2G ಮತ್ತು 3G ಬಳಸುತ್ತಿದ್ದ BSNL ಬಳಕೆದಾರರಿಗೆ ಈಗ FREE 4G Sim ಲಭ್ಯ! ಪಡೆಯುವ ವಿಧಾನವೇನು?

2G ಮತ್ತು 3G ಬಳಸುತ್ತಿದ್ದ BSNL ಬಳಕೆದಾರರಿಗೆ ಈಗ FREE 4G Sim ಲಭ್ಯ! ಪಡೆಯುವ ವಿಧಾನವೇನು?
HIGHLIGHTS

BSNL ತನ್ನ 4G ಸೇವೆಯನ್ನು ವಿಸ್ತರಿಸಲು ಈಗಾಗಲೇ 50 ಟವರ್ ಸ್ಥಾಪಿಸಿ ವೇಗವಾಗಿ ಕೆಲಸ ಮಾಡುತ್ತಿದೆ.

BSNL ತಮ್ಮ 2G ಮತ್ತು 3G ಬಳಸುತ್ತಿದ್ದ BSNL ಬಳಕೆದಾರರಿಗೆ ಈಗ FREE 4G Sim ಅನ್ನು ನೀಡುತ್ತಿದೆ.

BSNL ಅತಿ ಶೀಘ್ರದಲ್ಲೇ 4G ಸೇವೆಯನ್ನು ಅಂದ್ರೆ ವರ್ಷದ ಕೊನೆಯ ಡಿಸೆಂಬರ್‌ನಲ್ಲಿ ಪ್ರಾರಂಭಿಸಲಾಗುವುದು.

ಸರ್ಕಾರಿ ಟೆಲಿಕಾಂ ಕಂಪನಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತಮ್ಮ 2G ಮತ್ತು 3G ಬಳಸುತ್ತಿದ್ದ BSNL ಬಳಕೆದಾರರಿಗೆ ಈಗ FREE 4G Sim ಅನ್ನು ನೀಡುತ್ತಿದೆ. ಆದ್ದರಿಂದ ಈ ಸೌಲಭ್ಯವನ್ನು ನೀವು ಅಥವಾ ನಿಮಗೆ ತಿಳಿದವರೊಂದಿಗೆ ಹಂತ ಹಂತವಾಗಿ ಮಾರ್ಗದಶನ ನೀಡಲು ಈ ಲೇಖನವನ್ನು ಬರೆಯಲಾಗುತ್ತಿದೆ.

BSNL ತನ್ನ 4G ಸೇವೆಯನ್ನು ವಿಸ್ತರಿಸಲು ವೇಗವಾಗಿ ಕೆಲಸ ಮಾಡುತ್ತಿದೆ. BSNL ಅತಿ ಶೀಘ್ರದಲ್ಲೇ 4G ಸೇವೆಯನ್ನು ಅಂದ್ರೆ ವರ್ಷದ ಕೊನೆಯ ಡಿಸೆಂಬರ್‌ನಲ್ಲಿ ಪ್ರಾರಂಭಿಸಲಾಗುವುದೆಂದು ಕಂಪನಿ ಈ ಮೊದಲು IMC 2024 ವೇಳೆಗೆ ಹೇಳಿದ್ದು ಇದರಡಿಯಲ್ಲಿ ತಮ್ಮ ಬಳಕೆದಾರರಿಗೆ ಇಂದಿನಿಂದ ಉಚಿತ ಅಪ್‌ಗ್ರೇಡ್ ಸಿಮ್‌ಗಳನ್ನು (FREE 4G Sim) ನೀಡಲು ಆರಂಭಿಸಿದೆ.

Also Read: 8GB RAM ಮತ್ತು 32MP ಸೆಲ್ಫಿ ಕ್ಯಾಮೆರಾವುಳ್ಳ Realme P2 Pro 5G ಈಗ ಅತಿ ಕಡಿಮೆ ಬೆಲೆಗೆ ಲಭ್ಯ!

BSNL ಬಳಕೆದಾರರಿಗೆ ಈಗ FREE 4G Sim ಆಫರ್!

ವಾಸ್ತವವಾಗಿ 4G ಬಿಡುಗಡೆಗೆ ಮುಂಚೆಯೇ ಕಂಪನಿಯು ಅದ್ಭುತ ಕೊಡುಗೆಯನ್ನು ತಂದಿದೆ. BSNL ಬಳಕೆದಾರರು ತಮ್ಮ ಹಳೆಯ 2G ಅಥವಾ 3G ಸಿಮ್ ಅನ್ನು 4G ಸಿಮ್‌ಗೆ ಉಚಿತವಾಗಿ ಅಪ್‌ಗ್ರೇಡ್ ಮಾಡಬಹುದು ಎಂದು BSNL ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್‌ ಮಾಡಿ ಇದರ ಮಾಹಿತಿ ನೀಡಿದೆ. ಸಿಮ್ ಅನ್ನು ಅಪ್‌ಗ್ರೇಡ್ ಮಾಡಲು ಬಳಕೆದಾರರು ತಮ್ಮ ಮನೆಯ ಸಮೀಪವಿರುವ ಯಾವುದೇ BSNL ಗ್ರಾಹಕ ಸೇವಾ ಕೇಂದ್ರಕ್ಕೆ ಭೇಟಿ ನೀಡಬೇಕು. ಇದಕ್ಕಾಗಿ ಗ್ರಾಹಕರಿಂದ ಯಾವುದೇ ರೀತಿಯ ಹಣವನ್ನು ಪಡೆಯದೆ ಉಚಿತವಾಗಿ ನೀಡುತ್ತಿದೆ.

ಉಚಿತ 4G ಸಿಮ್ ಇಲ್ಲಿ ಲಭ್ಯವಿರುತ್ತದೆ

ಹಾಗಾದ್ರೆ ಇದನ್ನು ಪಡೆಯುವುದು ಹೇಗೆ ಎನ್ನುವ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ. ಕಂಪನಿಯು ತನ್ನ 4G ಸೇವೆಗಳನ್ನು ಹೆಚ್ಚಿಸಲು ಈ ಕೊಡುಗೆಯನ್ನು ನೀಡುತ್ತಿದೆ ಎಂದು ತೋರುತ್ತದೆ. ಈ ಕೊಡುಗೆಯನ್ನು ಪಡೆಯಲು BSNL ಗ್ರಾಹಕ ಸೇವಾ ಕೇಂದ್ರವನ್ನು ಹೊರತುಪಡಿಸಿ ನೀವು ಫ್ರ್ಯಾಂಚೈಸ್ ಅಥವಾ ರಿಟೇಲರ್ ಸ್ಟೋರ್ ಅಧಿಕಾರಿಯನ್ನು ಸಂಪರ್ಕಿಸಬಹುದು.

BSNL FREE 4G Sim

ಇದರೊಂದಿಗೆ ನೀವು 1503 ಅಥವಾ 18001801503 ಸಂಖ್ಯೆಗೆ ಕರೆ ಮಾಡಬಹುದು. ಆದಾಗ್ಯೂ ಅದರೊಂದಿಗೆ ಕೆಲವು ನಿಯಮಗಳು ಮತ್ತು ನಿಬಂಧನೆಗಳು ಇವೆ ಅದರ ಬಗ್ಗೆ ಮಾಹಿತಿಯನ್ನು ನವೀಕರಿಸುವ ಸಮಯದಲ್ಲಿ ನಿಮಗೆ ನೀಡಲಾಗುತ್ತದೆ. ಅಲ್ಲದೆ ನೀವು ನೇರವಾಗಿ BSNL ಸ್ಟೋರ್ಗಳಿಗೂ ಭೇಟಿ ನೀಡಿ ಪಡೆಯಬಹುದು.

BSNL 4G ಸ್ಪೀಡ್ ಎಷ್ಟು?

ಪ್ರಸ್ತುತ ಪಿಟಿಐ ವರದಿಯ ಪ್ರಕಾರ BSNL ನ 4G ಸೇವೆಗಳು ಕೆಲವೇ ದಿನಗಳಲ್ಲಿ ದೇಶಾದ್ಯಂತ ಪ್ರಾರಂಭವಾಗಲಿದೆ. ಅದೇ ಸಮಯದಲ್ಲಿ BSNL 4G ನೆಟ್‌ವರ್ಕ್‌ನಲ್ಲಿ 40 ರಿಂದ 45mbps ವೇಗವನ್ನು ಒದಗಿಸಲಾಗುವುದು ಎಂದು ವರದಿಯಲ್ಲಿ ಹೇಳಲಾಗಿದೆ. ಅಲ್ಲದೆ ಕಂಪನಿ 4G ಮತ್ತು 5G ನೆಟ್‌ವರ್ಕ್‌ಗಳಿಗಾಗಿ ಸುಮಾರು 1.12 ಲಕ್ಷ ಟವರ್‌ಗಳನ್ನು ಸ್ಥಾಪಿಸಲಿದ್ದು ಅದರಲ್ಲಿ ಸುಮಾರು 50 ಸಾವಿರ ಟವರ್‌ಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo