ರಿಲಯನ್ಸ್ Jio ಸದ್ದಿಲ್ಲದೆ 1 ವರ್ಷದ ವ್ಯಾಲಿಡಿಟಿಯ Value ಆಡ್-ಆನ್ ಡೇಟಾ ಪ್ಯಾಕ್ ಪರಿಚಯಿಸಿದೆ | Tech News

Updated on 13-Oct-2023
HIGHLIGHTS

ರಿಲಯನ್ಸ್ ಜಿಯೋ ಪ್ರಿಪೇಯ್ಡ್ ಬಳಕೆದಾರರಿಗೆ ಈಗ ಹೊಸದಾಗಿ 2878 ರೂಗಳ ಡೇಟಾ ಆಡ್-ಆನ್ ಪ್ಯಾಕ್ ಅನ್ನು ಪರಿಚಯಿಸಿ

ಇದರಲ್ಲಿ ಬಳಕೆದಾರರಿಗೆ ಪ್ರತಿದಿನ 2GB ಡೇಟಾದ ಪ್ರಕಾರ ವರ್ಷಕ್ಕೆ ಒಟ್ಟಾರೆಯಾಗಿ 730GB ನೀಡುತ್ತದೆ.

ಈ ಪ್ಯಾಕ್ ಪಡೆಯಲು ಬಳಕೆದಾರರ ನಂಬರ್‌ನಲ್ಲಿ ಕನಿಷ್ಠ ಒಂದು ಪ್ರೈಮರಿ ಯೋಜನೆ ಹೊಂದಿರುವುದು ಕಡ್ಡಾಯವಾಗಿದೆ.

ಭಾರತದ ನಂಬರ್ ಒನ್ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ (Reliance Jio) ತನ್ನ ಪ್ರಿಪೇಯ್ಡ್ ಬಳಕೆದಾರರಿಗೆ ಈಗ ಹೊಸದಾಗಿ 2878 ರೂಗಳ ಡೇಟಾ ಆಡ್-ಆನ್ ಪ್ಯಾಕ್ (Data Add-on Pack) ಅನ್ನು ಪರಿಚಯಿಸಿದ್ದು ತನ್ನ ಡೇಟಾ ಯೋಜನೆಗಳ ಪಟ್ಟಿಗೆ ಸೇರಿಸಿಕೊಂಡಿದೆ. ಇದರಲ್ಲಿ ಬಳಕೆದಾರರಿಗೆ ಪ್ರತಿದಿನ 2GB ಡೇಟಾದ ಪ್ರಕಾರ ವರ್ಷಕ್ಕೆ ಒಟ್ಟಾರೆಯಾಗಿ 730GB ನೀಡುತ್ತದೆ. ಜಿಯೋ ಬಳಕೆದಾರರು ನೇರವಾಗಿ ಈ ಯೋಜನೆಯನ್ನು ಮಾತ್ರ ಬಳಸಲು ಸಾಧ್ಯವಿಲ್ಲ. ಈ ಉಚಿತ ಡೇಟಾ ಮುಗಿದ ನಂತರ ನಿಮಗೆ ಅನ್ಲಿಮಿಟೆಡ್ ಬ್ರೌಸಿಂಗ್ ಲಭ್ಯವಿದ್ದು ಸ್ಪೀಡ್ ಮಾತ್ರ 64Kbps ಪಡೆಯುತ್ತದೆ.

ಈ ಪ್ಯಾಕ್ ಪಡೆಯಲು ಬಳಕೆದಾರರ ನಂಬರ್‌ನಲ್ಲಿ ಕನಿಷ್ಠ ಒಂದು ಪ್ರೈಮರಿ ಯೋಜನೆ ಹೊಂದಿರುವುದು ಕಡ್ಡಾಯವಾಗಿದೆ. ಇದು ಕೇವಲ ಡೇಟಾ ಪ್ಯಾಕ್ ಆಗಿರುವ ಕಾರಣ ಇದರಲ್ಲಿ ನಿಮಗೆ ಕೇವಲ ಡೇಟಾ ಲಭ್ಯ ಲಭ್ಯವಿರುತ್ತದೆ. ವರತಾಗಿ ಕರೆ ಅಥವಾ SMS ಸೌಲಭ್ಯಗಳಿರುವುದಿಲ್ಲ. ಈ ಹೆಚ್ಚುವರಿಯ ಆಡ್-ಆನ್ ಡೇಟಾ ಪ್ಯಾಕ್ 365 ದಿಗಳ ಮಾನ್ಯತೆಯೊಂದಿಗೆ ಬರುತ್ತದೆ. ಮುಂದೆ ಜಿಯೋ ಗ್ರಾಹಕರಿಗೆ ರೂ 2878 ಪ್ಲಾನ್‌ನೊಂದಿಗೆ ಸಂಯೋಜಿಸಲಾದ ಪ್ರಯೋಜನವನ್ನು ಪರಿಶೀಲಿಸೋಣ.

ಇದನ್ನೂ ಓದಿ: ಭಾರತದಲ್ಲಿ Jio Bharat B1 4G ಫೀಚರ್ ಫೋನ್ ಬಿಡುಗಡೆ, ಬೆಲೆ ₹1300 ರೂಗಳಿಗಿಂತ ಕಡಿಮೆ

Jio Add-on Data Pack

Jio ರೂ 2878 ಡೇಟಾ ವೋಚರ್ ವಿವರಗಳು

ರಿಲಯನ್ಸ್ ಜಿಯೋದ ರೂ 2878 ಯೋಜನೆಯು ಒಂದು ಸಂಪೂರ್ಣ ವರ್ಷದ ಮಾನ್ಯತೆಯೊಂದಿಗೆ ಬರುತ್ತದೆ. ಈ ಯೋಜನೆಯೊಂದಿಗೆ ಬಳಕೆದಾರರು 2GB ದೈನಂದಿನ ಡೇಟಾವನ್ನು ಪಡೆಯುತ್ತಾರೆ. ಪ್ರತಿದಿನದ ಡೇಟಾದ ಬಳಕೆಯ ನಂತರ ಇದರ ಸ್ಪೀಡ್ 64Kbps ಕಡಿಮೆ ಮಾಡಲಾಗುತ್ತದೆ ಅದರಲ್ಲಿ ನೀವು ಅನ್ಲಿಮಿಟೆಡ್ ಬ್ರೌಸಿಂಗ್ ಪಡೆಯಬಹುದು. ಈ ಯೋಜನೆಯು ಗ್ರಾಹಕರಿಗೆ ಒಟ್ಟು ಮೊತ್ತದ ಡೇಟಾ 730GB ಆಗಿದೆ. ಈ ಯೋಜನೆಯೊಂದಿಗೆ ಯಾವುದೇ ಇತರ ಪ್ರಯೋಜನಗಳನ್ನು ನೀಡಲಾಗುವುದಿಲ್ಲ.

ವಾಯ್ಸ್ ಕರೆ ಮತ್ತು SMS ಪ್ರಯೋಜನಗಳಿಲ್ಲ

ಈಗಾಗಲೇ ಮೇಲೆ ತಿಳಿಸಿರುವಂತೆ ಈ ಯೋಜನೆಯಲ್ಲಿ ನಿಮಗೆ ಯಾವುದೇ ವಾಯ್ಸ್ ಕರೆ ಮತ್ತು SMS ಪ್ರಯೋಜನಗಳಿಗಾಗಿ ನೀವು ಬೇಸ್ ಪ್ರಿಪೇಯ್ಡ್ ಪ್ಯಾಕ್‌ನೊಂದಿಗೆ ರೀಚಾರ್ಜ್ ಮಾಡಬೇಕಾಗುತ್ತದೆ. ಅಲ್ಲದೆ ರೂ 2878 ಯೋಜನೆಯು ಬಳಕೆದಾರರನ್ನು ಅನಿಯಮಿತ 5G ಡೇಟಾ ಆಫರ್‌ಗೆ ಅರ್ಹರನ್ನಾಗಿ ಮಾಡುವುದಿಲ್ಲ ಎಂಬುದನ್ನು ಗಮನಿಸಬೇಕಿದೆ. ಅದಕ್ಕಾಗಿ ನೀವು ರೂ 239 ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಯೋಜನೆಯೊಂದಿಗೆ ರೀಚಾರ್ಜ್ ಮಾಡುವುದು ಕಡ್ಡಾಯವಾಗಿದೆ.

ಜಿಯೋ ಇದರ ಮಾನ್ಯತೆ ಮತ್ತು ವಾಯ್ಸ್ ಕರೆ ಮತ್ತು SMS ಪ್ರಯೋಜನಗಳೊಂದಿಗೆ ಬರುತ್ತದೆ. ಡೇಟಾ ವೋಚರ್‌ನಲ್ಲಿ ನೀವು ಹೆಚ್ಚು ಹಣವನ್ನು ಖರ್ಚು ಮಾಡಲು ಬಯಸದಿದ್ದರೆ ನೀವು ಜಿಯೋದ ಇತರ ಕೊಡುಗೆಗಳನ್ನು ಸಹ ಪರಿಶೀಲಿಸಬಹುದು. ರಿಲಯನ್ಸ್ ಜಿಯೋದ ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್‌ನಲ್ಲಿ ಗ್ರಾಹಕರಿಗೆ ವಿವಿಧ ವ್ಯಾಲಿಡಿಟಿಗಳೊಂದಿಗೆ ಸಾಕಷ್ಟು ಡೇಟಾ-ಮಾತ್ರ ವೋಚರ್‌ಗಳು ಲಭ್ಯವಿದೆ. ಈ ಯೋಜನೆಯನ್ನು ನೀವು ಪಡೆಯಲು ಯೋಚಿಸುತ್ತಿದ್ದರೆ ಒಮ್ಮೆ ನೀವು ನಿಮ್ಮ ಜಿಯೋ ಅಪ್ಲಿಕೇಶನ್ ಒಳಗೆ ಹೋಗಿ ಖಚಿತ ಮಾಡಿಕೊಳ್ಳಿ.

ಇದನ್ನೂ ಓದಿ: Amazon ಸೇಲ್‌ನಲ್ಲಿ ಬೆಸ್ಟ್ Smart Watch ಮೇಲೆ ಎಂದು ಕಾಣದ ಭರ್ಜರಿ ಡೀಲ್ ಮತ್ತು ಆಫರ್‌ಗಳು

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :