ಭಾರತದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ 2024 ಮುಗಿದ ನಂತರ ಟೆಲಿಕಾಂ ಕಂಪನಿಗಳ ತಮ್ಮ ಮೊಬೈಲ್ ರಿಚಾರ್ಜ್ (Mobile Recharge) ಬಾಲ ಒಂದಿಷ್ಟು ಬೆಳೆಯಲಿರುವುದಾಗಿ ಮಾಹಿತಿಗಳು ಭಾರಿ ಸದ್ದು ಮಾಡುತ್ತಿದೆ. ಈ ಭಾರಿ ಪ್ರಸ್ತುತ ಲಭ್ಯವಿರುವ ಯೋಜನೆಗಳಲ್ಲಿ ಸುಮಾರು 15-17% ನಷ್ಟು ಬೆಲೆಯನ್ನು ಏರಿಸುವುದುದಾಗಿ ಇತ್ತೀಚೆಗೆ ಬಿಡುಗಡೆಯಾದ ವರದಿಗಳು ಹೇಳುತ್ತಿವೆ. ಅಲ್ಲದೆ ಈ ವರ್ಷದ ಲೋಕಸಭಾ ಚುನಾವಣೆ ಇಂದೇ ತಿಂಗಳ 19ನೇ ಏಪ್ರಿಲ್ 2024 ರಿಂದ 1ನೇ ಜೂನ್ 2024 ವರೆಗೆ ಒಟ್ಟಾರೆಯಾಗಿ 7 ವಿವಿಧ ಹಂತಗಳಲ್ಲಿ ನಡೆಯಲಿವೆ.
ಚುನಾವಣೆಯ ನಂತರ ಜೇಬಿಗೆ ಬೀಳಲಿದೆ ಕತ್ತರಿ!
ಅಲ್ಲದೆ 4ನೇ ಜೂನ್ 2024 ನಂತರ ಲೋಕಸಭಾ ಚುನಾವಣೆಯ ಮತ ಎಣಿಕೆ ಶುರುವಾಗಲಿದೆ. ಇದರೊಂದಿಗೆ ಟೆಲಿಕಾಂ ಕಂಪನಿಗಳ ಮಾತೆಂದರೆ ತಮ್ಮ ಮೊಬೈಲ್ ರಿಚಾರ್ಜ್ (Mobile Recharge) ಹೆಚ್ಚಳದ ಹಂತವು ಬಹಳ ದಿನಗಳಿಂದ ಬಾಕಿ ಉಳಿದಿದ್ದು ಈ ವರ್ಷದ ಲೋಕಸಭಾ ಚುನಾವಣೆಯ ನಂತರ ಹೆಚ್ಚಳ ಖಚಿತವಾಗಿ ಏರಿಕೆ ಕಾಣಲಿರುವುದನ್ನು ನಂಬಹುದು. ಈ ಬೆಲೆ ಹೆಚ್ಚಳಿಕೆಯಲ್ಲಿ ಮೊದಲನೆಯದಾಗಿ ಭಾರ್ತಿ ಏರ್ಟೆಲ್ ತನ್ನ ಪ್ರಸ್ತಾವವನ್ನು ಸಾಧಿಸಿದ್ದು ಅತಿ ಹೆಚ್ಚಾಗಿ ಬೆಲೆಯನ್ನು ಏರಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ ಏರ್ಟೆಲ್ ಗ್ರಾಹಕರು ಬೆರಸವನ್ನು ವ್ಯಕ್ತಪಡಿಸಿದ್ದಾರೆ.
ಬರೋಬ್ಬರಿ 3 ವರ್ಷಗಳ ನಂತರ ಮೊಬೈಲ್ ರಿಚಾರ್ಜ್ (Mobile Recharge) ಬೆಲೆ ಹೆಚ್ಚಳ
ಭಾರತದಲ್ಲಿ ಟೆಲಿಕಾಂ ಕಂಪನಿಗಳು ಪ್ರತಿ ಬಾರಿ ಒಂದಲ್ಲ ಒಂದು ಹೊಸ ಯೋಜನೆಗಳನ್ನು ತಮ ಗ್ರಾಹಕರಿಗೆ ನೀಡುತ್ತಲೇ ಬರುತ್ತಿದೆ. ಆದರೆ ಈಗ ಪ್ರಸ್ತುತ ಬರೋಬ್ಬರಿ 3 ವರ್ಷಗಳ ನಂತರ ಈಗ ಈ ವರ್ಷದ ಲೋಕಸಭಾ ಚುನಾವಣೆಯ ನಂತರ ತಮ್ಮ ಮೊಬೈಲ್ ರಿಚಾರ್ಜ್ (Mobile Recharge) ಬೆಲೆಯನ್ನು ಹೆಚ್ಚಿಸಲು ಸಜ್ಜಾಗಿವೆ. ಈ ಮೊದಲು ಕಂಪನಿಗಳು 2021 ರಲ್ಲಿ ಕೊನೆಯ ಬಾರಿಗೆ 20% ನಷ್ಟು ಬೆಲೆಯನ್ನು ಹೆಚ್ಚಿಸಿದ್ದು ಸತತ 3 ವರ್ಷಗಳಿಗೆ ಅದೇ ಬೆಲೆಯಲ್ಲಿ ಮಾರುಕಟ್ಟೆಯನ್ನು ಹಾಳುತ್ತಿವೆ. ಈ ಪ್ರಕಾರ 17% ಈಗ 17% ರಷ್ಟು ಶುಲ್ಕ ಹೆಚ್ಚಳಗೊಳಿಸಿದ ಯೋಜನೆಯ ಬೆಲೆಯ ಉದಾಹರಣೆ ನೋಡುವುದಾದರೆ ಮೊದಲು 300 ರೂ ರೀಚಾರ್ಜ್ ಬೆಲೆ ಹೆಚ್ಚಳದ ನಂತರ 351 ರೂಪಾಯಿ ಪಾವತಿಸಬೇಕಾಗುತ್ತದೆ. ಆದರೆ ಈ ವರ್ಷ ಈ ಮೊತ್ತ ಎಲ್ಲಿಯವರೆಗೆ ಏರಿಕೆಯಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಏರ್ಟೆಲ್ ಇದರ ಬಗ್ಗೆ ಹೇಳೋದೇನು?
ಭಾರತದ ಎರಡನೇ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿರುವ ಭಾರ್ತಿ ಏರ್ಟೆಲ್ (Airtel) ತಮ್ಮ ಈ ವರ್ಷದ ಮೊಬೈಲ್ ರಿಚಾರ್ಜ್ (Mobile Recharge) ಬೆಲೆಯನ್ನು ಹೆಚ್ಚಿಸುವ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನೀಡಿದ್ದು ತಮ್ಮ ಗ್ರಾಹಕರ (ARPU) ಹೆಚ್ಚಿಸುವ ಸಲುವಾಗಿ ಈ ಹೆಜ್ಜೆಯನ್ನು ಇಡಲಾಗಿದೆ. ಎಲ್ಲಡೆ ಕಂಪನಿ ಈಗಾಗಲೇ ಇದರ ಬಗ್ಗೆ ತಮ್ಮ ಮುಂಬರಲಿರುವ ಮೊಬೈಲ್ ರಿಚಾರ್ಜ್ (Mobile Recharge) ಬೆಲೆ ಹೆಚ್ಚಳದ ಬ್ಲೂಪ್ರಿಂಟ್ ಅನ್ನು ಸಹ ಈಗಾಗಲೇ ಸಿದ್ಧಗೊಳಿಸಿರುವುದಾಗಿ ವರದಿಯಾಗಿದೆ. ಅಲ್ಲದೆ ಏರ್ಟೆಲ್ ಪ್ರಕಾರ ವರ್ಷಕ್ಕೆ ಕೇವಲ 1% ಪ್ರತಿಶತದಷ್ಟು ಮಾತ್ರ ಆದಾಯ ಬೆಳೆಯುತ್ತಿದೆಯೊಂದು ಕಂಪನಿ ಹೇಳಿದೆ. ಒಟ್ಟಾರೆಯಾಗಿ ನಾವು ನೀವೆಲ್ಲ ಈ ಬೆಲೆ ಹೆಚ್ಚಳವನ್ನು ಯಾವ ರೀತಿಯಾಗಿ ಎದುರಿಸುತ್ತೇವೋ ಅದನ್ನು ಕಾಡು ನೋಡಬೇಕಿದೆ ಅಷ್ಟೇ.
Also Read: WhatsApp Messages: ಆಕಸ್ಮಿಕವಾಗಿ ಡಿಲೀಟ್ ಆದ ವಾಟ್ಸಾಪ್ ಮೆಸೇಜ್‌ಗಳನ್ನು ಮತ್ತೇ ಪಡೆಯುವುದು ಹೇಗೆ?
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile