ಭಾರತದಲ್ಲಿ ಅತಿದೊಡ್ಡ ಮತ್ತು ಪ್ರಮುಖ ಟೆಲಿಕಾಂ ಪ್ಲೇಯರ್‌ಗಳಲ್ಲಿ ಒಂದಾಗಿರುವ ರಿಲಯನ್ಸ್ ಜಿಯೋ (Reliance Jio) ತನ್ನ ಹಲವಾರು ಪ್ರಿಪೇಯ್ಡ್ ಯೋಜನೆಗಳಲ್ಲಿ ಹೆಚ್ಚು ಪ್ರಯೋಜನಗಳನ್ನು ನೀಡುತ್ತಿದೆ. ಅಲ್ಲದೆ ಇಲ್ಲಿ ನಾವು ನಿಮಗೆ ಅತಿ ಹೆಚ್ಚು ರಿಲಯನ್ಸ್ ಜಿಯೋ (Reliance Jio) ಬಳಕೆದಾರರು ಬಳಸುತ್ತಿರುವ ಸುಮಾರು 3 ತಿಂಗಳ ವ್ಯಾಲಿಡಿಟಿ ಪ್ಲಾನ್ ಕೈಗೆಟುಕುವ ರೀಚಾರ್ಜ್ ರೂ 1198 ಯೋಜನೆಯಲ್ಲಿ ಉಚಿತ ಅನ್ಲಿಮಿಟೆಡ್ 5G ಡೇಟಾ ಮತ್ತು ಕರೆಗಳೊಂದಿಗೆ 14 ವಿಶೇಷ OTT ಜೊತೆಗೆ ಉತ್ತಮ ಅನುಕೂಲಗಳನ್ನು ತಮ್ಮ ಬಳಕೆದಾರರಿಗೆ ನೀಡುತ್ತಿದೆ.
ಟೆಲಿಕಾಂ ಕಂಪನಿಯು ಹೊಸ ಪ್ಲಾನ್ ಅನ್ನು 84 ದಿನಗಳವರೆಗೆ ಮಾನ್ಯವಾಗಿದೆ ಮತ್ತು ಉತ್ತಮ ಕೊಡುಗೆಗಳೊಂದಿಗೆ ಅತ್ಯಂತ ಕೈಗೆಟುಕುವ ಪ್ಲಾನ್ ಶ್ರೇಣಿಯ ಅಡಿಯಲ್ಲಿ ನಿಂತಿದೆ ಯೋಜನೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ ಇಲ್ಲಿದೆ. ಜಿಯೋದಿಂದ ಅನೇಕ ಯೋಜನೆಗಳು OTT ಪ್ರಯೋಜನಗಳೊಂದಿಗೆ ಬರುತ್ತವೆ. ಇದು ಉಚಿತ OTT ಪ್ರಯೋಜನಗಳನ್ನು ಒದಗಿಸುತ್ತ ರಿಲಯನ್ಸ್ ಜಿಯೋ (Reliance Jio) ರೂ 1198 ಮೌಲ್ಯದ ಪ್ಲಾನ್‌ನೊಂದಿಗೆ ಬಂದಿದ್ದು ಇದು 84 ದಿನಗಳ ವ್ಯಾಲಿಡಿಟಿಗೆ ಮಾನ್ಯವಾಗಿದೆ.
ರಿಲಯನ್ಸ್ ಜಿಯೋ (Reliance Jio) ಬಳಕೆದಾರರು 84 ದಿನಗಳ ಸಂಪೂರ್ಣ ವ್ಯಾಲಿಡಿಟಿಗಾಗಿ ಯಾವುದೇ ನೆಟ್‌ವರ್ಕ್‌ಗಳೊಂದಿಗೆ ಉಚಿತ ವಾಯ್ಸ್ ಕರೆಗಳನ್ನು ಹೊಂದಲು ಅನುವು ಮಾಡಿಕೊಡುತ್ತದೆ. ಬಳಕೆದಾರರು 84 ದಿನಗಳವರೆಗೆ 168GB ಡೇಟಾವನ್ನು ಪಡೆಯುತ್ತಾರೆ. ಇದರರ್ಥ ನೀವು ದಿನಕ್ಕೆ 2GB ಡೇಟಾವನ್ನು ಬಳಸಲು ಸಾಧ್ಯವಾಗುತ್ತದೆ. ದೈನಂದಿನ ಡೇಟಾ ಮಿತಿ ಮುಗಿದ ನಂತರ ಬಳಕೆದಾರರು 64kbps ವೇಗದಲ್ಲಿ ಇಂಟರ್ನೆಟ್ ಅನ್ನು ಬಳಸಲು ಸಾಧ್ಯವಾಗುತ್ತದೆ.
Also Read: 6000mAh ಬ್ಯಾಟರಿಯುಳ್ಳ TECNO POVA 6 PRO ಬಿಡುಗಡೆ ಕಂಫಾರ್ಮ್! ನಿರೀಕ್ಷಿತ ಬೆಲೆ ಮತ್ತು ಫೀಚರ್ ತಿಳಿಯಿರಿ
ರಿಲಯನ್ಸ್ ಜಿಯೋ (Reliance Jio) ಈ ಯೋಜನೆಯಲ್ಲಿ ನಿಮಗೆ 3 ತಿಂಗಳ ಉಚಿತ ಡಿಸ್ನಿ+ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಗೆ ಪ್ರವೇಶವನ್ನು ನೀಡುತ್ತದೆ. ಅಲ್ಲದೆ ಈ ರಿಲಯನ್ಸ್ ಜಿಯೋ (Reliance Jio) ಪ್ಲಾನ್ 84 ದಿನಗಳ ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ಚಂದಾದಾರಿಕೆಗೆ 84 ದಿನಗಳ ಜಿಯೋಸಿನಿಮಾ ಪ್ರೀಮಿಯಂಗೆ ಚಂದಾದಾರಿಕೆಗಾಗಿ ಕೂಪನ್ ಅನ್ನು MyJio ಖಾತೆಯಲ್ಲಿ ಕ್ರೆಡಿಟ್ ಮಾಡಲಾಗುತ್ತದೆ. ರಿಲಯನ್ಸ್ ಜಿಯೋ (Reliance Jio) ಯೋಜನೆಯು ತನ್ನ ಎಲ್ಲಾ ಗ್ರಾಹಕರಿಗೆ ದಿನಕ್ಕೆ 100 SMS ಅನ್ನು ಸಹ ನೀಡುತ್ತದೆ.
ಈ ಯೋಜನೆಯಲ್ಲಿ Sony LIV, ZEE5, Lionsgate Play, Discovery+, Sun NXT, Kanchha Lanka, Planet Marathi, Chaupal, Docubay, EPIC ON ಮತ್ತು Hoichoi ಸೇರಿದಂತೆ ಇತರ OTT ಅಪ್ಲಿಕೇಶನ್‌ಗಳಿಗೆ ಚಂದಾದಾರಿಕೆಗಳು JioTV ಅಪ್ಲಿಕೇಶನ್ ಮೂಲಕ ಆಗುತ್ತವೆ. ರಿಲಯನ್ಸ್ ಜಿಯೋ (Reliance Jio) ಟೆಲಿಕಾಂ ವಲಯಕ್ಕೆ ಪ್ರವೇಶಿಸಿದಾಗಿನಿಂದ ಇದು ಗ್ರಾಹಕರಿಗೆ ಕಡಿಮೆ ಬೆಲೆಯ ಮತ್ತು ಕೈಗೆಟುಕುವ ಯೋಜನೆಗಳನ್ನು ಒದಗಿಸುತ್ತಾ ಈವರೆಗೆ ಭಾರತದಲ್ಲಿ 44 ಕೋಟಿಗಿಂತ ಹೆಚ್ಚಿನ ಬಳಕೆದಾರರನ್ನು ಹೊಂದಿದೆ.