Reliance Jio ಬಳಕೆದಾರರಿಗೆ ಉಚಿತ OTT ಪ್ರಯೋಜನಳೊಂದಿಗೆ 5G ಡೇಟಾ ಮತ್ತು ಕರೆ ನೀಡುವ 3 ಅತ್ಯುತ್ತಮ ಪ್ಲಾನ್‌ಗಳು!

Updated on 13-May-2024
HIGHLIGHTS

ರಿಲಯನ್ಸ್ ಜಿಯೋ (Reliance Jio) ಉಚಿತ OTT ಜೊತೆಗೆ Unlimited 5G ಡೇಟಾ ಮತ್ತು ಕರೆ ನೀಡುವ 3 ಬೆಸ್ಟ್ ಪ್ಲಾನ್‌ ಇಲ್ಲಿವೆ.

ಇಂದಿನ ದಿನಗಳಲ್ಲಿ ಜನ ಸಮಯ ಸಿಕ್ಕಾಗೆಲ್ಲ ಫೋನ್ ಅಥವಾ ಲ್ಯಾಪ್ಟಾಪ್ ಬಳಸುವುದು ಒಂದು ರೀತಿಯ ರೂಢಿಯಾಗಿರುವುದು ಕಾಣಬಹುದು.

Netflix, Prime Video ಸೇರಿದಂತೆ ಇತರ ಅಪ್ಲಿಕೇಶನ್‌ಗಳಿಗಾಗಿ ನೀವು ಪ್ರತ್ಯೇಕವಾಗಿ ಹೆಚ್ಚುವರಿ ಹಣವನ್ನು ಖರ್ಚು ಮಾಡದೇ ಆನಂದಿಸಬಹುದು.

Reliance Jio 3 Best Plans Offering Free OTT Benefits: ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋ (Reliance Jio) ಉಚಿತ OTT ಜೊತೆಗೆ Unlimited 5G ಡೇಟಾ ಮತ್ತು ಕರೆ ನೀಡುವ 3 ಬೆಸ್ಟ್ ಪ್ಲಾನ್‌ ಇಲ್ಲಿವೆ. ಅಲ್ಲದೆ ಇಂದಿನ ದಿನಗಳಲ್ಲಿ ಹೆಚ್ಚಿನ ಜನ ವೆಬ್ ಸರಣಿಗಳು, ಚಲನಚಿತ್ರಗಳು ಅಥವಾ ಟಿವಿ ಕಾರ್ಯಕ್ರಮಗಳನ್ನು ವೀಕ್ಷಿಸಲು ಹೆಚ್ಚು ಆಸಕ್ತಿಯನ್ನು ಹೊಂದಿದ್ದು ಸಮಯ ಸಿಕ್ಕಾಗೆಲ್ಲ ಫೋನ್ ಅಥವಾ ಲ್ಯಾಪ್ಟಾಪ್ ಬಳಸುವುದು ಒಂದು ರೀತಿಯ ರೂಢಿಯಾಗಿರುವುದು ನೀವು ಕಾಣಬಹುದು. ಆದ್ದರಿಂದ ಜಿಯೋ ಸಹ ನೆಟ್‌ಫ್ಲಿಕ್ಸ್, ಅಮೆಜಾನ್ ಸೇರಿದಂತೆ ಇತರ ಅಪ್ಲಿಕೇಶನ್‌ಗಳಿಗಾಗಿ ನೀವು ಪ್ರತ್ಯೇಕವಾಗಿ ಹೆಚ್ಚುವರಿ ಹಣವನ್ನು ಖರ್ಚು ಮಾಡದೇ ನೀವು ಮಾಡುವ ರಿಚಾರ್ಜ್ ಮೂಲಕವೆ ಅವುಗಳ ಅನುಭವವನ್ನು ಆನಂದಿಸಲು ಸಹಾಯ ಮಾಡುತ್ತಿದೆ.

ಹೆಚ್ಚುವರಿ ಹಣವನ್ನು ಖರ್ಚು ಮಾಡದೇ ಉಚಿತ OTT ಪ್ರಯೋಜನ ಪಡೆಯಿರಿ!

ಈಗ ನೀವು OTT ಪ್ರಯೋಜನಗಳಿಗಾಗಿ ಪ್ರತ್ಯೇಕ ಹಣವನ್ನು ಖರ್ಚು ಮಾಡುವ ಅಗತ್ಯವಿಲ್ಲ. ವಾಸ್ತವವಾಗಿ ಟೆಲಿಕಾಂ ಕಂಪನಿಯಿಂದ ಅದರಲ್ಲೂ ರಿಲಯನ್ಸ್ ಜಿಯೋ (Reliance Jio) ಅನೇಕ ರೀಚಾರ್ಜ್ ಯೋಜನೆಗಳನ್ನು ನೀಡಲಾಗುತ್ತದೆ. ಇದು ಅಗ್ಗದ ಕರೆಯೊಂದಿಗೆ OTT ಅಪ್ಲಿಕೇಶನ್‌ಗಳ ಉಚಿತ ಚಂದಾದಾರಿಕೆಯನ್ನು ಒದಗಿಸುತ್ತದೆ. OTT ಪ್ರಯೋಜನಗಳೊಂದಿಗೆ ಬರುವ ದೇಶದ ನಂಬರ್ ಒನ್ ರಿಲಯನ್ಸ್ ಜಿಯೋ (Reliance Jio) ಕಂಪನಿಯ ಅಂತಹ 3 ರೀಚಾರ್ಜ್ ಯೋಜನೆಗಳ ಕುರಿತು ಇಂದು ನಾವು ನಿಮಗೆ ಹೇಳಲಿದ್ದೇವೆ. ಈ ಯೋಜನೆಗಳೊಂದಿಗೆ ಕರೆ, ಡೇಟಾ ಮತ್ತು SMS ಜೊತೆಗೆ ನೀವು OTT ಚಂದಾದಾರಿಕೆಯ ಪ್ರಯೋಜನವನ್ನು ಪಡೆಯುತ್ತೀರಿ. ರಿಲಯನ್ಸ್ ಜಿಯೋ (Reliance Jio) ಈ ಕಡಿಮೆ ಬೆಲೆಯ ರೀಚಾರ್ಜ್ ಯೋಜನೆಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

Reliance Jio 3 Best Plans Offering Free OTT Benefits in 2024

ರಿಲಯನ್ಸ್ ಜಿಯೋ (Reliance Jio) ರೂ 148 ರೀಚಾರ್ಜ್ ಯೋಜನೆ

ಮೊದಲಿಗೆ ಈ ಪಟ್ಟಿಯಲ್ಲಿ ರಿಲಯನ್ಸ್ ಜಿಯೋ (Reliance Jio) ನೀಡುತ್ತಿರುವ ಅತಿ ಕಡಿಮೆ ಬೆಲೆಯ ರೀಚಾರ್ಜ್‌ಗಳಲ್ಲಿ ಒಂದು 148 ರೂಗಳ ಪ್ಲಾನ್ ಇದರ ಮಾನ್ಯತೆ 28 ದಿನಗಳವರೆಗೆ ಇರುತ್ತದೆ. ಈ ಡೇಟಾ ಯೋಜನೆಯೊಂದಿಗೆ 10GB ಹೆಚ್ಚುವರಿ ಡೇಟಾದ ಪ್ರಯೋಜನವನ್ನು ನೀಡಲಾಗಿದೆ. ರಿಲಯನ್ಸ್ ಜಿಯೋ (Reliance Jio) ಅಪ್ಲಿಕೇಶನ್‌ಗಳ ಹೊರತಾಗಿ ಬಳಕೆದಾರರು ZEE5, SonyLIV ನಂತಹ 12 OTT ಪ್ಲಾಟ್‌ಫಾರ್ಮ್‌ಗಳಿಗೆ ಉಚಿತ ಪ್ರವೇಶವನ್ನು ಪಡೆಯುತ್ತಾರೆ.

ರಿಲಯನ್ಸ್ ಜಿಯೋ (Reliance Jio) ರೂ 389 ರೀಚಾರ್ಜ್ ಯೋಜನೆ

ಜಿಯೋದ ರೂ 389 ರೀಚಾರ್ಜ್ ಯೋಜನೆಯು ಡೇಟಾ, ಕರೆ, SMS ಸೇರಿದಂತೆ OTT ಪ್ರಯೋಜನಗಳೊಂದಿಗೆ ಬರುತ್ತದೆ. ರಿಲಯನ್ಸ್ ಜಿಯೋ (Reliance Jio) ಈ ಯೋಜನೆಯೊಂದಿಗೆ ನೀವು ZEE5, SonyLIV ನಂತಹ 12 OTT ಪ್ಲಾಟ್‌ಫಾರ್ಮ್‌ಗಳಿಗೆ ಉಚಿತ ಪ್ರವೇಶವನ್ನು ಸಹ ಪಡೆಯುತ್ತೀರಿ. 28 ದಿನಗಳ ಮಾನ್ಯತೆಯೊಂದಿಗೆ ಈ ಯೋಜನೆಯು ಅನಿಯಮಿತ ಕರೆ ಮತ್ತು ದೈನಂದಿನ 100 SMS ಸೌಲಭ್ಯದೊಂದಿಗೆ ಬರುತ್ತದೆ. ಯೋಜನೆಯೊಂದಿಗೆ ಬಳಕೆದಾರರು ಹೆಚ್ಚುವರಿ 6 GB ಡೇಟಾ ಜೊತೆಗೆ ಪ್ರತಿದಿನ 2 GB ಡೇಟಾದ ಪ್ರಯೋಜನವನ್ನು ಪಡೆಯುತ್ತಾರೆ.

Reliance Jio 3 Best Plans Offering Free OTT Benefits in 2024

ರಿಲಯನ್ಸ್ ಜಿಯೋ (Reliance Jio) ರೂ 1198 ರೀಚಾರ್ಜ್ ಯೋಜನೆ

ಜಿಯೋದ ರೂ 1198 ರೀಚಾರ್ಜ್ ಯೋಜನೆಯು ಅನೇಕ OTT ಪ್ರಯೋಜನಗಳೊಂದಿಗೆ ಬರುತ್ತದೆ. ಈ ರಿಲಯನ್ಸ್ ಜಿಯೋ (Reliance Jio) ಯೋಜನೆಯೊಂದಿಗೆ ನೀವು ಡಿಸ್ನಿ + ಹಾಟ್‌ಸ್ಟಾರ್ ಮತ್ತು ಅಮೆಜಾನ್ ಪ್ರೈಮ್ ವೀಡಿಯೊ ಸೇರಿದಂತೆ 14 ಇತರ OTT ಪ್ಲಾಟ್‌ಫಾರ್ಮ್‌ಗಳಿಗೆ ಉಚಿತ ಪ್ರವೇಶವನ್ನು ಪಡೆಯುತ್ತೀರಿ. 84 ದಿನಗಳ ಮಾನ್ಯತೆಯೊಂದಿಗೆ ರೀಚಾರ್ಜ್ ಯೋಜನೆಯು ಹೆಚ್ಚುವರಿ 18GB ಡೇಟಾದೊಂದಿಗೆ ಬರುತ್ತದೆ. ಇದರಲ್ಲಿ ಬಳಕೆದಾರರು ಅನಿಯಮಿತ ಕರೆ, ದೈನಂದಿನ 2GB ಡೇಟಾ ಮತ್ತು ದೈನಂದಿನ 100 SMS ಸೌಲಭ್ಯವನ್ನು ಪಡೆಯುತ್ತಾರೆ.

Also Read: POCO M6 5G ಅತಿ ಕಡಿಮೆ ಬೆಲೆಗೆ ಸೂಪರ್ ಹಿಟ್ ಸ್ಮಾರ್ಟ್ಫೋನ್! ಈಗ ಮಾತ್ರ 8249 ರೂಗಳಿಗೆ ಲಭ್ಯ!

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :