Jio Expensive Plan: ಬರೋಬ್ಬರಿ 1095GB ಡೇಟಾ ಮತ್ತು ಕರೆ ನೀಡುವ ಜಿಯೋನ ದುಬಾರಿ ಆಫರ್ ಇದು!

Jio Expensive Plan: ಬರೋಬ್ಬರಿ 1095GB ಡೇಟಾ ಮತ್ತು ಕರೆ ನೀಡುವ ಜಿಯೋನ ದುಬಾರಿ ಆಫರ್ ಇದು!
HIGHLIGHTS

ವೊಡಾಫೋನ್ ಐಡಿಯಾ (ವಿ) ಮತ್ತು ಭಾರ್ತಿ ಏರ್‌ಟೆಲ್ ನೀಡುವುದಕ್ಕಿಂತ ಕಡಿಮೆ ಮತ್ತು ಮತ್ತು ಹೆಚ್ಚು ಕೈಗೆಟುಕುವಂತಿವೆ.

ಜಿಯೋ ಇದೀಗ ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ಅತ್ಯಂತ ದುಬಾರಿ ಪ್ರಿಪೇಯ್ಡ್ ಯೋಜನೆಯೊಂದನ್ನು ನೀಡುತ್ತಿದೆ.

ಜಿಯೋ ಇದೀಗ 4199 ರೂಗಳ ಹೊಸದೊಂದು ಪ್ರೀಪೇಡ್ ಯೋಜನೆಯನ್ನು ನೀಡುತ್ತಿದೆ.

ಭಾರತದಲ್ಲಿ ಅತಿ ದೊಡ್ಡ ಚಂದಾದಾರರ ನೆಲೆಯನ್ನು ಹೊಂದಿರುವ ಟೆಲಿಕಾಂ ಆಪರೇಟರ್ ರಿಲಯನ್ಸ್ ಜಿಯೋವನ್ನ ಕಂಪನಿಯನ್ನು ಸಾಮಾನ್ಯವಾಗಿ ಕಡಿಮೆ ಬೆಲೆಯ ಸೇವೆಗಳನ್ನು ನೀಡುವ ಟೆಲಿಕಾಂ ಕಂಪನಿಯಾಗಿ ನೋಡಲಾಗುತ್ತದೆ. ಜಿಯೋ ಪ್ರೀಪೇಡ್ ಯೋಜನೆಗಳ ಸುಂಕದ ಹೆಚ್ಚಳದ ನಂತರವೂ ಜಿಯೋದ ಹೆಚ್ಚಿನ ಪ್ರಿಪೇಯ್ಡ್ ಯೋಜನೆಗಳು ಅದರ ಪ್ರತಿಸ್ಪರ್ಧಿಗಳಾದ ವೊಡಾಫೋನ್ ಐಡಿಯಾ (ವಿ) ಮತ್ತು ಭಾರ್ತಿ ಏರ್‌ಟೆಲ್ ನೀಡುವುದಕ್ಕಿಂತ ಕಡಿಮೆ ಮತ್ತು ಮತ್ತು ಹೆಚ್ಚು ಕೈಗೆಟುಕುವಂತಿವೆ.

ಜಿಯೋವಿನ ಈ 4199 ರೂಗಳ ಯೋಜನೆ 

ಜಿಯೋ ಇದೀಗ ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ಅತ್ಯಂತ ದುಬಾರಿ ಪ್ರಿಪೇಯ್ಡ್ ಯೋಜನೆಯೊಂದನ್ನು ನೀಡುತ್ತಿದೆ. ಹೌದು ಬೆಲೆಗಳನ್ನು ಏರಿಸಿದ ನಂತರ ಜಿಯೋ ಇದೀಗ 4199 ರೂಗಳ ಹೊಸದೊಂದು ಪ್ರೀಪೇಡ್ ಯೋಜನೆಯನ್ನು ನೀಡುತ್ತಿದ್ದು ಪ್ರಸ್ತುತ ಎಲ್ಲಾ ಖಾಸಗಿ ಟೆಲಿಕಾಂ ಕಂಪೆನಿಗಳು ನೀಡುತ್ತಿರುವ ಯೋಜನೆಗಿಂತ ಇದು ಅತ್ಯಂತ ದುಬಾರಿ ಪ್ರಿಪೇಯ್ಡ್ ಯೋಜನೆಯಾಗಿದೆ. ಜಿಯೋವಿನ ಈ 4199 ರೂಗಳ ಯೋಜನೆಯಾಗಿದೆ. ಈ ಯೋಜನೆಯು 1-ವರ್ಷದ ಸೇವಾ ಮಾನ್ಯತೆಯನ್ನು ಹೊಂದಿದ್ದು 365 ದಿನಗಳ ಕಾಲ ಅತ್ಯಂತ ಹೆಚ್ಚು ಡೇಟಾವನ್ನು ನೀಡುವ ಏಕೈಕ ಪ್ರೀಪೇಡ್ ಯೋಜನೆ ಇದಾಗಿದೆ.

ಈ ಯೋಜನೆಯು ಭಾರತದಾದ್ಯಂತ ಬಳಕೆದಾರರಿಗೆ ಲಭ್ಯವಿದ್ದು ಜಿಯೋವಿನ ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಎರಡರಲ್ಲೂ ಈ ಆಫರ್ ಅನ್ನು ನೋಡಬಹುದಾಗಿದೆ. ರಿಲಯನ್ಸ್ ಜಿಯೋದ ರೂ 4199 ಪ್ರಿಪೇಯ್ಡ್ ಯೋಜನೆಯು ಬಳಕೆದಾರರಿಗೆ 3GB ದೈನಂದಿನ ಡೇಟಾವನ್ನು ನೀಡುತ್ತದೆ.ಈ ಯೋಜನೆಯ ಇತರ ಪ್ರಮುಖ ವಿಷಯವೆಂದರೆ. ಇದು 365 ದಿನಗಳ ಕಾಲ ಅನಿಯಮಿತ ಧ್ವನಿ ಕರೆ ಮತ್ತು ಪ್ರತಿದಿನ 100 SMS ಗಳನ್ನು ಉಚಿತವಾಗಿ ನೀಡುತ್ತದೆ. ಮತ್ತು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಬಹು ಜಿಯೋ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ಸಹ ನೀಡುತ್ತದೆ.

Jio ಅಪ್ಲಿಕೇಶನ್‌ಗಳಲ್ಲಿ JioCinema JioTV JioCloud ಮತ್ತು JioSecurity ಸೇರಿವೆ.ಈ ಪ್ಲಾನ್ ನೀಡುವ ಒಟ್ಟು ಡೇಟಾ 1095GBಗಳಾಗಿದ್ದು FUP ಡೇಟಾ ಬಳಕೆಯನಂತರ ಇಂಟರ್ನೆಟ್ ಬ್ರೌಸ್ 64 Kbpsಗೆ ಇಳಿಯುತ್ತದೆ. ಭಾರತದ ಟೆಲಿಕಾಂನಲ್ಲಿ ತನ್ನ ಬಳಕೆದಾರರಿಗೆ ಇಷ್ಟು ದುಬಾರಿ ಪ್ರಿಪೇಯ್ಡ್ ಪ್ಲಾನ್ ಅನ್ನು ಬೇರೆ ಯಾವ ಟೆಲಿಕಾಂ ಕಂಪೆನಿಯೂ ಇದೀಗ ನೀಡುತ್ತಿಲ್ಲ. ನೆನ್ನೆಯಷ್ಟೇ ಓಟಿಟಿ ಚಂದಾದಾರಿಕೆಯುಳ್ಳ ಹೊಸ ಮೂರು ಯೋಜನೆಗಳನ್ನು ತಂದಿರುವ ಏರ್‌ಟೆಲ್ ಕೂಡ ಇಂತಹದೊಂದು ಆಫರ್ ನೀಡುಲಿದೆಯಾ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿದೆ.

ಭಾರ್ತಿ ಏರ್‌ಟೆಲ್ ಪ್ರಸ್ತುತ ಮಧ್ಯಮ ಅಥವಾ ದೀರ್ಘಾವಧಿಯ ಮಾನ್ಯತೆಯೊಂದಿಗೆ 3GB ದೈನಂದಿನ ಡೇಟಾ ಯೋಜನೆಗಳನ್ನು ನೀಡುತ್ತಿಲ್ಲ. ಆದರೆ ಈ ಯೋಜನೆಗೆ ವಿರುದ್ಧವಾಗಿ ಪರಿಷ್ಕೃತ ಬೆಲೆಯೊಂದಿಗೆ ಏರ್‌ಟೆಲ್ ಕಂಪನಿಯ ಪ್ರಿಪೇಯ್ಡ್ ಕೊಡುಗೆಗಳಲ್ಲಿ ಹೊಸದೊಂದು ಯೋಜನೆಯು ಶೀಘ್ರದಲ್ಲೇ ಬರಬಹುದು. ನಿಮ್ಮ ಸಂಖ್ಯೆಗೆ Jio ನೀಡುತ್ತಿರುವ ಇತ್ತೀಚಿನ ಉತ್ತಮ ಪ್ಲಾನ್‌ಗಳನ್ನು ಇಲ್ಲಿಂದ My Offers ಉಚಿತವಾಗಿ ಪರೀಕ್ಷಿಸಬಹುದು.

 

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo