುಕೊಂಡು ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ದಿನಗಳ ಪ್ರಯೋಜನದ ಕೇವಲ 234 ರೂಗಳ ಬೆಸ್ಟ್ ಪ್ರಿಪೇಯ್ಡ್ ಯೋಜನೆಯನ್ನು ಬಿಡುಗಡೆಗೊಳಿಸಿದೆ. ರಿಲಯನ್ಸ್ ಜಿಯೋ (Reliance Jio) ನೀಡುತ್ತಿರುವ ಈ ಪ್ಲಾನ್ ವಿಶೇಷತೆಗಳೆಂದರೆ ಈ ಯೋಜನೆಯನ್ನು ಕೇವಲ ಮತ್ತು ಮುಖ್ಯವಾಗಿ JioBharat Phone ಬಳಕೆದಾರರಿಗಾಗಿದೆ ಮಾತ್ರವಾಗಿದೆ.

ಏಕೆಂದರೆ ಈವರೆಗೆ ಪ್ರತ್ಯೇಕವಾಗಿ ಜಿಯೋಭಾರತ್ ಫೋನ್ ಬಳಕೆದಾರರಿಗೆ ಕೆಲವ 2 ಯೋಜನೆಗಳು ಮಾತ್ರ ಲಭ್ಯವಿತ್ತು ಈಗ 234 ರೂಗಳ ಯೋಜನೆಯಲ್ಲಿ ಪೂರ್ತಿ 56 ದಿನಗಳ ಮಾನ್ಯತೆಯನ್ನು ಹೊಂದಿರುವ ಈ ಪ್ಲಾನ್ ನೀಡಿ ಪ್ರಸ್ತುತ ಒಟ್ಟು 3 ಕೈಗೆಟಕುವ ಬೆಲೆಯ JioBharat Phone ಯೋಜನೆಗಳನ್ನು ಜಿಯೋ ಹೊಂದಿದೆ.

Also Read: 50MP ಸೆಲ್ಫಿ ಕ್ಯಾಮೆರಾವುಳ್ಳ Motorola Edge 50 Pro 5G ಲಾಂಚ್! ಖರೀದಿಗೂ ಮುಂಚೆ ಈ ಟಾಪ್ 5 ಫೀಚರ್ ಪರಿಶೀಲಿಸಿ!

Reliance JioBharat Phone ರೂ. 234 ಪ್ರಿಪೇಯ್ಡ್ ಪ್ಲಾನ್

ರಿಲಯನ್ಸ್ ಜಿಯೋ (Reliance Jio) ಭಾರತದಲ್ಲಿ ಹೊಸ ಪ್ರಿಪೇಯ್ಡ್ ಯೋಜನೆಯನ್ನು ಪ್ರಾರಂಭಿಸಿದೆ. ಇದು ಕೈಗೆಟುಕುವ ರೀಚಾರ್ಜ್ ಯೋಜನೆಯಾಗಿದ್ದು ಇದನ್ನು JioBharat 4G ಫೀಚರ್ ಫೋನ್‌ಗಳಿಗೆ ನೀಡಲಾಗುತ್ತದೆ. ಜಿಯೋದ ಹೊಸ ಯೋಜನೆ 234 ರೂಗಳಾಗಿವೆ. ಈ ಹೊಸ JioBharat Phone ಬಳಕೆದಾರರಿಗೆ ಈ 234 ರೂಗಳ ರಿಚಾರ್ಜ್ ಯೋಜನೆ ಒಟ್ಟು 28GB ಡೇಟಾವನ್ನು ನೀಡಲಾಗುತ್ತದೆ. ಅಂದರೆ ಪ್ರತಿದಿನ 500MB ಡೇಟಾವನ್ನು ನೀಡಲಾಗುವುದು. ಈ ಯೋಜನೆಯಲ್ಲಿ ಬಳಕೆದಾರರು ಅನಿಯಮಿತ ಕರೆ ಸೌಲಭ್ಯವನ್ನು ಪಡೆಯುತ್ತಾರೆ. ಇದಲ್ಲದೇ 300 ಎಸ್‌ಎಂಎಸ್‌ಗಳ ಸೌಲಭ್ಯವು 28 ದಿನಗಳವರೆಗೆ ಲಭ್ಯವಿದೆ. ಈ ರೀಚಾರ್ಜ್ ಯೋಜನೆಯು 56 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ.

Reliance Jio new plan offers 56 days validity at rs 234 Only
Reliance Jio new plan offers 56 days validity at rs 234 Only

ಈ Jio New Plan ಹೆಚ್ಚುವರಿ ಪ್ರಯೋಜನಗಳು

ಈ ಹೊಸ ಈ ಜಿಯೋಭಾರತ್ ಫೋನ್ ರೀಚಾರ್ಜ್ ಪ್ಲಾನ್‌ನಲ್ಲಿ ಬಳಕೆದಾರರಿಗೆ ಉಇಚಿತವಾಗಿ JioSaavn ಮತ್ತು JioCinema ನ ಕಾಂಪ್ಲಿಮೆಂಟರಿ ಚಂದಾದಾರಿಕೆಯನ್ನು ನೀಡಲಾಗುತ್ತಿದೆ.JioBharat ನ 234 ರೂ ಯೋಜನೆಯನ್ನು ಮಿಡ್-ಬಜೆಟ್ ಯೋಜನೆ ಎಂದು ಕರೆಯಲಾಗುತ್ತಿದೆ. ಏಕೆಂದರೆ ರಿಲಯನ್ಸ್ ಜಿಯೋ (Reliance Jio) ಈ ಮೊದಲು JioBharat ಫೀಚರ್ ಫೋನ್‌ ಬಳಕೆದಾರರಿಗೆ ಕೇವಲ 2 ಯೋಜನೆಗಳನ್ನು ಮಾತ್ರ ಹೊಂದಿತ್ತು ಅವೆಂದರೆ 123 ಮತ್ತು 1234 ರೂಗಳ ರೀಚಾರ್ಜ್ ಯೋಜನೆಗಳನ್ನು ಹೊಂದಿತ್ತು ಆದರೆ ಈ ಹೊಸ ಯೋಜನೆ ನಿಜಕ್ಕೂ ಬಹುತೇಕ ಬಳಕೆದಾರರಿಗೆ ಉತ್ತಮವಾಗಿದೆ. ಯಾಕೆಂದರೆ ಇದರ ವ್ಯಾಲಿಡಿಟಿ ಅತಿದೊಡ್ಡ ಕಾರಣವಾಗಿದೆ.

Reliance Jio new plan offers 56 days validity at rs 234 Only
Reliance Jio new plan offers 56 days validity at rs 234 Only

JioBharat Phone ರೂ. 123 ಪ್ರಿಪೇಯ್ಡ್ ಪ್ಲಾನ್

JioBharat Phone ಬಳಕೆದಾರರಲ್ಲಿ ಮತ್ತೊಂದು ಜನಪ್ರಿಯ ರಿಚಾರ್ಜ್ ಪ್ಲಾನ್ ಬಗ್ಗೆ ನೋಡುವುದಾದರೆ ಅದು 123 ರೂಗಳ ಬೆಸ್ಟ್ ಯೋಜನೆಯಾಗಿದೆ. ಆದರೆ ಈ ಪ್ಲಾನ್ ಕೇವಲ 28 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ ಯೋಜನೆಯಲ್ಲಿ ಗ್ರಾಹಕರು ಒಟ್ಟು 14GB ಡೇಟಾವನ್ನು ಪಡೆಯುತ್ತಾರೆ ಅಂದ್ರೆ ದಿನಕ್ಕೆ 512MB ಡೇಟಾದ ಲೆಕ್ಕಾಚಾರವಾಗಿದೆ. ಇದರಲ್ಲಿ ನಿಮಗೆ ಅನಿಯಮಿತ ವಾಯ್ಸ್ ಕರೆ ಮತ್ತು 28 ದಿನಗಳವರೆಗೆ SMS ಸೌಲಭ್ಯವು ದೈನಂದಿನ 500MB ಡೇಟಾದೊಂದಿಗೆ ಲಭ್ಯವಿದೆ. ಅಲ್ಲದೆ JioSaavn ಮತ್ತು JioCinema ಚಂದಾದಾರಿಕೆಯನ್ನು ಪೂರಕವಾಗಿ ನೀಡಲಾಗುತ್ತಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo