ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗೆ 2 ಅತ್ಯುತ್ತಮ ಯೋಜನೆಗಳನ್ನು ಬಿಡುಗಡೆಗೊಳಿಸಿದೆ
Jio ಬಳಕೆದಾರರು OTT ಅಪ್ಲಿಕೇಶನ್ ಬಳಸುವಾಗ ಅಥವಾ ಬೇರೆ ಪ್ರಮುಖ ಕೆಲಸ ಮಾಡುವಾಗ ಡೇಟಾ ತಕ್ಷಣ ಖಾಲಿಯಾದರೆ ಕಿರಿಕಿರಿ ಉಂಟಾಗವುದು ಸಹಜ ಅಲ್ವೇ
ಇದೇ ಸಂಕಷ್ಟವನ್ನು ಬಳಕೆದಾರರಿಂದ ದೂರ ಮಾಡಲು ಜಿಯೋ ಈ 2 ಹೊಸ ಡೇಟಾ ಬೂಸ್ಟರ್ ಯೋಜನೆಗಳನ್ನು ಅತಿ ಕಡಿಮೆ ಬೆಲೆಯಲ್ಲಿ ಬಿಡುಗಡೆಗೊಳಿಸಿದೆ
ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗೆ ಎರಡು ಅತ್ಯುತ್ತಮ ಯೋಜನೆಗಳನ್ನು ಬಿಡುಗಡೆಗೊಳಿಸಿದೆ. ಈ ಯೋಜನೆಯನ್ನು ಬಂದಾಗಿನಿಂದ ಈವರೆಗೆ ಹೆಚ್ಚು ಬಳಕೆದಾರರು ಇಷ್ಟಪಟ್ಟಿದ್ದಾರೆ ಇದಕ್ಕೆ ಕಾರಣ ಬಳಕೆದಾರರು OTT ಅಪ್ಲಿಕೇಶನ್ ಬಳಸುವಾಗ ಅಥವಾ ಬೇರೆ ಪ್ರಮುಖ ಕೆಲಸ ಮಾಡುವಾಗ ಡೇಟಾ ತಕ್ಷಣ ಖಾಲಿಯಾದರೆ ಕಿರಿಕಿರಿ ಉಂಟಾಗವುದು ಸಹಜ ಅಲ್ವೇ. ಇದೇ ಸಂಕಷ್ಟವನ್ನು ಬಳಕೆದಾರರಿಂದ ದೂರ ಮಾಡಲು ಜಿಯೋ ಈ ಎರಡು ಹೊಸ ಡೇಟಾ ಬೂಸ್ಟರ್ ಯೋಜನೆಗಳನ್ನು ಅತಿ ಕಡಿಮೆ ಬೆಲೆಯಲ್ಲಿ ಬಿಡುಗಡೆಗೊಳಿಸಿದೆ.
ಜಿಯೋ ರೂ.19 ಮತ್ತು ರೂ.29 ಡೇಟಾ ಬೂಸ್ಟರ್ ಪ್ಯಾಕ್‌ಗಳು
ಕಂಪನಿ ಈ 2 ಹೊಸ ಬೂಸ್ಟರ್ ಪ್ಯಾಕ್‌ಗಳ ಪರಿಚಯದೊಂದಿಗೆ ರಿಲಯನ್ಸ್ ಜಿಯೋ ತನ್ನ ಡೇಟಾ ಆಡ್-ಆನ್‌ಗಳ ಶ್ರೇಣಿಯನ್ನು ವಿಸ್ತರಿಸಿದ್ದು ಈ ಯೋಜನೆಗಳ ಮಾಹಿತಿಯನ್ನು ನೋಡುವುದಾದರೆ ಮೊದಲ ಯೋಜನೆ ರೂ. 19 ರೂಗಳಾಗಿದ್ದು ಇದರಲ್ಲಿ 1.5GB ಡೇಟಾವನ್ನು ಒದಗಿಸುತ್ತದೆ. ಇದರ ಕ್ರಮವಾಗಿ ರೂ. 29 ಪ್ಯಾಕ್ ನಿಮಗೆ 2.5GB ಡೇಟಾವನ್ನು ನೀಡುತ್ತದೆ. ಈ ಪ್ಯಾಕ್‌ಗಳು ನಿರ್ದಿಷ್ಟ ಮಾನ್ಯತೆಯ ಅವಧಿಯೊಂದಿಗೆ ಬರುವುದಿಲ್ಲ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ. ಅಂದ್ರೆ ಇವುಗಳಿಗೆ ಯಾವುದೇ ನಿರ್ದಿಷ್ಟ ಕಾಲಾವಧಿ ಅನ್ವಯಿಸುವುದಿಲ್ಲ. ಏಕೆಂದರೆ ಪ್ರಸ್ತುತ ನಿಮ್ಮ ಮುಖ್ಯ ಯೋಜನೆಯ ವ್ಯಾಲಿಡಿಟಿಯನ್ನೇ ಈ ಯೋಜನೆಗಳು ಹೊಂದಿಕೊಳ್ಳುತ್ತವೆ.
ಎಲ್ಲ Jio ಡೇಟಾ ಬೂಸ್ಟರ್ ಪ್ಯಾಕ್‌ಗಳು
ನಿಮ್ಮ ಮುಖ್ಯ ಯೋಜನೆಯ ಡೇಟಾ ಖಾಲಿಯಾದ ನಂತರವಷ್ಟೇ ಈ ಯೋಜನೆಗಳನ್ನು ಬಳಸಲು ಅವಕಾಶವಿರುತ್ತದೆ. ರಿಲಯನ್ಸ್ ಜಿಯೋ ಈ ಹೊಸ ಡೇಟಾ ಬೂಸ್ಟರ್‌ಗಳು ಈಗಾಗಲೇ ಲಭ್ಯವಿರುವ ಜನಪ್ರಿಯವಾದವುಗಳಿಗೆ ಸೇರುತ್ತವೆ. ಏಕೆಂದರೆ ಈಗಾಗಲೇ ಕೆಲವು ಡೇಟಾ ಬೂಸ್ಟರ್ ಯೋಜನೆಗಳನ್ನು ಜಿಯೋ ಹೊಂದಿದೆ. ಇವುಗಳ ಪಟ್ಟಿಯನ್ನು ಒಮ್ಮೆ ನೀವು ಈ ಕೆಳಗೆ ನೋಡಬಹುದು.
ಈ ಡೇಟಾ ಬೂಸ್ಟರ್ ಪ್ಯಾಕ್ ರಿಚಾರ್ಜ್ ಮಾಡುವ ಮುಂಚೆ!
ಇಲ್ಲಿ ಬಳಕೆದಾರರು ಗಮನಿಸಬೇಕಿರುವ ಅಂಶವೆಂದರೆ ಈ ಆಡ್-ಆನ್ ಪ್ಯಾಕ್‌ಗಳಲ್ಲಿ ಸೇರಿಸಲಾದ ಡೇಟಾವನ್ನು ನಿಮ್ಮ ಅಸ್ತಿತ್ವದಲ್ಲಿರುವ ಯೋಜನೆಯಿಂದ ನಿಮ್ಮ ದೈನಂದಿನ ಕೋಟಾವನ್ನು ಖಾಲಿ ಮಾಡಿದ ನಂತರ ಮಾತ್ರ ಬಳಸಿಕೊಳ್ಳಲಾಗುತ್ತದೆ. ಅಲ್ಲದೆ ನೀವು ಮುನ್ನಡೆಯಾಗಿ ಈ ಡೇಟಾ ಬೂಸ್ಟರ್ ಯೋಜನೆಗಳನ್ನು ರೀಚಾರ್ಜ್ ಮಾಡುವ ಆಯ್ಕೆಯನ್ನು ಹೊಂದಿರುತ್ತೀರಿ. ಇದರಿಂದ ಅವುಗಳನ್ನು ನಿಮ್ಮ ಖಾತೆಯಲ್ಲಿ ಸರತಿಯಲ್ಲಿ ಇರಿಸಲಾಗುತ್ತದೆ. ನೀವು ಬೂಸ್ಟರ್ ಪ್ಯಾಕ್‌ಗಳು ಅಥವಾ ನಿಮ್ಮ ಅಸ್ತಿತ್ವದಲ್ಲಿರುವ ಯೋಜನೆಯಿಂದ ಡೇಟಾವನ್ನು ಬಳಸಿದ ನಂತರ ನಿಮ್ಮ ಡೇಟಾ ಸ್ಪೀಡ್ 64kbps ಕಡಿಮೆಗೊಳಿಸಲಾಗುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile