digit zero1 awards

Mahakumbha 2025: ಮಹಾ ಕುಂಭ ಮೇಳದ ನೇರ ದರ್ಶನಕ್ಕಾಗಿ ಹೊಸ ಆಫರ್ ನೀಡಿದ ವೊಡಾಫೋನ್‌ ಐಡಿಯಾ!

Mahakumbha 2025: ಮಹಾ ಕುಂಭ ಮೇಳದ ನೇರ ದರ್ಶನಕ್ಕಾಗಿ ಹೊಸ ಆಫರ್ ನೀಡಿದ ವೊಡಾಫೋನ್‌ ಐಡಿಯಾ!
HIGHLIGHTS

Vi ಅಪ್ಲಿಕೇಶನ್ ನೆರವಿನಿಂದ ಮಹಾ ಕುಂಭ ಮೇಳದ ಪವಿತ್ರ ಸ್ನಾನ ಮತ್ತು ಗಂಗಾ ಆರತಿಯ ನೇರ ಪ್ರಸಾರ

Shemaroo Entertainment ಮೂಲಕ ಉಚಿತವಾಗಿ Mahakumbha 2025 ವೀಕ್ಷಿಸಬಹುದು.

Mahakumbha 2025: ಭಾರತದಲ್ಲಿ ವೊಡಾಫೋನ್‌ ಐಡಿಯಾ ಮಾತ್ರ ತಮ್ಮ ಬಳಕೆದಾರರು Shemaroo Entertainment ನೆರವಿನಿಂದ ತ್ರಿವೇಣಿ ಸಂಗಮ ಹಾಗೂ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದ (Mahakumbha 2025) ದರ್ಶನ ನೀಡಲು ಮುಂದಾಗಿದೆ. ವೊಡಾಫೋನ್‌ ಐಡಿಯಾ ಮೂವೀಸ್‌ ಆ್ಯಂಡ್‌ ಟಿವಿ ಆ್ಯಪ್‌ ಅಥವಾ ವೊಡಾಫೋನ್‌ ಐಡಿಯಾ ಅಪ್ಲಿಕೇಶನ್ ನೆರವಿನಿಂದ ಪವಿತ್ರ ಸ್ನಾನ, ಅಖಾರಾ ಮೆರವಣಿಗೆ ಮತ್ತು ಗಂಗಾ ಆರತಿಗಳ ನೇರ ಪ್ರಸಾರವನ್ನು Shemaroo Entertainment ಮೂಲಕ ವೀಕ್ಷಿಸಬಹುದು. ಸಂತರು ಮತ್ತು ಆಧ್ಯಾತ್ಮಿಕ ಮುಖಂಡರ ಜೊತೆಗಿನ ಸಂದರ್ಶನಗಳೂ ಇರಲಿವೆ.

ಮಹಾ ಕುಂಭ ಮೇಳದ ನೇರ ದರ್ಶನ (Live Darshan) 2025

ಪವಿತ್ರ ನದಿಯ ದಂಡೆಯಲ್ಲಿ ಭಕ್ತಾದಿಗಳು ತಿಂಗಳ ಕಾಲ ಇರುವುದು (ಕಲ್ಪವಾಸಿಸ್‌) ಮತ್ತು ಮೊದಲ ಬಾರಿಗೆ ಕುಂಭಮೇಳಕ್ಕೆ ಭೇಟಿ ನೀಡಿದವರ ಹೃದಯಸ್ಪರ್ಶಿ ಕತೆಗಳ ವಿವರಗಳೂ ಇರಲಿವೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ 12 ವರ್ಷಗಳಿಗೊಮ್ಮೆ ನಡೆಯುವ ಈ ಮಹಾ ಕುಂಭ ಮೇಳವು (Mahakumbha 2025) ಇದನ್ನು ಈ ಬಾರಿ 13ನೇ ಜನವರಿ 2025 ರಿಂದ 26ನೇ ಫೆಬ್ರುವರಿ 2025 ರವರೆಗೆ ನಡೆಯಲಿದೆ. ಇದನ್ನು ಬರೋಬ್ಬರಿ 156km ವಿಶಾಲ ಪ್ರದೇಶದಲ್ಲಿ ವ್ಯಾಪಿಸಲಿರುವ ಈ ಮೇಳದಲ್ಲಿ ಭಾಗಿಯಾಗುವವರ ನೆರವಿಗಾಗಿ 22 ತೇಲುವ ಸೇತುವೆಗಳನ್ನು ನಿರ್ಮಿಸಲಾಗಿದೆ.

Also Read: Internet Speed: ನಿಮ್ಮ 4G ಫೋನ್‌ನಲ್ಲಿ 5G ಇಂಟರ್ನೆಟ್ ಸ್ಪೀಡ್​ ಬೇಕಾ? ಹಾಗಾದ್ರೆ ಈ ಟ್ರಿಕ್ ಅನುಸರಿಸಿ!

Mahakumbha 2025 ಪವಿತ್ರ ಸ್ನಾನ, ಅಖಾರಾ ಮೆರವಣಿಗೆ ಮತ್ತು ಗಂಗಾ ಆರತಿಯ ದರ್ಶನ:

ಈ ಬೃಹತ್ ಕಾರ್ಯಕ್ರಮದಲ್ಲಿ ಈ ವರ್ಷ 42 ಕೋಟಿ ಯಾತ್ರಿಕರು ಭೇಟಿ ನೀಡುವ ನಿರೀಕ್ಷೆಯಿದೆ. ಅತ್ಯಧಿಕ ಸಂಖ್ಯೆಯಲ್ಲಿ ಜನರು ಸೇರುವ ಅಭೂತಪೂರ್ವ ಕಾರ್ಯಕ್ರಮ ಇದಾಗಿದೆ. ಈ ಮಹಾ ಕುಂಭ ಮೇಳವು ಎಲ್ಲರಿಗೂ ಸುಲಭವಾಗಿ ವೀಕ್ಷಿಸುವಂತೆ ಮಾಡಲು ದೇಶದ ಪ್ರಮುಖ ದೂರ ಸಂಪರ್ಕ ಸೇವಾ ಸಂಸ್ಥೆಯಾಗಿರುವ ವೊಡಾಫೋನ್‌ ಐಡಿಯಾ ತನ್ನ Vi ಮೂವೀಸ್‌ ಆ್ಯಂಡ್‌ ಟಿವಿಯಲ್ಲಿ (Vi Movies & TV) ನೇರ ಪ್ರಸಾರ ಮಾಡಲು ಶೇಮರೂ (Shemaroo Entertainment) ಜೊತೆಗೆ ಪಾಲುದಾರಿಕೆ ಹೊಂದಿದೆ.

Vi offer Mahakumbha 2025 Darshan

ವೊಡಾಫೋನ್‌ ಐಡಿಯಾ ಗ್ರಾಹಕರು ಮಕರ ಸಂಕ್ರಾಂತಿ (ಜನವರಿ 14), ಮೌನಿ ಅಮವಾಸ್ಯೆ (ಜನವರಿ 29) ಮತ್ತು ಮಹಾ ಶಿವರಾತ್ರಿ (ಫೆಬ್ರುವರಿ 26) ರಂದು ಸಂತರು ಮತ್ತು ಭಕ್ತರು ಪವಿತ್ರ ನದಿ ನೀರಿನಲ್ಲಿ ಪವಿತ್ರ ಸ್ನಾನ (ಶಾಹಿ ಸ್ನಾನ) ಮಾಡುವುದರ ಅನುಭವ ಪಡೆಯಬಹುದು. ಬಳಕೆದಾರರು ಪ್ರತ್ಯೇಕ ಧ್ವನಿಮುದ್ರಿತ ಮಾಹಿತಿ, ಅಖಾರಾಗಳ ಭೇಟಿ, ಜಾನಪದ ಸಂಗೀತ ಮತ್ತು ಭಕ್ತಿಗೀತೆಗಳ ಸಾಂಸ್ಕೃತಿಕ ಪ್ರದರ್ಶನಗಳು ಮತ್ತು ಲಕ್ಷಾಂತರ ಯಾತ್ರಿಕರಿಗೆ ನೆರವಾಗುವ ಬೃಹತ್ ಮೂಲಸೌಲಭ್ಯಗಳ ಮಾಹಿತಿಯನ್ನೂ ಪಡೆದುಕೊಳ್ಳಬಹುದು.

ಮಹಾ ಕುಂಭಮೇಳದ ಸಕಲ ವಿವರಗಳು 2025

ಈ ಉಪಕ್ರಮವು ಜನರನ್ನು ಸಂಪರ್ಕಿಸಲು ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳುವ ವೊಡಾಫೋನ್‌ ಐಡಿಯಾ ಬದ್ಧತೆಯನ್ನು ಒತ್ತಿಹೇಳುತ್ತದೆ. ಸ್ಥಳೀಯ ಮತ್ತು ಧಾರ್ಮಿಕ ಮಾಹಿತಿಗೆ ಹೆಚ್ಚಿದ ಬೇಡಿಕೆಯಿಂದಾಗಿ 2ನೇ ಮತ್ತು 3ನೇ ಶ್ರೇಣಿಯ ನಗರಗಳಲ್ಲಿನ ಒಟಿಟಿ ವೀಕ್ಷಕರ ಸಂಖ್ಯೆಯು ಗಮನಾರ್ಹ ಎನ್ನಬಹುದಾದ 60% ರಷ್ಟು ಹೆಚ್ಚಳ ಕಂಡಿದೆ. ಮಹಾ ಕುಂಭಮೇಳದ ಸಕಲ ವಿವರಗಳು ಎಲ್ಲರಿಗೂ ಸುಲಭವಾಗಿ ದೊರೆಯಲಿರುವುದನ್ನು Vi ಖಾತ್ರಿಪಡಿಸಲಿದೆ.

Vi offer Mahakumbha 2025 Darshan

ವೊಡಾಫೋನ್‌ ಐಡಿಯಾ ಮೂವೀಸ್‌ ಆ್ಯಂಡ್‌ ಟಿವಿ ಆ್ಯಪ್‌ ಅಥವಾ ಅಥವಾ Vi ಮೂವೀಸ್‌ ಆ್ಯಂಡ್‌ ಟಿವಿ ಆ್ಯಪ್‌ ಟ್ಯಾಬ್‌ನಡಿ Vi ಆ್ಯಪ್‌ನಲ್ಲಿ ಭಕ್ತಾದಿಗಳು ಈ ಆಧ್ಯಾತ್ಮಿಕ ಪಯಣ ಕೈಗೊಳ್ಳಬಹುದು. ಶೇಮರೂ (Shemaroo Entertainment) ನೆರವಿನಿಂದ ಯಾವುದೇ ಸಮಯದಲ್ಲಿ ಎಲ್ಲಿ ಬೇಕಾದರೂ ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಆಗುವುದನ್ನು ತಕ್ಷಣಕ್ಕೆ ವೀಕ್ಷಿಸಬಹುದು. ತನ್ನ ಬಳಕೆದಾರರಿಗೆ ಸರಿಸಾಟಿಯಿಲ್ಲದ ಅನುಭವ ಒದಗಿಸಲು ವೊಡಾಫೋನ್‌ ಐಡಿಯಾ 46,000 ಹೊಸ ಸೈಟ್‌ಗಳ ಸೇರ್ಪಡೆ ಮತ್ತು 58,000ಕ್ಕೂ ಹೆಚ್ಚು ಸೈಟ್‌ಗಳ ಸಾಮರ್ಥ್ಯ ಹೆಚ್ಚಳದ ನೆರವಿನಿಂದ ದೇಶದಾದ್ಯಂತ ಉತ್ತಮ ಸಂಪರ್ಕ ಸೌಲಭ್ಯ ಒದಗಿಸಿ 4G ಸಂಪರ್ಕ ಜಾಲವನ್ನು ಗಮನಾರ್ಹವಾಗಿ ಬಲಪಡಿಸಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo