ಭಾರತದ ಜನಪ್ರಿಯ ಮತ್ತು ಅತಿದೊಡ್ಡ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ (Reliance Jio) ಗ್ರಾಹಕರಿಗೆ ಬೆಲೆ ಏರಿಕೆಯಾದ ನಂತರ ಮಾಸಿಕ ರಿಚಾರ್ಜ್ ಬದಲಿಗೆ ತ್ರೈಮಾಸಿಕ, ಅರ್ಧ ವಾರ್ಷಿಕ ಮತ್ತು ವಾರ್ಷಿಕ ಯೋಜನೆಗಳನ್ನು ಬಳಸಿಕೊಳ್ಳಲು ಸಲಹೆ ನೀಡುತ್ತಿದೆ. ಇದಕ್ಕೆ ಉತ್ತಮ ಉದಾಹರಣೆಗಾಗಿ ಈ ಕೆಳಗೆ ಸಂಕ್ಷಿಪ್ತವಾಗಿ ನಿಮಗೆ ವಿವರಿಸಲಾಗಿದೆ. ರಿಲಯನ್ಸ್ ಜಿಯೋ (Reliance Jio) ಬೆಲೆ ಏರಿಕೆಯ ಮೊದಲು 28 ದಿನಗಳ ಮಾನ್ಯತೆಯಲ್ಲಿ 1.5GB ಡೇಟಾ ನೀಡುತ್ತಿದ್ದ ಪ್ರಿಪೇಯ್ಡ್ ಯೋಜನೆ 249 ರೂಗಳಿಗೆ ಲಭ್ಯವಿತ್ತು.
ಆದರೆ ಈಗ ಇದರ ಮೇಲೆ ಸುಮಾರು 20% ವರೆಗೆ ಹೆಚ್ಚುವರಿಸಿದ್ದು ಪ್ರಸ್ತುತ 299 ರೂಗಳಿಗೆ ನೀಡುತ್ತಿದೆ. ಇದರಿಂದ ಸಾಮಾನ್ಯ ಜನರ ತಲೆನೋವು ಹೆಚ್ಚಾಗಿದ್ದು ಸಿಮ್ ಕಾರ್ಡ್ ಬಳಸಲೇಬೇಕಾದ ಅನಿವಾರ್ಯದಲ್ಲಿ ಕೆಲ ರಿಲಯನ್ಸ್ ಜಿಯೋ (Reliance Jio) ಗ್ರಾಹಕರು ಮುಂದುವರೆಸುತ್ತಿದ್ದಾರೆ.
Also Read: Vivo V40 Series ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ 7ನೇ ಆಗಸ್ಟ್ 2024 ರಂದು ಬಿಡುಗಡೆ ಕಂಫಾರ್ಮ್!
ಭಾರತದಲ್ಲಿ ರಿಲಯನ್ಸ್ ಜಿಯೋ ತಮ್ಮ ರಿಚಾರ್ಜ್ ಯೋಜನೆಗಳ ಬೆಲೆ ಏರಿಕೆಯ ನಂತರ ತಮ್ಮ ಹಳೆಯ 999 ರೂಗಳ ಯೋಜನೆಯನ್ನು ಮತ್ತೆ ಭಾರಿ ಬದಲಾವಣೆಗಳನ್ನು ಮಾಡಿ ಬಿಡುಗಡೆಗೊಳಿಸಿದೆ. ಇದರಿಂದಾಗಿ Reliance Jio ಗ್ರಾಹಕರಿಗೆ ಸದ್ಯಕ್ಕೆ ಇದೊಂದೆ ಸೂಪರ್ ಪ್ಲಾನ್ ಅಂದ್ರೆ ತಪ್ಪಿಲ್ಲ. ಯಾಕೆಂದರೆ ಬೆಲೆ ಏರಿಕೆಯ ಮೊದಲು ಈ ಯೋಜನೆ 84 ದಿನದ ವ್ಯಾಲಿಡಿಟಿಯೊಂದಿಗೆ ಪ್ರತಿದಿನ 3GB ಡೇಟಾದೊಂದಿಗೆ ಒಟ್ಟಾರೆಯಾಗಿ 252GB ಡೇಟಾವನ್ನು ನೀಡುತ್ತಿತ್ತು ಆದರೆ ಈಗ ಕಂಪನಿ ಇದರಲ್ಲಿ 14 ದಿನಗಳ ವ್ಯಾಲಿಡಿಟಿ ಹೆಚ್ಚಿಸಿ 1GB ಡೇಟಾವನ್ನು ಕಡಿಮೆಗೊಳಿಸಿ ಬಳಕೆದಾರರಿಗೆ ನೀಡುತ್ತಿದೆ.
Reliance Jio ರೂ 999 ಪ್ರಿಪೇಯ್ಡ್ ಯೋಜನೆಯ ವಿವರಗಳನ್ನು ನೋಡುವುದಾದರೆ ಇದರಲ್ಲಿ ಪ್ರತಿದಿನ 2GB ಡೇಟಾವನ್ನು ನೀಡುತ್ತಿದ್ದು ಪೂರ್ತಿ ವ್ಯಾಲಿಡಿಟಿಗೆ ಒಟ್ಟು 196GB ಡೇಟಾವನ್ನು ನೀಡುತ್ತಿದೆ. ಅಲ್ಲದೆ ಪ್ಲಾನ್ ಬರೋಬ್ಬರಿ 98 ದಿನಗಳ ವ್ಯಾಲಿಡಿಟಿಯೊಂದಿಗೆ Unlimited 5G ಡೇಟಾವನ್ನು ಸಹ ನೀಡುತ್ತಿದ್ದು ಪ್ರಸ್ತುತ ಜಿಯೋ ಪ್ರಿಪೇಯ್ಡ್ ಗ್ರಾಹಕರ ಪಾಲಿಗೆ ಸೂಕ್ತ ಆಯ್ಕೆಯಾಗಿದೆ. ಅಲ್ಲದೆ ಪ್ರತಿದಿನ ನಿಮಗೆ 100 ಉಚಿತ SMS ಸಹ ಇದರಲ್ಲಿದೆ. ಅಲ್ಲದೆ ಹೆಚ್ಚುವರಿಯಾಗಿ Reliance Jio ಗ್ರಾಹಕರು ಈ ಯೋಜನೆಯಲ್ಲಿ JioTV, JioCinema ಮತ್ತು JioCloud ಉಚಿತವಾಗಿ ಬಳಸಲು ಅವಕಾಶವನ್ನು ನೀಡುತ್ತಿದೆ.
ಕೊನೆಯದಾಗಿ ಈಗ ಈ ಯೋಜನೆಯನ್ನು ಪ್ರಸ್ತುತ ಲಭ್ಯವಿರುವ ಯೋಜನೆಯೊಂದಿಗೆ ಹೋಲಿಸಿ ನೋಡಿದರೆ ನಿಮಗೆ ಮತ್ತಷ್ಟು ಸರಳ ಮತ್ತು ಉತ್ತಮವಾಗಿ ಇದರ ಅಂಶ ಅರಿವಾಗಬಹುದು. ಈಗ ನೀವು ದಿನಕ್ಕೆ 2GB ಡೇಟಾ ಮತ್ತು ವಾಯ್ಸ್ ಕರೆಗಳನ್ನು 28 ದಿನಗಳಿಗೆ ನೀಡುವ ಯೋಜನೆ ಬೇಕಿದ್ದರೆ 349 ರೂಗಳನ್ನು ನೀಡಬೇಕಿದೆ.
ಇದನ್ನು 28 ದಿನಗಳಂತೆ ಮೂರು ತಿಂಗಳಿಗೆ ಹೋಲಿಸಿದರೆ ರೂ. 349 x 3 ಸುಮಾರು 1047 ರೂಗಳನ್ನು ಕೇವಲ 84 ದಿನಗಳ ನೀಡಬೇಕುತ್ತದೆ. ಆದರೆ ನೀವು ಒಮ್ಮೆಗೆ 999 ರೂಗಳ ರಿಚಾರ್ಜ್ ಮಾಡಿಸುವುದರಿಂದ ರೂ. 333 x 3 ಅದು 28 ದಿನಗಳಂತೆ ಮೂರು ತಿಂಗಳಿಗೂ ಅಧಿಕವಾಗಿ 14 ದಿನಗಳ ಹೆಚ್ಚುವರಿಯಾಗಿ ಒಟ್ಟು 98 ದಿನಗಳನ್ನು ಪಡೆಯಬಹುದು. ಈ ಮೂಲಕ ನೀವೇ ಹೇಳಿ ಪ್ರಸ್ತುತ Reliance Jio ಗ್ರಾಹಕರಿಗೆ ಸದ್ಯಕ್ಕೆ ನೀಡುತ್ತಿರುವ ಸೂಪರ್ ಪ್ಲಾನ್ ಅಂದ್ರೆ ತಪ್ಪಿಲ್ಲ ತಾನೆ.
ನಿಮ್ಮ ಗಮನಕ್ಕೆ: ನಿಮ್ಮ ಮೊಬೈಲ್ ನಂಬರ್‌ಗೆ ಲಭ್ಯವಿರುವ ಅತ್ಯುತ್ತಮವಾದ ಯೋಜನೆ ಮತ್ತು ಪ್ರಯೋಜನಗಳನ್ನು Digit Recharge ಮೇಲೆ ಕ್ಲಿಕ್ ಮಾಡಿ ಪರಿಶೀಲಿಸಬಹುದು.