Jio Recharge Plans: ರಿಲಯನ್ಸ್ ಜಿಯೋ ಗ್ರಾಹಕರೆ ಈಗಲೇ ಈ ರಿಚಾರ್ಜ್ ಮಾಡಿಕೊಳ್ಳಿ! ಇಲ್ಲವಾದ್ರೆ ಹೆಚ್ಚು ಹಣ ನೀಡಬೇಕಾಗುತ್ತೆ!

Jio Recharge Plans: ರಿಲಯನ್ಸ್ ಜಿಯೋ ಗ್ರಾಹಕರೆ ಈಗಲೇ ಈ ರಿಚಾರ್ಜ್ ಮಾಡಿಕೊಳ್ಳಿ! ಇಲ್ಲವಾದ್ರೆ ಹೆಚ್ಚು ಹಣ ನೀಡಬೇಕಾಗುತ್ತೆ!
HIGHLIGHTS

ನೀವು ಪ್ರತಿ ತಿಂಗಳು ರಿಚಾರ್ಜ್ ಮಾಡುವ Reliance Jio ಬಳಕೆದಾರರು ಒಮ್ಮೆ ಈ ಪ್ಲಾನ್ ಪರಿಶೀಲಿಸಿ.

ಒಂದು ಬಾರಿ ರಿಚಾರ್ಜ್ ಮಾಡಿಕೊಂಡು ವರ್ಷಪೂರ್ತಿ 5G ಡೇಟಾ ಮತ್ತು ಕರೆಗಳನ್ನು ಆನಂದಿಸಬಹುದು.

Reliance Jio ಈ ವರ್ಷದಲ್ಲಿ ಎಷ್ಟೇ ಬೆಲೆ ಹೆಚ್ಚಿಸಿದರೂ ನಿಮಗೆ ರಿಚಾರ್ಜ್ ಮಾಡುವ ತಲೆನೋವೇ ಇರೋಲ್ಲ.

Reliance Jio Recharge Plans 2025: ಭಾರತದ ನಂಬರ್ ಒನ್ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋ (Reliance Jio) ತಮ್ಮ ಬಳಕೆದಾರರಿಗೆ ಅತಿ ಕಡಿಮೆ ಬೆಲೆಗೆ ಅತ್ಯುತ್ತಮ ರಿಚಾರ್ಜ್ ಯೋಜನೆಗಳನ್ನು ಹೆಚ್ಚುವರಿಯ ಪ್ರಯೋಜನಗಳೊಂದಿಗೆ ನೀಡುತ್ತಿದೆ. ಈ ಯೋಜನೆಗಳ ಬಗ್ಗೆ ನಿಮಗೆ ಹೇಳಲು ಮುಖ ಕಾರಣವೆಂದರೆ ಜಿಯೋ ಪ್ರತಿ ವರ್ಷ ಅಥವಾ 9 ತಿಂಗಳಿಗೊಮ್ಮೆ ತಮ್ಮ ಯೋಜನೆಯಲ್ಲಿ ಬದಲಾವಣೆಗಳನ್ನು ಮಾಡುತ್ತಿರುತ್ತದೆ.

ಈಗ 2025 ಹೊಸ ವರ್ಷ ಈಗಾಗಲೇ ಆರಂಭವಾಗುತ್ತಿದ್ದಂತೆ ರಿಲಯನ್ಸ್ ಜಿಯೋ ತನ್ನ Broadcast ಯೋಜನೆಗಳ ಬೆಲೆಯನ್ನು ಸುಮಾರು 18% ಹೆಚ್ಚಿಸಲು ಮುಂದಾಗಿರುವ ಸುದ್ದಿ ವೈರಲ್ ಆಗಿದೆ. ಇದರೊಂದಿಗೆ ಕಂಪನಿ ತನ್ನ ಪ್ರಿಪೇಯ್ಡ್ ಮತ್ತು ಪೋಸ್ಟ್ಪಾಯ್ಡ್ ಯೋಜನೆಗಳ ಬೆಲೆಯನ್ನು ಹೆಚ್ಚಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎನ್ನುವುದು ನಮಗೆಲ್ಲ ಈವರೆಗಿನ ಅನುಭವದಿಂದ ಇದರ ಮುನ್ಸೂಚನೆ ಎಚ್ಚರಿಸುತ್ತದೆ.

ಈ ವಾರ್ಷಿಕ ಪ್ಲಾನ್ ಯಾಕೆ ರಿಚಾರ್ಜ್ (Jio Recharge Plans) ಮಾಡಿಕೊಳ್ಳಬೇಕು:

ಇದರೊಂದಿಗೆ ಪ್ರಸ್ತುತ ನಾನು ನಿಮಗೆ ರಿಲಯನ್ಸ್ ಜಿಯೋ (Reliance Jio) ನೀಡುತ್ತಿರುವ ಈ ರೂ. 3599 ಮತ್ತು ರೂ. 3999 ರೂಪಾಯಿಗಳ ವಾರ್ಷಿಕ ಯೋಜನೆಗಳ ಬಗ್ಗೆ ಮಾಹಿತಿ ನೀಡಲಿದ್ದೇನೆ. ನೀವು ಸಮಯವಿರುವಾಗಲೇ ಈ ವಾರ್ಷಿಕ ಯೋಜನೆಗಳನ್ನು ರಿಚಾರ್ಜ್ ಮಾಡಿಕೊಳ್ಳುವುದು ಉತ್ತಮ ಎನ್ನುವುದು ನನ್ನ ಸಲಹೆ. ಯಾಕೆಂದರೆ Reliance Jio ಈ ವರ್ಷದಲ್ಲಿ ಎಷ್ಟೇ ಬೆಲೆ ಹೆಚ್ಚಿಸಿದರೂ ನಿಮಗೆ ರಿಚಾರ್ಜ್ ಮಾಡುವ ತಲೆನೋವೇ ಇರೋಲ್ಲ.

Reliance Jio Recharge Plans 2025
Reliance Jio Recharge Plans 2025

ರಿಲಯನ್ಸ್ ಜಿಯೋ ರೂ. 3599 ಪ್ರಿಪೇಯ್ಡ್ ಯೋಜನೆಯ ವಿವರಗಳೇನು?

ರಿಲಯನ್ಸ್ ಜಿಯೋದ ರೂ 3,599 ಯೋಜನೆಯು ಸಂಪೂರ್ಣ 365 ದಿನಗಳವರೆಗೆ ಮಾನ್ಯವಾಗಿದೆ. ಬಳಕೆದಾರರಿಗೆ ದೇಶಾದ್ಯಂತ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆ, ದಿನಕ್ಕೆ 100 ಉಚಿತ SMS ಮತ್ತು ಪ್ರತಿದಿನ ನಿಮಗೆ 2.5GB ಡೇಟಾ ಭತ್ಯೆಯನ್ನು ಒದಗಿಸುತ್ತದೆ. ಇದು ವರ್ಷದಲ್ಲಿ ಪ್ರಭಾವಶಾಲಿ ಒಟ್ಟು 912.5GB ಡೇಟಾವನ್ನು ಅನುವಾದಿಸುತ್ತದೆ.

ಹೆಚ್ಚುವರಿಯಾಗಿ ಯೋಜನೆಯು ನಿಜವಾದ 5G ಕೊಡುಗೆಯನ್ನು ಒಳಗೊಂಡಿದೆ. 5G ಸಂಪರ್ಕವಿರುವ ಪ್ರದೇಶಗಳಲ್ಲಿ ಬಳಕೆದಾರರಿಗೆ ಅನಿಯಮಿತ ಡೇಟಾವನ್ನು ನೀಡುತ್ತದೆ. ಗ್ರಾಹಕರಿಗೆ ಹೆಚ್ಚಿನ ವೇಗದ ಬ್ರೌಸಿಂಗ್ ಮತ್ತು ಲಭ್ಯವಿರುವಲ್ಲಿ ಸ್ಟ್ರೀಮಿಂಗ್ ಅನ್ನು ಅನುಭವಿಸಲು ಅನುವು ಮಾಡಿಕೊಡುತ್ತದೆ.

Also Read: 6000mAh ಬ್ಯಾಟರಿಯ iQOO Z9x 5G ಅಮೆಜಾನ್‌ನಲ್ಲಿ ಜಬರ್ದಸ್ತ್ ಆಫರ್‌ನೊಂದಿಗೆ ಮಾರಾಟ!

ರಿಲಯನ್ಸ್ ಜಿಯೋ ರೂ. 3999 ಪ್ರಿಪೇಯ್ಡ್ ಯೋಜನೆಯ ವಿವರಗಳೇನು?

ರಿಲಯನ್ಸ್ ಜಿಯೋ ರೂ. 3999 ಪ್ರಿಪೇಯ್ಡ್ ಯೋಜನೆ ನಿಮಗೆ ಪ್ರತಿ ತಿಂಗಳಿಗೆ ರೂ 333 ಖರ್ಚು ಬರುತ್ತದೆಯಾದರೂ ಅದೇ 365 ದಿನಗಳವರೆಗೆ ಮಾನ್ಯವಾಗಿರುತ್ತದೆ. ಒಟ್ಟಾರೆಯಾಗಿ ಈ ಪ್ಲಾನ್ 3599 ರೂಗಳ ಯೋಜನೆಯಂತೆ ಎಲ್ಲವನ್ನು ಹೊಂದಿದ್ದು ಅಧಿಕವಾಗಿ ಇದರಲ್ಲಿ ನಿಮಗೆ ಉಚಿತ FacClub ಚಂದಾದಾರಿಕೆಯನ್ನು ನೀಡುತ್ತದೆ.

ಸಾಮಾನ್ಯವಾಗಿ ಜನರಿಗೆ ಈ FanCode ಬಗ್ಗೆ ಅಷ್ಟಾಗಿ ಮಾಹಿತಿ ಇಲ್ಲ. ಇದೊಂದು ಕ್ರೀಡಾ ಅಪ್ಲಿಕೇಶನ್ / ವೆಬ್‌ಸೈಟ್‌ ಆಗಿದ್ದು ಇದರಲ್ಲಿ ಎಲ್ಲ ಪಂದ್ಯಗಳನ್ನು (Cricket, Football, Golf, ಮತ್ತು Formula 1) ಲೈವ್ ಸ್ಟ್ರೀಮ್ ಮಾಡುವ ಅವಕಾಶವನ್ನು ನೀಡುತ್ತದೆ. ಅಷ್ಟೇಯಲ್ಲದೆ ಲೈಫ್ ಪಂದ್ಯದ ಅನೇಕ ಮಾಹಿತಿಗಳನ್ನು ಸಹ ಪಡೆಯಬಹುದು.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo