Jio Anniversary Offer 2024: ಜಿಯೋ ಗ್ರಾಹಕರು ಈ ಆಯ್ದ ರೀಚಾರ್ಜ್‌ ಮಾಡಿಕೊಂಡ್ರೆ ಬರೋಬ್ಬರಿ 700 ರೂಗಳ ಪ್ರಯೋಜನ ಉಚಿತ!

Updated on 05-Sep-2024
HIGHLIGHTS

8ನೇ ವಾರ್ಷಿಕೋತ್ಸವದ ಅಡಿಯಲ್ಲಿ ತನ್ನ ಬಳಕೆದಾರರಿಗೆ ಜಿಯೋ ವಾರ್ಷಿಕೋತ್ಸವದ ಆಫರ್ (Jio Anniversary Offer 2024) ಅನ್ನು ನೀಡುತ್ತಿದೆ.

Jio Anniversary Offer 2024 ಅಡಿಯಲ್ಲಿ ರೂ. 899, ರೂ. 999 ಮತ್ತು ರೂ. 3599 ವಾರ್ಷಿಕ ಪ್ಲಾನ್ ಬಿಡುಗಡೆಗೊಳಿಸಿದೆ.

5ನೇ ಸೆಪ್ಟೆಂಬರ್ 2024 ರಿಂದ 10ನೇ ಸೆಪ್ಟೆಂಬರ್ 2024 ನಡುವೆ ರೀಚಾರ್ಜ್ ಮಾಡಿಕೊಂಡರೆ ಬರೋಬ್ಬರಿ 700 ರೂಗಳ ಉಚಿತ ಪ್ರಯೋಜನಗಳನ್ನು ಪಡೆಯಬಹುದು.

ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋ (Reliance Jio) ಇಂದು ತನ್ನ 8ನೇ ವಾರ್ಷಿಕೋತ್ಸವದ ಅಡಿಯಲ್ಲಿ ತನ್ನ ಬಳಕೆದಾರರಿಗೆ ಜಿಯೋ ವಾರ್ಷಿಕೋತ್ಸವದ ಆಫರ್ (Jio Anniversary Offer 2024) ಅನ್ನು ನೀಡುತ್ತಿದೆ. ಇದನ್ನು ಪ್ರಸ್ತುತ ಆಯ್ದ ರೀಚಾರ್ಜ್ ಪ್ಲಾನ್ ಗಳ ಮೇಲೆ ಈ ವಿಶೇಷ ಕೊಡುಗೆಯನ್ನು ಪಡೆಯಬಹುದು. ರೂ. 899 ಮತ್ತು ರೂ. 999ರ ತ್ರೈಮಾಸಿಕ ಪ್ಲಾನ್ ಗಳು ಮತ್ತು ರೂ. 3599 ವಾರ್ಷಿಕ ಪ್ಲಾನ್ ಜೊತೆಗೆ ಜಿಯೋ ಬಳಕೆದಾರರಾಗಿದ್ದರೆ ಇಂದಿನಿಂದ ಅಂದರೆ 5ನೇ ಸೆಪ್ಟೆಂಬರ್ 2024 ರಿಂದ 10ನೇ ಸೆಪ್ಟೆಂಬರ್ 2024 ನಡುವೆ ರೀಚಾರ್ಜ್ ಮಾಡಿಕೊಂಡರೆ ಬರೋಬ್ಬರಿ 700 ರೂಗಳ ಉಚಿತ ಪ್ರಯೋಜನಗಳನ್ನು ಪಡೆಯಬಹುದು.

Also Read: Tecno Pova 6 Neo 5G ಸ್ಮಾರ್ಟ್ಫೋನ್ AI ಫೀಚರ್‌ಗಳೊಂದಿಗೆ ಅತಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ

ಜಿಯೋ ವಾರ್ಷಿಕೋತ್ಸವ ಆಫರ್ (Jio Anniversary Offer) ಪ್ರಯೋಜನಗಳು:

ಈ ಜಿಯೋ ವಾರ್ಷಿಕೋತ್ಸವ ಆಫರ್ ರೂ. 175 ಮೌಲ್ಯದೊಂದಿಗೆ ಬರುವ 10 OTT ಅಪ್ಲಿಕೇಷನ್‌ಗಳಿಗೆ ಚಂದಾದಾರಿಕೆಯೊಂದಿಗೆ 10GB ಡೇಟಾ ಪ್ಯಾಕ್ ಅನ್ನು ಒಳಗೊಂಡಿರುತ್ತದೆ. ಇದರ ವ್ಯಾಲಿಡಿಟಿ 28 ದಿನಗಳಾಗಿರುತ್ತದೆ. ಅಲ್ಲದೇ ಈ ಯೋಜನೆಗಳಲ್ಲಿ 3 ತಿಂಗಳ Zomato ಗೋಲ್ಡ್ ಸದಸ್ಯತ್ವವನ್ನು ಸಹ ಉಚಿತವಾಗಿ ನೀಡಲಾಗುವುದು. ರೂ. 2999 ಕ್ಕಿಂತ ಹೆಚ್ಚಿನ ಖರೀದಿಗಳಲ್ಲಿ ಗ್ರಾಹಕರು ರೂ. 500 ಮೌಲ್ಯದ ಅಜಿಯೋ ವೋಚರ್‌ಗಳನ್ನು ಸಹ ಪಡೆಯುತ್ತಾರೆ. ರಿಲಯನ್ಸ್ ಜಿಯೋ (Reliance Jio) ವಾರ್ಷಿಕೋತ್ಸವ ಆಫರ್ ಅನ್ನು ಕಂಪನಿ 5ನೇ ಸೆಪ್ಟೆಂಬರ್ ರಿಂದ 10ನೇ ತಾರೀಕಿನ ಮಧ್ಯೆ ರೀಚಾರ್ಜ್ ಮಾಡುವ ಚಂದಾದಾರರಿಗೆ ಮಾತ್ರ ಈ ಆಫರ್ ಅನ್ನು ನೀಡಲಾಗುತ್ತಿದೆ.

Reliance Jio Anniversary Offer announced 2024

ರಿಲಯನ್ಸ್ ಜಿಯೋ 899 ರೂ. ರೀಚಾರ್ಜ್ ಯೋಜನೆ:

ಈ ರಿಲಯನ್ಸ್ ಜಿಯೋ ಯೋಜನೆಯು 3 ತಿಂಗಳವರೆಗೆ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಅನಿಯಮಿತ ಕರೆಗಳು ಮತ್ತು 100 SMS ಪ್ರತಿದಿನ ಲಭ್ಯವಿದೆ. ಇದು ಪ್ರತಿದಿನ 2GB ಡೇಟಾವನ್ನು ಒದಗಿಸುತ್ತದೆ.ಈ ಯೋಜನೆಯೊಂದಿಗೆ ನೀವು 20GB ಹೆಚ್ಚುವರಿ ಡೇಟಾ ಮತ್ತು ಅನಿಯಮಿತ 5G ಡೇಟಾ ಒದಗಿಸುತ್ತದೆ.

ರಿಲಯನ್ಸ್ ಜಿಯೋ 999 ರೂ. ರೀಚಾರ್ಜ್ ಯೋಜನೆ:

ರಿಲಯನ್ಸ್ ಜಿಯೋ 999 ರೂ. ಪ್ಲಾನ್ 98 ದಿನಗಳವರೆಗೆ ಇರುತ್ತದೆ. ಇದರಲ್ಲಿ ಅನಿಯಮಿತ ಕರೆಗಳು ಮತ್ತು 100 SMS ಪ್ರತಿದಿನ ಲಭ್ಯವಿದೆ. ಇದು ಪ್ರತಿದಿನ 2GB ಡೇಟಾವನ್ನು ಒದಗಿಸುತ್ತದೆ.ಇದು 98 ದಿನಗಳವರೆಗೆ ಮಾನ್ಯವಾಗಿರುತ್ತದೆ. ಈ ಯೋಜನೆಯಲ್ಲಿಯೂ ಅನಿಯಮಿತ 5G ಡೇಟಾ ಒದಗಿಸುತ್ತದೆ.

Reliance Jio Anniversary Offer announced 2024

ರಿಲಯನ್ಸ್ ಜಿಯೋ 3,599 ರೂ. ರೀಚಾರ್ಜ್ ಯೋಜನೆ:

ರಿಲಯನ್ಸ್ ಜಿಯೋ 3,599 ರೂ ಪ್ಲಾನ್ 356 ದಿನಗಳವರೆಗೆ ಇರುತ್ತದೆ. ಇದರಲ್ಲಿ ಅನಿಯಮಿತ ಕರೆಗಳು ಮತ್ತು 100 SMS ಪ್ರತಿದಿನ ಲಭ್ಯವಿದೆ. ಇದು ಪ್ರತಿದಿನ 2.5GB ಡೇಟಾವನ್ನು ಒದಗಿಸುತ್ತದೆ. ಈ ಯೋಜನೆಯಲ್ಲಿಯೂ ಅನಿಯಮಿತ 5G ಡೇಟಾ ಒದಗಿಸುತ್ತದೆ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :