Jio ಮತ್ತು Airtel ಒಂದೇ ಬೆಲೆಯ 269 ರೂಗಳ ರೀಚಾರ್ಜ್‌ನಲ್ಲಿ ಯಾರ ಪ್ಲಾನ್ ಬೆಸ್ಟ್? ಯಾವ ಪ್ಲಾನ್‍‍‍‍‍‍ನಿಂದ ಹೆಚ್ಚು ಲಾಭ?

Updated on 08-Jun-2023
HIGHLIGHTS

Jio ಮತ್ತು Airtel ಕಂಪನಿಗಳು ಒಂದೇ ಬೆಲೆಯಲ್ಲಿ ಅತ್ತ್ಯುತ್ತಮ ಪ್ರಿಪೇಯ್ಡ್ ಪ್ಲಾನ್ ಅನ್ನು ಹೊಂದಿವೆ

ಈ ರಿಚಾರ್ಜ್ ಪ್ಲಾನ್ ಬೆಲೆ 296 ರೂಗಳಾಗಿದ್ದು ಇದರಲ್ಲಿ ದಿನದ ಯಾವುದೇ ಮಿತಿಗಳಿಲ್ಲದೆ ಡೇಟಾವನ್ನು ಬಳಸಲು ಅವಕಾಶ ನೀಡುತ್ತದೆ

Jio ಮತ್ತು Airtel ಕಂಪನಿಗಳ ಒಂದೇ ಬೆಲೆಯಲ್ಲಿ ಎರಡು ಕಂಪನಿಗಳು ನೀಡುವ ಪ್ರಯೋಜನ ಮತ್ತು ಅನುಕೂಲಗಳು ಮಾತ್ರ ಬೇರೆ ಬೇರೆಯಾಗಿದೆ.

ದೇಶದ ಟೆಲಿಕಾಂ ವಲಯದಲ್ಲಿ ಮೊದಲ ಮತ್ತು ಎರಡನೇ ಸ್ಥಾನವನ್ನು ಪಡೆದಿರುವ Jio ಮತ್ತು Airtel ಕಂಪನಿಗಳು ಒಂದೇ ಬೆಲೆಯಲ್ಲಿ ಅತ್ತ್ಯುತ್ತಮ ಪ್ರಿಪೇಯ್ಡ್ ಪ್ಲಾನ್ ಅನ್ನು ಹೊಂದಿವೆ. ಈ ರಿಚಾರ್ಜ್ ಪ್ಲಾನ್ ಬೆಲೆ 296 ರೂಗಳಾಗಿದ್ದು ಇದರಲ್ಲಿ ದಿನದ ಯಾವುದೇ ಮಿತಿಗಳಿಲ್ಲದೆ ಡೇಟಾವನ್ನು ಬಳಸಲು ಅವಕಾಶ ನೀಡುತ್ತದೆ. ಇದರೊಂದಿಗೆ ನೀವು ಅನ್ಲಿಮಿಟೆಡ್ ಕರೆ ಮತ್ತು ಪ್ರತಿದಿನ SMS ಸೌಲಭ್ಯವನ್ನು ಸಹ ಹೊಂದಿದೆ. ಆದ್ದರಿಂದ ಒಂದೇ ಬೆಲೆಯಲ್ಲಿ ಎರಡು ಕಂಪನಿಗಳು ನೀಡುವ ಪ್ರಯೋಜನ ಮತ್ತು ಅನುಕೂಲಗಳು ಮಾತ್ರ ಬೇರೆ ಬೇರೆಯಾಗಿದೆ. ಇದರ ಕ್ರಮವಾಗಿ ಬಳಕೆದಾರರಾದ ನಮಗೆ ಈ ಕಂಪನಿಗಳ ಯಾವ ಪ್ಲಾನ್ ಬಳಸುವುದು ಉತ್ತಮ ಮತ್ತು ಈ ಎರಡು ಯೋಜನೆಗಳ ನಡುವಿನ ವ್ಯತ್ಯಾಸವೇನು ಎನ್ನುವುದು ಅತಿ ಮುಖ್ಯವಾಗಿ ತಿಳಿಯಬೇಕಿದೆ.

ಜಿಯೋ ರೂ 296 ಯೋಜನೆ:

ಮೊದಲಿಗೆ ನೀವು ರಿಲಯನ್ಸ್ ಜಿಯೋ ನ್ ಇಡುವ ಈ 296 ರೂಗಳ ಪ್ಲಾನ್ ಬಗ್ಗೆ ಮಾತನಾಡುವುದಾದರೆ ಈ ಯೋಜನೆಯ ಮಾನ್ಯತೆ 30 ದಿನಗಳಾಗಿದೆ. ಅಲ್ಲದೆ ಇದರಲ್ಲಿ ಯಾವುದೇ ದೈನಂದಿನ ಮಿತಿಯನ್ನು ನೀಡಲಾಗಿಲ್ಲ. ಅಂದ್ರೆ ನೀವು ಸಂಪೂರ್ಣ ಮಾನ್ಯತೆಯ ಅವಧಿಯಲ್ಲಿ ಬಳಕೆದಾರರಿಗೆ ಪೂರ್ತಿ 25GB ಹೈ ಸ್ಪೀಡ್ ಡೇಟಾವನ್ನು ಬಳಸಲು ಅವಕಾಶ ಮಾಡಿಕೊಡುತ್ತದೆ. ಇದರ ನಂತರ ಇದರಲ್ಲಿ ನಿಮಗೆ ಯಾವುದೇ ನೆಟ್‌ವರ್ಕ್‌ನಲ್ಲಿ ಅನ್ಲಿಮಿಟೆಡ್ ವಾಯ್ಸ್ ಕರೆ ಮಾಡಲು ಸೌಲಭ್ಯವನ್ನು ಒದಗಿಸಲಾಗುವುದು. ಇದರೊಂದಿಗೆ ನಿಮಗೆ ಪ್ರತಿದಿನ 100 SMS ನೀಡಲಾಗುವುದು. ಅಷ್ಟೇಯಲ್ಲದೆ ನೀವು ಈ ಪ್ಲಾನ್ ರಿಚಾರ್ಜ್ ಮಾಡಿಕೊಂಡು JioTV, JioCinema, JioSecurity ಮತ್ತು JioCloud ಗೆ ಪ್ರವೇಶವನ್ನು ಸಹ ನೀಡಲಾಗುವುದು. ಅಲ್ಲದೆ ಆಯ್ದ ಕೆಲ ಬಳಕೆದಾರರಿಗೆ ಅನಿಯಮಿತ 5G ಡೇಟಾ ಸೌಲಭ್ಯವನ್ನು ಸಹ ಪಡೆಯಬಹುದು. 

ಏರ್‌ಟೆಲ್ ರೂ 296 ಯೋಜನೆ:

ಎರಡನೇಯದಾಗಿ ಏರ್‌ಟೆಲ್‌ನ ಅದೇ ಬೆಲೆಯ 296 ರೂಗಳ ಪ್ಲಾನ್ ಬಗ್ಗೆ ಮಾತನಾಡುವುದಾದರೆ ಈ ಯೋಜನೆ ಸಹ ನಿಮಗೆ 30 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಅಲ್ಲದೆ ಇದರಲ್ಲಿ ಯಾವುದೇ ದೈನಂದಿನ ಮಿತಿಯನ್ನು ನೀಡಲಾಗಿಲ್ಲ. ಅಂದ್ರೆ ನೀವು ಸಂಪೂರ್ಣ ಮಾನ್ಯತೆಯ ಅವಧಿಯಲ್ಲಿ ಬಳಕೆದಾರರಿಗೆ ಪೂರ್ತಿ 25GB ಹೈ ಸ್ಪೀಡ್ ಡೇಟಾವನ್ನು ಸಹ ಬಳಸಲು ಅವಕಾಶ ಮಾಡಿಕೊಡುತ್ತದೆ. ಇದರಲ್ಲಿ ನಿಮಗೆ ಯಾವುದೇ ನೆಟ್‌ವರ್ಕ್‌ನಲ್ಲಿ ಅನ್ಲಿಮಿಟೆಡ್ ವಾಯ್ಸ್ ಕರೆ ಮಾಡಲು ಸೌಲಭ್ಯವನ್ನು ಒದಗಿಸಲಾಗುವುದು. ಇದರೊಂದಿಗೆ ನಿಮಗೆ ಪ್ರತಿದಿನ 100 SMS ನೀಡಲಾಗುವುದು. ಕೊನೆಯದಾಗಿ ಅನಿಯಮಿತ 5G ಡೇಟಾ, Apollo 24|7 ವಲಯಗಳಿಗೆ ಪ್ರವೇಶ, ಉಚಿತ Hellotunes ಮತ್ತು Wynk Music ಗೆ ಪ್ರವೇಶವನ್ನು ನೀಡಲಾಗುವುದು.

Jio vs Airtel ಯೋಜನೆಗಳ ವ್ಯತ್ಯಾಸವೇನು?

 ಈಗ ಒಟ್ಟಾರೆಯಾಗಿ Jio ಮತ್ತು Airtel ಕಂಪನಿಗಳು ಒಂದೇ ಬೆಲೆಯಲ್ಲಿ ಅತ್ತ್ಯುತ್ತಮ ಪ್ರಿಪೇಯ್ಡ್ ಯೋಜನೆಗಳ ಬೆಲೆ 296 ರೂಗಳಾಗಿದ್ದು ಎರಡರಲ್ಲೂ ದಿನಕ್ಕೆ 25GB ಡೇಟಾ, ಅನಿಯಮಿತ ಕರೆ ಮತ್ತು 100 SMS ನೀಡಲಾಗುತ್ತಿದೆ. ಎರಡೂ ಯೋಜನೆಗಳು ಒಂದೇ ರೀತಿಯ ಪ್ರಯೋಜನಗಳೊಂದಿಗೆ ಬರುತ್ತವೆ. ಇದರಲ್ಲಿನ ದೊಡ್ಡ ವ್ಯತ್ಯಾಸ ನೋಡುವುದಾದರೆ Jio ತನ್ನ ಅಪ್ಲಿಕೇಶನ್‌ಗಳಿಗೆ ಅತ್ಯುತ್ತಮ ಪ್ರವೇಶದೊಂದಿಗೆ ಈಗಾಗಲೇ ಮೇಲೆ ತಿಳಿಸಿರುವಂತೆ ಜಿಯೋ ಚಂದಾದಾರರಿಗಾಗಿ ಅನ್ಲಿಮಿಟೆಡ್ ಪ್ರವೇಶವನ್ನು ನೀಡುತ್ತದೆ. ಆದರೆ ಮತ್ತೊಂದೆಡೆಯಲ್ಲಿ ಭಾರ್ತಿ ಏರ್ಟೆಲ್ ತನ್ನ ಯೋಜನೆಯಲ್ಲಿ ಹೆಚ್ಚಿನ ಪ್ರಯೋಜನಗಳಲ್ಲಿ ನಿಗದಿತ ಮತ್ತು ನಿಯಮಿತ ಪ್ರವೇಶವನ್ನು ಮಾತ್ರ ಒದಗಿಸಿದೆ. ಒಟ್ಟಾರೆಯಾಗಿ ಒಬ್ಬ ಸರಿಸಾಮನ್ಯ ಜನರ ದೃಷ್ಟಿಯಿಂದ ನೋಡುವುದಾದರೆ ಈ ಎರಡು ಯೋಜನೆಗಳು ಬಳಕೆದಾರರಿಗೆ ಸರಿಯಾದ ಆಯ್ಕೆಯಾಗಬಹುದು.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :