Jio Vs Airtel AirFiber: ಇವೆರಡರಲ್ಲಿ ಯಾರ ಏರ್‌ಫೈಬರ್ ಪ್ಲಾನ್‌ ಬೆಸ್ಟ್? ಸ್ಪೀಡ್ ಮತ್ತು ಬೆಲೆ ಎಷ್ಟಿದೆ? | Tech News

Jio Vs Airtel AirFiber: ಇವೆರಡರಲ್ಲಿ ಯಾರ ಏರ್‌ಫೈಬರ್ ಪ್ಲಾನ್‌ ಬೆಸ್ಟ್? ಸ್ಪೀಡ್ ಮತ್ತು ಬೆಲೆ ಎಷ್ಟಿದೆ? | Tech News
HIGHLIGHTS

ಜಿಯೋ ಮತ್ತು ಏರ್ಟೆಲ್ ತಮ್ಮ ಏರ್‌ಫೈಬರ್ ಸೇವೆಯನ್ನು ಭಾರತದಲ್ಲಿ ನೀಡುತ್ತಿದ್ದಾರೆ

ಲಯನ್ಸ್ ಜಿಯೋ ಏರ್‌ಫೈಬರ್ (Jio AirFiber) ಅಸ್ತಿತ್ವದಲ್ಲಿರುವ ಏರ್‌ಟೆಲ್ ಏರ್‌ಫೈಬರ್ (Airtel AirFiber) ಯೋಜನೆಗಳಿಗೆ ಕಠಿಣ ಸ್ಪರ್ಧೆಯನ್ನು ನೀಡಲು ಯೋಜಿಸಿದೆ

Jio ಮತ್ತು Airtel ಎರಡೂ ಕಂಪನಿಗಳ ಏರ್‌ಫೈಬರ್ (AirFiber) ಅತಿ ವೇಗದ ಇಂಟರ್ನೆಟ್ ಫೈಬರ್ ಕನೆಕ್ಷನ್‌ಗಳನ್ನು ದೇಶದ ಗ್ರಾಮೀಣ ಪ್ರದೇಶಗಳಿಗೆ ಲಭ್ಯವಾಗುವಂತೆ ಮಾಡುವ ಗುರಿಯನ್ನು ಹೊಂದಿವೆ.

ಭಾರತದ ಅತಿ ಜನಪ್ರಿಯ ಮತ್ತು ನಂಬರ್ ಒನ್ ಮತ್ತು ಎರಡನೇಯ ಸ್ಥಾನದ ಟೆಲಿಕಾಂ ಕಂಪನಿಗಳಾದ ಜಿಯೋ ಮತ್ತು ಏರ್ಟೆಲ್ ತಮ್ಮ ಏರ್‌ಫೈಬರ್ (AirFiber) ಸೇವೆಯನ್ನು ಭಾರತದಲ್ಲಿ ನೀಡುತ್ತಿದ್ದಾರೆ. ಅಲ್ಲದೆ ಈಗಷ್ಟೇ ಮಾರುಕಟ್ಟೆಗೆ ಕಾಲಿಟ್ಟ ರಿಲಯನ್ಸ್ ಜಿಯೋ ಏರ್‌ಫೈಬರ್ (Jio AirFiber) ಅಸ್ತಿತ್ವದಲ್ಲಿರುವ ಏರ್‌ಟೆಲ್ ಏರ್‌ಫೈಬರ್ (Airtel AirFiber) ಯೋಜನೆಗಳಿಗೆ ಕಠಿಣ ಸ್ಪರ್ಧೆಯನ್ನು ನೀಡಲು ಯೋಜಿಸಿದೆ. ಈ Jio ಮತ್ತು Airtel ಎರಡೂ ಕಂಪನಿಗಳ ಏರ್‌ಫೈಬರ್ (AirFiber) ಅತಿ ವೇಗದ ಇಂಟರ್ನೆಟ್ ಫೈಬರ್ ಕನೆಕ್ಷನ್‌ಗಳನ್ನು ದೇಶದ ಗ್ರಾಮೀಣ ಪ್ರದೇಶಗಳಿಗೆ ಲಭ್ಯವಾಗುವಂತೆ ಮಾಡುವ ಗುರಿಯನ್ನು ಹೊಂದಿವೆ.

Jio Vs Airtel AirFiber ಇವೆರಡರಲ್ಲಿ ಯಾರ ಏರ್‌ಫೈಬರ್ ಪ್ಲಾನ್‌ ಬೆಸ್ಟ್?

ಈ ಡಿವೈಸ್‌ಗಳು ಅತಿ ವೇಗದ ಇಂಟರ್ನೆಟ್ ಸಂಪರ್ಕದ ಅಗತ್ಯವಿರುವ ಮನೆಗಳು ಅಥವಾ ಇತರ ಸ್ಥಳಗಳಿಗೆ ಮೀಸಲಾಗಿದೆ. ಈ ಟವರ್ ತರಹದ ಇಂಟರ್ನೆಟ್ ಡಿವೈಸ್‌ ಯಾವುದೇ ಉದ್ದವಾದ ಕೇಬಲ್‌ಗಳು ಅಥವಾ ವೈರ್‌ಗಳಿಲ್ಲದೆಯೇ ಸೂಪರ್‌ಫಾಸ್ಟ್ 5G ಇಂಟರ್ನೆಟ್ ಸಂಪರ್ಕವನ್ನು ನೀಡುತ್ತದೆ. ಇದು ಪ್ಲಗ್ ಅಂಡ್ ಪ್ಲೇ ಡಿವೈಸ್‌ ಆಗಿದ್ದು ಹೆಚ್ಚು ಪರಿಣಾಮಕಾರಿಯಾಗಿ ಪೋರ್ಟಬಲ್ ಕೂಡ ಆಗಿದೆ. ಏರ್‌ಟೆಲ್ ಮತ್ತು ಜಿಯೋ ಏರ್‌ಫೈಬರ್ (Jio Vs Airtel AirFiber) ಡಿವೈಸ್‌ಗಳಲ್ಲಿ ಘರ್ಷಣೆ ಮಾಡುವುದರಿಂದ ಅವರು ಯಾವುದನ್ನು ಆರಿಸಿಕೊಳ್ಳಬೇಕು ಎಂಬ ಬಗ್ಗೆ ಅನೇಕ ಜನರು ಗೊಂದಲಕ್ಕೊಳಗಾಗಬಹುದು. ಈ ಗೊಂದಲವನ್ನು ಪರಿಹರಿಸಲು ನಿಮಗೆ ಮಾಹಿತಿಗಳನ್ನು ನೀಡಿದ್ದೇವೆ. 

Jio AirFiber ಯೋಜನೆಗಳ ವಿವರಗಳು

ಮೊದಲಿಗೆ ರಿಲಯನ್ಸ್ ಜಿಯೋದ ಏರ್‌ಫೈಬರ್ ಬಗ್ಗೆ ಮಾತನಾಡುವುದಾದರೆ ಜಿಯೋ ಒಟ್ಟಾರೆಯಾಗಿ 6 ವಿವಿಧ ಯೋಜನಗೆಳನ್ನು ಬಿಡುಗಡೆಗೊಳಿಸಿದೆ. ಅದರಲ್ಲಿ 3 ಸಾಮಾನ್ಯ ಏರ್‌ಫೈಬರ್ ಯೋಜನೆಯಾಗಿದ್ದರೆ ಮತ್ತೆ ಮೂರು ಏರ್‌ಫೈಬರ್ ಮ್ಯಾಕ್ಸ್ ಆಗಿದೆ. ಜಿಯೋ ಏರ್‌ಫೈಬರ್ ಕನೆಕ್ಷನ್ ಪಡೆಯಲು ಆಸಕ್ತ ಬಳಕೆದಾರರು 60008-60008 ನಂಬರ್‌ಗೆ ಮಿಸ್ ಕಾಲ್ ನೀಡುವ ಮೂಲಕ ಅಥವಾ ನೇರವಾಗಿ ರಿಲಯನ್ಸ್ ಜಿಯೋದ ಅಧಿಕೃತ www.jio.com ವೆಬ್‌ಸೈಟ್‌ಗೆ ಭೇಟಿ ನೀಡಿ ಪಡೆಯಬಹದು. 

ಇದರ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿದೆ ಈ ಎಲ್ಲಾ ಯೋಜನೆಗಳು 6 ಮತ್ತು 12 ತಿಂಗಳ ಆಯ್ಕೆಗಳಲ್ಲಿ ಮಾತ್ರ ಲಭ್ಯವಿದ್ದು ಒಂದು ವೇಳೆ ನೀವು ಕೇವಲ 6 ತಿಂಗಳ ಪ್ಲಾನ್ ಪಡೆದರೆ  ಸ್ಥಾಪನೆ ಶುಲ್ಕ (Installation Charge) 1000 ರೂಗಳನ್ನು ನೀಡಬೇಕಾಗುತ್ತದೆ. ಅದೇ ನೀವು 12 ತಿಂಗಳ ಯೋಜನೆಗಳನ್ನು ಪಡೆದರೆ ಯಾವುದೇ ಸ್ಥಾಪನೆ ಶುಲ್ಕ ನೀಡಬೇಕಿಲ್ಲ.

Airtel AirFiber ಯೋಜನೆಗಳ ವಿವರಗಳು

ಭಾರತದಲ್ಲಿ ಭಾರ್ತಿ ಏರ್ಟೆಲ್ ಮೊದಲ ಬಾರಿಗೆ ಆಗಸ್ಟ್ 2023 ರಲ್ಲಿಯೆ ಏರ್ಟೆಲ್ ಎಕ್ಸ್‌ಸ್ಟ್ರೀಮ್ ಏರ್‌ಫೈಬರ್ ಪ್ಲಾನ್ ಅನ್ನು ಕೇವಲ ಒಂದೇ ಒಂದು ಅರ್ಧ ವಾರ್ಷಿಕ ಯೋಜನೆಯನ್ನು ಮಾತ್ರ ಹೊಂದಿದೆ. ಅದ್ರಲ್ಲಿ ಏರ್ಟೆಲ್ ನಿಮಗೆ 3.3TB (3,300GB) ಮಿತಿಯೊಂದಿಗೆ 100Mbps ಯೋಜನೆಯನ್ನು ಹೊಂದಿದೆ. ಈ ಯೋಜನೆಯಲ್ಲಿ ಪ್ರತಿ ತಿಂಗಳಿಗೆ ರೂ.799 ಆಗಿದ್ದು ಇದನ್ನು ಒಟ್ಟಿಗೆ 6 ತಿಂಗಳ ಯೋಜನೆಗಾಗಿ 4435 ರೂಗಳನ್ನುನೀಡುವುದರೊಂದಿಗೆ 2500 ರೂಗಳ ಭದ್ರತಾ ಠೇವಣಿಯನ್ನು ಪರಿಗಣಿಸಿದರೆ ನಿಮ್ಮ ಒಟ್ಟಾರೆಯಾ ಬೆಲೆ 7733 ರೂಗಳನ್ನು ನೀಡಬೇಕಾಗುತ್ತದೆ. ಸದ್ಯಕ್ಕೆ ಈ ಸೇವೆ ಕೇವಲ ದೆಹಲಿ ಮತ್ತು ಮುಂಬೈ ನಗರಗಳಲ್ಲಿ ಮಾತ್ರ ಲಭ್ಯವಿದೆ.

Jio Vs Airtel AirFiber ಫೈಬರ್ ವ್ಯತ್ಯಾಸಗಳು

ಇದಲ್ಲದೆ ಜಿಯೋ ಉಚಿತ OTT ಅಪ್ಲಿಕೇಶನ್‌ಗಳು ಮತ್ತು ಸೆಟ್-ಟಾಪ್ ಬಾಕ್ಸ್‌ಗಳನ್ನು ಸಹ ನೀಡುತ್ತಿದೆ. ವೇಗವೂ 1Gbps ವರೆಗೆ ಹೋಗುತ್ತದೆ. ಹಾರ್ಡ್‌ವೇರ್‌ಗೆ ಸಂಬಂಧಿಸಿದಂತೆ ಎರಡೂ ಸಾಧನಗಳು ವೈಫೈ 6 ನಿಂದ ಚಾಲಿತವಾಗಿದ್ದು 8×8 MIMO ಜೊತೆಗೆ 9.6Gbps ವೇಗವನ್ನು ತಲುಪಿಸುವ ಸಾಮರ್ಥ್ಯ ಮತ್ತು ಉತ್ತಮ ವಿದ್ಯುತ್ ದಕ್ಷತೆಯನ್ನೂ ಹೊಂದಿದೆ. ಒಂದು ಪ್ರಮುಖ ಪ್ರೊ ಶ್ರೇಣಿಯಾಗಿದೆ. ಏರ್‌ಫೈಬರ್ ಸಾಧನಗಳೊಂದಿಗೆ ಬಳಕೆದಾರರು ಸಾಧನದಿಂದ ದೂರವಿದ್ದರೂ ವೈಫೈ ಸಂಪರ್ಕವನ್ನು ಪಡೆಯಬಹುದು. ಏರ್‌ಫೈಬರ್ ಒಂದೇ ಮಹಡಿಯಲ್ಲಿ 100 ಚದರ ಅಡಿ ಪ್ರದೇಶವನ್ನು ಆವರಿಸಬಹುದು.

  Airtel Xstream AirFiber Jio AirFiber
Price Rs. 799+ GST Rs. 899+ GST
Speed 100 Mbps 100 Mbps
OTT Apps None 14 apps
4K set-top box No Yes, with 550+ channels
Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo