Reliance Jio ಕೇವಲ ₹11 ರೂಗಳಿಗೆ ಬರೋಬ್ಬರಿ 10GB ಡೇಟಾದ ಹೊಸ ಪ್ಯಾಕ್ ಪರಿಚಯ!

Updated on 15-Nov-2024
HIGHLIGHTS

ರಿಲಯನ್ಸ್ ಜಿಯೋದ (Reliance Jio) ಕೇವಲ 11 ರೂಗಳಿಗೆ ಬರೋಬ್ಬರಿ 10GB ಡೇಟಾ ನೀಡುವ ವೋಚರ್ ಪ್ಯಾಕ್ ಪರಿಚಯ

ರಿಲಯನ್ಸ್ ಜಿಯೋದ (Reliance Jio) ಈ ಹೊಸ ಡೇಟಾ ವೋಚರ್ ಪ್ಯಾಕ್ ಕೇವಲ 1 ಗಂಟೆಯ ವ್ಯಾಲಿಡಿಟಿಯೊಂದಿಗೆ ಬರುತ್ತದೆ.

ಯಾರಿಗೆ ಸಿನಿಮಾ, ಗೇಮ್ ಅಥವಾ ಯಾವುದೇ ಸಾಫ್ಟ್ವೇರ್ ಡೌನ್ಲೋಡ್ ಮಾಡಲು ಬಯಸುವ ಬಳಕೆದಾರರಿಗೆ ಉತ್ತಮವಾಗಿದೆ.

ಭಾರತದ ನಂಬರ್ ಒನ್ ಮತ್ತು ಅತಿದೊಡ್ಡ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋದ (Reliance Jio) ಸದ್ದಿಲ್ಲದೆ ಕೇವಲ 11 ರೂಗಳಿಗೆ ಬರೋಬ್ಬರಿ 10GB ಡೇಟಾ ನೀಡುವ ಹೊಸ 4G ಡೇಟಾ ವೋಚರ್ ಪ್ಯಾಕ್ ಅನ್ನು ಕೇವಲ 1 ಗಂಟೆಯ ವ್ಯಾಲಿಡಿಟಿಯೊಂದಿಗೆ ಪರಿಚಯಿಸಿದೆ. ಮತ್ತು ಇದೊಂದು ಡೇಟಾ ವೋಚರ್ ಪ್ಯಾಕ್ ಆಗಿದ್ದು ಇದರಲ್ಲಿ ಡೇಟಾ ಹೊರೆತು ಬೇರೆ ಯಾವುದೇ ಕರೆ ಅಥವಾ SMS ಲಭ್ಯವಿರೋದಿಲ್ಲ ಎನ್ನುವುದನ್ನು ಗಮನದಲ್ಲಿರಲಿ. ಈ ಯೋಜನೆಯನ್ನು ರಿಲಯನ್ಸ್ ಜಿಯೋದ (Reliance Jio) ದೇಶಾದ್ಯಂತ ಎಲ್ಲ ಗ್ರಾಹಕರಿಗೆ ಲಭ್ಯವಿದ್ದು ಇದನ್ನು ತುರ್ತು ಸಮಯಕ್ಕಾಗಿ ಬಳಸಲು ಉತ್ತಮವಾಗಲಿದೆ.

Also Read: Best Geysers: ಚಳಿಗಾಲದಲ್ಲಿ ನೀವೊಂದು ಹೊಸ ಗೀಸರ್ ಖರೀದಿಸಲು ಯೋಚಿಸುತ್ತಿದ್ದರೆ ಈ 3 ಅಂಶಗಳ ಬಗ್ಗೆ ತಿಳಿದಿರಲಿ!

Reliance Jio ನೀಡುತ್ತಿರುವ ಈ ಪ್ಲಾನ್ ಯಾವ ಬಳಕೆದಾರರಿಗೆ ಹೆಚ್ಚು ಪ್ರಯೋಜನ?

ರಿಲಯನ್ಸ್ ಜಿಯೋದಿಂದ (Reliance Jio) ಪರಿಚಯಿಸಲಾಗಿರುವ ಈ ಲೇಟೆಸ್ಟ್ ಡೇಟಾ ವೋಚರ್ ಪ್ಯಾಕ್ 4G ಸೇವೆಗಳನ್ನು ಬಳಸುತ್ತಿರುವ ಬಳಕೆದಾರರ ಕಡೆಗೆ ಹೆಚ್ಚು ಕೇಂದ್ರೀಕೃತವಾಗಿದೆ. ಯಾಕೆಂದರೆ ನೀವು 5G ಬಳಸುತ್ತಿದ್ದಾರೆ ನಿಮಗೆ ಈಗಾಗಲೇ ಅನ್ಲಿಮಿಟೆಡ್ ಡೇಟಾ ಲಭ್ಯವಿರುತ್ತದೆ. ಅಲ್ಲದೆ ಈ ಡೇಟಾ ಪ್ಯಾಕ್ ಅನ್ನು ಬಳಸಲು ನಿಮ್ಮ ಬಳಿ ಪ್ರೈಮರಿ ರಿಚಾರ್ಜ್ ಪ್ಲಾನ್ ಇದ್ದರೆ ಮಾತ್ರ ಈ ಪ್ಯಾಕ್ ಬಳಸಬಹುದು. ನೇರವಾಗಿ ಕೇವಲ ಈ ಪ್ಯಾಕ್ ಮಾತ್ರ ರಿಚಾರ್ಜ್ ಮಾಡಿ ಬಳಸಲು ಸಾಧ್ಯವಿಲ್ಲ ಎನ್ನುವುದು ನೆನಪಿನಲ್ಲಿರಲಿ.

ಇನ್ನೂ 4G ನೆಟ್ವರ್ಕ್ ಬಳಸುತ್ತಿರುವ ಬಳಕೆದಾರರಲ್ಲಿ ಯಾರಿಗೆ ಸಿನಿಮಾ, ಗೇಮ್ ಅಥವಾ ಯಾವುದೇ ಸಾಫ್ಟ್ವೇರ್ ಡೌನ್ಲೋಡ್ ಮಾಡಲು ಬಯಸಿದರೆ ಕೇವಲ 11 ರೂಗಳಿಗೆ ಬರೋಬ್ಬರಿ 10GB ಡೇಟಾ ನೀಡುವ ಈ ಹೊಸ ಡೇಟಾ ವೋಚರ್ ಪ್ಯಾಕ್ ಅನ್ನು ಕೇವಲ 1 ಗಂಟೆಗೆ ರಿಚಾರ್ಜ್ ಮಾಡಿ ಬಳಸಬಹುದು.

ಈ ಒಂದು ಗಂಟೆಯೊಳಗೆ ನೀವು 10GB ಡೇಟಾ ಬಳಸಿ ಅಥವಾ ಬಳಸದೆ ಬಿಡಿ ಈ ಪ್ಯಾಕ್ ನಿಷ್ಕ್ರಿಯವಾಗುತ್ತದೆ. ಈ ಮೂಲಕ ತುರ್ತು ಸಮಯದಲ್ಲಿ ಹೆಚ್ಚು ಡೇಟಾ ಬೇಕಾದವರಿಗೆ ಮಾತ್ರ ಇದು ಸೂಕ್ತ. ಅದನ್ನು ಬಿಟ್ಟು ಬೇರೆ ಯಾರು ಇದನ್ನು ಅಷ್ಟಾಗಿ ಬಳಸೋದಿಲ್ಲ ಅನ್ನೋದು ನನ್ನ ಅಭಿಪ್ರಾಯ ನೀವೇನು ಅಂತೀರಾ ಕಮೆಂಟ್ ಮಾಡಿ ತಿಳಿಸಿ.

Airtel ಸಹ ಈ ಡೇಟಾ ಪ್ಯಾಕ್ ಹೊಂದಿದೆ:

ಹೌದು ಈಗ ರಿಲಯನ್ಸ್ ಜಿಯೋದಿಂದ (Reliance Jio) ಪರಿಚಯಿಸಿರುವ 4G ಡೇಟಾ ವೋಚರ್ ಪ್ಯಾಕ್ ಅನ್ನು ಈಗಾಗಲೇ ಭಾರ್ತಿ ಏರ್‌ಟೆಲ್ ಕೂಡ ಹೊಂದಿದ್ದು ಇದು ಜಿಯೋ ಪ್ಲಾನ್‌ನಂತೆಯೇ ಕೇವಲ ಡೇಟಾದೊಂದಿಗೆ ಬರುತ್ತದೆ.

ಇದು ಅನೇಕ ಬಳಕೆದಾರರನ್ನು ಆಕರ್ಷಿಸುವ ಯೋಜನೆಯಲ್ಲ ಅಂದ್ರೆ ತಪ್ಪಿಲ್ಲ ಆದರೆ ಈಗಾಗಲೇ ಹೇಳಿರುವಂತೆ ತುರ್ತು ಸಮಯದಲ್ಲಿ ಕೇವಲ 1 ಗಂಟೆಯ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಕೇವಲ 11 ರೂಗಳ ವೆಚ್ಚದಲ್ಲಿರುವ ಪ್ಲಾನ್ ನಮಗೂ ಯಾವಾಗಲಾದರೂ ಕೆಲಸಕ್ಕೆ ಬರುತ್ತೆ ಅಂತಾರೆ ಕೆಲ ಬಳಕೆದಾರರು. ಹಾಗಾಗಿ ಬಳಕೆದಾರರು ಸಂಪೂರ್ಣ 10GB ಅನ್ನು ಬಳಸಲು ಬಯಸದಿದ್ದರೂ ಸಹ ಅವರು ಅದನ್ನು ಬಳಸಬಹುದು.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :