ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋ (Reliance Jio) ತನ್ನ ಗ್ರಾಹಕರಿಗಾಗಿ ಪ್ರಿಪೇಯ್ಡ್ ಯೋಜನಗಳ ವಿವಿಧ ವರ್ಗಗಳನ್ನು ಹೊಂದಿದೆ. ಮುಖೇಶ್ ಅಂಬಾನಿ ಒಡೆತನದ ಈ ಕಂಪನಿಯು ಡೇಟಾ ಬೂಸ್ಟರ್, ವಾರ್ಷಿಕ ಯೋಜನೆಗಳು, ಡೇಟಾ ಪ್ಯಾಕ್‌ಗಳು, ಇಂಟರ್ನ್ಯಾಷನಲ್ ರೋಮಿಂಗ್ ಮತ್ತು ಪೋಸ್ಟ್ ಪೇಯ್ದನಂತಹ ವಿವಿಧ ಬೆಲೆಯ ವರ್ಗಗಳಲ್ಲಿ ಯೋಜನೆಗಳನ್ನು ನೀಡುತ್ತದೆ. ಜಿಯೋ ಅಂತಹ ಎರಡು ಯೋಜನೆಗಳನ್ನು ಹೊಂದಿದೆ.
ಇದರಲ್ಲಿ OTT ಚಂದಾದಾರಿಕೆ ಉಚಿತವಾಗಿ ಲಭ್ಯವಿದೆ. ಈ ರಿಲಯನ್ಸ್ ಜಿಯೋ (Reliance Jio) ಸೂಪರ್-ಡ್ಯೂಪರ್‌ಹಿಟ್ ಪ್ಲಾನ್ ಕುರಿತು ಒಂದಿಷ್ಟು ಮಾಹಿತಿಯ ಬಗ್ಗೆ ಹೇಳಿದ್ದೇವೆ. ಈ ಪ್ರಿಪೇಯ್ಡ್ ಯೋಜನೆಯಲ್ಲಿ ಬರೋಬ್ಬರಿ 28 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಇದರಲ್ಲಿ ಬರೋಬ್ಬರಿ 10 ಕ್ಕೂ ಅಧಿಕ OTT ಪ್ಲಾಟ್‌ಫಾರ್ಮ್‌ಗಳ ಉಚಿತ ಚಂದಾದಾರಿಕೆಯನ್ನು ನೀಡುತ್ತದೆ.
Also Read: 50MP ಕ್ಯಾಮೆರಾವುಳ್ಳ Samsung Galaxy F05 ಸ್ಮಾರ್ಟ್ಫೋನ್ ಕೇವಲ 6499 ರೂಗಳಿಗೆ ಬಿಡುಗಡೆಯಾಗಿದೆ!
ರಿಲಯನ್ಸ್ ಜಿಯೋ ಹೊಂದಿರುವ ಈ ರೂ 175 ಯೋಜನೆ ಕೇವಲ ಡೇಟಾ ಪ್ಯಾಕ್ ಆಗಿದ್ದು ಇದರಲ್ಲಿ ಯಾವುದೇ ಕರೆ ಅಥವಾ ಮೆಸೇಜ್ ಹೊಂದಿಲ್ಲ ಎನ್ನುವದನ್ನು ಗಮನದಲ್ಲಿಡಬೇಕು. ಈ ಹೆಚ್ಚುವರಿಯ ಡೇಟಾ ಪ್ಯಾಕ್ ವಿಭಾಗದಲ್ಲಿ ನೇರವಾಗಿ ಇದನ್ನು ನೀವು ಬಳಸಲು ಸಾದ್ಯವಾಗೋದಿಲ್ಲ. ಈ ಯೋಜನೆ ಬೇಕಿದ್ದರೆ ಮೊದಲು ಪ್ರೈಮರಿ ಯೋಜನೆಯನ್ನು ಹೊಂದಿರಬೇಕು. ಅಲ್ಲದೆ ಈ ಜಿಯೋದ ಪ್ರಿಪೇಯ್ಡ್ ಯೋಜನಯ ಮಾನ್ಯತೆ 28 ದಿನಗಳ ಮಾನ್ಯತೆಯನ್ನು ಹೊಂದಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಒಟ್ಟು 10GB ಹೈ ಸ್ಪೀಡ್ ಡೇಟಾವನ್ನು ನೀಡಲಾಗುತ್ತದೆ. ಆದರೆ ಈ ಡೇಟಾ ಖಾಲಿಯಾದ ನಂತರ ಬಳಕೆದಾರರು 64Kbps ವೇಗದಲ್ಲಿ ಅನಿಯಮಿತ ಡೇಟಾವನ್ನು ಕಳೆಯಬಹುದು.
ಈ ರಿಲಯನ್ಸ್ ಜಿಯೋ (Reliance Jio) ಈ ಯೋಜನೆಯು ಡೇಟಾ ಮಾತ್ರ ಪ್ಯಾಕ್ ಆಗಿದೆ ಆದ್ದರಿಂದ ಈ ರೀಚಾರ್ಜ್‌ನಲ್ಲಿ ಕರೆ ಮಾಡುವ ಸೌಲಭ್ಯ ಲಭ್ಯವಿಲ್ಲ. Reliance Jio ಈ ಯೋಜನೆಯಲ್ಲಿ SonyLIV, Zee5, JioCinema Premium ಚಂದಾದಾರಿಕೆಯನ್ನು ನೀಡಲಾಗುತ್ತದೆ. ಈ ಪ್ಯಾಕ್‌ನಲ್ಲಿ Lionsgate Play, Discoveryt, Sun NXT, Kanchha Lanka, Planet Marathi, Chaupal, Hoichoi, JioTV ಚಂದಾದಾರಿಕೆ ಲಭ್ಯವಿದೆ.
ಜಿಯೋಸಿನಿಮಾ ಪ್ರೀಮಿಯಂ ಕೂಪನ್ ಅನ್ನು ಗ್ರಾಹಕರ MyJio ಖಾತೆಗೆ 28 ದಿನಗಳ ಮಾನ್ಯತೆಯೊಂದಿಗೆ ಕ್ರೆಡಿಟ್ ಮಾಡಲಾಗುತ್ತದೆ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ. ಈ ರಿಲಯನ್ಸ್ ಜಿಯೋ (Reliance Jio) ತಮ್ಮ ಗ್ರಾಹಕರು JioTV ಮೊಬೈಲ್ ಅಪ್ಲಿಕೇಶನ್ ಮೂಲಕ Sony LIV, ZEE5, JioCinema, Premium, Lionsgate Play, Discovery+, Sun NXT, Kanchha Lanka, Planet Marathi, Chaupal, Hoichoi ಚಂದಾದಾರಿಕೆಯನ್ನು ಸಹ ಪಡೆಯುತ್ತಾರೆ.