ರಾಜ್ಯ-ಚಾಲಿತ ಟೆಲಿಕಾಂ ಕಂಪನಿ ಮಹಾನಗರ ಟೆಲಿಫೋನ್ ನಿಗಮ್ ಲಿಮಿಟೆಡ್ (MTNL) ಹೊರತುಪಡಿಸಿ ಬೇರೆ ಯಾವುದೂ ಅಲ್ಲ.
ಜಿಯೋ, ಏರ್‌ಟೆಲ್, VI ನಂತಹ ಟೆಲಿಕಾಂ ಕಂಪನಿಗಳು ಅಂತಹ ಯೋಜನೆಗಳತ್ತ ಮುಖ ಮಾಡೋದಿಲ್ಲ.
ಟೆಲಿಕಾಂ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಲು ಕಂಪನಿಗಳು ತಮ್ಮ ಗ್ರಾಹಕರಿಗಾಗಿ ನಿರಂತರವಾಗಿ ವಿವಿಧ ರೀತಿಯ ರೀಚಾರ್ಜ್ ಪ್ಲಾನ್ ಅನ್ನು ಬಿಡುಗಡೆ ಮಾಡುತ್ತಿದೆ.
ದೇಶದಲ್ಲಿ ಈ ಯೋಜನೆಯನ್ನು ರಾಜ್ಯ-ಚಾಲಿತ ಟೆಲಿಕಾಂ ಕಂಪನಿ ಮಹಾನಗರ ಟೆಲಿಫೋನ್ ನಿಗಮ್ ಲಿಮಿಟೆಡ್ (MTNL) ಹೊರತುಪಡಿಸಿ ಬೇರೆ ಯಾವುದೂ ಅಲ್ಲ. ಟೆಲಿಕಾಂ ಮಾರುಕಟ್ಟೆಯಲ್ಲಿ ಅನೇಕ ಖಾಸಗಿ ಕಂಪನಿಗಳು ಮತ್ತು ಸರ್ಕಾರಿ ಸಂಸ್ಥೆಗಳಿವೆ. ಏಕೆಂದರೆ ಜಿಯೋ, ಏರ್‌ಟೆಲ್, VI ನಂತಹ ಟೆಲಿಕಾಂ ಕಂಪನಿಗಳು ಅಂತಹ ಯೋಜನೆಗಳತ್ತ ಮುಖ ಮಾಡೋದಿಲ್ಲ. ಈ ಟೆಲಿಕಾಂ ಕಂಪನಿಗಳು ನಿರಂತರವಾಗಿ ತಮ್ಮ ಬಳಕೆದಾರರಿಗಾಗಿ ಅತ್ಯುತ್ತಮ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯ ಮಾಡುತ್ತಲೇ ಇದ್ದಾರೆ. ತಮ್ಮ ಗ್ರಾಹಕರಿಗೆ ಕೈಗೆಟುಕುವ ರೀತಿಯಲ್ಲಿ ಅವರ ಬಜೆಟ್‌ಗೆ ಸರಿಹೊಂದುವ ರೀತಿಯಲ್ಲಿ ಟೆಲಿಕಾಂ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಲು ಕಂಪನಿಗಳು ತಮ್ಮ ಗ್ರಾಹಕರಿಗಾಗಿ ನಿರಂತರವಾಗಿ ವಿವಿಧ ರೀತಿಯ ರೀಚಾರ್ಜ್ ಪ್ಲಾನ್ ಅನ್ನು ಬಿಡುಗಡೆ ಮಾಡುತ್ತಿದೆ.
MTN L ತಮ್ಮ ಗ್ರಾಹಕರಿಗೆ ಬಂಪರ್ ರೀಚಾರ್ಜ್ ಆಫರ್
ಇತ್ತೀಚೆಗೆ ಜಿಯೋ ಮಾತ್ರವಲ್ಲದೆ ಏರ್‌ಟೆಲ್, ವಿಐ, ಬಿಎಸ್ಎನ್ಎಲ್, MTN L ಸಹ ತಮ್ಮ ಬಳಕೆದಾರರಿಗೆ ಅಗ್ಗದ ಯೋಜನೆಗಳನ್ನು ನೀಡುತ್ತಿವೆ. MTN LO ಇದೀಗ ತಮ್ಮ ಗ್ರಾಹಕರಿಗೆ ಬಂಪರ್ ರೀಚಾರ್ಜ್ ಆಫರ್ ತಂದಿದೆ. ಅದರ ಸಂಪೂರ್ಣ ವಿವರಗಳನ್ನು ಇಲ್ಲಿ ತಿಳಿಯೋಣ. ಪ್ರಸ್ತುತ ಟೆಲಿಕಾಂ ಕಂಪನಿಗಳಲ್ಲಿ ಜಿಯೋ ಮುಂಚೂಣಿಯಲ್ಲಿದೆ. ಕಡಿಮೆ ವೆಚ್ಚದಲ್ಲಿ ಗ್ರಾಹಕರಿಗೆ ಹೆಚ್ಚಿನ ಪ್ರಯೋಜನಗಳನ್ನು ಒದಗಿಸುವ ಮೂಲಕ ಜಿಯೋ ಈ ಸ್ಥಾನವನ್ನು ಪಡೆದುಕೊಂಡಿದೆ. ಇದರಲ್ಲಿ 5G ನೆಟ್‌ವರ್ಕ್ ಕೂಡ ಲಭ್ಯವಾಗಿದೆ ಎಂದು ತಿಳಿದುಬಂದಿದೆ. ಆದರೆ ಜಿಯೋ ಜೊತೆಗೆ ಏರ್‌ಟೆಲ್, ವಿಐ, ಮತ್ತು ಬಿಎಸ್ಎನ್ಎಲ್ ತಮ್ಮ ಬಳಕೆದಾರರಿಗೆ ಆಫರ್‌ಗಳೊಂದಿಗೆ ರೀಚಾರ್ಜ್‌ಗಳನ್ನು ನೀಡುತ್ತಿವೆ. ಹೀಗಾಗಿ ಈ ಟೆಲಿಕಾಂ ಕಂಪನಿಗಳು ಹೆಚ್ಚಿನ ಪ್ರಯೋಜನಗಳೊಂದಿಗೆ ಕಡಿಮೆ ವೆಚ್ಚದ ರೀಚಾರ್ಜ್ ಯೋಜನೆಗಳನ್ನು ನೀಎಉವ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತವೆ.
ಇದು ಲೈಫ್‌ಟೈಮ್ ವ್ಯಾಲಿಡಿಟಿ ಪ್ಲಾನ್ ಆದರೆ ಪ್ರತಿ ಸೆಕೆಂಡ್‍ಗೆ 2 ಪೈಸೆ
ಮಹಾನಗರ ಟೆಲಿಫೋನ್ ನಿಗಮ್ ಲಿಮಿಟೆಡ್ (MTNL) ಕೂಡ ಗ್ರಾಹಕರನ್ನು ಆಕರ್ಷಿಸಲು ರೀಚಾರ್ಜ್ ಕೊಡುಗೆಗಳನ್ನು ಇದೀಗ ಬಿಡುಗಡೆ ಮಾಡಿದೆ. ಈ ಕಂಪನಿಯ ಯೋಜನೆಯಲ್ಲಿ ಗ್ರಾಹಕರು ಕೇವಲ ರೂ. 225 ರೀಚಾರ್ಜ್‌ನೊಂದಿಗೆ ಲೈಫ್ಟಯಮ್ ವ್ಯಾಲಿಡಿಟಿಯನ್ನು ಪಡೆಯಬಹುದಾಗಿದೆ. ಈ ಹಣವನ್ನು ಒಮ್ಮೆ ಮಾತ್ರ ರೀಚಾರ್ಜ್ ಮಾಡಬೇಕು. ಈ ಯೋಜನೆಯು ನಿಮಗೆ ಸಿಮ್ ಮತ್ತು ರೀಚಾರ್ಜ್ ಪ್ಲಾನ್ನ ವ್ಯಾಲಿಡಿಯನ್ನು ಲೈಫ್‌ಟೈಮ್ ಆಗಿ ನೀಡುತ್ತದೆ. ಕರೆಗಳನ್ನು ಮಾಡಲು ಬಳಕೆದಾರರಿಗೆ 100 ನಿಮಿಷಗಳ ಕಾಲ ಉಚಿತ ಅವಧಿಯನ್ನು ನೀಡಲಾಗುತ್ತದೆ. ಹೋಮ್ ನೆಟ್‌ವರ್ಕ್‌ಗೆ ಕರೆಗಳಿಗೆ ರೂ. 0.02 ದರ ಕಟ್ ಆಗುತ್ತದೆ. ಎಸ್ಟಿಡಿ ಕರೆಗಳ ಶುಲ್ಕದ ದರವೂ ಹಾಗೆಯೇ ಇರುತ್ತದೆ.
ನೀವು ವಿಡಿಯೋ ಕರೆಗಾಗಿ ನಿಮಿಷಕ್ಕೆ 0.60 ರೂಪಾಯಿಗಳಷ್ಟು ಹಣ ಕಟ್ ಆಗುತ್ತದೆ. ಇತರ ನೆಟ್‌ವರ್ಕ್‌ಗಳಿಗೆ ಕರೆಗಳಿಗೆ ರೂ. 0.90 ಪೈಸೆಯಷ್ಟು ಹಣ ಕಟ್ ಆಗುತ್ತದೆ. ಎಸ್ಎಮ್ಎಸ್ ವಿಷಯಕ್ಕೆ ಬಂದರೆ. ಸ್ಥಳೀಯ ಎಸ್ಎಮ್ಎಸ್ ವೆಚ್ಚ 0.50 ಪೈಸೆ.. ರಾಷ್ಟ್ರೀಯ ಎಸ್ಎಮ್ಎಸ್ ವೆಚ್ಚ ರೂ. 1.50 ಮತ್ತು ಅಂತಾರಾಷ್ಟ್ರೀಯ ಎಸ್ಎಮ್ಎಸ್ ಬೆಲೆ ರೂ. 4 ರಿಂದ 5 ರೂಪಾಯಿಯಾಗಿರುತ್ತದೆ. ಪ್ರತಿ ಎಮ್ಬಗೆ 3 ಪೈಸೆಯಂತೆ ಡೇಟಾವನ್ನು ವಿಧಿಸಲಾಗುತ್ತದೆ. ಕಂಪನಿಯು ಈ ಯೋಜನೆಯನ್ನು ದೀರ್ಘಕಾಲದವರೆಗೆ ನೀಡುತ್ತಿದೆಯಾದರೂ, ಅನೇಕ ಬಳಕೆದಾರರಿಗೆ ಇದರ ಬಗ್ಗೆ ತಿಳಿದಿಲ್ಲ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile