ರಿಲಯನ್ಸ್ ಜಿಯೋ (Reliance Jio) ಬಳಕೆದಾರರ ಹಣ ಉಳಿಸಲು ಕಡಿಮೆ ಬೆಲೆಯ ರಿಚಾರ್ಜ್ ಯೋಜನೆಗಳನ್ನು ಹೊಂದಿದೆ.
ರಿಲಯನ್ಸ್ ಜಿಯೋ (Reliance Jio) ನೀಡುತ್ತಿರುವ ರೂ. 895 ಯೋಜನೆಯ ಪ್ರಯೋಜನ ಮತ್ತು ಅನುಕೂಲಗಳನ್ನು ಪರಿಶೀಲಿಸಬಹುದು.
ಒಮ್ಮೆ ಈ ರಿಲಯನ್ಸ್ ಜಿಯೋ (Reliance Jio) ರಿಚಾರ್ಜ್ ಮಾಡಿಕೊಂಡರೆ 1 ವರ್ಷಕ್ಕೆ ಪದೇ ಪದೇ ರಿಚಾರ್ಜ್ ಮಾಡುವ ತಲೆನೋವೆ ಇರೋಲ್ಲ.
ಭಾರತದ ಪ್ರಮುಖ ಮತ್ತು ಅತಿದೊಡ್ಡ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋ (Reliance Jio) ವಿವಿಧ ಬಳಕೆದಾರರ ಅಗತ್ಯಗಳನ್ನು ಪೂರೈಸುವ ವೈವಿಧ್ಯಮಯ ಶ್ರೇಣಿಯ ಪ್ರಿಪೇಯ್ಡ್ ಯೋಜನೆಗಳನ್ನು ನೀಡುತ್ತದೆ. ತಮ್ಮ ಬಳಕೆದಾರರ ಹಣ ಉಳಿಸಲು ಕೆಲವೊಂದು ಉತ್ತಮ ಮತ್ತು ಕಡಿಮೆ ಬೆಲೆಯ ರಿಚಾರ್ಜ್ ಯೋಜನೆಗಳನ್ನು ಹೊಂದಿದೆ. ಅದರಲ್ಲಿ ಪ್ರಸ್ತುತ 895 ರೂಗಳ ಈ ವಾರ್ಷಿಕ ಯೋಜನೆಯು ಬಳಕೆದಾರರ ಗಮನವನ್ನು ಸೆಳೆದಿರುವ ಸಿಹಿಸುದ್ದಿಯಾಗಿದೆ. ಈ ಕೆಳಗೆ ರಿಲಯನ್ಸ್ ಜಿಯೋ (Reliance Jio) ನೀಡುತ್ತಿರುವ ರೂ. 895 ಯೋಜನೆಯ ಪ್ರಯೋಜನ ಮತ್ತು ಅನುಕೂಲಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಪರಿಶೀಲಿಸಬಹುದು.
ಪದೇ ಪದೇ ರೀಚಾರ್ಜ್ ಮಾಡುವ ಅಗತ್ಯವಿಲ್ಲ!
ನಿಮ್ಮ ಬಜೆಟ್ ಒಳಗೆ ಪೂರ್ತಿ ಒಂದು ವರ್ಷದ ವ್ಯಾಲಿಡಿಟಿ ನೀಡುವ ಅತಿ ಕಡಿಮೆ ಬೆಲೆಯ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಅಂದ್ರೆ ತಪ್ಪಿಲ್ಲ. ರಿಲಯನ್ಸ್ ಜಿಯೋ (Reliance Jio) ಪಟ್ಟಿಯು ಕಡಿಮೆ ಬೆಲೆಯಲ್ಲಿ ಬಳಕೆದಾರರು ಸುಮಾರು ಒಂದು ವರ್ಷದ ಮಾನ್ಯತೆಯನ್ನು ಪಡೆಯುವ ಯೋಜನೆಯನ್ನು ಸಹ ಒಳಗೊಂಡಿದೆ.
ಈ ಯೋಜನೆಯನ್ನು ಪ್ರಮುಖವಾಗಿ ಕೆಲವ ಜಿಯೋಫೋನ್ (JioPhone) ಬಳಕೆದಾರರಿಗೆ ಮಾತ್ರ ಲಭ್ಯವಿದ್ದು ಅತ್ಯಂತ ಕಡಿಮೆ ಬೆಲೆಯಲ್ಲಿ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಒಮ್ಮೆ ಈ ರಿಲಯನ್ಸ್ ಜಿಯೋ (Reliance Jio) ರಿಚಾರ್ಜ್ ಮಾಡಿಕೊಂಡರೆ ಒಂದು ವರ್ಷಕ್ಕೆ ರಿಚಾರ್ಜ್ ಮಾಡುವ ತಲೆನೋವೆ ಇರೋಲ್ಲ ಇದರೊಂದಿಗೆ ಪದೇ ಪದೇ ರೀಚಾರ್ಜ್ ಮಾಡುವ ತೊಂದರೆಯಿಂದ ಮುಕ್ತಿ ಪಡೆಯಬಹುದು.
Also Read: WhatsApp Green: ಭಾರತದಲ್ಲಿ ಒಂದಿಷ್ಟು ಬಳಕೆದಾರರ ವಾಟ್ಸಾಪ್ ಹಸಿರಾಗಿದೆ, ಇದಕ್ಕೆ ಕಾರಣವೇನು!
ಉಚಿತ ಕರೆಯೊಂದಿಗೆ ಡೇಟಾ ಆಫರ್ ಲಭ್ಯವಿದೆ!
ನಾವು ಈ ಯೋಜನೆಯ ಡೇಟಾ ಆಫರ್ ಕುರಿತು ಮಾತನಾಡಿದರೆ ಬಳಕೆದಾರರು ಒಟ್ಟು 24GB ಡೇಟಾವನ್ನು ಪಡೆಯುತ್ತಾರೆ. ಈ ಡೇಟಾವನ್ನು ನೀವು ಒಂದೇ ಬಾರಿಗೆ ಪಡೆಯುವುದಿಲ್ಲ ಎಂಬುದನ್ನು ನೆನಪಿನಲ್ಲಿಡುವುದು ಮುಖ್ಯವಾಗಿದೆ. ಒಂದು ತಿಂಗಳಲ್ಲಿ ನೀವು ಕೇವಲ 2GB ಡೇಟಾವನ್ನು ಮಾತ್ರ ಬಳಸಬಹುದು. ಈ ಯೋಜನೆಯಲ್ಲಿ ನೀವು ಯಾವುದೇ ನೆಟ್‌ವರ್ಕ್‌ನಲ್ಲಿ ಉಚಿತ ಕರೆ ಮಾಡುವ ಪ್ರಯೋಜನವನ್ನು ಪಡೆಯಬಹುದು. ಇದರೊಂದಿಗೆ ಕಂಪನಿಯು ಗ್ರಾಹಕರಿಗೆ 28 ದಿನಗಳವರೆಗೆ 50 SMS ನೀಡುತ್ತದೆ.
ರಿಲಯನ್ಸ್ ಜಿಯೋ (Reliance Jio) ಫೋನ್ ಬಳಕೆದಾರರಿಗೆ ಮಾತ್ರ ಲಭ್ಯ!
ಜಿಯೋದ ರೂ 895 ಪ್ಲಾನ್‌ನ ಹೆಚ್ಚುವರಿ ಪ್ರಯೋಜನಗಳ ಕುರಿತು ಮಾತನಾಡುವುದಾದರೆ ಬಳಕೆದಾರರು ಎಲ್ಲಾ ಸಾಮಾನ್ಯ ಯೋಜನೆಗಳಂತೆ ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್‌ಗೆ ಪ್ರವೇಶವನ್ನು ಪಡೆಯುತ್ತಾರೆ. ನೀವು ಈ ಯೋಜನೆಯನ್ನು ತೆಗೆದುಕೊಳ್ಳಲು ಯೋಜಿಸುತ್ತಿದ್ದರೆ ಅದು ಎಲ್ಲಾ ಬಳಕೆದಾರರಿಗೆ ಅಲ್ಲ ಎಂಬುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು. ಜಿಯೋ ಫೋನ್ ಮತ್ತು ಜಿಯೋ ಫೋನ್ ಪ್ರೈಮಾ ಬಳಕೆದಾರರು ಮಾತ್ರ ಇದರ ಲಾಭವನ್ನು ಪಡೆಯಬಹುದು.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile