Reliance Jio, Airtel ಮತ್ತು Vi ಮೊಬೈಲ್ ಯೋಜನಗಳ ಬೆಲೆಗಳಲ್ಲಿ ಭಾರಿ ಏರಿಕೆ! ಈಗ ಯಾವ ಪ್ಲಾನ್ ಬೆಸ್ಟ್?

Reliance Jio, Airtel ಮತ್ತು Vi ಮೊಬೈಲ್ ಯೋಜನಗಳ ಬೆಲೆಗಳಲ್ಲಿ ಭಾರಿ ಏರಿಕೆ! ಈಗ ಯಾವ ಪ್ಲಾನ್ ಬೆಸ್ಟ್?
HIGHLIGHTS

ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಎರಡರಲ್ಲೂ ತಮ್ಮ ದುಬಾರಿ ರೀಚಾರ್ಜ್‌ಗಳ ಬೆಲೆಗಳನ್ನು ಹೆಚ್ಚಿಸಿವೆ.

ಹೊಸ ಬದಲಾವಣೆಗಳನ್ನು ಅದೇ ರೀಚಾರ್ಜ್ ಯೋಜನೆಗಳು 25% ಪ್ರತಿಶತದಷ್ಟು ದುಬಾರಿಯಾಗಿದೆ.

ಟೆಲಿಕಾಂ ಕಂಪನಿಗಳು 3ನೇ ಜುಲೈ 2024 ರಿಂದ ಈ ಮೊಬೈಲ್ ಯೋಜನಗಳ ಬೆಲೆಗಳಲ್ಲಿ ಭಾರಿ ಏರಿಕೆಯಾಗಿದೆ.

ಭಾರತದಲ್ಲಿ ಅತಿ ಜನಪ್ರಿಯ ಟೆಲಿಕಾಂ ಕಂಪನಿಗಳು ರಿಲಯನ್ಸ್ ಜಿಯೋ (Reliance Jio), ಏರ್‌ಟೆಲ್ (Airtel) ಮತ್ತು ವೊಡಾಫೋನ್ ಐಡಿಯಾ (Vodafone idea) ಕೂಡ ತನ್ನ ಸುಂಕಗಳನ್ನು ದುಬಾರಿಗೊಳಿಸಿದೆ. ಈ ಎಲ್ಲಾ ಮೂರು ದೊಡ್ಡ ಟೆಲಿಕಾಂ ಕಂಪನಿಗಳು ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಎರಡರಲ್ಲೂ ತಮ್ಮ ದುಬಾರಿ ರೀಚಾರ್ಜ್‌ಗಳ ಬೆಲೆಗಳನ್ನು ಹೆಚ್ಚಿಸಿವೆ. ಈ ಟೆಲಿಕಾಂ ಕಂಪನಿಗಳು ತಮ್ಮ ಹಳೆಯ ಯೋಜನೆಯಲ್ಲೇ ಹೊಸ ಬದಲಾವಣೆಗಳನ್ನು ಅದೇ ರೀಚಾರ್ಜ್ ಯೋಜನೆಗಳು 25% ಪ್ರತಿಶತದಷ್ಟು ದುಬಾರಿಯಾಗಿದ್ದು 3ನೇ ಜುಲೈ 2024 ರಿಂದ ಜಾರಿಗೆ ಬರಲಿದೆ.

Also Read: iQOO Z9 Lite ಭಾರತದಲ್ಲಿ ಬಿಡುಗಡೆಗೆ ಡೇಟ್ ಫಿಕ್ಸ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?

ಫೋನ್ ಸಂಖ್ಯೆಯನ್ನು ಸಕ್ರಿಯವಾಗಿರಿಸಲು ಮತ್ತು ಕರೆಗಳನ್ನು ಮಾಡಲು ನೀವು ಕನಿಷ್ಟ 199 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಮೊದಲಿನಂತೆ ಎಲ್ಲಾ ಮೂರು ಕಂಪನಿಗಳು ವಿಭಿನ್ನ ಕಟ್ಟುಗಳ ಯೋಜನೆಗಳನ್ನು ನೀಡುತ್ತವೆ. Jio, Airtel ಮತ್ತು Vi ನ ಎಲ್ಲಾ ಯೋಜನೆಗಳು ಅನಿಯಮಿತ ಕರೆಯೊಂದಿಗೆ ಡೇಟಾ ಪ್ರಯೋಜನಗಳನ್ನು ನೀಡುತ್ತವೆ. ಇಂದು ನಾವು ನಿಮಗೆ ರಿಲಯನ್ಸ್ ಜಿಯೋ (Reliance Jio) ಏರ್‌ಟೆಲ್ (Airtel) ಮತ್ತು ವೊಡಾಫೋನ್ ಐಡಿಯಾ (Vodafone idea) ಅತ್ಯಂತ ಕೈಗೆಟುಕುವ ಹೊಸ ಪ್ರಿಪೇಯ್ಡ್ ಯೋಜನೆಗಳ ಬಗ್ಗೆ ಹೇಳುತ್ತಿದ್ದೇವೆ.

Reliance Jio Monthly prepaid recharge plan price hike in India
Reliance Jio Monthly prepaid recharge plan price hike in India

ರಿಲಯನ್ಸ್ ಜಿಯೋ (Reliance Jio) ರೂ 199 ಪ್ರಿಪೇಯ್ಡ್ ಯೋಜನೆ:

ಜಿಯೋದ ಅತ್ಯಂತ ಕೈಗೆಟುಕುವ ಮಾಸಿಕ ರೀಚಾರ್ಜ್ ಯೋಜನೆಯ ಬೆಲೆ ಈಗ 155 ರಿಂದ 199 ರೂಗಳಾಗಿದೆ. ಈ ಯೋಜನೆಯಲ್ಲಿ ಗ್ರಾಹಕರು ಅನಿಯಮಿತ ಧ್ವನಿ ಕರೆ, 300SMS ಮತ್ತು 2GB 4G ಡೇಟಾವನ್ನು ಪಡೆಯುತ್ತಾರೆ. ಈ ಯೋಜನೆಯು ವಿಶೇಷವಾಗಿ ಹೆಚ್ಚಿನ ವೇಗದ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ಬಳಸುವ ಮತ್ತು ಹೆಚ್ಚಿನ ಮೊಬೈಲ್ ಡೇಟಾ ಅಗತ್ಯವಿಲ್ಲದ ಗ್ರಾಹಕರಿಗೆ ಲಭ್ಯವಿರುತ್ತದೆ.

ಏರ್‌ಟೆಲ್ ರೂ 199 ಪ್ರಿಪೇಯ್ಡ್ ಯೋಜನೆ:

ಏರ್‌ಟೆಲ್ ತನ್ನ ಅಗ್ಗದ ಮಾಸಿಕ ಪ್ರಿಪೇಯ್ಡ್ ಪ್ಲಾನ್ ರೂ 179 ರ ಬೆಲೆಯನ್ನು ರೂ 199 ಕ್ಕೆ ಹೆಚ್ಚಿಸಿದೆ. ಈ ಪ್ಲಾನ್‌ನಲ್ಲಿಯೂ ಜಿಯೋದಷ್ಟೇ ಪ್ರಯೋಜನಗಳು ಲಭ್ಯವಿವೆ. ಏರ್‌ಟೆಲ್‌ನ ಈ ರೀಚಾರ್ಜ್ ಪ್ಯಾಕ್‌ನಲ್ಲಿ ಅನಿಯಮಿತ ಧ್ವನಿ ಕರೆ, 2GB 4G ಡೇಟಾ ಮತ್ತು 100SMS ಪ್ರತಿದಿನ ಲಭ್ಯವಿದೆ. ಕರೆಗಳು ಮತ್ತು ಸಂದೇಶಗಳಿಗಾಗಿ ಮಾತ್ರ ಸಿಮ್ ಕಾರ್ಡ್ ಬಳಸುವ ಜನರಿಗೆ ಈ ಯೋಜನೆ ಸೂಕ್ತವಾಗಿದೆ.

ವೊಡಾಫೋನ್ ಐಡಿಯಾ (Vi) ರೂ 199 ಪ್ರಿಪೇಯ್ಡ್ ಯೋಜನೆ

ವೊಡಾಫೋನ್ ಐಡಿಯಾ (Vi) ಅತ್ಯಂತ ಕೈಗೆಟುಕುವ ಮಾಸಿಕ ರೀಚಾರ್ಜ್ ಯೋಜನೆಯು 199 ರೂಗಳಾಗಿದೆ. ಜಿಯೋ ಮತ್ತು ಏರ್‌ಟೆಲ್‌ನಂತೆ ವೊಡಾಫೋನ್ ಐಡಿಯಾ ಕೂಡ 28 ದಿನಗಳವರೆಗೆ 2GB ಡೇಟಾವನ್ನು ನೀಡುತ್ತದೆ. ಈ ಪ್ಯಾಕ್‌ನಲ್ಲಿ ಗ್ರಾಹಕರಿಗೆ ಅನಿಯಮಿತ ಕರೆ ಮತ್ತು 300SMS ನೀಡಲಾಗುತ್ತದೆ. Vi ಬಳಕೆದಾರರಿಗೆ ಜುಲೈ 4 ರಿಂದ ಹೊಸ ರೀಚಾರ್ಜ್ ಲಭ್ಯವಿರುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo