ರಿಲಯನ್ಸ್ ಜಿಯೋದಿಂದ ತಲಕಾವೇರಿಯಲ್ಲಿ ಟ್ರೂ 4ಜಿ ಡಿಜಿಟಲ್ ಲೈಫ್ ಆರಂಭ
ಕೊಡಗು ಜಿಲ್ಲೆಯ ತಲಕಾವೇರಿಯು ಕಾವೇರಿ ನದಿಯ ಉಗಮ ಸ್ಥಾನವಾಗಿದ್ದು ಹಿಂದೂಗಳ ಪವಿತ್ರ ಸ್ಥಳವಾಗಿದೆ.
ರಿಲಯನ್ಸ್ ಜಿಯೋದಿಂದ ಇತ್ತೀಚೆಗೆ ತಲಕಾವೇರಿಯಲ್ಲಿ ಟ್ರೂ 4ಜಿ ಡಿಜಿಟಲ್ ಲೈಫ್ ಪರಿಚಯಿಸಲಗಿದೆ.
ಬೆಂಗಳೂರು, ಫೆಬ್ರವರಿ 16: ಕೊಡಗು ಜಿಲ್ಲೆಯ ತಲಕಾವೇರಿಯು ಕಾವೇರಿ ನದಿಯ ಉಗಮ ಸ್ಥಾನವಾಗಿದ್ದು ಹಿಂದೂಗಳ ಪವಿತ್ರ ಸ್ಥಳವಾಗಿದೆ. ಕೊಡಗಿನ ಭಾಗಮಂಡಲದ ಬಳಿಯ ಬ್ರಹ್ಮಗಿರಿ ಬೆಟ್ಟಗಳಲ್ಲಿ ಈ ತಲಕಾವೇರಿ ಇದ್ದು ರಿಲಯನ್ಸ್ ಜಿಯೋದಿಂದ ಇತ್ತೀಚೆಗೆ ತಲಕಾವೇರಿಯಲ್ಲಿ ಟ್ರೂ 4ಜಿ ಡಿಜಿಟಲ್ ಲೈಫ್ ಪರಿಚಯಿಸಲಗಿದೆ. ಸ್ಥಳೀಯ ಕುಟುಂಬಗಳಿಗೆ ಮತ್ತು ಇಡೀ ಸಮುದಾಯಕ್ಕೆ ಇದು ಮೆರುಗು ತಂದಿದೆ. ಈಗ ಲಭ್ಯವಿರುವ ನೆಟ್‌ವರ್ಕ್ ಮೂಲಕವಾಗಿ ತಮ್ಮ ಮಕ್ಕಳು ಪ್ರತಿ ದಿನ ಹಲವು ಕಿಲೋ ಮೀಟರ್ ದೂರ ಪ್ರಯಾಣಿಸದೆಯೇ ತಮ್ಮ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗುತ್ತದೆ. ಮತ್ತು ಯುವಕರು ಮನೆಯಿಂದಲೇ ಕೆಲಸ (ವರ್ಕ್ ಫ್ರಮ್ ಹೋಮ್) ಮಾಡಲು ಅಥವಾ ಸುರಕ್ಷಿತ ವಾತಾವರಣದಲ್ಲಿ ಅನಿಯಮಿತ ಮನರಂಜನೆ ಪಡೆಯಲು ಆಗುತ್ತದೆ.
ತಲಕಾವೇರಿಯಲ್ಲಿ ಟ್ರೂ 4ಜಿ ಡಿಜಿಟಲ್ ಲೈಫ್
ದೂರಸಂಪರ್ಕ ಸೇವೆಗಳ ಕೊರತೆಯಿಂದಾಗಿ ತಲಕಾವೇರಿಯ ಜನರು ಹೊರ ಜಗತ್ತಿಗೆ ಮೂಲಭೂತವಾದ ಸಂಪರ್ಕದಿಂದ ವಂಚಿತರಾಗಿದ್ದರು. ಜಿಯೋದಿಂದ ಸೌರ ಶಕ್ತಿಯನ್ನು ಬಳಸಿಕೊಂಡು ಹಸಿರು ಟವರ್ ನೊಂದಿಗೆ ಟ್ರೂ 4ಜಿ ಒದಗಿಸುತ್ತದೆ. ಡಿಜಿಟಲ್ ಇಂಡಿಯಾಗೆ ಅಗತ್ಯವಿರುವ ವೇಗವರ್ಧಕವಾಗಿದೆ ಜಿಯೋ. ಇನ್ನು ಜಿಯೋ ತನ್ನ ಸೇವೆಗಳ ಮೂಲಕವಾಗಿ ಪ್ರಾರಂಭದಿಂದಲೂ ಡಿಜಿಟಲ್ ಕ್ರಾಂತಿಯನ್ನು ಮಾಡಿತು ಮತ್ತು ಪ್ರತಿಯೊಬ್ಬ ಭಾರತೀಯರಿಗೆ ಡೇಟಾದ ಶಕ್ತಿ ನೀಡಿತು. ಈ ಡಿಜಿಟಲ್ ಕ್ರಾಂತಿಯಿಂದಾಗಿ ಈಗ ನಮ್ಮ ದೇಶದ ದೂರದ ಭಾಗಗಳಿಗೆ ಇನ್ನಷ್ಟು ಸಂಪರ್ಕಿಸಬಹುದಾಗಿದೆ. ಕರ್ನಾಟಕದಲ್ಲಿ ಜಿಯೋದ ಈ ಹೊಸ ಉಪಕ್ರಮವು ಕೊಡುಗೆಗಳ ಗುಚ್ಛದ ಮೂಲಕ ಗಮನ ಸೆಳೆಯುತ್ತದೆ ಮತ್ತು ಜಿಯೋ ಡಿಜಿಟಲ್ ಲೈಫ್ ರಾಜ್ಯದ ಚಂದಾದಾರರಿಗೆ ತರುವ ಪ್ರಯೋಜನಗಳನ್ನು ತೆರೆದಿಡುತ್ತದೆ.
ಜಿಯೋ ನೀಡುತ್ತಿರುವ ಪ್ರಯೋಜನಗಳು-
– ಕರ್ನಾಟಕದಾದ್ಯಂತ ತಡೆರಹಿತ ಸಂಪರ್ಕ, ದೃಢ ಮತ್ತು ವ್ಯಾಪಕವಾದ 4ಜಿ ನೆಟ್‌ವರ್ಕ್
– ಅನಿಯಮಿತ ಧ್ವನಿ ಮತ್ತು ಡೇಟಾ ಪ್ರಯೋಜನಗಳು
– ಜಿಯೋ ಟಿವಿ (ಪ್ರಯಾಣದಲ್ಲಿರುವಾಗ ಹೆಚ್ಚು ಜನಪ್ರಿಯವಾಗಿರುವ ಕ್ಯಾಚ್-ಅಪ್ ಟಿವಿ ಅಪ್ಲಿಕೇಷನ್) ಜಿಯೋಸಿನಿಮಾ ಮತ್ತು ಇತರವುಗಳನ್ನು ಒಳಗೊಂಡಿರುವ ಜಿಯೋ ಪ್ರೀಮಿಯಂ ಅಪ್ಲಿಕೇಷನ್‌ಗಳ ಬಳಕೆಗೆ ಅವಕಾಶ.
– ಕರ್ನಾಟಕದಾದ್ಯಂತ ಜಿಯೋ ಸಿಮ್‌ಗಳ ಸುಲಭ ಲಭ್ಯತೆ
– ಸರಳ ಮತ್ತು ಅನುಕೂಲಕರ ಸೇರ್ಪಡೆ ಅನುಭವ
ಗ್ರಾಹಕರ ಸಂತೋಷವು ಜಿಯೋ ಅನುಭವದ ಮೂಲಾಧಾರವಾಗಿದೆ. ಈ ಉಪಕ್ರಮದ ಮೂಲಕವಾಗಿ ಜಿಯೋ ತನ್ನ ದೃಢವಾದ ನೆಟ್‌ವರ್ಕ್ ಮತ್ತು ಜಿಲ್ಲೆಯಾದ್ಯಂತ ವ್ಯಾಪಕವಾದ ಲಭ್ಯತೆಯ ಮೂಲಕ ತಲಕಾವೇರಿಯಲ್ಲಿನ ಸ್ಥಳೀಯ ಕುಟುಂಬಗಳಿಗೆ ಎಲ್ಲೆಡೆಯೂ ಎಲ್ಲ ಸಮಯದಲ್ಲಿಯೂ ತಡೆರಹಿತ ಅನುಭವ ನೀಡುವುದನ್ನು ಮುಂದುವರಿಸುತ್ತದೆ ಎಂಬುದನ್ನು ಖಾತ್ರಿಪಡಿಸುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile