Jio 5G Plan: ನಿಮಗೆ ಅತಿ ಕಡಿಮೆ ಬೆಲೆಗೆ ಸಾಕಷ್ಟು ಡೇಟಾ ಮತ್ತು ಅನಿಯಮಿತ ಕರೆಯೊಂದಿಗೆ ದೀರ್ಘಾವಧಿಯ ಪ್ರಿಪೇಯ್ಡ್ ಯೋಜನೆಯನ್ನು (Recharge Plan) ಬಯಸುವವರಿಗೆ ರಿಲಯನ್ಸ್ ಜಿಯೋ (Reliance Jio) ನೀಡುತ್ತಿರುವ ಈ 899 ರೂಗಳ ರಿಚಾರ್ಜ್ ಯೋಜನೆ ನಿಮಗೆ ಅತ್ಯುತ್ತಮ ಆಯ್ಕೆ ಅಂದ್ರೆ ತಪ್ಪಿಲ್ಲ. ಯಾಕೆಂದರೆ ನಿಮಗೆ ಹೆಚ್ಚುವರಿಯ 5G ಡೇಟಾ, ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಅನೇಕ ಪ್ರಯೋಜನಗಳನ್ನು ಸುಮಾರು 3 ತಿಂಗಳವರೆಗೆ ಅನುಭವಿಸಲು ವಿಶೇಷವಾಗಿ ಪರಿಚಯಿಸಲಾಗಿದೆ. ಈ ಯೋಜನೆಯ ಬೆಲೆಯೊಂದಿಗೆ ನೀವು ಪಡೆಯುವ ಪ್ರಯೋಜನಗಳೇನು ಎಲ್ಲವನ್ನು ಈ ಕೆಳಗೆ ಹಂತ ಹಂತವಾಗಿ ತಿಳಿಯಿರಿ.
ಪ್ರಸ್ತುತ ರಿಲಯನ್ಸ್ ಜಿಯೋದ ಈ 899 ರೂಗಳ ರೀಚಾರ್ಜ್ ಯೋಜನೆಯೊಂದಿಗೆ ಕೆಲವು ಹೆಚ್ಚುವರಿ ಪ್ರಯೋಜನಗಳು ಸಹ ನೀಡುತ್ತಿದ್ದು ಬೆಸ್ಟ್ ರಿಚಾರ್ಜ್ ಪ್ಲಾನ್ ಹೆಸರಿಗೆ ಮುಂದಾಗಿದೆ. ಇದರಲ್ಲಿ ನಿಮಗೆ ನೀವು ಚಲನಚಿತ್ರಗಳು ಮತ್ತು ವೆಬ್ ಸ್ಟೋರಿಗಳನ್ನು ವೀಕ್ಷಿಸಲು ಬಯಸಿದರೆ ಈ ಯೋಜನೆಯಲ್ಲಿ ನಿಮಗೆ ಜಿಯೋ ಸಿನಿಮಾದ ಉಚಿತ ಚಂದಾದಾರಿಕೆಯನ್ನು ನೀಡಲಾಗುತ್ತದೆ. ಇದಲ್ಲದೆ ನೀವು ಜಿಯೋ ಟಿವಿ ಮತ್ತು ಜಿಯೋ ಕ್ಲೌಡ್‌ನ ಉಚಿತ ಚಂದಾದಾರಿಕೆಯನ್ನು ಸಹ ಪಡೆಯುತ್ತೀರಿ.
ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಅತ್ಯುತ್ತಮ 5G ಯೋಜನೆಯೊಂದಿಗೆ ರೂ 899 ಯೋಜನೆಯನ್ನು ಪರಿಚಯಿಸಿದೆ. ನೀವು ಸಾಕಷ್ಟು ಡೇಟಾವನ್ನು ಬಳಸಿದರೆ ಈ ರೀಚಾರ್ಜ್ ಯೋಜನೆಯನ್ನು ನೀವು ತುಂಬಾ ಇಷ್ಟಪಡುತ್ತೀರಿ. ಇದರಲ್ಲಿ ಪ್ರತಿದಿನ 2GB ಡೇಟಾವನ್ನು ನೀಡಲಾಗುತ್ತದೆ. ನೀವು 90 ದಿನಗಳಲ್ಲಿ ಒಟ್ಟು 180GB ಡೇಟಾವನ್ನು ಬಳಸಬಹುದು. ಈ ನಿಯಮಿತ ಡೇಟಾದೊಂದಿಗೆ ಜಿಯೋ ಗ್ರಾಹಕರಿಗೆ ಒಟ್ಟು 20GB ಡೇಟಾವನ್ನು ಯೋಜನೆಯಲ್ಲಿ ಹೆಚ್ಚುವರಿಯಾಗಿ ನೀಡುತ್ತದೆ. ಈ ರೀತಿಯಾಗಿ ನೀವು ಯೋಜನೆಯಲ್ಲಿ ಒಟ್ಟು 200GB ಡೇಟಾವನ್ನು ಪಡೆಯುತ್ತೀರಿ.
Also Read: OnePlus 13 Series ಭಾರತದಲ್ಲಿ ಬಿಡುಗಡೆಗೆ ಡೇಟ್ ಕಂಫಾರ್ಮ್! ನಿರೀಕ್ಷಿತ ಬೆಲೆ ಮತ್ತು ಫೀಚರ್‌ಗಳೇನು ತಿಳಿಯಿರಿ!
ಜಿಯೋದ ಈ ರೀಚಾರ್ಜ್ ಯೋಜನೆಯಲ್ಲಿ ನೀವು ಯಾವುದೇ ನೆಟ್‌ವರ್ಕ್‌ನಲ್ಲಿ 90 ದಿನಗಳವರೆಗೆ ಅನಿಯಮಿತ ಕರೆ ಮಾಡಬಹುದು. ಇದರೊಂದಿಗೆ ಕಂಪನಿಯು ಗ್ರಾಹಕರಿಗೆ 90 ದಿನಗಳವರೆಗೆ ಪ್ರತಿದಿನ 100 ಉಚಿತ SMS ಅನ್ನು ಸಹ ನೀಡುತ್ತದೆ. ರಿಲಯನ್ಸ್ ಜಿಯೋದ ಈ ಯೋಜನೆಯು ನಿಜವಾದ 5G ಯೋಜನೆಯ ಭಾಗವಾಗಿದೆ ಆದ್ದರಿಂದ ನಿಮ್ಮ ಪ್ರದೇಶದಲ್ಲಿ 5G ಸಂಪರ್ಕವಿದ್ದರೆ ನೀವು ಅದರಲ್ಲಿ ಅನಿಯಮಿತ 5G ಇಂಟರ್ನೆಟ್ ಡೇಟಾದ ಪ್ರಯೋಜನವನ್ನು ಪಡೆಯಲಿದ್ದೀರಿ.