84 ದಿನಗಳಿಗೆ ಅನ್ಲಿಮಿಟೆಡ್ ಕರೆಗಳು ಮತ್ತು 6GB ಡೇಟಾ ನೀಡುವ ಈ Reliance Jio ಪ್ಲಾನ್ ಯಾರ್ಯಾರಿಗೆ ಬೆಸ್ಟ್?

84 ದಿನಗಳಿಗೆ ಅನ್ಲಿಮಿಟೆಡ್ ಕರೆಗಳು ಮತ್ತು 6GB ಡೇಟಾ ನೀಡುವ ಈ Reliance Jio ಪ್ಲಾನ್ ಯಾರ್ಯಾರಿಗೆ ಬೆಸ್ಟ್?
HIGHLIGHTS

ರಿಲಯನ್ಸ್ ಜಿಯೋ (Reliance Jio) ತಮ್ಮ ಬಳಕೆದಾರರಿಗೆ ವಿವಿಧ ಬಜೆಟ್‌ಗಳನ್ನು ಪೂರೈಸಲು ವಿವಿಧ ಪ್ರಿಪೇಯ್ಡ್ ಯೋಜನೆಗಳನ್ನು ನೀಡುತ್ತದೆ.

ರಿಲಯನ್ಸ್ ಜಿಯೋ (Reliance Jio) 395 ರೂಗಳ ಬೆಸ್ಟ್ ಬಜೆಟ್ ಯೋಜನೆಯ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನೀಡಲಿದ್ದೇನೆ.

ರಿಲಯನ್ಸ್ ಜಿಯೋ (Reliance Jio) ಈ ಯೋಜನೆಯಲ್ಲಿ ಪ್ರತಿ ದಿನದ ಬೆಲೆಯನ್ನು ನೋಡುವುದಾದರೆ ದಿನಕ್ಕೆ ಕೇವಲ ₹4.7 ಪೈಸೆ ಮಾತ್ರ ಖರ್ಚು ಆಗುತ್ತದೆ.

ಭಾರತದ ಅತಿದೊಡ್ಡ ಮತ್ತು ನಂಬರ್ ಒನ್ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋ (Reliance Jio) ತಮ್ಮ ಬಳಕೆದಾರರಿಗೆ ವಿವಿಧ ಅಗತ್ಯತೆಗಳು ಮತ್ತು ಬಜೆಟ್‌ಗಳನ್ನು ಪೂರೈಸಲು ವಿವಿಧ ಪ್ರಿಪೇಯ್ಡ್ ಯೋಜನೆಗಳನ್ನು ಕೈಗೆಟಕುವ ಬೆಲೆಗೆ ನೀಡುತ್ತದೆ. ಈ ಲೇಖನದಲ್ಲಿ ನಾನು ನಿಮಗೆ 395 ರೂಗಳ ಬೆಸ್ಟ್ ಬಜೆಟ್ ಯೋಜನೆಯ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನೀಡಲಿದ್ದೇನೆ. ರಿಲಯನ್ಸ್ ಜಿಯೋ (Reliance Jio) ನೀಡುತ್ತಿರುವ ಈ ಪ್ಲಾನ್ ನಿಮ್ಮ ಬಜೆಟ್ ಸ್ನೇಹಿ ಯೋಜನಗಳ ಪಟ್ಟಿಯಲ್ಲಿ ಬರುವುದರೊಂದಿಗೆ ಮಿಡ್ ರೇಜ್ ಮಾನ್ಯತೆಯ ಅವಧಿ ಮತ್ತು ಉತ್ತಮ ಪ್ರಯೋಜನಗಳೊಂದಿಗೆ ಬಳಕೆದಾರರಿಗೆ ವಿಶೇಷ ಅನುಕೂಲಗಳನ್ನು ಹೊಂದಿದೆ.

ರಿಲಯನ್ಸ್ ಜಿಯೋ ರೂ. 395 ಪ್ರಿಪೇಯ್ಡ್ ಪ್ಲಾನ್ ಡೀಟೇಲ್ಸ್!

ಈ ರಿಲಯನ್ಸ್ ಜಿಯೋ (Reliance Jio) ಯೋಜನೆ ನಿಮಗೆ ಉತ್ತಮ ಡೇಟಾ, ವಾಯ್ಸ್ ಕರೆಗಳು ಮತ್ತು SMS ಅನ್ನು ಒದಗಿಸುತ್ತದೆ. ಇದು ನಿಮಗೆ ಸೂಕ್ತವಾದುದಾಗಿದೆ ಎಂದು ನೋಡಲು ಈ ಯೋಜನೆಯ ವಿವರಗಳನ್ನು ನೋಡುವುದಾದರೆ ಈ ರಿಚಾರ್ಜ್ ಪ್ಲಾನ್ ನಿಮಗೆ ಒಟ್ಟಾರೆಯಾಗಿ ಬರೋಬ್ಬರಿ 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಇದರೊಂದಿಗೆ ಆಗಾಗ್ಗೆ ರೀಚಾರ್ಜ್‌ಗಳ ಬಗ್ಗೆ ಚಿಂತಿಸುವ ಅಗತ್ಯವಿಲ್ಲದೆ. ಯಾಕೆಂದರೆ 2.5 ತಿಂಗಳವರೆಗೆ ಯಾವುದೇ ರಿಚಾರ್ಜ್ ಮಾಡುವ ತಲೆನೋವೇ ಇರೋಲ್ಲ.

Reliance Jio 395 best recharge plan 2024
Reliance Jio 395 best recharge plan 2024

ಇದನ್ನು ಮತ್ತಷ್ಟು ವಿಸ್ತರಿಸುವುದಾದರೆ ಈ 395 ರೂಗಳ ಪ್ಲಾನ್ ಒಟ್ಟು 84 ದಿನಗಳ ವ್ಯಾಲಿಡಿಟಿಯೊಂದಿಗೆ ಬರುವುದರಿಂದ ಪ್ರತಿ ದಿನದ ಬೆಲೆಯನ್ನು ನೋಡುವುದಾದರೆ ದಿನಕ್ಕೆ ಕೇವಲ ₹4.7 ಪೈಸೆ ಮಾತ್ರ ಖರ್ಚು ಆಗುತ್ತದೆ. ಇದರಲ್ಲಿ ನಿಮಗೆ ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಪೂರ್ತಿ ಪ್ಲಾನ್ ಮಾನ್ಯತೆಗಾಗಿ 6GB 5G Unlimited ಡೇಟಾವನ್ನು ಜಿಯೋ ಇದರಲ್ಲಿ ನೀಡುತ್ತಿದೆ. ಅಂದ್ರೆ ನೀವು ಇದರಲ್ಲಿ ದಿನಕ್ಕೊಮ್ಮೆ ಡೇಟಾ ಇಂಟರ್ನೆಟ್ ಬ್ರೌಸ್ ಮಾಡುವುದು, ಇಮೇಲ್‌ಗಳನ್ನು ಪರಿಶೀಲಿಸುವುದು ಮತ್ತು ಅಲ್ಲಲ್ಲಿ ಒಂದೆರಡು ನಿಮಿಷ ಮಾತ್ರ ಸಾಂದರ್ಭಿಕವಾಗಿ ಸಾಮಾಜಿಕ ಮಾಧ್ಯಮವನ್ನು ಬಳಸುವ ಬಳಕೆದಾರರಿಗೆ ಮತ್ತು ಇಂಟರ್ನೆಟ್ ಬೇಡ ಫೀಚರ್ ಫೋನ್ ಬಳಸುವ ಬಳಕೆದಾರರಿಗೆ ಇದೊಂದು ಬೆಸ್ಟ್ ಆಯ್ಕೆಯಾಗಲಿದೆ.

Also Read: 8GB RAM ಮತ್ತು 50MP ಕ್ಯಾಮೆರಾದ OnePlus Nord 3 5G ಅಮೆಜಾನ್‌ನಲ್ಲಿ ಭಾರಿ ಬೆಲೆ ಇಳಿಕೆ!

ಈ ಪ್ಲಾನ್ ನಿಮಗೆ ಧೀರ್ಘಾವಧಿಯ ರೀಚಾರ್ಜ್ ವ್ಯಾಲಿಡಿಟಿಯ ಆದ್ಯತೆ ನೀಡುವ ಬಳಕೆದಾರರಿಗೆ ಈ ವಿಸ್ತೃತ ಮಾನ್ಯತೆಯ ಪ್ರಮುಖ ಪ್ರಯೋಜನವಾಗಿದೆ. ಹೆಚ್ಚುವರಿಯಾಗಿ ಈ ಯೋಜನೆಯ ಅತ್ಯಂತ ಆಕರ್ಷಕ ಫೀಚರ್ಗಳೆಂದರೆ ಅನಿಯಮಿತ ವಾಯ್ಸ್ ಕರೆಗಳೊಂದಿಗೆ ಇದರ ಮಾನ್ಯತೆಯ ಅವಧಿಯುದ್ದಕ್ಕೂ ಯಾವುದೇ ನಿರ್ಬಂಧಗಳಿಲ್ಲದೆ ನೀವು ಭಾರತದ ಯಾವುದೇ ನೆಟ್‌ವರ್ಕ್‌ಗೆ ಸ್ಥಳೀಯ ಮತ್ತು STD ಕರೆಗಳನ್ನು ಮಾಡಬಹುದು. ಕೆಲಸ ಅಥವಾ ವೈಯಕ್ತಿಕ ಕಾರಣಗಳಿಗಾಗಿ ಆಗಾಗ್ಗೆ ಕರೆಗಳನ್ನು ಮಾಡುವ ಬಳಕೆದಾರರಿಗೆ ಇದು ಗಮನಾರ್ಹ ಪ್ರಯೋಜನವಾಗಿದೆ.

Reliance Jio ನೀಡುವ 395 ರೂಗಳ ಪ್ಲಾನ್ ಯಾರ್ಯಾರಿಗೆ ಉತ್ತಮ ಆಯ್ಕೆ?

ಒಂದು ವೇಳೆ ನೀವು ಹೆಚ್ಚಾಗಿ ವೀಡಿಯೊಗಳನ್ನು ಸ್ಟ್ರೀಮ್ ಮಾಡುವ ಆನ್‌ಲೈನ್ ಆಟಗಳನ್ನು ಆಡುವ ಅಥವಾ ದೊಡ್ಡ ಫೈಲ್‌ಗಳನ್ನು ನಿಯಮಿತವಾಗಿ ಡೌನ್‌ಲೋಡ್ ಮಾಡುವ ಭಾರೀ ಡೇಟಾ ಬಳಕೆದಾರರಾಗಿದ್ದರೆ ಇದರಲ್ಲಿನ 6GB ನಿಮಗೆ ಸಾಕಾಗುವುದಿಲ್ಲ. ನೀವು ಹೆಚ್ಚುವರಿಯಾಗಿ ಯೋಜನೆಯು ಸ್ಟ್ರೀಮಿಂಗ್ ಸೇವೆಗಳು ಅಥವಾ ಮನರಂಜನಾ ವೇದಿಕೆಗಳಿಗೆ ಯಾವುದೇ ಪೂರಕ ಚಂದಾದಾರಿಕೆಗಳನ್ನು ಸಹ ಈ ಪ್ಲಾನ್ ಒಳಗೊಂಡಿಲ್ಲ. ಆದ್ದರಿಂದ ಕೇವಲ ಸುಮಾರು 3 ತಿಂಗಳಿಗೆ ಕೇವಲ ವಾಯ್ಸ್ ಕರೆಗಳು ಬೇಕು ಮತ್ತು ಡೇಟಾ ಕೊಂಚ ಸಿಕ್ಕರೆ ಸಾಕು ಎನ್ನುವಂತಹ ಬಳಕೆದಾರರಿಗೆ ಮಾತ್ರ ಈ ರಿಚಾರ್ಜ್ ಪ್ಲಾನ್ ಉತ್ತಮವಾಗಿದೆ.

Reliance Jio 395 best recharge plan 2024
Reliance Jio 395 best recharge plan 2024

ಒಟ್ಟಾರೆಯಾಗಿ ಈ ರಿಲಯನ್ಸ್ ಜಿಯೋ (Reliance Jio) 395 ರೂಗಳ ಯೋಜನೆಯು ವಾಯ್ಸ್ ಕರೆಗಳಿಗೆ ಆದ್ಯತೆ ನೀಡುವ ವಿಸ್ತೃತ ವ್ಯಾಲಿಡಿಟಿಯ ಮೌಲ್ಯ ಮತ್ತು ತಮ್ಮ ಡೇಟಾ ಬಳಕೆಯನ್ನು ಸಮರ್ಥವಾಗಿ ನಿರ್ವಹಿಸುವ ಬಳಕೆದಾರರಿಗೆ ಉತ್ತಮವಾದ ಆಯ್ಕೆಯಾಗಿದೆ. ನೀವು ಈ ವರ್ಗಕ್ಕೆ ಸೇರಿದ್ದರೆ ಮತ್ತು ಸಂಪರ್ಕದಲ್ಲಿರಲು ಬಜೆಟ್ ಸ್ನೇಹಿ ಮಾರ್ಗವನ್ನು ಹುಡುಕುತ್ತಿದ್ದರೆ ಈ ರೀಚಾರ್ಜ್ ಯೋಜನೆಯು ಖಂಡಿತವಾಗಿಯೂ ಪರಿಗಣಿಸಲು ಯೋಗ್ಯವಾಗಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo