ರಿಲಯನ್ಸ್ ಜಿಯೋ (Reliance Jio) ನಾಳೆ 25ನೇ ಏಪ್ರಿಲ್ 2024 ರಂದು ತನ್ನ ಹೊಸ ಯೋಜನೆಗಳನ್ನು ಬಿಡುಗಡೆಗೊಳಿಸಲಿದೆ.
ರಿಲಯನ್ಸ್ ಜಿಯೋ (Reliance Jio) ಬಳಕೆದಾರರಿಗೆ ಜಾಹೀರಾತು ಮುಕ್ತ ಹೊಸ ಯೋಜನೆಯನ್ನು ನೀಡುವುದಾಗಿ ಹೇಳಿದೆ.
ಇತ್ತೀಚೆಗೆ ಜಿಯೋ ಸಿನಿಮಾಗಾಗಿ (Jio Cinima) ಸೇವೆಗೆ ಹೆಚ್ಚು ವಿಶೇಷತೆಗಳೊಂದಿಗೆ ವಿಶೇಷ ಪ್ರಯೋಜನಗಳನ್ನು ಸೇರಿಸಲಿದೆ.
Reliance Jio all set to launch new plans tomorrow: ಭಾರತದ ಜನಪ್ರಿಯ ಮತ್ತು ಅತಿ ದೊಡ್ಡ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋ (Reliance Jio) ಈ ವರ್ಷ ತಮ್ಮ ಪೋರ್ಟ್‌ಫೋಲಿಯೊದಲ್ಲಿ ಅನೇಕ ಹೊಸ ರೀಚಾರ್ಜ್ ಯೋಜನೆಗಳ ಆಯ್ಕೆಯನ್ನು ತಯಾರಿಸಿದ್ದು ನಾಳೆ ಅಂದ್ರೆ 25ನೇ ಏಪ್ರಿಲ್ 2024 ರಂದು ತಮ್ಮ ಬಳಕೆದಾರರಿಗೆ ನೀಡುವುದಾಗಿ ವರದಿಗಳು ತಿಳಿಸಿವೆ. ರಿಲಯನ್ಸ್ ಜಿಯೋ (Reliance Jio) ಕಂಪನಿಯು ಇತ್ತೀಚೆಗೆ ಜಿಯೋ ಸಿನಿಮಾಗಾಗಿ (Jio Cinima) ಸೇವೆಗೆ ಹೆಚ್ಚು ವಿಶೇಷತೆಗಳನ್ನು ನೀಡುತ್ತಿದ್ದು ಇದರೊಂದಿಗೆ ವಿಶೇಷ ಯೋಜನೆಗಳನ್ನು ಸೇರಿಸಿದೆ.
ರಿಲಯನ್ಸ್ ಜಿಯೋ (Reliance Jio) ಜಾಹೀರಾತು ಮುಕ್ತ ಯೋಜನೆಗಳು
ಈ ಹಿಂದೆ ಜಿಯೋ ಸಿನಿಮಾ (Jio Cinima) ಚಂದಾದಾರಿಕೆಯು ಎಲ್ಲಾ ಯೋಜನೆಗಳೊಂದಿಗೆ ಉಚಿತವಾಗಿ ಲಭ್ಯವಿತ್ತು ಆದರೆ ಈಗ ಕಂಪನಿಯು ಅದನ್ನು ಸಾಮಾನ್ಯ ಮತ್ತು ಪ್ರೀಮಿಯಂ ಎಂದು ಎರಡು ಭಾಗಗಳಾಗಿ ವಿಂಗಡಿಸಿದ್ದು ಈಗ ಪುನಃ ಒಂದಿಷ್ಟು ಬದಲಾವಣೆಗಳನ್ನು ತರುವುದಾಗಿ ನಿರೀಕ್ಷಿಡಿಸಲಾಗಿದೆ.
ರಿಲಯನ್ಸ್ ಜಿಯೋ (Reliance Jio) ಪ್ರಸ್ತುತ ಪ್ರೀಮಿಯಂ ಯೋಜನೆಯನ್ನು ಮಾಸಿಕ ರೂ 99 ಅಥವಾ ವಾರ್ಷಿಕ ರೂ 999 ದರದಲ್ಲಿ ನೀಡುವುದಾಗಿ ವರದಿಗಳು ಹರಿದಾಡುತ್ತಿವೆ. ರಿಲಯನ್ಸ್ ಜಿಯೋ ಈ ಹೊಸ ಯೋಜನೆಗಳಲ್ಲಿ ಬಳಕೆದಾರರಿಗೆ ಜಾಹೀರಾತು ಮುಕ್ತ ಯೋಜನೆಯನ್ನು ನೀಡುವುದಾಗಿ ಹೇಳಿದೆ.
https://www.jio.com/ಈ ರಿಲಯನ್ಸ್ ಜಿಯೋ (Reliance Jio) ಈ ಯೋಜನೆಗಳನ್ನು ಪ್ರಾರಂಭಿಸುವುವೂ ನಿರೀಕ್ಷೆ
ರಿಲಯನ್ಸ್ ಜಿಯೋ (Reliance Jio) ಈಗಾಗಲೇ ಲಭ್ಯವಿರುವ 99 ರೂಗಳ ಯೋಜನೆಯನ್ನು ಮಾಸಿಕ ಯೋಜನೆಯಿಂದ ಪ್ರೀಮಿಯಂ ಯೋಜನೆಯನ್ನು ಪ್ರಾರಂಭಿಸಬಹುದು ಎಂದು ಹೇಳಲಾಗುತ್ತಿದೆ. ಇದಲ್ಲದೆ 84 ದಿನಗಳ ಯೋಜನೆಯನ್ನು ಸಹ ಪ್ರಾರಂಭಿಸಬಹುದು. ಪ್ರಸ್ತುತ ಜಿಯೋ ಸಿಮ್ ಕಾರ್ಡ್ ಬಳಸುತ್ತಿರುವ ಬಳಕೆದಾರರು ಉಚಿತವಾಗಿಯೇ JioCinema ಮೂಲಕ IPL 2024 ಪಂದ್ಯಗಳನ್ನು ವೀಕ್ಷಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ IPL ಕ್ರಿಕೆಟ್ ಅಭಿಮಾನಿಗಳು ಚಿಂತಿಸಬೇಕಾಗಿಲ್ಲ ಯಾಕೆಂದರೆ ಜಿಯೋ ಹೊಸ ಯೋಜನೆಯಲ್ಲಿ ಈ ಉಚಿತ ಐಪಿಎಲ್ ಪ್ರಸಾರವನ್ನು ನಿಲ್ಲಿಸುತ್ತಿಲ್ಲ. ಈ ಯೋಜನೆಯಲ್ಲಿ ಬಳಕೆದಾರರು ಒಂದೇ ಸಮಯದಲ್ಲಿ 4 ಡಿವೈಸ್‌ಗಳಲ್ಲಿ ಈ ಅಪ್ಲಿಕೇಶನ್ ಅನ್ನು ಬಳಸಬಹುದು.
ಜಿಯೋ ಬಳಕೆದಾರರು JioCinema ಅಪ್ಲಿಕೇಶನ್ ಬಳಸುವುದು ಹೇಗೆ?
ಈ ಜಿಯೋ ಸಿನಿಮಾ (Jio Cinima) ಸೇವೆ ಕೇವಲ ರಿಲಯನ್ಸ್ ಜಿಯೋ (Reliance Jio) ಬಳಕೆದಾರರಿಗೆ ಮಾತ್ರ ಲಭ್ಯವಿದ್ದು ಇದನ್ನು ಬಳಸು ಮೊದಲಿಗೆ ನೀವು Google Play Store ಅಥವಾ App Store ಭೇಟಿ ನೀಡಬೇಕು.
ಇದರ ನಂತರ ಸರ್ಚ್ ಮೇಲೆ JioCinema ಎಂದು ಹುಡುಕಿ ಅದನ್ನು ಡೌನ್‌ಲೋಡ್ ಮಾಡಿ ತೆರೆಯಿರಿ.
ನಂತರ ನಿಮ್ಮ ಮೊಬೈಲ್ ಸಂಖ್ಯೆಯನ್ನು ಕೇಳಲಾಗುತ್ತದೆ ಈಗ ಇಲ್ಲಿ ನಿಮ್ಮ ರಿಲಯನ್ಸ್ ಜಿಯೋ (Reliance Jio) ಮೊಬೈಲ್ ನಂಬರ್ ಅನ್ನು ಹಾಕಿ ಮುಂದೆ ಸಾಗಿ.
ಇದರ ನಂತರ ನಿಮ್ಮ ರಿಲಯನ್ಸ್ ಜಿಯೋ (Reliance Jio) ಮೊಬೈಲ್ ಸಂಖ್ಯೆಗೆ OTT ಕಳುಹಿಸಲಾಗುತ್ತದೆ ಅದನ್ನು ಇಲ್ಲಿ ನಮೂದಿಸುವ ಮೂಲಕ ನೀವು ಸಂಖ್ಯೆಯನ್ನು ಪರಿಶೀಲಿಸಬೇಕಾಗುತ್ತದೆ.
ಇದರ ನಂತರ ನೀವು ಉಚಿತವಾಗಿಯೇ JioCinema ಅಪ್ಲಿಕೇಶನ್ ಅನ್ನು ಬಳಸಲು ಸಾಧ್ಯವಾಗುತ್ತದೆ. ಈ ಮಾಹಿತಿ ತಿಳಿದಿಲ್ಲದೆ ರಿಲಯನ್ಸ್ ಜಿಯೋ (Reliance Jio) ಮೊಬೈಲ್ ಸಂಖ್ಯೆ ಬಳಸುತ್ತಿರುವ ನಿಮ್ಮ ಸ್ನೇಹಿತರು ಅಥವಾ ಕುಟುಂಬದ ಸದಸ್ಯರೊಂದಿಗೆ ಶೇರ್ ಮಾಡಿಕೊಳ್ಳಿ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile