ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗೆ ಎರಡು ಅತ್ಯುತ್ತಮ ಯೋಜನೆಗಳನ್ನು ಬಿಡುಗಡೆಗೊಳಿಸಿದೆ. ಈ ಯೋಜನೆಯನ್ನು ಬಂದಾಗಿನಿಂದ ಈವರೆಗೆ ಹೆಚ್ಚು ಬಳಕೆದಾರರು ಇಷ್ಟಪಟ್ಟಿದ್ದಾರೆ ಇದಕ್ಕೆ ಕಾರಣ ಬಳಕೆದಾರರು OTT ಅಪ್ಲಿಕೇಶನ್ ಬಳಸುವಾಗ ಅಥವಾ ಬೇರೆ ಪ್ರಮುಖ ಕೆಲಸ ಮಾಡುವಾಗ ಡೇಟಾ ತಕ್ಷಣ ಖಾಲಿಯಾದರೆ ಕಿರಿಕಿರಿ ಉಂಟಾಗವುದು ಸಹಜ ಅಲ್ವೇ. ಇದೇ ಸಂಕಷ್ಟವನ್ನು ಬಳಕೆದಾರರಿಂದ ದೂರ ಮಾಡಲು ಜಿಯೋ ಈ ಎರಡು ಹೊಸ ಡೇಟಾ ಬೂಸ್ಟರ್ ಯೋಜನೆಗಳನ್ನು ಅತಿ ಕಡಿಮೆ ಬೆಲೆಯಲ್ಲಿ ಬಿಡುಗಡೆಗೊಳಿಸಿದೆ.
ಕಂಪನಿ ಈ 2 ಹೊಸ ಬೂಸ್ಟರ್ ಪ್ಯಾಕ್‌ಗಳ ಪರಿಚಯದೊಂದಿಗೆ ರಿಲಯನ್ಸ್ ಜಿಯೋ ತನ್ನ ಡೇಟಾ ಆಡ್-ಆನ್‌ಗಳ ಶ್ರೇಣಿಯನ್ನು ವಿಸ್ತರಿಸಿದ್ದು ಈ ಯೋಜನೆಗಳ ಮಾಹಿತಿಯನ್ನು ನೋಡುವುದಾದರೆ ಮೊದಲ ಯೋಜನೆ ರೂ. 19 ರೂಗಳಾಗಿದ್ದು ಇದರಲ್ಲಿ 1.5GB ಡೇಟಾವನ್ನು ಒದಗಿಸುತ್ತದೆ. ಇದರ ಕ್ರಮವಾಗಿ ರೂ. 29 ಪ್ಯಾಕ್ ನಿಮಗೆ 2.5GB ಡೇಟಾವನ್ನು ನೀಡುತ್ತದೆ. ಈ ಪ್ಯಾಕ್‌ಗಳು ನಿರ್ದಿಷ್ಟ ಮಾನ್ಯತೆಯ ಅವಧಿಯೊಂದಿಗೆ ಬರುವುದಿಲ್ಲ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ. ಅಂದ್ರೆ ಇವುಗಳಿಗೆ ಯಾವುದೇ ನಿರ್ದಿಷ್ಟ ಕಾಲಾವಧಿ ಅನ್ವಯಿಸುವುದಿಲ್ಲ. ಏಕೆಂದರೆ ಪ್ರಸ್ತುತ ನಿಮ್ಮ ಮುಖ್ಯ ಯೋಜನೆಯ ವ್ಯಾಲಿಡಿಟಿಯನ್ನೇ ಈ ಯೋಜನೆಗಳು ಹೊಂದಿಕೊಳ್ಳುತ್ತವೆ.
ನಿಮ್ಮ ಮುಖ್ಯ ಯೋಜನೆಯ ಡೇಟಾ ಖಾಲಿಯಾದ ನಂತರವಷ್ಟೇ ಈ ಯೋಜನೆಗಳನ್ನು ಬಳಸಲು ಅವಕಾಶವಿರುತ್ತದೆ. ರಿಲಯನ್ಸ್ ಜಿಯೋ ಈ ಹೊಸ ಡೇಟಾ ಬೂಸ್ಟರ್‌ಗಳು ಈಗಾಗಲೇ ಲಭ್ಯವಿರುವ ಜನಪ್ರಿಯವಾದವುಗಳಿಗೆ ಸೇರುತ್ತವೆ. ಏಕೆಂದರೆ ಈಗಾಗಲೇ ಕೆಲವು ಡೇಟಾ ಬೂಸ್ಟರ್ ಯೋಜನೆಗಳನ್ನು ಜಿಯೋ ಹೊಂದಿದೆ. ಇವುಗಳ ಪಟ್ಟಿಯನ್ನು ಒಮ್ಮೆ ನೀವು ಈ ಕೆಳಗೆ ನೋಡಬಹುದು.
ಇಲ್ಲಿ ಬಳಕೆದಾರರು ಗಮನಿಸಬೇಕಿರುವ ಅಂಶವೆಂದರೆ ಈ ಆಡ್-ಆನ್ ಪ್ಯಾಕ್‌ಗಳಲ್ಲಿ ಸೇರಿಸಲಾದ ಡೇಟಾವನ್ನು ನಿಮ್ಮ ಅಸ್ತಿತ್ವದಲ್ಲಿರುವ ಯೋಜನೆಯಿಂದ ನಿಮ್ಮ ದೈನಂದಿನ ಕೋಟಾವನ್ನು ಖಾಲಿ ಮಾಡಿದ ನಂತರ ಮಾತ್ರ ಬಳಸಿಕೊಳ್ಳಲಾಗುತ್ತದೆ. ಅಲ್ಲದೆ ನೀವು ಮುನ್ನಡೆಯಾಗಿ ಈ ಡೇಟಾ ಬೂಸ್ಟರ್ ಯೋಜನೆಗಳನ್ನು ರೀಚಾರ್ಜ್ ಮಾಡುವ ಆಯ್ಕೆಯನ್ನು ಹೊಂದಿರುತ್ತೀರಿ. ಇದರಿಂದ ಅವುಗಳನ್ನು ನಿಮ್ಮ ಖಾತೆಯಲ್ಲಿ ಸರತಿಯಲ್ಲಿ ಇರಿಸಲಾಗುತ್ತದೆ. ನೀವು ಬೂಸ್ಟರ್ ಪ್ಯಾಕ್‌ಗಳು ಅಥವಾ ನಿಮ್ಮ ಅಸ್ತಿತ್ವದಲ್ಲಿರುವ ಯೋಜನೆಯಿಂದ ಡೇಟಾವನ್ನು ಬಳಸಿದ ನಂತರ ನಿಮ್ಮ ಡೇಟಾ ಸ್ಪೀಡ್ 64kbps ಕಡಿಮೆಗೊಳಿಸಲಾಗುತ್ತದೆ.