Jio AirFiber: ಗಣೇಶ ಚತುರ್ಥಿಯಂದೇ ಜಿಯೋ ಏರ್ ಫೈಬರ್ ಬಿಡುಗಡೆ! ಬೆಲೆ ಮತ್ತು ಸ್ಪೀಡ್ ಎಷ್ಟು?

Jio AirFiber: ಗಣೇಶ ಚತುರ್ಥಿಯಂದೇ ಜಿಯೋ ಏರ್ ಫೈಬರ್ ಬಿಡುಗಡೆ! ಬೆಲೆ ಮತ್ತು ಸ್ಪೀಡ್ ಎಷ್ಟು?
HIGHLIGHTS

ವಾರ್ಷಿಕ ಸಾಮಾನ್ಯ ಸಭೆಯಲ್ಲಿ (AGM 2023) ಮುಖೇಶ್ ಅಂಬಾನಿಯವರು (Mukesh Ambani) ಮುಂಬರಲಿರುವ ಡಿಜಿಟಲ್ ಸೇವೆಗಳ ಕುರಿತು ಹಲವಾರು ಪ್ರಮುಖ ಅಪ್ಡೇಟ್ ನೀಡಿದ್ದಾರೆ

ಜಿಯೋ ಏರ್‌ಫೈಬರ್ ಅನ್ನು 19ನೇ ಸೆಪ್ಟೆಂಬರ್ 2023 ರಂದು ಗಣೇಶ ಚತುರ್ಥಿಯ ಸಂದರ್ಭದಲ್ಲಿ ಪ್ರಾರಂಭಿಸಲಾಗುವುದು

ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಫೈಬರ್ ತಾರುಗಳಂತೆ ಈ ಹೊಸ ಏರ್ ಫೈಬರ್‌ನಲ್ಲಿ (AirFiber) ಆಪ್ಟಿಕಲ್ ಫೈಬರ್ ಅಗತ್ಯವಿರುವುದಿಲ್ಲ.

ಈ ವರ್ಷದ ರಿಲಯನ್ಸ್ ಕಂಪನಿ ಅತಿದೊಡ್ಡ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (AGM 2023) ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ಶ್ರೀ ಮುಖೇಶ್ ಅಂಬಾನಿಯವರು (Mukesh Ambani) ಮುಂಬರಲಿರುವ ಡಿಜಿಟಲ್ ಸೇವೆಗಳ ಕುರಿತು ಹಲವಾರು ಪ್ರಮುಖ ಅಪ್ಡೇಟ್ ಹೈಲೈಟ್ಗಳನ್ನು ನೀಡಿದ್ದಾರೆ. ಅದರಲ್ಲಿ ಜಿಯೋದ 5G ಗ್ರಾಹಕರು ಅತಿ ಹೆಚ್ಚಾಗಿ ಕಾಯುತ್ತಿದ್ದ ಸೇವೆ ಅಂದ್ರೆ ಅದು ಜಿಯೋ ಏರ್ ಫೈಬರ್ (Jio AirFiber). ಮುಂದೆ ಇದರ ಬೆಲೆ ಸ್ಪೀಡ್ ಮತ್ತಷ್ಟು ವಿವರಗಳ ಕುರಿತು ಲೇಟೆಸ್ಟ್ ಅಪ್‌ಡೇಟ್‌ಗಳನೊಮ್ಮೆ ತಿಳಿಯಿರಿ. 

ಗಣೇಶ ಚತುರ್ಥಿಯಂದೇ ಜಿಯೋ ಏರ್ ಫೈಬರ್ ಬಿಡುಗಡೆ!

ಜಿಯೋ ಏರ್ ಫೈಬರ್ 5G ನೆಟ್ವರ್ಕ್ ಮತ್ತು ಅತ್ಯಾಧುನಿಕ ವೈರ್ಲೆಸ್ ತಂತ್ರಜ್ಞಾನವನ್ನು ಬಳಸಿಕೊಂಡು ಜಿಯೋ ಏರ್‌ಫೈಬರ್ ಮನೆಗಳು ಮತ್ತು ಆಫೀಸ್‌ಗಳಿಗೆ ವೈರ್‌ಲೆಸ್‌ ಬ್ರಾಡ್‌ಬ್ಯಾಂಡ್‌ ಸೇವೆಯನ್ನು ಒದಗಿಸಲಿದೆ. ಮುಖೇಶ್ ಅಂಬಾನಿ (Mukesh Ambani) ಪ್ರಕಾರ ಜಿಯೋ ಈಗಾಗಲೇ 5G ಯೊಂದಿಗೆ 96% ಜನಗಣತಿಯ ಪಟ್ಟಣಗಳನ್ನು ತಲುಪಿದೆ. ಇದನ್ನು ಸರಳೀಕರಿಸಲು Jio ನಿಜವಾಗಿಯೂ ಈ ಪಟ್ಟಣಗಳ ಪ್ರತಿಯೊಂದು ಮೂಲೆಯನ್ನು ಆವರಿಸಿಲ್ಲ ಆದರೆ ಈ ಪಟ್ಟಣಗಳ ಒಂದು ಅಥವಾ ಹೆಚ್ಚಿನ ಭಾಗಗಳಲ್ಲಿ 5G ಅನ್ನು ಪ್ರಾರಂಭಿಸಿದೆ.

Jio AirFiber Launch Date in India 2023 - Digit Kannada

ರಿಲಯನ್ಸ್ ಜಿಯೋ 5G ಗ್ರಾಹಕರು ಮತ್ತು AirFiber ಲಾಂಚ್!

ರಿಲಯನ್ಸ್ ಜಿಯೋ ದೇಶದಲ್ಲಿ ಸುಮಾರು 5 ಕೋಟಿಗೂ ಅಧಿಕ 5G ಗ್ರಾಹಕರನ್ನು ಹೊಂದಿದೆ. ಟೆಲಿಕಾಂ ಕಂಪನಿ ಈ ಎಲ್ಲಾ ಬಳಕೆದಾರರಿಗೆ ಉಚಿತ 5G ನೀಡುತ್ತಿದೆ. ಕಂಪನಿಯು ಹೆಚ್ಚಿನ ARPU ಪೋಸ್ಟ್‌ಪೇಯ್ಡ್ ಗ್ರಾಹಕರು ಜಿಯೋವನ್ನು ತಮ್ಮ ಆದ್ಯತೆಯ ನೆಟ್‌ವರ್ಕ್ ಆಗಿ ಆಯ್ಕೆ ಮಾಡುವ ಪ್ರವೃತ್ತಿಯನ್ನು ನೋಡುತ್ತಿದೆ. ಇದಲ್ಲದೆ ಜಿಯೋದ 5G ರೋಲ್‌ಔಟ್ ಕಂಪನಿಯ ಸ್ವಂತ 100% ಆಂತರಿಕವಾಗಿ ಅಭಿವೃದ್ಧಿಪಡಿಸಿದ 5G ಸ್ಟಾಕ್‌ನಿಂದ ನಡೆಸಲ್ಪಡುತ್ತದೆ. ರಿಲಯನ್ಸ್ ಅಂತಿಮವಾಗಿ ಗ್ರಾಹಕರಿಗೆ ಉತ್ಪನ್ನ ಯಾವಾಗ ಲಭ್ಯವಾಗಲಿದೆ ಎಂದು ಘೋಷಿಸಿದೆ. 

ಜಿಯೋ ಏರ್‌ಫೈಬರ್ ಬೆಲೆ ಮತ್ತು ಬಿಡುಗಡೆ ಯಾವಾಗ? 

ಜಿಯೋ ಏರ್‌ಫೈಬರ್ ಅನ್ನು 19ನೇ ಸೆಪ್ಟೆಂಬರ್ 2023 ರಂದು ಗಣೇಶ ಚತುರ್ಥಿಯ ಸಂದರ್ಭದಲ್ಲಿ ಪ್ರಾರಂಭಿಸಲಾಗುವುದು. ಜಿಯೋ ಏರ್‌ಫೈಬರ್ ಆಗಮನದೊಂದಿಗೆ ಕಂಪನಿಯು 200 ಮಿಲಿಯನ್ ಹೆಚ್ಚು-ಪಾವತಿಸುವ ಮನೆಗಳು ಮತ್ತು ಆವರಣಗಳ ವಿಳಾಸ ಮಾಡಬಹುದಾದ ಮಾರುಕಟ್ಟೆಯನ್ನು ನೋಡುತ್ತದೆ. ಜಿಯೋ ತನ್ನ ಏರ್‌ಫೈಬರ್ ಯೋಜನೆಯನ್ನು 20% ಪ್ರತಿಶತ ಕಡಿಮೆ ಬೆಲೆಗೆ ಪ್ರಾರಂಭಿಸಬಹುದು. ಅಂತಹ ಪರಿಸ್ಥಿತಿಯಲ್ಲಿ ಅದರ ಮಾಸಿಕ ವೆಚ್ಚ ಸುಮಾರು 640 ರೂಗಗಳಿಂದ ಶುರುವಾಗಬಹುದು. ಅಲ್ಲದೆ ಅರ್ಧ ವಾರ್ಷಿಕ ಯೋಜನೆಯನ್ನು 3650 ರೂಗಳಿಂದ  ಪ್ರಾರಂಭಿಸಬಹುದು. ಅಲ್ಲದೆ JioCinema ಸೇರಿದಂತೆ ಅನೇಕ ಅಪ್ಲಿಕೇಶನ್‌ಗಳ ಉಚಿತ ಚಂದಾದಾರಿಕೆಯನ್ನು ನೀಡಬಹುದು. 

ಜಿಯೋ ಏರ್‌ಫೈಬರ್ ಸ್ಪೀಡ್ ಎಷ್ಟು? 

ನಿಮಗೊತ್ತಾ ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಫೈಬರ್ ತಾರುಗಳಂತೆ ಈ ಹೊಸ ಏರ್ ಫೈಬರ್‌ನಲ್ಲಿ ಆಪ್ಟಿಕಲ್ ಫೈಬರ್ ಅಗತ್ಯವಿರುವುದಿಲ್ಲ. ಇದು 5G ಜಿಯೋ Wi-Fi ಸೇವೆಯಾಗಿದೆ. ಇದು 5G ನೆಟ್‌ವರ್ಕ್ ರಿಸೀವರ್ ಅನ್ನು ಹೊಂದಿದೆ. ಅದಕ್ಕೆ ವೈ-ಫೈ ಸೆಟಪ್ ಸಂಪರ್ಕಗೊಳ್ಳುತ್ತದೆ. ಇದು 1Gbps ವರೆಗೆ ಹೆಚ್ಚಿನ ವೇಗದ ಇಂಟರ್ನೆಟ್ ಸೇವೆಯನ್ನು ಪಡೆಯುವ ನಿರೀಕ್ಷೆಯಿದೆ. ಏಕಂದರೆ ಈ ಲೇಖನದ ಸಮಯದಲ್ಲಿ ದೇಶದ ರಾಜಧಾನಿ ದೆಹಲಿಯಲ್ಲಿ ಜಿಯೋ ಅಪ್ಲೋಡಿಂಗ್ ಸ್ಪೀಡ್ ಕೇವಲ 5Mbps – 11Mbps  ಆಗಿದ್ದು ಇದರ ಡೌನ್‌ಲೋಡ್ ಸ್ಪೀಡ್ ಮಾತ್ರ 350Mbps-500Mbps ಹೊಂದಿದೆ. ಹಾಗಾಗಿ ಜಿಯೋ ಏರ್‌ಫೈಬರ್‌ನ ಪೂರ್ತಿ 1Gbps ಸ್ಪೀಡ್ ನಿಜಕ್ಕೂ ಹೆಚ್ಚಿನ ವೇಗವನ್ನು ನೀಡಲಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo