Jio Speed: ಡೌನ್‌ಲೋಡ್ ವೇಗದಲ್ಲಿ ಮತ್ತೆ ಮೊದಲ ಸ್ಥಾನಕ್ಕೆ ಜಿಗಿದ ರಿಲಯನ್ಸ್ ಜಿಯೋ

Jio Speed: ಡೌನ್‌ಲೋಡ್ ವೇಗದಲ್ಲಿ ಮತ್ತೆ ಮೊದಲ ಸ್ಥಾನಕ್ಕೆ ಜಿಗಿದ ರಿಲಯನ್ಸ್ ಜಿಯೋ
HIGHLIGHTS

ಡೌನ್‌ಲೋಡ್ ವೇಗದಲ್ಲಿ ಮತ್ತೆ ಮೊದಲ ಸ್ಥಾನಕ್ಕೆ ಜಿಗಿದ ರಿಲಯನ್ಸ್ ಜಿಯೋ

ಸರಾಸರಿ 4G ಡೌನ್‌ಲೋಡ್ ವೇಗ 23.1 Mbps ನೊಂದಿಗೆ Reliance Jio ಮುಂಚೂಣಿಯಲ್ಲಿ ಮುಂದುವರಿದಿದೆ

ಸರಾಸರಿ 4G ಅಪ್‌ಲೋಡ್ ವೇಗ ಹೆಚ್ಚಳವಾಗಿರುವ ಏಕೈಕ ಕಂಪನಿ Reliance Jio

ದೇಶದ ಅತಿದೊಡ್ಡ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ 4G ಡೌನ್‌ಲೋಡ್ ವೇಗದಲ್ಲಿ 2 Mbps ಜಿಗಿತದೊಂದಿಗೆ ತನ್ನ ಮೊದಲ ಸ್ಥಾನವನ್ನು ಉಳಿಸಿಕೊಂಡಿದೆ. ಏಪ್ರಿಲ್ ತಿಂಗಳ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ ಜಿಯೋದ ಸರಾಸರಿ 4G ಡೌನ್‌ಲೋಡ್ ವೇಗ 23.1 Mbps ಇದೆ. ಮಾರ್ಚ್ ತಿಂಗಳಲ್ಲಿ ಜಿಯೋ ಸರಾಸರಿ 4G ಡೌನ್‌ಲೋಡ್ ವೇಗ 21.1 Mbps ಆಗಿತ್ತು. ಜಿಯೋ ಪ್ರಾರಂಭದಿಂದಲೂ TRAI ನ ಡೌನ್‌ಲೋಡ್ ವೇಗ ಪರೀಕ್ಷೆಯಲ್ಲಿ ಮೊದಲ ಸ್ಥಾನದಲ್ಲಿದೆ.

ಟೆಲಿಕಾಂ ದೈತ್ಯ ವಿ (ವೊಡಾಫೋನ್‌-ಐಡಿಯಾ) 4G ಡೌನ್‌ಲೋಡ್ ವೇಗವು ಸತತ ಎರಡನೇ ತಿಂಗಳು ಕಡಿಮೆಯಾಗಿದೆ ಎಂದು ಡೇಟಾ ತೋರಿಸುತ್ತದೆ. ಇದು ಫೆಬ್ರವರಿಯಲ್ಲಿ 18.4 Mbps ಡೌನ್‌ಲೋಡ್ ವೇಗದಿಂದ ಏಪ್ರಿಲ್‌ನಲ್ಲಿ 17.7 Mbps ಗೆ ಇಳಿದಿದೆ. ವಿಐ ಜೊತೆಗೆ ಸರ್ಕಾರಿ ನೇತೃತ್ವದ ಬಿಎಸ್‌ಎನ್‌ಎಲ್‌ ವೇಗವು 5.9 Mbps ಗೆ ಇಳಿದಿದೆ. ಮಾರ್ಚ್‌ನಲ್ಲಿ ಏರ್‌ಟೆಲ್‌ನ ಡೌನ್‌ಲೋಡ್ ವೇಗವು 1.3 Mbps ನಿಂದ 13.7 Mbps ಗೆ ಕುಸಿದಿತ್ತು. ಏಪ್ರಿಲ್‌ನಲ್ಲಿ ವೇಗವು 14.1 ಎಂಬಿಪಿಎಸ್‌ಗೆ ಏರಿಕೆಯಾಗಿದ್ದರೂ ಫೆಬ್ರವರಿಯಲ್ಲಿ ಅದರ 15 Mbps ವೇಗಕ್ಕೆ ಹೋಲಿಸಿದರೆ ಇದು ಇನ್ನೂ ಹಿಂದುಳಿದಿದೆ.

ರಿಲಯನ್ಸ್ ಜಿಯೋ ಡೌನ್‌ಲೋಡ್ ವೇಗ

ಪ್ರತಿ ಬಾರಿಯಂತೆ ಮುಖೇಶ್ ಅಂಬಾನಿ ಅವರ ಕಂಪನಿ ರಿಲಯನ್ಸ್ ಜಿಯೋ ಸರಾಸರಿ 4G ಡೌನ್‌ಲೋಡ್ ವೇಗದಲ್ಲಿ ಏರ್‌ಟೆಲ್ ಮತ್ತು ವಿ ಅನ್ನು ಹಿಂದಿಕ್ಕಿದೆ. ಏಪ್ರಿಲ್ ತಿಂಗಳಿನಲ್ಲಿ ಜಿಯೋದ 4G ಡೌನ್‌ಲೋಡ್ ವೇಗವು ಏರ್‌ಟೆಲ್‌ಗಿಂತ 9.0 mbps ಮತ್ತು ವಿ ಇಂಡಿಯಾಗಿಂತ 5.4 mbps ಹೆಚ್ಚಾಗಿದೆ. ರಿಲಯನ್ಸ್ ಜಿಯೋ ಕಳೆದ ಹಲವಾರು ವರ್ಷಗಳಿಂದ ಸರಾಸರಿ 4G ಡೌನ್‌ಲೋಡ್ ವೇಗದಲ್ಲಿ ಸತತವಾಗಿ ಮೊದಲ ಸ್ಥಾನವನ್ನು ಹೊಂದಿದೆ. ವಿ ಇಂಡಿಯಾ ಎರಡನೇ ಸ್ಥಾನವನ್ನು ಮುಂದುವರೆಸಿದೆ ಮತ್ತು ಭಾರ್ತಿ ಏರ್‌ಟೆಲ್ ಅನ್ನು ಮೂರನೇ ಸ್ಥಾನಕ್ಕೆ ತಳ್ಳಿದೆ.

ರಿಲಯನ್ಸ್ ಜಿಯೋ ಅಪ್‌ಲೋಡ್ ವೇಗ

ವಿ ಇಂಡಿಯಾ 8.2 Mbps ನೊಂದಿಗೆ ಸರಾಸರಿ 4G ಅಪ್‌ಲೋಡ್ ವೇಗದೊಂದಿಗೆ ಚಾರ್ಟ್‌ನಲ್ಲಿ ಅಗ್ರಸ್ಥಾನದಲ್ಲಿದೆ. ರಿಲಯನ್ಸ್ ಜಿಯೋ ತನ್ನ ಅಪ್‌ಲೋಡ್ ವೇಗ 7.6 ಎಂಬಿಪಿಎಸ್‌ನೊಂದಿಗೆ ಎರಡನೇ ಸಂಖ್ಯೆಯನ್ನು ಪಡೆದಿದೆ. ರಿಲಯನ್ಸ್ ಜಿಯೋ ಮಾತ್ರ ಅಪ್‌ಲೋಡ್ ವೇಗವನ್ನು ಹೆಚ್ಚಿಸಿಕೊಂಡ ಕಂಪನಿಯಾಗಿದೆ. ಕಳೆದ ತಿಂಗಳಿಗೆ ಹೋಲಿಸಿದರೆ ವಿ ಇಂಡಿಯಾ ಮತ್ತು ಏರ್‌ಟೆಲ್‌ ಅಪ್‌ಲೋಡ್ ವೇಗದಲ್ಲಿ ಯಾವುದೇ ಬದಲಾವಣೆ ಇಲ್ಲ. ಅದೇ ಸಮಯದಲ್ಲಿ ಬಿಎಸ್‌ಎನ್‌ಎಲ್‌ ಅಪ್‌ಲೋಡ್ ವೇಗವು 5 Mbps ಗೆ ಇಳಿದಿದೆ. ಭಾರ್ತಿ ಏರ್‌ಟೆಲ್ ಸರಾಸರಿ 4G ಅಪ್‌ಲೋಡ್ ವೇಗದಲ್ಲಿ ಮೂರನೇ ಸ್ಥಾನದಲ್ಲಿದೆ. ಏಪ್ರಿಲ್ ತಿಂಗಳಲ್ಲಿ ಕಂಪನಿಯು ಸರಾಸರಿ 6.1 Mbps ಅಪ್‌ಲೋಡ್ ವೇಗವನ್ನು ದಾಖಲಿಸಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo