ಮೂರನೇ ಟೆಲಿಕಾಂ ಆಪರೇಟರ್ ವೊಡಾಫೋನ್ ಐಡಿಯಾದ (Vi 5G) ಹೆಸರೂ ಸೇರ್ಪಡೆಯಾಗುತ್ತಿದೆ.
ವೊಡಾಫೋನ್ ಐಡಿಯಾದ (Vi 5G) ಪುಣೆ ಮತ್ತು ದೆಹಲಿಯ ಆಯ್ದ ಸ್ಥಳಗಳಲ್ಲಿ Vi 5G ಸೇವೆಯನ್ನು ಲೈವ್ ಮಾಡಲಾಗಿದೆ.
ಭಾರತದಲ್ಲಿ ವೊಡಾಫೋನ್ ಐಡಿಯಾ 5G ರೆಡಿ ಸಿಮ್ ಕಾರ್ಡ್ ಸಹಾಯದಿಂದ ನೀವು ಇದರ 5G ಸೇವೆಯನ್ನು ಅನುಭವಿಸಬಹುದು.
ಭಾರತದಲ್ಲಿ ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್‌ಟೆಲ್ ಕಳೆದ ವರ್ಷ ಅಕ್ಟೋಬರ್‌ನಲ್ಲಿ ತಮ್ಮ 5G ಸೇವೆಯನ್ನು ಪ್ರಾರಂಭಿಸಿವೆ. ಈ ಎರಡೂ ಟೆಲಿಕಾಂ ಕಂಪನಿಗಳು ತಮ್ಮ 5G ನೆಟ್‌ವರ್ಕ್‌ಗಳನ್ನು ನಿರಂತರವಾಗಿ ದೇಶಾದ್ಯಂತ ವಿಸ್ತರಿಸುತ್ತಿವೆ. ಈ ವರ್ಷದ ಅಂತ್ಯದ ವೇಳೆಗೆ ದೇಶದಲ್ಲಿ 5G ಸೇವೆಯನ್ನು ಹೊರತರುವ ಗುರಿಯನ್ನು ಜಿಯೋ ಹೊಂದಿದೆ. ಮುಂದಿನ ವರ್ಷ ಏಪ್ರಿಲ್ ವೇಳೆಗೆ ಏರ್‌ಟೆಲ್ ದೇಶಾದ್ಯಂತ ತನ್ನ ಸೇವೆಯನ್ನು ಪೂರ್ತಿಯಾಗಿ ಹರಡಲು ಸಜ್ಜಾಗಿದೆ. ಇದೀಗ ಈ ಪಟ್ಟಿಗೆ ಮೂರನೇ ಟೆಲಿಕಾಂ ಆಪರೇಟರ್ ವೊಡಾಫೋನ್ ಐಡಿಯಾದ (Vi 5G) ಹೆಸರೂ ಸೇರ್ಪಡೆಯಾಗುತ್ತಿದೆ.
Also Read: WhatsApp Voice Chat ಫೀಚರ್! ಇನ್ಮೇಲೆ ನೀವು 128 ಗ್ರೂಪ್ ಮೆಂಬರ್‌ಗಳೊಂದಿಗೆ ಲೈವ್ ಆಗಿ ಮಾತಾಡಿ
Vi 5G ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಿದೆ
ವೊಡಾಫೋನ್ ಐಡಿಯಾ (Vi) ತನ್ನ 5G ಸೇವೆಯನ್ನು ಪುಣೆ ಮತ್ತು ದೆಹಲಿಯ ಆಯ್ದ ಪ್ರದೇಶದಲ್ಲಿ ಲೈವ್ ಮಾಡಿದೆ. ಕಂಪನಿಯು ತನ್ನ ವೆಬ್‌ಸೈಟ್‌ನಲ್ಲಿ ಈ ಮಾಹಿತಿಯನ್ನು ನೀಡಿದೆ. ಆದರೆ ಕಂಪನಿಯು ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ತನ್ನ ವೆಬ್‌ಸೈಟ್‌ನಲ್ಲಿ ಎಲ್ಲಾ ಸೇವೆಗಳನ್ನು ವಿವರಿಸುವಾಗ ಕಂಪನಿಯು ತನ್ನ 5G ಸೇವೆಯ ಬಗ್ಗೆಯೂ ಮಾಹಿತಿಯನ್ನು ನೀಡಿದೆ. ಇದರಲ್ಲಿ ಪುಣೆ ಮತ್ತು ದೆಹಲಿಯ ಆಯ್ದ ಸ್ಥಳಗಳಲ್ಲಿ Vi 5G ಸೇವೆಯನ್ನು ಲೈವ್ ಮಾಡಲಾಗಿದೆ.
IMC 2023 ಈವೆಂಟ್‌ನಲ್ಲಿ ಮಾಹಿತಿ
ಭಾರತದಲ್ಲಿ ವೊಡಾಫೋನ್ ಐಡಿಯಾ 5G ರೆಡಿ ಸಿಮ್ ಕಾರ್ಡ್ ಸಹಾಯದಿಂದ ನೀವು ಇದರ 5G ಸೇವೆಯನ್ನು ಅನುಭವಿಸಬಹುದು. ವೊಡಾಫೋನ್ ಐಡಿಯಾದ ಪ್ರವರ್ತಕರೊಂದಿಗೆ ಮಾತನಾಡಿದ ಕುಮಾರ್ ಮಂಗಳಂ ಬಿರ್ಲಾ ಕಳೆದ ಒಂದು ವರ್ಷದಲ್ಲಿ ವೊಡಾಫೋನ್ ಐಡಿಯಾ ತಂಡವು 5G ಬಿಡುಗಡೆಗಾಗಿ ಕೋರ್ ನೆಟ್‌ವರ್ಕ್ ಅನ್ನು ಸಿದ್ಧಪಡಿಸುವಲ್ಲಿ ಸಾಕಷ್ಟು ಕೆಲಸ ಮಾಡಿದ್ದು ಈಗಾಗಲೇ ಕೆಲವೊಂದು ಮೆಟ್ರೋ ಸಿಟಿಗಳಲ್ಲಿ ಇದರ ಲಭ್ಯತೆಯನ್ನು ಕಾಣಬಹುದು. ಅಲ್ಲದೆ ಮುಂಬರುವ ತ್ರೈಮಾಸಿಕದಲ್ಲಿ ಕಂಪನಿಯು 5G ರೋಲ್‌ಔಟ್ ಮತ್ತು 4G ವಿಸ್ತರಣೆಗಾಗಿ ಗಮನಾರ್ಹ ಹೂಡಿಕೆಗಳನ್ನು ಮಾಡುತ್ತದೆಂದು ಹೇಳಿದರು.
ಇದರ ಬಗ್ಗೆ IMC 2023 ಈವೆಂಟ್‌ನಲ್ಲಿ (Vi 5G) ಬಗ್ಗೆ ಮಾಹಿತಿಯನ್ನು ಮೊದಲ ಬಾರಿಗೆ ನೀಡಿದ್ದು ವೊಡಾಫೋನ್ ಐಡಿಯಾ IoT, 5G, Cloud ಮತ್ತು Vi C-DOT IoT Lab ಜೊತೆಗೆ ಲೇಟೆಸ್ಟ್ ಸ್ಮಾರ್ಟ್ ಕನೆಕ್ಟಿವಿಟಿ ಟೆಸ್ಟ್ ಬೆಡ್, ವೊಡಾಫೋನ್ ಐಡಿಯಾ ಏರ್ಫೈಬರ್, ವೊಡಾಫೋನ್ ಐಡಿಯಾ ಗೇಮ್ಸ್, ವೊಡಾಫೋನ್ ಐಡಿಯಾ ಕ್ಲೌಡ್ ಪ್ಲೇ, ವೊಡಾಫೋನ್ ಐಡಿಯಾ ವಿಆರ್ ಗೇಮ್ಸ್ ಮತ್ತು ಎಕ್ಷ ಆರ್ ಎಡ್ಯೂಟೆಕ್ ಸೇರಿದಂತೆ ಇತರ ತಂತ್ರಜ್ಞಾನಗಳನ್ನು ಪ್ರದರ್ಶಿಸಿದೆ. ವೊಡಾಫೋನ್ ಐಡಿಯಾನಿಂದ ಪ್ರದರ್ಶಿಸಲಾದ ಈ ಪರಿಹಾರಗಳು ಹೆಚ್ಚಾಗಿ 5G ನೆಟ್‌ವರ್ಕ್ ಅನ್ನು ಆಧರಿಸಿವೆ.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile