Jio vs Vi Plan: ಭಾರತದ ಜನಪ್ರಿಯ ಟೆಲಿಕಾ ಕಂಪನಿಗಳಾದ ಜಿಯೋ ಮತ್ತು ವೊಡಾಫೋನ್ ಐಡಿಯಾ ತಮ್ಮ ಬಳಕೆದಾರರಿಗೆ ಅವರ ಅಗತ್ಯಗಳಿಗೆ ತಕ್ಕಂತೆ ಉತ್ತಮವಾದ ರಿಚಾರ್ಜ್ ಯೋಜನೆಗಳನ್ನು ನೀಡುತ್ತಿವೆ. ಇದರಡಿಯಲ್ಲಿ ಜಿಯೋ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳು ಒಂದೇ ಬೆಲೆಯ ಅಂದ್ರೆ 666 ರೂಗಳ ರಿಚಾರ್ಜ್ ಯೋಜನೆಯನ್ನು ಹೊಂದಿವೆ. ಆದರೆ ಈ ಯೋಜನೆಯಲ್ಲಿನ ಪ್ರಯೋಜನಗಳು ಮಾತ್ರ ಒಂದಕ್ಕಿಂತ ಮತ್ತೊಂದು ಉತ್ತಮವಾಗಿದೆ. ಆದ್ದರಿಂದ ತುಂಬಾ ಜನರಿಗೆ ಇದರ ವ್ಯತ್ಯಾಸಗಳೇನು ನೀವು ನಿವ ಬೆಲೆಗೆ ಯಾರ ಪ್ಲಾನ್ ಬಳಸುವುದು ಉತ್ತಮ ಎನ್ನುವುದರ ಬಗ್ಗೆ ಅಷ್ಟಾಗಿ ಮಾಹಿತಿ ಇರೋದಿಲ್ಲ. ನೀವು ಜಿಯೋ ಅಥವಾ ವೊಡಾಫೋನ್ ಐಡಿಯಾ ಕಂಪನಿಯ ಬಳಕೆದಾರರಾಗಿದ್ದಾರೆ ಒಮ್ಮೆ ಈ ಯೋಜನೆಗಳನ್ನು ಪರಿಶೀಲಿಸಬಹುದು.
ಮೊದಲನೆಯದಾಗಿ ನಾವು ರಿಲಯನ್ಸ್ ಜಿಯೋದ ಪ್ರಯೋಜನಗಳ ಬಗ್ಗೆ ಮಾತನಾಡಿದರೆ ಈ ಪ್ರಿಪೇಯ್ಡ್ ಯೋಜನೆಯ ಬೆಲೆ 666 ರೂಗಳಲ್ಲಿ ಬರುತ್ತದೆ. ಈ ಯೋಜನೆಯು ದಿನಕ್ಕೆ 1.5GB ಡೇಟಾ, ಅನಿಯಮಿತ ವಾಯ್ಸ್ ಕರೆ, ದಿನಕ್ಕೆ 100 SMS ಮತ್ತು Jio ಅಪ್ಲಿಕೇಶನ್‌ಗಳ ಪ್ರಯೋಜನವನ್ನು ನೀಡುತ್ತದೆ 70 ದಿನಗಳ ಮಾನ್ಯತೆಯನ್ನು ಒದಗಿಸಲಾಗಿದೆ. ಈ ಯೋಜನೆಯು ಅನಿಯಮಿತ 5G ಡೇಟಾ ಪ್ರಯೋಜನವನ್ನು ನೀಡುವುದಿಲ್ಲ ಮತ್ತು ಡೇಟಾ ಮಿತಿ ಮುಗಿದ ನಂತರ 4G FUP (ನ್ಯಾಯಯುತ ಬಳಕೆಯ ನೀತಿ) ಪ್ರಕಾರ ಡೇಟಾ ವೇಗದ ಮಿತಿಯನ್ನು 64Kbps ಇಳಿಸಲಾಗುತ್ತದೆ.
Also Read: 50MP ಕ್ಯಾಮೆರಾ ಮತ್ತು 5000mAh ಬ್ಯಾಟರಿ Vivo T3 Lite 5G ಸ್ಮಾರ್ಟ್ಫೋನ್ ಮೇಲೆ ಭರ್ಜರಿ ಆಫರ್ಗಳು!
ವೊಡಾಫೋನ್ ಐಡಿಯಾದ 666 ರೂಗಳ ಪ್ರಿಪೇಯ್ಡ್ ಯೋಜನೆಯಲ್ಲಿ ನಿಮಗೆ ಪ್ರತಿದಿನ 1.5GB ಡೇಟಾದೊಂದಿಗೆ ಅನಿಯಮಿತ ವಾಯ್ಸ್ ಕರೆ ಮತ್ತು ದಿನಕ್ಕೆ 100 ಉಚಿತ SMS ಸೌಲಭ್ಯವನ್ನು ಬರೋಬ್ಬರಿ 64 ದಿನಗಳ ವ್ಯಾಲಿಡಿಟಿಯೊಂದಿಗೆ ನೀಡುತ್ತಿದೆ. ಅಂದ್ರೆ ಈಗಾಗಲೇ ಮೇಲೆ ನೋಡಿದ ಜಿಯೋ ಯೋಜನೆಗಿಂತ ಸುಮಾರು 6 ದಿನಗಳು ಕಡಿಮೆಯಾಗಿದೆ. ಆದರೆ ಇದರಲ್ಲಿ ಉಳಿದ ಡೇಟಾ ಮತ್ತು ಬೇರೆ ಪ್ರಯೋಜನಗಳು ವಾರಾಂತ್ಯದ ಡೇಟಾ ರೋಲ್‌ಓವರ್, ಡೇಟಾ ಡಿಲೈಟ್‌ಗಳು ಮತ್ತು ಪಿಂಚ್ ಎಲ್ಲಾ ರಾತ್ರಿಯ ಆಫರ್‌ಗಳನ್ನು ಒಳಗೊಂಡಿರುವ ತನ್ನ ಪ್ರಿಪೇಯ್ಡ್ ಯೋಜನೆಗಳೊಂದಿಗೆ Vi ಹೀರೋ ಅನ್‌ಲಿಮಿಟೆಡ್ ಪ್ರಯೋಜನಗಳನ್ನು ವಿಐ ಕೂಡ ಸಂಯೋಜಿಸಿದೆ.
ನೀವು ನೀಡುವ ಒನ್ ಮಾದರಿಯ ಬೆಲೆಗೆ ಲಭ್ಯವಿರುವ ಈ ಎರಡು ಯೋಜನೆಗಳಲ್ಲಿ ಯಾವ ಪ್ಲಾನ್ ಬೆಸ್ಟ್ ಇಂದು ನೋಡುವುದಾದರೆ ಈ ಎರಡು ಯೋಜನೆಗಳ ವ್ಯಾಲಿಡಿಟಿ ಬೇರೆ ಬೇರೆಯಾಗಿದ್ದು ಜಿಯೋ ವ್ಯಾಲಿಡಿಟಿಗಿಂತ 6 ದಿನಗಳು ಕಡಿಮೆಯನ್ನು ವೊಡಾಫೋನ್ ಐಡಿಯಾ ಹೊಂದಿದೆ. ಆದರೆ ಡೇಟಾ ಪ್ರಯೋಜನದ ಬಗ್ಗೆ ಮಾತನಾಡುವುದಾದರೆ ಈ ವೋಡಾಫೊಎಂ ಐಡಿಯಾದ 666 ರೂಗಳ ರಿಚಾರ್ಜ್ ಯೋಜನೆಯಲ್ಲಿ ಲಭ್ಯವಿರುವ ನೀವು Vi Hero ಅಡಿಯಲ್ಲಿ ಕಾಣಬಹುದು. ಅಲ್ಲದೆ ಅನಿಯಮಿತ ಪ್ರಯೋಜನ ಮತ್ತು ವಾರಾಂತ್ಯದ ಡೇಟಾ ರೋಲ್‌ಓವರ್ ಪ್ರಯೋಜನವನ್ನು ನೀಡುತ್ತದೆ. ಆದರೆ Jio ಅದನ್ನು ಹೊಂದಿಲ್ಲ ಎನ್ನುವುದು ಮುಖ್ಯವಾಗಿದೆ.