Jio 5G Plans: ದೇಶದ ಪ್ರಮುಖ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ (Reliance Jio) ತನ್ನ ಪ್ರಿಪೇಯ್ಡ್ ಗ್ರಾಹಕರಿಗೆ ರೂ 349 ಮತ್ತು ರೂ 899 ರ ಎರಡು ಹೊಸ ರೀಚಾರ್ಜ್ ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ಇದರಲ್ಲಿ JioTV, JioCinema, JioSecurity ಮತ್ತು JioCloud ಗೆ ಪ್ರವೇಶವನ್ನು ಹೊಂದಿವೆ. ಯೋಜನೆಗಳು 90 ದಿನಗಳವರೆಗಿನ ವ್ಯಾಲಿಡಿಟಿಯೊಂದಿಗೆ ಜಿಯೋ ಸೇರಿಸಿ ಯಾವುದೇ ನೆಟ್‌ವರ್ಕ್‌ಗೆ ಅನ್ಲಿಮಿಟೆಡ್ ವಾಯ್ಸ್ ಕರೆಗಳು ಮತ್ತು ಪ್ರತಿದಿನಕ್ಕೆ 2.5GB ಹೈ ಸ್ಪೀಡ್ 5G ಡೇಟಾವನ್ನು ನೀಡುತ್ತಿದೆ. ರಿಲಯನ್ಸ್ ಜಿಯೋ (Reliance Jio) ಕಂಪನಿಯು ತನ್ನ MyJio ಅಪ್ಲಿಕೇಶನ್ ಮತ್ತು ತನ್ನ ಅಧಿಕೃತ ವೆಬ್‌ಸೈಟ್ನಲ್ಲಿ ಈ ಪ್ಲಾನಗಳನ್ನು ಈಗಾಗಲೇ ಪಟ್ಟಿ ಮಾಡಿದೆ. ಈ ಪ್ಲಾನ್ ನಿಮಗೆ ಬೇಕಿದ್ದರೆ ನೀವು MyJio ಅಪ್ಲಿಕೇಶನ್, ಅಧಿಕೃತ ಜಿಯೋ ವೆಬ್‍ಸೈಟ್‍ನಲ್ಲಿ ಮತ್ತು ಇತರ ರೀಚಾರ್ಜ್ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ಎರಡೂ ಹೊಸ ಯೋಜನೆಗಳನ್ನು ಪಡೆಯಬವುದು.
ಜಿಯೋ ರೂ 349 ರೀಚಾರ್ಜ್ ಯೋಜನೆಯು ಪ್ರತಿದಿನ 2.5GB ಡೇಟಾವನ್ನು ನೀಡುತ್ತದೆ. ಮತ್ತು 30 ದಿನಗಳ ಮಾನ್ಯತೆಯನ್ನು ಹೊಂದಿದೆ. ಇದು ಒಟ್ಟು ಡೇಟಾ ಪ್ರಯೋಜನಗಳನ್ನು 75GB ಗೆ ತರುತ್ತದೆ. ಈ ಯೋಜನೆಯು ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಧ್ವನಿ ಕರೆಗಳನ್ನು ನೀಡುತ್ತದೆ ಮತ್ತು ದಿನಕ್ಕೆ 100 SMS ಗಳನ್ನು ನೀಡುತ್ತದೆ. ಹೇಳಿದಂತೆ ಗ್ರಾಹಕರು JioTV, JioCinema, JioSecurity ಮತ್ತು JioCloud ಗೆ ಪ್ರವೇಶವನ್ನು ಪಡೆಯುತ್ತಾರೆ. ವೆಲ್ಕಮ್ ಆಫರ್‌ನ ಭಾಗವಾಗಿ ಅರ್ಹ ಬಳಕೆದಾರರು ಅನಿಯಮಿತ 5G ಡೇಟಾವನ್ನು ಪಡೆಯುತ್ತಾರೆ.
ಈ ಹೊಸ ಜಿಯೋ ರೂ 349 ಪ್ಲಾನ್‌ನಂತೆ ಹೊಸ ರೂ 899 ಜಿಯೋ ರೀಚಾರ್ಜ್ ಯೋಜನೆಯು ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಧ್ವನಿ ಕರೆಗಳು, ದಿನಕ್ಕೆ 100 ಎಸ್‌ಎಂಎಸ್ ಮತ್ತು ದಿನಕ್ಕೆ 2.5 ಜಿಬಿ ಡೇಟಾವನ್ನು ನೀಡುತ್ತದೆ. ಯೋಜನೆಯು 90 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಅಂದರೆ ಪ್ಯಾನ್ ಮಾನ್ಯತೆಯ ಉದ್ದಕ್ಕೂ ಸಂಚಿತ ಡೇಟಾ 225GB ಆಗಿರುತ್ತದೆ. ಗ್ರಾಹಕರು JioTV, JioCinema, JioSecurity ಮತ್ತು JioCloud ಗೆ ಪ್ರವೇಶವನ್ನು ಪಡೆಯುತ್ತಾರೆ. ಡೇಟಾ ಖಾಲಿಯಾದ ನಂತರ ವೇಗವು 64Kbps ಗೆ ಇಳಿಯುತ್ತದೆ. ರೂ 349 ಪ್ಲಾನ್‌ನಂತೆ ಅರ್ಹ ಬಳಕೆದಾರರನ್ನು 5G ಸ್ವಾಗತ ಕೊಡುಗೆಗೆ ಅಪ್‌ಗ್ರೇಡ್ ಮಾಡಲಾಗುತ್ತದೆ.