Jio vs Airtel: ಒಂದೇ ಬೆಲೆಯ ಈ 30 ದಿನಗಳ ವ್ಯಾಲಿಡಿಟಿಯ ಪ್ಲಾನ್‌ನಲ್ಲಿ ಯಾರು ಎಷ್ಟು ಪ್ರಯೋಜನ? ಯಾವ ಪ್ಲಾನ್ ಬೆಲೆ ಎಷ್ಟು?

Updated on 28-Feb-2024
HIGHLIGHTS

ರಿಲಯನ್ಸ್ ಜಿಯೋ (Reliance Jio) ಮತ್ತು ಭಾರ್ತಿ ಏರ್‌ಟೆಲ್ (Bharti Airtel) ಭಾರತದ ಪ್ರಮುಖ ಟೆಲಿಕಾಂ ಆಪರೇಟರ್‌ಗಳಾಗಿವೆ.

ನೀವು Jio ಮತ್ತು Airtel ಬಳಕೆದಾರರಾಗಿದ್ದು ಮಾಸಿಕ ರಿಚಾರ್ಜ್ ಮಾಡಿಕೊಳ್ಳುತ್ತಿದ್ದರೆ ಈ 296 ರೂಗಳಿಗೆ ಪ್ರಿಪೇಯ್ಡ್ ಪ್ಲಾನ್ ಸಿಕಾಪಟ್ಟೆ ಸೂಪರ್

Jio ಮತ್ತು Airtel ಎರಡೂ ಟೆಲ್ಕೊಗಳು ಕರೆ ಮತ್ತು SMS ಪ್ರಯೋಜನಗಳೊಂದಿಗೆ ಬಂಡಲ್ ಇಂಟರ್ನೆಟ್ ಡೇಟಾವನ್ನು ನೀಡುತ್ತದೆ.

Jio vs Airtel: ಭಾರತದ ಜನಪ್ರಿಯ ಮತ್ತು ಅತಿದೊಡ್ಡ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ (Reliance Jio) ಮತ್ತು ಭಾರ್ತಿ ಏರ್‌ಟೆಲ್ (Bharti Airtel) ಭಾರತದ ಪ್ರಮುಖ ಟೆಲಿಕಾಂ ಆಪರೇಟರ್‌ಗಳಾಗಿವೆ. ಎರಡೂ ಟೆಲಿಕಾಂಗಳು ಪ್ರಿಪೇಯ್ಡ್ ಉತ್ತಮ ಮೌಲ್ಯವನ್ನು ನೀಡಲು ಮತ್ತು ಹೆಚ್ಚಿನ ಗ್ರಾಹಕರ ನೆಲೆಯನ್ನು ಆಕರ್ಷಿಸುವ ಯೋಜನೆಗಳನ್ನು ನೀಡಲು ಯಾವಾಗಲೂ ನಿರಂತರ ಪೈಪೋಟಿಯಲ್ಲಿರುತ್ತವೆ. ರಿಲಯನ್ಸ್ ಜಿಯೋ ಹಲವಾರು ಆಯ್ಕೆಗಳನ್ನು ಒದಗಿಸಿದರೆ ಭಾರ್ತಿ ಏರ್‌ಟೆಲ್ ರೀಚಾರ್ಜ್ ಯೋಜನೆಗಳಲ್ಲಿ ಉತ್ತಮ ಮೌಲ್ಯವನ್ನು ನೀಡಲು ಒಟ್ಟಿಗೆ ಹೆಚ್ಚಿನ ಡೀಲ್‌ಗಳನ್ನು ನೀಡುತ್ತದೆ. ಒಂದೇ ಬೆಲೆಯ ಈ 30 ದಿನಗಳ ವ್ಯಾಲಿಡಿಟಿಯ ಪ್ಲಾನ್‌ನಲ್ಲಿ ಯಾರು ಎಷ್ಟು ಪ್ರಯೋಜನ ನೀಡುತ್ತಿದ್ದರೆ ಮತ್ತು ಯಾವ ಪ್ಲಾನ್ ಬೆಲೆ ಎಷ್ಟು ಎಲ್ಲವನ್ನು ಈ ಕೆಳಗೆ ತಿಳಿಯಿರಿ.

Also Read: ಡೈನಾಮಿಕ್ ಪೋರ್ಟ್‌ನೊಂದಿಗೆ TECNO Spark 20C ಫೋನ್ ಖರೀದಿಸುವ ಮುಂಚೆ ಟಾಪ್ 5 ಫೀಚರ್ ತಿಳಿಯಿರಿ!

ರಿಲಯನ್ಸ್ ಜಿಯೋ (Reliance Jio) ರೂ 296 ಯೋಜನೆ:

ಜಿಯೋ ಫ್ರೀಡಮ್ ಯೋಜನೆಗಳ ಅಡಿಯಲ್ಲಿ ಪಟ್ಟಿ ಮಾಡಲಾದ ಈ ಪ್ರಿಪೇಯ್ಡ್ ಯೋಜನೆಯು ಅನಿಯಮಿತ ಕರೆ ಮತ್ತು ದಿನಕ್ಕೆ 100 SMS ಗಳನ್ನು 30 ದಿನಗಳ ಪ್ಯಾಕ್ ಮಾನ್ಯತೆಯೊಂದಿಗೆ ನೀಡುತ್ತದೆ. ಇಂಟರ್ನೆಟ್ ಡೇಟಾಗಾಗಿ ಬಳಕೆದಾರರು 25GB ಬಂಡಲ್ ಪ್ಯಾಕ್ ಅನ್ನು ಪಡೆಯುತ್ತಾರೆ ಇದನ್ನು ತಿಂಗಳು ಪೂರ್ತಿ ಬಳಸಬಹುದು. ಹೆಚ್ಚುವರಿ ಪ್ರಯೋಜನಗಳು JioTV, JioCinema, JioSecurity ಮತ್ತು Jio ಕ್ಲೌಡ್‌ಗೆ ಉಚಿತ ಚಂದಾದಾರಿಕೆಯನ್ನು ಒಳಗೊಂಡಿವೆ. ಏರ್ಟೆಲ್ ರೂ 296 ಯೋಜನೆಯು ಜಿಯೋ 5G ಕೊಡುಗೆಯ ಅಡಿಯಲ್ಲಿ ಬರುತ್ತದೆ. ಇದರ ಅಡಿಯಲ್ಲಿ Jio ಅರ್ಹ ಚಂದಾದಾರರಿಗೆ ಸಕ್ರಿಯ ರೀಚಾರ್ಜ್ ಯೋಜನೆಯಲ್ಲಿ ಅನಿಯಮಿತ 5G ಡೇಟಾವನ್ನು ನೀಡುತ್ತದೆ.

ಭಾರ್ತಿ ಏರ್‌ಟೆಲ್ (Airtel) ರೂ 296 ಯೋಜನೆ:

ಏರ್‌ಟೆಲ್‌ನ ರೂ 296 ಯೋಜನೆಯು ಅದರ ಚಂದಾದಾರರಿಗೆ ಒಟ್ಟು 25GB ಡೇಟಾವನ್ನು 30 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಯೋಜನೆಯ ಜೊತೆಗೆ ಏರ್‌ಟೆಲ್ ಚಂದಾದಾರರು ಅನಿಯಮಿತ ವಾಯ್ಸ್ ಕರೆ ಮತ್ತು ದಿನಕ್ಕೆ 100 SMS ಗಳನ್ನು ಸಹ ಪಡೆಯುತ್ತಾರೆ. ಈ ಯೋಜನೆಯಲ್ಲಿ ನೀಡಲಾಗುವ ಕೆಲವು ಏರ್‌ಟೆಲ್ ಥ್ಯಾಂಕ್ಸ್ ಪ್ರಯೋಜನಗಳೆಂದರೆ ಅಪೊಲೊ 24×7 ಸರ್ಕಲ್, ಫಾಸ್ಟ್‌ಟ್ಯಾಗ್‌ನಲ್ಲಿ ರೂ 100 ಕ್ಯಾಶ್‌ಬ್ಯಾಕ್, ಉಚಿತ ಹೆಲೋಟ್ಯೂನ್ಸ್ ಮತ್ತು ವಿಂಕ್ ಮ್ಯೂಸಿಕ್ ಉಚಿತ ಚಂದಾದಾರಿಕೆಯನ್ನು ಪಡೆಯುವಿರಿ.

Jio vs Airtel ರೂ 296 ರೂಗಳ ಯೋಜನೆಯಲ್ಲಿನ ವ್ಯತ್ಯಾಸಗಳೇನು?

ಈ ಯೋಜನೆಗಳ ವಾಯ್ಸ್ ಕರೆ ಮತ್ತು SMS ಜೊತೆಗೆ ಇಂಟರ್ನೆಟ್ ಪ್ರಯೋಜನಗಳನ್ನು ಹೋಲಿಸಿ ನೋಡಿದರೆ Jio ಮತ್ತು Airtel ಬಹುತೇಕ ಒಂದೇ ರೀತಿಯ ಪ್ರಯೋಜನಗಳನ್ನು ನೀಡುತ್ತವೆ. ಎರಡೂ 30 ದಿನಗಳ ಮಾನ್ಯತೆಯೊಂದಿಗೆ ಪ್ರತಿನ ದಿನ 100 ಉಚಿತ SMS ನೀಡುತ್ತಿದ್ದು ಬಂಡಲ್ ಇಂಟರ್ನೆಟ್ ಪ್ಯಾಕ್ ಅನ್ನು ನೀಡುತ್ತವೆ. ಹೆಚ್ಚುವರಿ ಪ್ರಯೋಜನಗಳಲ್ಲಿ ಮಾತ್ರ ವ್ಯತ್ಯಾಸವಿದೆ. ಜಿಯೋ ತನ್ನ OTT ಸೇವೆಗಳಿಗೆ ಉಚಿತ ಪ್ರವೇಶವನ್ನು ನೀಡಿದರೆ ಏರ್‌ಟೆಲ್ ಕ್ಯಾಶ್‌ಬ್ಯಾಕ್ ಮತ್ತು ಹೆಚ್ಚಿನದನ್ನು ನೀಡುತ್ತದೆ. ಈ ಎರಡೂ ಯೋಜನೆಗಳು ಒಂದೇ ಬೆಲೆ 296 ರೂಗಳ ಶ್ರೇಣಿಯಲ್ಲಿವೆ ಆದ್ದರಿಂದ ನೀವು ಜಿಯೋ ಬಳಕೆದಾರರಾಗಿದ್ದರೆ ಅಥವಾ ಏರ್‌ಟೆಲ್ ಆಗಿದ್ದರೆ ನಿಮ್ಮ ಇಂಟರ್ನೆಟ್ ಬಳಕೆಯ ಪ್ರಕಾರ ನೀವು ಬಳಸಬಹುದಾದ ಮಾಸಿಕ ಪ್ಯಾಕ್‌ ಆಯ್ಕೆ ಮಾಡಬಹುದು.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ ವಾಟ್ಸಾಪ್ Channel View ಮಾಡಿ ಸೇರಿಕೊಳ್ಳಿ!

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :