JiCinema ಹೆಸರನ್ನು ಶೀಘ್ರದಲ್ಲೇ JioVoot ಎಂದು ಬದಲಾಯಿಸಬಹುದು.
ಈ ಯೋಜನೆಗಳಲ್ಲಿ 1 ತಿಂಗಳ, 3 ತಿಂಗಳ ಮತ್ತು ವಾರ್ಷಿಕ ಯೋಜನೆಯನ್ನು ಬಹಿರಂಗಪಡಿಸಲಾಗಿದೆ.
ಇದರೊಂದಿಗೆ JioCinema ಗೆ ಚಂದಾದಾರರಾದ ತಕ್ಷಣ ನೀವು ಹೊಸ ವಿಷಯವನ್ನು ಸಹ ಪಡೆಯುತ್ತೀರಿ.
JioVoot: ದೇಶದ ನಂಬರ್ ಒನ್ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ಶೀಘ್ರದಲ್ಲೇ ಜಿಯೋ ಸಿನಿಮಾ (JioCinema) ಉಚಿತ ಪ್ಲಾಟ್‌ಫಾರ್ಮ್‌ನಿಂದ ಪಾವತಿಸಿದ ಚಂದಾದಾರಿಕೆ ಪ್ಲಾಟ್‌ಫಾರ್ಮ್‌ಗೆ ಬದಲಾಗಲಿದೆ. ಕೆಲವು ಮಾಹಿತಿಯ ಪ್ರಕಾರ IPL 2023 ರ ನಂತರ ಈ ಬದಲಾವಣೆಯನ್ನು ಜಾರಿಗೆ ತರಲಾಗುವುದು. ಆದ್ದರಿಂದ JioCinema ತನ್ನ ಸೇವೆಗಳಿಗೆ ಶುಲ್ಕ ವಿಧಿಸಲು ಪ್ರಾರಂಭಿಸಿದ್ದು 3 JiCinema ಚಂದಾದಾರಿಕೆ ಯೋಜನೆಗಳನ್ನು ಈಗಾಗಲೇ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ಮೂರು ಯೋಜನೆಗಳಲ್ಲಿ 1 ತಿಂಗಳ, 3 ತಿಂಗಳ ಮತ್ತು ವಾರ್ಷಿಕ ಯೋಜನೆಯನ್ನು ಬಹಿರಂಗಪಡಿಸಲಾಗಿದೆ.
JioCinema ಗೋಲ್ಡ್ ಯೋಜನೆಗಳು:
ಈ ಮೂರರಲ್ಲಿ ಎರಡು ಯೋಜನೆಗಳು 100 ರೂಗಿಂತ ಕಡಿಮೆ ಬೆಲೆಯನ್ನು ಹೊಂದಿವೆ. ಇದರ ಜೊತೆಗೆ ಪ್ರತಿದಿನದ ಯೋಜನೆ ಸಹ ಇದೆ. ಈ ಯೋಜನೆಯ ಹೆಸರೇ ಸೂಚಿಸುವಂತೆ JioCinema ಡೈಲಿ ಕೇವಲ ಒಂದು ದಿನದ ಬಳಕೆಗೆ ಮಾತ್ರ ಸೀಮಿತವಾಗಿದೆ. ಇದರ ಬೆಲೆ 2 ರೂಪಾಯಿಗಿಂತ ಕಡಿಮೆಯಿದ್ದು ಪರಿಚಯಾತ್ಮಕ ಡೀಲ್‌ನಂತೆ ಇದನ್ನು ನಿಮಗೆ ನೀಡಲಾಗುವುದು.
ಆದರೆ ಇದರ ಸಾಮಾನ್ಯ ಬೆಲೆ ಒಂದು ದಿನಕ್ಕೆ 29 ರೂ ಆಗಿದ್ದು ಈ ಪ್ಯಾಕೇಜ್‌ನೊಂದಿಗೆ ನೀವು ಎರಡು ಪ್ರತ್ಯೇಕ ಡಿವೈಸ್‌ಗಳನ್ನು ಬಳಸಬಹುದು. JioCinema ಗೋಲ್ಡ್ ಯೋಜನೆಗಳ ವರ್ಗದಲ್ಲಿ ಮೂರು ತಿಂಗಳ ಪ್ಯಾಕೇಜ್ ಅನ್ನು ನೀಡಲಾಗುತ್ತದೆ. ಈ ಯೋಜನೆಯು 99 ರೂ ಆರಂಭಿಕ ಬೆಲೆಯನ್ನು ಹೊಂದಿದೆ. ಹೆಚ್ಚುವರಿಯಾಗಿ ನೀವು ಈ ಯೋಜನೆಯಲ್ಲಿ ಎರಡು ಡಿವೈಸ್‌ಗಳನ್ನು ಚಲಾಯಿಸಬಹುದು.
JioCinema ಪ್ಲಾಟಿನಂ ಯೋಜನೆಗಳು:
ಇದರ ನಂತರ 12 ತಿಂಗಳವರೆಗೆ ಲಭ್ಯವಿರುವ JioCinema ಪ್ಲಾಟಿನಂ ಮೂರನೇ ಯೋಜನೆಯಾಗಿದೆ. ನೀವು ಇದನ್ನು ಆರಂಭದಲ್ಲಿ 599 ರೂಗಳಲ್ಲಿ ಪಡೆಯುತ್ತೀರಿ. ಆದರೆ ಇದರ ಮೂಲ ಬೆಲೆ 1,199 ರೂ ಆಗಿದೆ. ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್‌ಗೆ ಹೋಲಿಸಿದರೆ ಈ ಯೋಜನೆಗಳು ಕೈಗೆಟುಕುವ ದರದಲ್ಲಿ ಸಿಗುವಂತೆ ಕಂಡುಬರುತ್ತವೆ. ಆದರೆ ಇದನ್ನು ಇನ್ನೂ ಅಧಿಕೃತವಾಗಿ ಬಹಿರಂಗಪಡಿಸಿಲ್ಲ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile