ರಿಲಯನ್ಸ್ ಜಿಯೋ ಹೊಸದಾಗಿ Unlimited 5G Data Gifting Voucher ಪರಿಚಯಿಸಿದೆ.
ರಿಲಯನ್ಸ್ ಜಿಯೋ ಸದ್ದಿಲ್ಲದೇ ಅತಿ ಕಡಿಮೆ ಬೆಲೆಗೆ ವರ್ಷಪೂರ್ತಿ ಬಳಕೆಗಾಗಿ ಕೇವಲ 601 ರೂಗಳ ವೋಚರ್ ಘೋಷಿಸಿದೆ.
ಭಾರತದ ಜನಪ್ರಿಯ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋ (Reliance Jio) ತಮ್ಮ ಬಳಕೆದಾರರಿಗೆ ಹೊಸ ವರ್ಷದ ಯೋಜನೆಯ ನಂತರ ಈಗ ಸದ್ದಿಲ್ಲದೇ ವಾರ್ಷಿಕ Jio 601 Unlimited 5G Plan ಅನ್ನು ಪರಿಚಯಿಸಿದೆ. ರಿಲಯನ್ಸ್ ಜಿಯೋ ದೇಶದಲ್ಲಿ ತನ್ನ 5G ನೆಟ್ವರ್ಕ್ ಅನ್ನು ಮೂಲೆ ಮೂಲೆಗೆ ಹರಡಿ ಬಳಕೆದಾರರಿಗೆ ಉತ್ತಮ ಪ್ರಿಪೇಯ್ಡ್ ಯೋಜನೆಗಳನ್ನು ನೀಡುತ್ತಿದೆ. ಆದರೆ ಪ್ರತಿ ತಿಂಗಳ ರಿಚಾರ್ಜ್ ರಿಪೋರ್ಟ್ ನೋಡಿದ ಕಂಪನಿ 5G ಫೋನ್ ಮತ್ತು 5G ನೆಟ್ವರ್ಕ್ ಪ್ರದೇಶದಲ್ಲಿದ್ದರೂ ಈ Unlimited 5G ಯೋಜನೆಗಳನ್ನು ಯಾಕೆ ರಿಚಾರ್ಜ್ ಮಾಡುತ್ತಿಲ್ಲ ಎನ್ನುವ ಪ್ರಶ್ನೆಗೆ ಉತ್ತರವನ್ನು ಹುಡುಕಿ ನೋಡಿದಾಗ ಇದಕ್ಕೆ ಕಾರಣ ಹೆಚ್ಚಿನ ಬೆಲೆ ಏರಿಕೆಯಾಗಿರುವುದು ಕಂಡು ಬಂದಿದೆ.
Unlimited 5G Data Voucher ಪರಿಚಯಿಸಲು ಕಾರಣವೇನು?
ಇದನ್ನು ಗಮನಲ್ಲಿಟ್ಟುಕೊಂಡು ರಿಲಯನ್ಸ್ ಜಿಯೋ (Reliance Jio) ತಮ್ಮ ಬಳಕೆದಾರರಿಗೆ ಹೊಸದಾಗಿ Unlimited 5G Data Gifting Voucher ಪರಿಚಯಿಸಿದೆ. ಇದರಿಂದಾಗಿ ನೀವು ಅತಿ ಕಡಿಮೆ ಬೆಲೆಯ ಪ್ಲಾನ್ ಬಳಸುತ್ತಿದ್ದರೂ ಸರಿ ಈ ಹೊಸ 601 ಯೋಜನೆಯನ್ನು ಹೊಂದಿದ್ದರೆ ಒಂದು ವರ್ಷಕ್ಕೆ ಅನ್ಲಿಮಿಟೆಡ್ 5G ಬಳಸಬಹುದು. ಇದನ್ನು ಇನ್ನು ಸರಳವಾಗಿ ವಿವರಿಸುವುದಾದರೆ ನೀವು ಪ್ರತಿದಿನ 1.5GB ಡೇಟಾ ನೀಡುವ ಯಾವುದೇ ಯೋಜನೆಯನ್ನು ನೋಡಿ Unlimited 5G ಸಪೋರ್ಟ್ ಮಾಡೋದಿಲ್ಲ. ಉದಾಹರಣೆಗೆ 299 ರೂಗಳ ರಿಚಾರ್ಜ್ 28 ದಿನಗಳ ಮಾನ್ಯತೆಯೊಂದಿಗೆ ಪ್ರತಿದಿನ 1.5GB ಡೇಟಾವನ್ನು ಹೊಂದಿದೆ ಆದರೆ Unlimited 5G ಸಪೋರ್ಟ್ ಮಾಡೋಲ್ಲ.
ರಿಲಯನ್ಸ್ ಜಿಯೋ (Reliance Jio) ಇದನ್ನೇ ತನ್ನ ಬಂಡವಾಳವಾಗಿಸಿಕೊಂಡು 5G ನೆಟ್ವರ್ಕ್ ಪ್ರದೇಶದಲ್ಲಿದ್ದು 5G ಸಪೋರ್ಟ್ ಮಾಡುವ ಫೋನ್ ಇದ್ದರೂ ಪ್ರತಿ ತಿಂಗಳು ರಿಚಾರ್ಜ್ ಮಾಡಿಕೊಂಡರೂ ಈ Unlimited 5G ಯೋಜನೆಗಳನ್ನು ಬಳಸದ ಗ್ರಾಹಕರನ್ನು ಗುರಿಯಾಗಿಸಿಕೊಂಡು ಈ 601 ರೂಗಳ ಯೋಜನೆಯನ್ನು ಪರಿಚಯಿಸಿದೆ. ಒಮ್ಮೆ ನೀವು ಈ 601 ರೂಗಳ Unlimited 5G Data Voucher ರಿಚಾರ್ಜ್ ಮಾಡಿಕೊಂಡರೆ ವರ್ಷ ಪೂರ್ತಿ ನೀವು 299 ರೂಗಳ ರಿಚಾರ್ಜ್ ಮಾಡಿದರೂ Unlimited 5G ಬಳಸಬಹುದು ಎನ್ನುವುದು ಲೆಕ್ಕಾಚಾರವಾಗಿದೆ.
Also Read: Motorola G85 5G ಸ್ಮಾರ್ಟ್ ಫೋನ್ 4000 ರೂಗಳ ಬೆಲೆ ಇಳಿಕೆ! ಹೊಸ ಆಫರ್ ಬೆಲೆ ಮತ್ತು ಫೀಚರ್ಗಳೇನು?
Jio 601 Unlimited 5G ಯೋಜನೆಯ ವಿವರಗಳು!
ಬಳಕೆದಾರರು Jio True 5G ಗಿಫ್ಟ್ ವೋಚರ್ ಅನ್ನು ತಮಗೆ ಮಾತ್ರವಲ್ಲದೆ ಸ್ನೇಹಿತರು ಮತ್ತು ಕುಟುಂಬಕ್ಕೂ ಉಡುಗೊರೆಯಾಗಿ ನೀಡಬಹುದು. My Jio ಅಪ್ಲಿಕೇಶನ್ ಮೂಲಕ ಈ ವೋಚರ್ ಅನ್ನು ಬೇರೆಯವರಿಗೆ ಉಡುಗೊರೆಯಾಗಿ ನೀಡಬಹುದು. ಈ ಕೆಳಗಿನ ಯೋಜನಗಳ ಮಾನ್ಯತೆಯ ಅವಧಿಯು ಗರಿಷ್ಠ 30 ದಿನಗಳಾಗಿದ್ದು ನೀವು ಈ ವೋಚರ್ ಅನ್ನು ಉಡುಗೊರೆಯಾಗಿ ನೀಡಲು ಬಯಸುವ ವ್ಯಕ್ತಿಯು ಈ ವೋಚರ್ ಅಡಿಯಲ್ಲಿ ಹೆಚ್ಚುವರಿ ಪ್ರಯೋಜನಗಳಿಗೆ ಅರ್ಹರಾಗಿರಬೇಕು ಎಂಬುದನ್ನು ಮರೆಯಬೇಡಿ.
ಈ ಹೊಸ 601 ರೂಗಳ ಯೋಜನೆಯನ್ನು ನೇರವಾಗಿ ಬಳಸಲು ಸಾಧ್ಯವಿರೋದಿಲ್ಲ. ಇದಕ್ಕೆ ಪೂರಕವಾಗಿ ನಿಮ್ಮ ಬಳಿ ಈ ಕೆಳಗಿನ ಯಾವುದಾರೊಂದು ಯೋಜನೆ ಇರಲೇಕಾಗುತ್ತದೆ. ಅವರು ಕನಿಷ್ಟ ಮೂಲಭೂತ ಯೋಜನೆಯನ್ನು ಹೊಂದಿದ್ದಾರೆಯೇ ಎಂದು ಪರಿಶೀಲಿಸಿ ಮತ್ತು ಆ ಚೀಟಿಯನ್ನು ನೀಡಿ. ಜಿಯೋ Unlimited 5G ಡೇಟಾ ವೋಚರ್ 199, 239, 299, 319, 329, 579, 666, 769 ಮತ್ತು 899 ಮೌಲ್ಯದ ರೀಚಾರ್ಜ್ ಪ್ಲಾನ್‌ಗಳಲ್ಲಿ ಮಾನ್ಯವಾಗಿರುತ್ತದೆ. 5G ಡೇಟಾ ವೋಚರ್‌ನ ಮಾನ್ಯತೆಯು ಬಳಕೆದಾರರ ಮೂಲ ಯೋಜನೆಯನ್ನು ಅವಲಂಬಿಸಿರುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile