JioTV Premium Plans: ಜಿಯೋಟಿವಿಗಾಗಿ Affordable ಪ್ರೀಮಿಯಂ ಪ್ಲಾನ್‌ಗಳ ಬಿಡುಗಡೆ! ಬೆಲೆ ಮತ್ತು ಪ್ರಯೋಜಗಳೇನು? | Tech News

JioTV Premium Plans: ಜಿಯೋಟಿವಿಗಾಗಿ Affordable ಪ್ರೀಮಿಯಂ ಪ್ಲಾನ್‌ಗಳ ಬಿಡುಗಡೆ! ಬೆಲೆ ಮತ್ತು ಪ್ರಯೋಜಗಳೇನು? | Tech News
HIGHLIGHTS

JioTV Premium Plans ಈ ಎಲ್ಲಾ ಯೋಜನೆಗಳು 15 ಡಿಸೆಂಬರ್ 2023 ರಿಂದ ಗ್ರಾಹಕರಿಗೆ ಲಭ್ಯವಿರುತ್ತವೆ.

ರಿಲಯನ್ಸ್ ಜಿಯೋಬಳಕೆದಾರರು ಒಂದೇ ಲಾಗಿನ್ ಅಡಿಯಲ್ಲಿ ನಿಮಗೆ 14 OTT ಪ್ಲಾಟ್‌ಫಾರ್ಮ್‌ಗಳನ್ನು ಪಡೆಯುತ್ತಾರೆ.

JioTV Premium Plans ಚಂದಾದಾರಿಕೆಯೊಂದಿಗೆ ಹೊಸ ಪ್ರಿಪೇಯ್ಡ್ ಯೋಜನೆಗಳು ₹398, ₹1198 ಮತ್ತು ₹4498 ರೂಗಳಿಗೆ ಲಭ್ಯ

ಭಾರತದಲ್ಲಿ ನಂಬರ್ ಒನ್ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ (Reliance Jio) ತಮ್ಮ ಗ್ರಾಹಕರನ್ನು ಆಕರ್ಷಿಸಲು ಮತ್ತು ಮನರಂಜನೆಯನ್ನು ದ್ವಿಗುಣಗೊಳಿಸಲು ಜಿಯೋ ಕೈಗೆಟಕುವ ಬೆಲೆಗೆ ಜಿಯೋಟಿವಿ ಪ್ರೀಮಿಯಂ ಪ್ಲಾನ್ (JioTV Premium Plans) ಚಂದಾದಾರಿಕೆಯೊಂದಿಗೆ ಮೂರು ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಪ್ರಾರಂಭಿಸಿದೆ. ಈ ಮೂರು ಹೊಸ ಯೋಜನೆಗಳು ರೂ 398, ರೂ 1198 ಮತ್ತು ರೂ 4498 ಆಗಿವೆ. ಇದನ್ನು ನೇರವಾಗಿ ಹೆಚ್ಚು ಸಿನಿಮಾ, ಧಾರವಾಯಿಗಳನ್ನು ನೋಡುವವರಿಗಾಗಿ ನಿಜಕ್ಕೂ ಅದ್ದೂರಿಯಾಗಿದೆ. JioTV ಪ್ರೀಮಿಯಂ ಚಂದಾದಾರಿಕೆಯೊಂದಿಗೆ ಬಳಕೆದಾರರು ಒಂದೇ ಲಾಗಿನ್ ಅಡಿಯಲ್ಲಿ ನಿಮಗೆ 14 OTT ಪ್ಲಾಟ್‌ಫಾರ್ಮ್‌ಗಳನ್ನು ಪಡೆಯುತ್ತಾರೆ. ಜಿಯೋ ಮೊದಲ ಬಾರಿಗೆ JioTV ಪ್ರೀಮಿಯಂ ಅನ್ನು ನೀಡುತ್ತಿದೆ.

Also Read: Realme C67 5G ಸ್ಮಾರ್ಟ್​​ಫೋನ್ ಲಾಂಚ್! ಬೆಲೆ ಮತ್ತು Attractive ಫೀಚರ್ಸ್‌ ಹೀಗಿವೆ ನೋಡಿ

JioTV ಪ್ರೀಮಿಯಂ ಯೋಜನೆ

ಈ ಹಿಂದೆ JioTV ಕೇವಲ ಉಚಿತ ಆವೃತ್ತಿಯನ್ನು ಹೊಂದಿದ್ದು ಈಗ ರಿಲಯನ್ಸ್ ಜಿಯೋ (Reliance Jio) ಶುಲ್ಕಸಹಿತ ಯೋಜನೆಗಳನ್ನು ನೀಡುತ್ತಿದೆ. ಇದು ಪ್ರೀಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಮೊಬೈಲ್ ಯೋಜನೆಗಳೊಂದಿಗೆ ಬಳಕೆದಾರರಿಗೆ ಬಂಡಲ್ ಮಾಡಲಾಗಿತ್ತು. ಈ ಮೂರು ಪ್ರಿಪೇಯ್ಡ್ ಯೋಜನೆಗಳೊಂದಿಗೆ ಲಭ್ಯವಿರುವ ಅಪ್ಲಿಕೇಶನ್‌ಗಳ ಹೆಸರುಗಳನ್ನು ನೋಡೋಣ ಮತ್ತು ಈ ಎಲ್ಲಾ ಯೋಜನೆಗಳು 15 ಡಿಸೆಂಬರ್ 2023 ರಿಂದ ಗ್ರಾಹಕರಿಗೆ ಲಭ್ಯವಿರುತ್ತವೆ.

JioTV Premium Plans

ಜಿಯೋ JioTV Premium Plans ವಿವರಗಳು

ರಿಲಯನ್ಸ್ ಜಿಯೋದ ರೂ 398 ಯೋಜನೆ: ಈ ಯೋಜನೆಯು 28 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ರಿಲಯನ್ಸ್ ಜಿಯೋ (Reliance Jio) ಬಳಕೆದಾರರು 2GB ದೈನಂದಿನ ಡೇಟಾ, ಅನಿಯಮಿತ ವಾಯ್ಸ್ ಕರೆ ಮತ್ತು 100 SMS/ದಿನವನ್ನು ಪಡೆಯುತ್ತಾರೆ. JioTV ಪ್ರೀಮಿಯಂ (12 OTTಗಳು) ಬಂಡಲ್ 28 ದಿನಗಳವರೆಗೆ ಮಾತ್ರ.

ರಿಲಯನ್ಸ್ ಜಿಯೋದ ರೂ 1198 ಯೋಜನೆ: ರೂ 1198 ಯೋಜನೆಯು 2GB ದೈನಂದಿನ ಡೇಟಾ, ಅನಿಯಮಿತ ವಾಯ್ಸ್ ಕರೆ, 100 SMS/ದಿನ ಮತ್ತು JioTV ಪ್ರೀಮಿಯಂ (14 OTT ಗಳು) 84 ದಿನಗಳವರೆಗೆ ಬರುತ್ತದೆ.

ರಿಲಯನ್ಸ್ ಜಿಯೋದ ರೂ 4498 ಯೋಜನೆ: ರಿಲಯನ್ಸ್ ಜಿಯೋ (Reliance Jio) ಈ ಯೋಜನೆಯು 2GB ದೈನಂದಿನ ಡೇಟಾ, JioTV ಪ್ರೀಮಿಯಂ (14 OTT ಗಳು), ಅನಿಯಮಿತ ವಾಯ್ಸ್ ಕರೆ ಮತ್ತು 1 ವರ್ಷಕ್ಕೆ 100 SMS/ದಿನದೊಂದಿಗೆ ಬರುತ್ತದೆ. ಈ ಯೋಜನೆಯೊಂದಿಗೆ ಆದ್ಯತೆಯ ಗ್ರಾಹಕ ಆರೈಕೆಯೂ ಇದೆ. JioCinema ಪ್ರೀಮಿಯಂ ಕೂಪನ್ ಅನ್ನು MyJio ಅಪ್ಲಿಕೇಶನ್ ವೋಚರ್ ವಿಭಾಗದಲ್ಲಿ ಸೇರಿಸಲಾಗಿದೆ ಅದರ ಮೂಲಕ ಬಳಕೆದಾರರು ಅದನ್ನು ರಿಡೀಮ್ ಮಾಡಬಹುದು.

JioTV ಪ್ರೀಮಿಯಂ ಯೋಜನೆಯ ಪ್ರಯೋಜನಗಳು

ರಿಲಯನ್ಸ್ ಜಿಯೋದ ಈ ಲೇಟೆಸ್ಟ್ ಯೋಜನೆಯಲ್ಲಿ ನಿಮಗೆ ಅದ್ದೂರಿಯ OTT ಬಂಡಲ್ ಪ್ಯಾಕ್ ಅನ್ನು ಕಾಮಪಿನಿ ನೀಡುತ್ತಿದೆ. ಇದರಲ್ಲಿ ಒಟ್ಟಾರೆಯಾಗಿ 14 ಬೆಸ್ಟ್ ಓಟಿಟಿ ಅಪ್ಲಿಕೇಶನ್ ಅನ್ನು ಕಂಪನಿ ಒಟ್ಟುಗೂಡಿಸಿದೆ. ಅವೆಂದರೆ JioCinema Premium, Disney+ Hotstar, ZEE5, SonyLIV, Prime Video (Mobile), Lionsgate Play, Discovery+, Docubay, Hoichoi, SunNXT, Planet Marathi, Chaupal, EpicON, ಮತ್ತು Kanccha Lannka ಅಪ್ಲಿಕೇಶನ್‌ಗಳೊಂದಿಗೆ ಬರುತ್ತದೆ.

ಬಳಕೆದಾರರು ಅರ್ಹ ಯೋಜನೆಯೊಂದಿಗೆ ರೀಚಾರ್ಜ್ ಮಾಡಿದ ತಮ್ಮ ಮೊಬೈಲ್ ಸಂಖ್ಯೆಯ ಮೂಲಕ ಸೈನ್ ಇನ್ ಮಾಡಲು ಸಾಧ್ಯವಾಗುತ್ತದೆ. JioTV ಪ್ರೀಮಿಯಂ ಟ್ಯಾಬ್ ಇರುತ್ತದೆ ಅದು ನಿಮಗೆ ಮೇಲಿನ ಎಲ್ಲಾ ಪ್ಲಾಟ್‌ಫಾರ್ಮ್‌ಗಳಿಂದ ವಿಷಯಕ್ಕೆ ಪ್ರವೇಶವನ್ನು ನೀಡುತ್ತದೆ. ಡಿಸ್ನಿ+ ಹಾಟ್‌ಸ್ಟಾರ್ ಮತ್ತು ಪ್ರೈಮ್ ವಿಡಿಯೋ ಆಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುತ್ತದೆ. ಸಕ್ರಿಯ ಪ್ರೈಮ್ ವೀಡಿಯೊಗೆ ನೀವು MyJio ಅಪ್ಲಿಕೇಶನ್‌ನಿಂದ ವೋಚರ್ ಅನ್ನು ಪಡೆಯಬೇಕು ಮತ್ತು ಅಪ್ಲಿಕೇಶನ್‌ಗೆ ಲಾಗಿನ್ ಮಾಡುವಾಗ Disney+ Hotstar ಅನ್ನು ಸಕ್ರಿಯಗೊಳಿಸಲಾಗುತ್ತದೆ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo