389 ದಿನಗಳ ವ್ಯಾಲಿಡಿಟಿಯೊಂದಿಗೆ Unlimited ಕರೆ ಮತ್ತು ಡೇಟಾದ Happy New Year 2024 ಪ್ಲಾನ್ ಬಿಡುಗಡೆ | Tech News

Updated on 27-Dec-2023
HIGHLIGHTS

Jio ತನ್ನ ಗ್ರಾಹಕರಿಗೆ ವರ್ಷದ ಕೊನೆಯಲ್ಲಿ Happy New Year 2024 ಪ್ರಯುಕ್ತ ಉತ್ತಮ ಕೊಡುಗೆಯನ್ನು ನೀಡಿದೆ

ಜಿಯೋ ರೂ 2,999 ವಾರ್ಷಿಕ ಯೋಜನೆಯಲ್ಲಿ 24 ದಿನಗಳ ಹೆಚ್ಚುವರಿ ಮಾನ್ಯತೆಯನ್ನು ನೀಡುತ್ತಿದೆ.

ರಿಲಯನ್ಸ್ ಜಿಯೋ (Reliance Jio) ರೂ 2,999 ಯೋಜನೆಯು ವಾರ್ಷಿಕ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯಾಗಿದೆ.

ದೇಶದ ಅತಿದೊಡ್ಡ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ (Reliance Jio) ಪ್ರತಿ ವರ್ಷದಂತೆ ಈ ವರ್ಷವೂ ತನ್ನ ಗ್ರಾಹಕರಿಗೆ ವರ್ಷದ ಕೊನೆಯಲ್ಲಿ Happy New Year 2024 ಪ್ರಯುಕ್ತ ಉತ್ತಮ ಕೊಡುಗೆಯನ್ನು ನೀಡಿದೆ. ಜಿಯೋ ರೂ 2,999 ವಾರ್ಷಿಕ ಯೋಜನೆಯಲ್ಲಿ 24 ದಿನಗಳ ಹೆಚ್ಚುವರಿ ಮಾನ್ಯತೆಯನ್ನು ನೀಡುತ್ತಿದೆ. ಜಿಯೋ ಹೊಸ ವರ್ಷದ ಕೊಡುಗೆಯ ಅಡಿಯಲ್ಲಿ ಈ ಕೊಡುಗೆ ಲಭ್ಯವಿದೆ. ಜಿಯೋ ಕೊಡುಗೆಯ ನಂತರ ಈ ಯೋಜನೆಯ ದೈನಂದಿನ ವೆಚ್ಚವು ಕೇವಲ ರೂ 8.21 ರಿಂದ ರೂ 7.70 ರೂಗಳು ಮಾತ್ರ ಖರ್ಚು ಆಗಲಿದೆ.

Also Read: ಸ್ಯಾಮ್‌ಸಂಗ್‌ನಿಂದ 50MP ಕ್ಯಾಮೆರಾದ Galaxy A25 5G ಲಾಂಚ್! ಬೆಲೆ ಮತ್ತು ಟಾಪ್ 5 ಫೀಚರ್ ತಿಳಿಯಿರಿ

ಜಿಯೋದ Happy New Year 2024 ರೂ 2,999 ಯೋಜನೆ

ರಿಲಯನ್ಸ್ ಜಿಯೋ (Reliance Jio) ರೂ 2,999 ಯೋಜನೆಯು ವಾರ್ಷಿಕ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯಾಗಿದೆ. ಜಿಯೋದ ರೂ 2,999 ಪ್ಲಾನ್ 12 ತಿಂಗಳುಗಳು ಅಂದರೆ 365 ದಿನಗಳವರೆಗೆ ಮಾನ್ಯವಾಗಿರುತ್ತದೆ. ಈಗ ಈ ಯೋಜನೆಯು ಹೊಸ ವರ್ಷದ ಕೊಡುಗೆಯ ಅಡಿಯಲ್ಲಿ 24 ದಿನಗಳ ಹೆಚ್ಚುವರಿ ಮಾನ್ಯತೆಯೊಂದಿಗೆ ಬರುತ್ತದೆ. ಒಮ್ಮೆ ರೀಚಾರ್ಜ್ ಮಾಡಿದರೆ ಜಿಯೋ ಬಳಕೆದಾರರು 365 ದಿನಗಳ ಬದಲಿಗೆ ಮತ್ತೆ 24 ದಿನಗಳೊಂದಿಗೆ ಒಟ್ಟಾರೆಯಾಗಿ 389 ದಿನಗಳ ವ್ಯಾಲಿಡಿಟಿಯನ್ನು ಪಡೆಯುತ್ತಾರೆ. ನಿಮ್ಮ ಜಿಯೋ ಸಿಮ್ ಸುಮಾರು 13 ತಿಂಗಳವರೆಗೆ ಸಕ್ರಿಯವಾಗಿರುತ್ತದೆ.

Jio Happy New Year 2024 Plan

ಜಿಯೋದ ರೂ 2,999 ಯೋಜನೆ ಪ್ರಯೋಜನಗಳೇನು?

ಜಿಯೋದ ಈ ಪ್ರಿಪೇಯ್ಡ್ ಯೋಜನೆಯಲ್ಲಿ ನೀವು ದಿನಕ್ಕೆ 2.5GB ಡೇಟಾವನ್ನು ಪಡೆಯುತ್ತೀರಿ. ನಿಮ್ಮ ಪ್ರದೇಶದಲ್ಲಿ Jio 5G ಸೇವೆಯನ್ನು ಹೊಂದಿದ್ದರೆ ಈ ಯೋಜನೆಯಲ್ಲಿ 5G ಸೇವೆಯೂ ಲಭ್ಯವಿರುತ್ತದೆ. ನೀವು ವರ್ಷಕ್ಕೆ ಸುಮಾರು 912.5GB ಡೇಟಾವನ್ನು ಪಡೆಯುತ್ತೀರಿ. ದೈನಂದಿನ ಇಂಟರ್ನೆಟ್ ಡೇಟಾ ಖಾಲಿಯಾದ ನಂತರ ವೇಗವನ್ನು 64Kbps ಇಳಿಸಲಾಗುತ್ತದೆ. ಇದರ ನಂತರ ನೀವು ಅನ್ಲಿಮಿಟೆಡ್ ಡೇಟಾ ಬಳಕೆ ಮಾಡಬಹುದು.

Jio ನೀಡುತ್ತಿರುವ ಇತರ ಪ್ರಯೋಜನಗಳೇನು?

ಈ ಲೇಟೆಸ್ಟ್ ಯೋಜನೆಯ ಪ್ರಯೋಜನಗಳ ಕುರಿತು ಮಾತನಾಡುವುದಾದರೆ ಅನಿಯಮಿತ ವಾಯ್ಸ್ ಕರೆ ಮತ್ತು ದಿನಕ್ಕೆ 100 SMS ಸೇವೆಗಳನ್ನು ನೀಡುತ್ತದೆ. ಕಂಪನಿಯು JioCinema, JioTV ಮತ್ತು JioCloud ನಂತಹ Jio ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆಯನ್ನು ಸಹ ನೀಡುತ್ತಿದೆ. ಇದು ಪ್ರೀಮಿಯಂ ಯೋಜನೆ JioCinema ಗೆ ಚಂದಾದಾರಿಕೆಯನ್ನು ಒಳಗೊಂಡಿಲ್ಲ. ಇದನ್ನು ಪ್ರತ್ಯೇಕವಾಗಿ ಖರೀದಿಸಬೇಕಿದ್ದು ಇದು 20ನೇ ಡಿಸೆಂಬರ್ 2023 ರಿಂದ ಲಭ್ಯವಿದೆ. ಈ ಯೋಜನೆಯ ಪ್ರಯೋಜನಗಳನ್ನು ಯಾವಾಗ ಪಡೆಯಬಹುದು ಎಂಬುದರ ಕುರಿತು ವೆಬ್‌ಸೈಟ್‌ನಲ್ಲಿ ಯಾವುದೇ ಮಾಹಿತಿಯನ್ನು ನೀಡಲಾಗಿಲ್ಲ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :