Jio Diwali Dhamaka: ದೀಪಾವಳಿ ಹಬ್ಬದ ಪ್ರಯುಕ್ತ 1 ವರ್ಷಕ್ಕೆ ಉಚಿತ 5G ಇಂಟರ್ನೆಟ್ ನೀಡುತ್ತಿರುವ ಜಿಯೋ

Jio Diwali Dhamaka: ದೀಪಾವಳಿ ಹಬ್ಬದ ಪ್ರಯುಕ್ತ 1 ವರ್ಷಕ್ಕೆ ಉಚಿತ 5G ಇಂಟರ್ನೆಟ್ ನೀಡುತ್ತಿರುವ ಜಿಯೋ
HIGHLIGHTS

ರಿಲಯನ್ಸ್ ಜಿಯೋ (Reliance Jio) ಈ ವರ್ಷದ ದೀಪಾವಳಿ (Diwali) ಹಬ್ಬದ ಪ್ರಯುಕ್ತ ತಮ್ಮ ಬಳಕೆದಾರರಿಗೆ ಭರ್ಜರಿಯ ಗಿಫ್ಟ್ ನೀಡಿದೆ.

ಜಿಯೋ ಫೈಬರ್ (Jio Fiber) ಗ್ರಾಹಕರಿಗಾಗಿದ್ದು ಶೀಘ್ರದಲ್ಲೇ ಪ್ರಿಪೇಯ್ಡ್ ಮತ್ತು ಪೋಸ್ಟ್ಪೇಯ್ಡ್ ಬಳಕೆದಾರರಿಗೂ ಉತ್ತಮ ಆಫರ್ ನಿರೀಕ್ಷಿಸಬಹುದು.

ಮುಖೇಶ್ ಅಂಬಾನಿ ಬಳಕೆದಾರರಿಗೆ ದೀಪಾವಳಿ ಉಡುಗೊರೆಯನ್ನು ನೀಡಿದರು 1 ವರ್ಷಕ್ಕೆ ಉಚಿತ 5G ಇಂಟರ್ನೆಟ್ ನೀಡಲಿದ್ದಾರೆ ಭೀತಿ ಸೃಷ್ಟಿಸಿದ್ದಾರೆ.

Jio Diwali Dhamaka: ಭಾರತದ ಜನಪ್ರಿಯ ಮತ್ತು ಅತಿದೊಡ್ಯಾ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋ (Reliance Jio Fiber) ಈ ವರ್ಷದ ದೀಪಾವಳಿ (Diwali) ಹಬ್ಬದ ಪ್ರಯುಕ್ತ ತಮ್ಮ ಬಳಕೆದಾರರಿಗೆ ಭರ್ಜರಿಯ ಗಿಫ್ಟ್ ನೀಡಿದೆ. ಪ್ರಸ್ತುತ ಇದು ಕೇವಲ ಜಿಯೋ ಫೈಬರ್ (Jio Fiber) ಗ್ರಾಹಕರಿಗಾಗಿದ್ದು ಶೀಘ್ರದಲ್ಲೇ ಪ್ರಿಪೇಯ್ಡ್ ಮತ್ತು ಪೋಸ್ಟ್ಪೇಯ್ಡ್ ಬಳಕೆದಾರರಿಗೂ ಉತ್ತಮ ಆಫರ್ ನಿರೀಕ್ಷಿಸಬಹುದು. ಮುಖೇಶ್ ಅಂಬಾನಿ ಬಳಕೆದಾರರಿಗೆ ದೀಪಾವಳಿ ಉಡುಗೊರೆಯನ್ನು ನೀಡಿದರು 1 ವರ್ಷಕ್ಕೆ ಉಚಿತ 5G ಇಂಟರ್ನೆಟ್ ನೀಡಲಿದ್ದಾರೆ ಭೀತಿ ಸೃಷ್ಟಿಸಿದ್ದಾರೆ. ಜಿಯೋ ದೀಪಾವಳಿ ಧಮಾಕಾ ಆಫರ್ (Jio Diwali Dhamaka) ಅಡಿಯಲ್ಲಿ ರಿಲಯನ್ಸ್ ಜಿಯೋ ದೀಪಾವಳಿಗೆ ಆಕರ್ಷಕ ಕೊಡುಗೆಯನ್ನು ಪರಿಚಯಿಸಿದೆ. ಇದು ಗ್ರಾಹಕರಿಗೆ 1 ವರ್ಷ ಉಚಿತ ಜಿಯೋ ಏರ್‌ಫೈಬರ್ ಸಂಪರ್ಕವನ್ನು ಪಡೆಯುವ ಅವಕಾಶವನ್ನು ನೀಡುತ್ತದೆ.

Also Read: OTP Scam ವಂಚನೆಗಳ ಬಗ್ಗೆ ಸರ್ಕಾರದ ಖಡಕ್ ಎಚ್ಚರಿಕೆ! ಸುರಕ್ಷತಾ ಸಲಹೆ ಹಂಚಿಕೊಂಡ CERT-In

ಹೊಸ ಗ್ರಾಹಕರಿಗೆ Jio Diwali Dhamaka ಪಡೆಯಲು ಷರತ್ತುಗಳೇನು?

ಯಾವುದೇ ರಿಲಯನ್ಸ್ ಡಿಜಿಟಲ್ ಅಥವಾ MyJio ಸ್ಟೋರ್‌ನಿಂದ 20,000 ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಸರಕುಗಳನ್ನು ಖರೀದಿಸಿ. ಈ ಮಿತಿಯು ಸ್ವಲ್ಪ ಹೆಚ್ಚು ಎಂದು ತೋರುತ್ತದೆ. ಆದರೆ ನೀವು ಈಗಾಗಲೇ ದೊಡ್ಡ ಎಲೆಕ್ಟ್ರಾನಿಕ್ಸ್ ಖರೀದಿಸಲು ಯೋಜಿಸುತ್ತಿದ್ದರೆ ಅದು ಪ್ರಯೋಜನಕಾರಿಯಾಗಿದೆ. ಹಳೆಯ ಗ್ರಾಹಕರಿಗೆ 2,222 ಮೌಲ್ಯದ ವಿಶೇಷ ದೀಪಾವಳಿ ಯೋಜನೆಯನ್ನು ರೀಚಾರ್ಜ್ ಮಾಡಿ. ಈ ಯೋಜನೆಯೊಂದಿಗೆ ನೀವು 1 ವರ್ಷ ಉಚಿತ Jio AirFiber ಸೇವೆಯನ್ನು ಪಡೆಯುತ್ತೀರಿ.

Jio Diwali Dhamaka offers 1 year free 5G Internet and much more
Jio Diwali Dhamaka offers 1 year free 5G Internet and much more

ಅರ್ಹ ಗ್ರಾಹಕರು 12 ಕೂಪನ್‌ಗಳನ್ನು ಸ್ವೀಕರಿಸುತ್ತಾರೆ ಪ್ರತಿಯೊಂದೂ ಅವರ ಸಕ್ರಿಯ Jio AirFiber ಯೋಜನೆಯ ಮೌಲ್ಯಕ್ಕೆ ಸಮನಾಗಿರುತ್ತದೆ. ಈ ಕೂಪನ್‌ಗಳನ್ನು ರಿಲಯನ್ಸ್ ಡಿಜಿಟಲ್, ಮೈಜಿಯೋ, ಜಿಯೋಪಾಯಿಂಟ್ ಅಥವಾ ಜಿಯೋಮಾರ್ಟ್ ಡಿಜಿಟಲ್ ಎಕ್ಸ್‌ಕ್ಲೂಸಿವ್ ಸ್ಟೋರ್‌ಗಳಲ್ಲಿ ರಿಡೀಮ್ ಮಾಡಿಕೊಳ್ಳಬಹುದು. ಪ್ರತಿ ಕೂಪನ್ ಅನ್ನು ಬಳಸಲು ನೀವು ಅದನ್ನು ಸ್ವೀಕರಿಸಿದ 30 ದಿನಗಳಲ್ಲಿ ರೂ 15,000 ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಎಲೆಕ್ಟ್ರಾನಿಕ್ ಖರೀದಿಗಳನ್ನು ಮಾಡಬೇಕು.

Jio Diwali Dhamaka ಆಫರ್ ಮಾನ್ಯತೆ:

ಈಗಾಗಲೇ ಮೇಲೆ ತಿಳಿಸಿರುವಂತೆ ರಿಲಯನ್ಸ್ ಜಿಯೋ (Reliance Jio) ಈ ವರ್ಷದ ದೀಪಾವಳಿ (Diwali) ಹಬ್ಬದ ಪ್ರಯುಕ್ತ ತಮ್ಮ ಬಳಕೆದಾರರಿಗೆ ಭರ್ಜರಿಯ ಗಿಫ್ಟ್ ನೀಡಿದೆ. ಜಿಯೋ ಪ್ರಚಾರದ ಆಫರ್ ಇಂದಿನಿಂದ ಅಂದ್ರೆ 18ನೇ ಸೆಪ್ಟೆಂಬರ್ 2024 ರಿಂದ ಮುಂದಿನ ತಿಂಗಳು 3ನೇ ನವೆಂಬರ್ 2024 ರವರೆಗೆ ಲಭ್ಯವಿರುತ್ತದೆ. ಅಲ್ಲದೆ ನೀವು ಪಡೆಯುವ ಕೂಪನ್‌ಗಳು ನವೆಂಬರ್‌ನಿಂದ ಅಕ್ಟೋಬರ್ 2025 ರವರೆಗೆ ಮಾನ್ಯವಾಗಿರುತ್ತವೆ. ಅಲ್ಲದೆ ಈ ವರ್ಷದ ಈ ಅದ್ದೂರಿಯ ಆಫರ್ ಗಿಫ್ಟ್ ಅನ್ನು ಹೊಸ ಮತ್ತು ಈಗಾಗಲೇ ಅಸ್ತಿತ್ವದಲ್ಲಿರುವ JioFiber ಮತ್ತು Jio AirFiber ಬಳಕೆದಾರರಿಗೆ ಪಡೆಯಲು ಅವಕಾಶವಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo