ದೇಶದಲ್ಲಿ ದೂರ ಸಂಪರ್ಕದ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಮುಖ್ಯವಾಗಿ ಸಿಮ್ ಪೋರ್ಟಿಂಗ್‌ಗೆ ಮೊಬೈಲ್ ನಂಬರ್ ಪೋರ್ಟೆಬಿಲಿಟಿ (MNP) ಸಂಬಂಧಿಸಿದ ಹೊಸ ನಿಯಮಗಳನ್ನು ತಿದ್ದುಪಡಿ ಮಾಡಿ ನಿಯಮಗಳನ್ನು ಬದಲಾಯಿಸಿದೆ. ಏನಪ್ಪಾ ಆ ಹೊಸ ನಿಯಮವೆಂದರೆ ಇದೆ 1ನೇ ಜುಲೈ 2024 ರಿಂದ ಜಾರಿಗೆ ಬರಲಿರುವ ಹೊಸ ಮಾರ್ಗಸೂಚಿಯ ಅಡಿಯಲ್ಲಿ ಬಳಕೆದಾರರು ಒಂದು ನೆಟ್‌ವರ್ಕ್‌ನಿಂದ ಇನ್ನೊಂದು ಸಿಮ್ ಕಾರ್ಡ್ (SIM Card) ನಂತರದ ಸ್ವಾಪ್ ಅಥವಾ ಮೊಬೈಲ್ ಸಂಖ್ಯೆಯನ್ನು ಬದಲಾವಣೆಗೆ ಅರ್ಹರಾಗಲು ಮೊದಲು ಈ ಅವಧಿ ಕೇವಲ 3 ದಿನಗಳಾಗಿತ್ತು ಆದರೆ ಈಗ 7 ದಿನಗಳ ಅವಧಿಯವರೆಗೆ ಕಾಯಬೇಕಾಗುತ್ತದೆ.
Also Read: ನಿಮ್ಮ Aadhaar ಕಾರ್ಡ್‌ನಲ್ಲಿ ಅಪ್ಪಿತಪ್ಪಿ ಈ ತಪ್ಪನ್ನು ಮಾಡಲೆಬೇಡಿ! ಭಾರಿ ದಂಡದೊಂದಿಗೆ ಜೈಲು ಸೇರಬಹುದು!
ಭಾರತದಲ್ಲಿ ಸಿಮ್ ಕಾರ್ಡ್ (SIM Card) ಅನುಸರಿಸಿ ಮೊಬೈಲ್ ನಂಬರ್ ಪೋರ್ಟೆಬಿಲಿಟಿಗೆ (MNP) ಸಂಬಧಿಸಿದಂತೆ ಹೊಸ ನಿಯಮಗಳನ್ನು 1ನೇ ಜೂಲೈನಿಂದ TRAI ಬದಲಾಯಿಸಿದೆ. ಒಂದು ವೇಳೆ ಸಿಮ್ ಕಾರ್ಡ್ (SIM Card) ಕದ್ದಿದ್ದರೆ ಅಥವಾ ಹಾನಿಗೊಳಗಾದರೆ ನೀವು ಸ್ವಲ್ಪ ಸಮಯ ಕಾಯಬೇಕಾಗುತ್ತದೆ. ಈ ಹಿಂದೆ ಸಿಮ್ ಕಾರ್ಡ್ ಕಳುವಾದಾಗ ಅಥವಾ ಹಾನಿಗೊಳಗಾದ ನಂತರ ನೀವು ಅಂಗಡಿಯಿಂದ ಸಿಮ್ ಕಾರ್ಡ್ ಅನ್ನು ತಕ್ಷಣವೇ ಪಡೆದುಕೊಳ್ಳುತ್ತೀರಿ.
ಆದರೆ ಈಗ ಅದರ ಲಾಕ್ ಅವಧಿಯನ್ನು ವಿಸ್ತರಿಸಲಾಗಿದೆ. ಈಗ ಬಳಕೆದಾರರು 7 ದಿನಗಳವರೆಗೆ ಕಾಯಬೇಕಾಗುತ್ತದೆ ಇದರ ನಂತರ ಮಾತ್ರ ಬಳಕೆದಾರರು ಹೊಸ ಸಿಮ್ ಕಾರ್ಡ್ (SIM Card) ಅನ್ನು ಪಡೆಯುತ್ತಾರೆ. ಅಂದರೆ MNP ನಿಯಮದ ಬದಲಾವಣೆಯ ನಂತರ ಜಾರಿಗೆ ಬಂದಿರುವ ಮುಂದಿನ ಏಳು ದಿನಗಳ ನಂತರವೇ ನೀವು ಈ ಸಿಮ್ ಕಾರ್ಡ್ ಅನ್ನು ಪಡೆಯುತ್ತೀರಿ. ವಾಸ್ತವವಾಗಿ ಈ ನಿರ್ಧಾರವನ್ನು TRAI ತೆಗೆದುಕೊಂಡಿದ್ದು ಇಮ್ ಕಾರ್ಡ್ ವಂಚನೆಯನ್ನು ತಡೆಯಲು ಮುಂದಾಗಿದೆ.
ಹಲವು ಪ್ರಕರಣಗಳಲ್ಲಿ ಒಮ್ಮೆ ಸಿಮ್ ಕಾರ್ಡ್ (SIM Card) ಕದ್ದರೆ ಮತ್ತೊಂದು ಸಿಮ್ ಕಾರ್ಡ್ ನಲ್ಲಿ ನಂಬರ್ ಆಕ್ಟಿವೇಟ್ ಆಗಿರುವುದು ಬೆಳಕಿಗೆ ಬಂದಿದೆ. ಇದಾದ ನಂತರ ಮತ್ತೊಂದು ಘಟನೆ ನಡೆದಿದೆ. ಈಗ ಆನ್‌ಲೈನ್ ವಂಚನೆಗಳಂತಹ ಘಟನೆಗಳನ್ನು ತಡೆಯುವ ಉದ್ದೇಶದಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಕುರಿತು ಮಾರ್ಚ್‌ನಲ್ಲಿ ಟ್ರಾಯ್ ಅಧಿಸೂಚನೆ ಹೊರಡಿಸಿತ್ತು.
ಸಿಮ್ ಸ್ವ್ಯಾಪಿಂಗ್ (SIM Swap) ಎಂದರೆ ಇನ್ನೊಂದು ಸಿಮ್ ಕಾರ್ಡ್‌ನಲ್ಲಿ ಅದೇ ಸಂಖ್ಯೆಯನ್ನು ಸಕ್ರಿಯಗೊಳಿಸುವುದು ಎಂದರ್ಥ. ಈಗ ಅದೇ ಸಂಖ್ಯೆಯನ್ನು ಮತ್ತೊಂದು ಸಿಮ್ ಕಾರ್ಡ್‌ನಲ್ಲಿ ಸ್ವಾಧೀನಪಡಿಸಿಕೊಂಡಾಗ ಅಂತಹ ಘಟನೆಗಳು ವೇಗವಾಗಿ ಹೆಚ್ಚುತ್ತಿವೆ. ಇಂತಹ ಸಿಮ್ ಕಾರ್ಡ್ (SIM Card) ಘಟನೆಗಳನ್ನು ತಪ್ಪಿಸಲು ಸಿಮ್ ವಿನಿಮಯದ ಅವಧಿಯನ್ನು ವಿಸ್ತರಿಸಲು ನಿರ್ಧರಿಸಲಾಗಿದೆ.