ರಿಲಯನ್ಸ್ ಜಿಯೋ (Reliance Jio) ತನ್ನ ಗ್ರಾಹಕರಿಗಾಗಿ ಪ್ರಿಪೇಯ್ಡ್ ಯೋಜನಗಳ ವಿವಿಧ ವರ್ಗಗಳನ್ನು ಹೊಂದಿದೆ.
ರಿಲಯನ್ಸ್ ಜಿಯೋ (Reliance Jio) ಬರೋಬ್ಬರಿ 10 ಕ್ಕೂ ಅಧಿಕ OTT ಪ್ಲಾಟ್ಫಾರ್ಮ್ಗಳ ಉಚಿತ ಚಂದಾದಾರಿಕೆಯನ್ನು ನೀಡುತ್ತದೆ.
10GB ಡೇಟಾ ಮುಗಿದ ನಂತರ ಬಳಕೆದಾರರು 64Kbps ವೇಗದಲ್ಲಿ ಅನಿಯಮಿತ ಡೇಟಾವನ್ನು ಕಳೆಯಬಹುದು.
ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋ (Reliance Jio) ತನ್ನ ಗ್ರಾಹಕರಿಗಾಗಿ ಪ್ರಿಪೇಯ್ಡ್ ಯೋಜನಗಳ ವಿವಿಧ ವರ್ಗಗಳನ್ನು ಹೊಂದಿದೆ. ಮುಖೇಶ್ ಅಂಬಾನಿ ಒಡೆತನದ ಈ ಕಂಪನಿಯು ಡೇಟಾ ಬೂಸ್ಟರ್, ವಾರ್ಷಿಕ ಯೋಜನೆಗಳು, ಡೇಟಾ ಪ್ಯಾಕ್ಗಳು, ಇಂಟರ್ನ್ಯಾಷನಲ್ ರೋಮಿಂಗ್ ಮತ್ತು ಪೋಸ್ಟ್ ಪೇಯ್ದನಂತಹ ವಿವಿಧ ಬೆಲೆಯ ವರ್ಗಗಳಲ್ಲಿ ಯೋಜನೆಗಳನ್ನು ನೀಡುತ್ತದೆ. ಜಿಯೋ ಅಂತಹ ಎರಡು ಯೋಜನೆಗಳನ್ನು ಹೊಂದಿದೆ.
ಇದರಲ್ಲಿ OTT ಚಂದಾದಾರಿಕೆ ಉಚಿತವಾಗಿ ಲಭ್ಯವಿದೆ. ಈ ರಿಲಯನ್ಸ್ ಜಿಯೋ (Reliance Jio) ಸೂಪರ್-ಡ್ಯೂಪರ್ಹಿಟ್ ಪ್ಲಾನ್ ಕುರಿತು ಒಂದಿಷ್ಟು ಮಾಹಿತಿಯ ಬಗ್ಗೆ ಹೇಳಿದ್ದೇವೆ. ಈ ಪ್ರಿಪೇಯ್ಡ್ ಯೋಜನೆಯಲ್ಲಿ ಬರೋಬ್ಬರಿ 28 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಇದರಲ್ಲಿ ಬರೋಬ್ಬರಿ 10 ಕ್ಕೂ ಅಧಿಕ OTT ಪ್ಲಾಟ್ಫಾರ್ಮ್ಗಳ ಉಚಿತ ಚಂದಾದಾರಿಕೆಯನ್ನು ನೀಡುತ್ತದೆ.
Also Read: 50MP ಕ್ಯಾಮೆರಾವುಳ್ಳ Samsung Galaxy F05 ಸ್ಮಾರ್ಟ್ಫೋನ್ ಕೇವಲ 6499 ರೂಗಳಿಗೆ ಬಿಡುಗಡೆಯಾಗಿದೆ!
ರಿಲಯನ್ಸ್ ಜಿಯೋ (Reliance Jio) ರೂಗಳ 175 ರಿಚಾರ್ಜ್ ಯೋಜನೆ:
ರಿಲಯನ್ಸ್ ಜಿಯೋ ಹೊಂದಿರುವ ಈ ರೂ 175 ಯೋಜನೆ ಕೇವಲ ಡೇಟಾ ಪ್ಯಾಕ್ ಆಗಿದ್ದು ಇದರಲ್ಲಿ ಯಾವುದೇ ಕರೆ ಅಥವಾ ಮೆಸೇಜ್ ಹೊಂದಿಲ್ಲ ಎನ್ನುವದನ್ನು ಗಮನದಲ್ಲಿಡಬೇಕು. ಈ ಹೆಚ್ಚುವರಿಯ ಡೇಟಾ ಪ್ಯಾಕ್ ವಿಭಾಗದಲ್ಲಿ ನೇರವಾಗಿ ಇದನ್ನು ನೀವು ಬಳಸಲು ಸಾದ್ಯವಾಗೋದಿಲ್ಲ. ಈ ಯೋಜನೆ ಬೇಕಿದ್ದರೆ ಮೊದಲು ಪ್ರೈಮರಿ ಯೋಜನೆಯನ್ನು ಹೊಂದಿರಬೇಕು. ಅಲ್ಲದೆ ಈ ಜಿಯೋದ ಪ್ರಿಪೇಯ್ಡ್ ಯೋಜನಯ ಮಾನ್ಯತೆ 28 ದಿನಗಳ ಮಾನ್ಯತೆಯನ್ನು ಹೊಂದಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಒಟ್ಟು 10GB ಹೈ ಸ್ಪೀಡ್ ಡೇಟಾವನ್ನು ನೀಡಲಾಗುತ್ತದೆ. ಆದರೆ ಈ ಡೇಟಾ ಖಾಲಿಯಾದ ನಂತರ ಬಳಕೆದಾರರು 64Kbps ವೇಗದಲ್ಲಿ ಅನಿಯಮಿತ ಡೇಟಾವನ್ನು ಕಳೆಯಬಹುದು.
10 ಕ್ಕೂ ಅಧಿಕ ಉಚಿತ OTT ಅಪ್ಲಿಕೇಶನ್ಗಳು:
ಈ ರಿಲಯನ್ಸ್ ಜಿಯೋ (Reliance Jio) ಈ ಯೋಜನೆಯು ಡೇಟಾ ಮಾತ್ರ ಪ್ಯಾಕ್ ಆಗಿದೆ ಆದ್ದರಿಂದ ಈ ರೀಚಾರ್ಜ್ನಲ್ಲಿ ಕರೆ ಮಾಡುವ ಸೌಲಭ್ಯ ಲಭ್ಯವಿಲ್ಲ. Reliance Jio ಈ ಯೋಜನೆಯಲ್ಲಿ SonyLIV, Zee5, JioCinema Premium ಚಂದಾದಾರಿಕೆಯನ್ನು ನೀಡಲಾಗುತ್ತದೆ. ಈ ಪ್ಯಾಕ್ನಲ್ಲಿ Lionsgate Play, Discoveryt, Sun NXT, Kanchha Lanka, Planet Marathi, Chaupal, Hoichoi, JioTV ಚಂದಾದಾರಿಕೆ ಲಭ್ಯವಿದೆ.
ಜಿಯೋಸಿನಿಮಾ ಪ್ರೀಮಿಯಂ ಕೂಪನ್ ಅನ್ನು ಗ್ರಾಹಕರ MyJio ಖಾತೆಗೆ 28 ದಿನಗಳ ಮಾನ್ಯತೆಯೊಂದಿಗೆ ಕ್ರೆಡಿಟ್ ಮಾಡಲಾಗುತ್ತದೆ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ. ಈ ರಿಲಯನ್ಸ್ ಜಿಯೋ (Reliance Jio) ತಮ್ಮ ಗ್ರಾಹಕರು JioTV ಮೊಬೈಲ್ ಅಪ್ಲಿಕೇಶನ್ ಮೂಲಕ Sony LIV, ZEE5, JioCinema, Premium, Lionsgate Play, Discovery+, Sun NXT, Kanchha Lanka, Planet Marathi, Chaupal, Hoichoi ಚಂದಾದಾರಿಕೆಯನ್ನು ಸಹ ಪಡೆಯುತ್ತಾರೆ.
Ravi Rao
Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile