ಭಾರತದ ಜನಪ್ರಿಯ ಮತ್ತು ಅತಿದೊಡ್ಡ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋ (Reliance Jio) ತಮ್ಮ ಬಳಕೆದಾದರಿಗೆ ಪ್ರತಿ ಬಾರಿ ಹೊಸ ಕೊಡುಗೆ ಮತ್ತು ಪ್ರಯೋಜನಗಳೊಂದಿಗೆ ಅಚ್ಚರಿಗೊಳಿಸಿರುತ್ತದೆ. ಇದರ ಅಡಿಯಲ್ಲಿ ನಿಮಗೊತ್ತಾ ಜಿಯೋ ತಮ್ಮ ಮಾಸಿಕ ಯೋಜನೆಯನ್ನು ರಿಚಾರ್ಜ್ ಮಾಡಿಕೊಳ್ಳುವ ಗ್ರಾಹಕರಿಗೆ ಅದ್ದೂರಿಯ ಪ್ರಿಪೇಯ್ಡ್ ಯೋಜನೆಯಾಗಿರುವ 398 ರೂಗಳ ಪ್ರಿಪೇಯ್ಡ್ ಪ್ಲಾನ್ ಬಗ್ಗೆ ಮಾತನಾಡುತ್ತಿದ್ದೇವೆ. ನಿಮಗೆ ಪ್ರಿಪೇಯ್ಡ್ ಪ್ಲಾನ್ ತಿಂಗಳ ರೀಚಾರ್ಜ್‌ನಲ್ಲಿ ಅನಿಯಮಿತ ಕರೆಗಳು, ಹೈಸ್ಪೀಡ್ ಡೇಟಾದೊಂದಿಗೆ ಉಚಿತ OTT ಆಪ್‌ಗಳನ್ನು ಬಳಸಲು ಅವಕಾಶ ನೀಡುತ್ತದೆ. ನೀವು ಇವೆಲ್ಲವನ್ನು ಒಂದೇ ಯೋಜನೆಯಲ್ಲಿ ಹುಡುಕುತ್ತಿದ್ದರೆ ಈ ರಿಲಯನ್ಸ್ ಜಿಯೋ (Reliance Jio) ಬೆಸ್ಟ್ ಪ್ರಿಪೇಯ್ಡ್ ಪ್ಲಾನ್ ನಿಮಗೆ ಸೂಕ್ತವಾಗಿದೆ.
Also Read: Aadhaar Card ದುರುಪಯೋಗದ ಅಂಶಗಳ ಬಗ್ಗೆ ಖಡಕ್ ಎಚ್ಚರಿಕೆ! ಪಾಲಿಸದಿದ್ದರೆ ಭಾರಿ ನಷ್ಟ!
ರಿಲಯನ್ಸ್ ಜಿಯೋ ಬಳಕೆದಾರರು JioTV ಪ್ರೀಮಿಯಂ ಯೋಜನೆಗಳಲ್ಲಿ ದೈನಂದಿನ ಡೇಟಾದೊಂದಿಗೆ ಯೋಜನೆಯು 400 ರೂಪಾಯಿಗಳಿಗಿಂತ ಕಡಿಮೆ ಬೆಲೆಗೆ ಲಭ್ಯವಿದೆ. ಇದರೊಂದಿಗೆ ಕಂಪನಿಯು ಹೆಚ್ಚುವರಿ 6GB ಡೇಟಾದ ಪ್ರಯೋಜನವನ್ನು ನೀಡುತ್ತಿದೆ. ಒಂದೆರಡಲ್ಲ ಒಟ್ಟು 12 ಜನಪ್ರಿಯ OTT ಪ್ಲಾಟ್‌ಫಾರ್ಮ್‌ಗಳಿಗೆ ಉಚಿತ ಪ್ರವೇಶವನ್ನು ನೀಡುತ್ತದೆ. ಈ ಜಿಯೋ ಪ್ರಿಪೇಯ್ಡ್ ಯೋಜನೆಯು ಕೇವಲ 28 ದಿನಗಳ ಮಾನ್ಯತೆಯೊಂದಿಗೆ ಬರುವುದನ್ನು ಗಮನಿಸಬೇಕಿದೆ.
ಇದಲ್ಲದೆ ನಿಮಗೆ 2GB ದೈನಂದಿನ ಡೇಟಾ ಪ್ರಕಾರ ಒಟ್ಟು 56GB ಡೇಟಾ ಲಭ್ಯವಿದೆ. ಈ ಯೋಜನೆಯು ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನಿಯಮಿತ ಕರೆ ಮತ್ತು ದಿನಕ್ಕೆ 100 SMS ನಂತಹ ಪ್ರಯೋಜನಗಳನ್ನು ಸಹ ನೀಡುತ್ತದೆ. ಅರ್ಹ ಬಳಕೆದಾರರು ಇದರೊಂದಿಗೆ ರೀಚಾರ್ಜ್ ಮಾಡುವಾಗ ಅನಿಯಮಿತ 5G ಡೇಟಾವನ್ನು ಪಡೆಯುತ್ತಾರೆ. ಆದರೆ 4G ಬಳಕೆದಾರರಿಗೆ 6GB ಹೆಚ್ಚುವರಿ ಡೇಟಾವನ್ನು ಸಹ ನೀಡಲಾಗುತ್ತದೆ.
ಜಿಯೋ ಬಳಕೆದಾರರು ಈ ಯೋಜನೆಯಲ್ಲಿ SonyLiv, ZEE5, JioCinema Premium, Lionsgate Play, Discovery+ Sun NXT & Kanchha Lanka, Planet Marathi, Chaupal, DocuBay, EPIC ON ಮತ್ತು Hoichoi ಈ ಯೋಜನೆಯ ರೀಚಾರ್ಜ್‌ನ ಚಂದಾದಾರಿಕೆಯನ್ನು ಸಹ ಪಡೆಯುತ್ತಾರೆ. ಈ ಯೋಜನೆಯು JioTV ಮತ್ತು JioCloud ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ನೀಡುತ್ತದೆ. ಅರ್ಹ ಬಳಕೆದಾರರು 5G ಸಂಪರ್ಕವಿರುವ ಪ್ರದೇಶದಲ್ಲಿ ವಾಸಿಸುತ್ತಿದ್ದರೆ ಅವರಿಗೆ 5G ಡೇಟಾವನ್ನು ನೀಡಲಾಗುತ್ತಿದೆ. ಈ ಯೋಜನೆಯಲ್ಲಿ 5G ಸ್ಪೀಡ್ ನೀಡುತ್ತಿದ್ದು ಇದಕ್ಕಾಗಿ ನಿಮ್ಮ ಫೋನ್ 5G ನೆಟ್ವರ್ಕ್ ಸಪೋರ್ಟ್ ಮಾಡುವುದು ಮುಖ್ಯವಾಗಿದೆ.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ