ಭಾರತದಲ್ಲಿ ಎರಡು ಜನಪ್ರಿಯ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್ಟೆಲ್ ಅತಿ ವೇಗದ ಫೈಬರ್ ಸೇವೆಗಳನ್ನು ನೀಡುತ್ತಿವೆ. ಆದರೆ ಈ ಎರಡು ಕಂಪನಿಗಳು ತಮ್ಮದೇಯಾದ ವಿಶೇಷ ಬಳಕೆದಾರರನ್ನು ಹೊಂದಿದೆ. ರಿಲಯನ್ಸ್ ಜಿಯೋ ತನ್ನ 5G ಡೇಟಾ ಮತ್ತು ಇತರ ಪ್ರಯೋಜನಗಳನ್ನು ನೀಡುವ ವೈರ್‌ಲೆಸ್ ಇಂಟರ್ನೆಟ್ ಸಂಪರ್ಕ ಸೇವೆಯಾಗಿದೆ. ಜಿಯೋ ಗಣೇಶ ಚತುರ್ಥಿಯ ದಿನದಂದು ಅಂದರೆ ಸೆಪ್ಟೆಂಬರ್ 19 ರಂದು ಬಿಡುಗಡೆಯಾಗಲಿದೆ. ಈಗಾಗಲೇ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಏರ್‌ಫೈಬರ್ ಅನ್ನು ಒದಗಿಸುವ ಏರ್‌ಟೆಲ್‌ಗೆ ಜಿಯೋ ಫೈಬರ್ ನೇರ ಪ್ರತಿಸ್ಪರ್ಧಿಯಾಗಲಿದೆ. ಹಾಗಾದ್ರೆ ಜಿಯೋ vs ಏರ್ಟೆಲ್ ಫೈಬರ್‌ನಲ್ಲಿ ಯಾವುದು ಉತ್ತಮ? ಮುಂದೆ ತಿಳಿಯಿರಿ.
ಜಿಯೋ ಮತ್ತು ಏರ್‌ಟೆಲ್ ತಮ್ಮ ವೈರ್ಡ್ ಫೈಬರ್ ಬ್ರಾಡ್‌ಬ್ಯಾಂಡ್ ಸೇವೆಗಳಿಗಾಗಿ ಲಭ್ಯವಿರುವ ಯೋಜನೆಗಳನ್ನು ನೋಡೋಣ. ಈ ಪ್ಲಾನ್‌ಗಳು 30Mbps ನಿಂದ 1Gbps ವರೆಗಿನ ವೇಗವನ್ನು ಹೊಂದಿರುತ್ತವೆ. ಮತ್ತು ಅವುಗಳು ಉಚಿತ OTT ಚಂದಾದಾರಿಕೆಗಳಂತಹ ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತವೆ. ಹೆಚ್ಚಿನ ವೇಗದ ಇಂಟರ್ನೆಟ್, OTT ಪ್ರಯೋಜನಗಳು ಮತ್ತು ಹೆಚ್ಚಿನದನ್ನು ನೀಡುವ Jio ಮತ್ತು Airtel ಪ್ರಿಪೇಯ್ಡ್ ಮಾಸಿಕ ಫೈಬರ್ ಯೋಜನೆಗಳನ್ನು ಹತ್ತಿರದಿಂದ ನೋಡೋಣ.
ಜಿಯೋ ಫೈಬರ್ ರೂ 399 ಯೋಜನೆ: ಈ ಯೋಜನೆಯು 30Mbps ವೇಗದ ಅನಿಯಮಿತ ಡೇಟಾ ಮತ್ತು 30 ದಿನಗಳ ಮಾನ್ಯತೆಗೆ ವಾಯ್ಸ್ ಕರೆಯನ್ನು ನೀಡುತ್ತದೆ.
ಜಿಯೋ ಫೈಬರ್ ರೂ 699 ಯೋಜನೆ: ಈ ಯೋಜನೆಯು 100Mbps ವೇಗವನ್ನು ಉಚಿತ ವಾಯ್ಸ್ ಕರೆ ಮತ್ತು ಅನಿಯಮಿತ ಇಂಟರ್ನೆಟ್ ಪ್ರವೇಶದೊಂದಿಗೆ 30 ದಿನಗಳ ಮಾಸಿಕ ಮಾನ್ಯತೆಯನ್ನು ನೀಡುತ್ತದೆ.
ಜಿಯೋ ಫೈಬರ್ ರೂ 999 ಯೋಜನೆ: ಈ ಯೋಜನೆಯು ಅನಿಯಮಿತ ಡೇಟಾ ಮತ್ತು ಕರೆಯೊಂದಿಗೆ 150Mbps ವೇಗವನ್ನು ನೀಡುತ್ತದೆ. ಇದು Jio TV, Jio ಸಿನಿಮಾ, Jio ಸೆಕ್ಯೂರಿಟಿ ಮತ್ತು Jio ಕ್ಲೌಡ್‌ಗೆ ಉಚಿತ ಪ್ರವೇಶವನ್ನು ನೀಡುತ್ತದೆ.
ಜಿಯೋ ಫೈಬರ್ ರೂ 1499 ಯೋಜನೆ: ಈ ಯೋಜನೆಯು ನೆಟ್‌ಫ್ಲಿಕ್ಸ್, JioCinema, JioSaavn, Amazon Prime, Disney+ Hotstar ಮತ್ತು ಇತರವುಗಳನ್ನು ಒಳಗೊಂಡಂತೆ 18 OTT ಚಾನಲ್‌ಗಳ ಉಚಿತ ಚಂದಾದಾರಿಕೆಯೊಂದಿಗೆ 300Mbps ವೇಗವನ್ನು ನೀಡುತ್ತದೆ.
ಜಿಯೋ ಫೈಬರ್ ರೂ 2499 ಯೋಜನೆ: ಈ ಯೋಜನೆಯು ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಡಿಸ್ನಿ+ ಹಾಟ್‌ಸ್ಟಾರ್ ಮತ್ತು 16 ಇತರ ಅಪ್ಲಿಕೇಶನ್‌ಗಳಿಗೆ 500Mbps ವೇಗದ ಉಚಿತ ಪ್ರವೇಶವನ್ನು ನೀಡುತ್ತದೆ.
ಏರ್ಟೆಲ್ ಎಕ್ಸ್‌ಸ್ಟ್ರೀಮ್ ಫೈಬರ್ ರೂ 499 ಯೋಜನೆ: ಇದು ಅನಿಯಮಿತ ಇಂಟರ್ನೆಟ್ ಮತ್ತು ವಾಯ್ಸ್ ಕರೆಯೊಂದಿಗೆ 40Mbps ವೇಗವನ್ನು ನೀಡುವ ಮೂಲ ಯೋಜನೆಯಾಗಿದೆ. ಇದು ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ಪ್ಯಾಕ್, ವಿಂಕ್ ಮ್ಯೂಸಿಕ್ ಮತ್ತು ಅಪೊಲೊ 24X7 ಗೆ ಉಚಿತ ಪ್ರವೇಶವನ್ನು ನೀಡುತ್ತದೆ.
ಏರ್ಟೆಲ್ ಎಕ್ಸ್‌ಸ್ಟ್ರೀಮ್ ಫೈಬರ್ ರೂ 799 ಪ್ಲಾನ್: ಇದು 100Mbps ವೇಗದ ಅನಿಯಮಿತ ಡೇಟಾ ಮತ್ತು ಕರೆಯನ್ನು ನೀಡುವ ಪ್ರಮಾಣಿತ ಯೋಜನೆಯಾಗಿದೆ. ಇದು ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ಪ್ಯಾಕ್ ಅಪ್ಲಿಕೇಶನ್, ಅಪೊಲೊ 24X7 ಮತ್ತು ವಿಂಕ್ ಮ್ಯೂಸಿಕ್‌ಗೆ ಉಚಿತ ಪ್ರವೇಶವನ್ನು ನೀಡುತ್ತದೆ.
ಏರ್ಟೆಲ್ ಎಕ್ಸ್‌ಸ್ಟ್ರೀಮ್ ಫೈಬರ್ 999 ಯೋಜನೆ: ಇದು ಮನರಂಜನಾ ಯೋಜನೆಯಾಗಿದ್ದು ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ, ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ+ ಹಾಟ್‌ಸ್ಟಾರ್ ಮತ್ತು ಹೆಚ್ಚಿನವುಗಳಿಗೆ 200Mbps ವೇಗದ ಉಚಿತ ಪ್ರವೇಶವನ್ನು ನೀಡುತ್ತದೆ.
ಏರ್ಟೆಲ್ ಎಕ್ಸ್‌ಸ್ಟ್ರೀಮ್ ಫೈಬರ್ 1498 ಯೋಜನೆ: ಇದೊಂದು ಪ್ರೊಫೆಷಿನಲ್ ಪ್ಯಾಕ್ ಆಗಿದ್ದು ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಡಿಸ್ನಿ+ ಹೋಸ್ಟಾರ್ ಮತ್ತು ಹೆಚ್ಚಿನವುಗಳಿಗೆ 300Mbps ವೇಗದ ಉಚಿತ ಪ್ರವೇಶವನ್ನು ನೀಡುತ್ತದೆ.
ಸೂಚನೆ: ಭಾರ್ತಿ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಫೈಬರ್ ಯೋಜನೆ ಹೊಂದಿದ್ದು ಉಚಿತ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಬಾಕ್ಸ್ ಮತ್ತು ಸ್ಥಾಪನೆಯೊಂದಿಗೆ ಬರುತ್ತವೆ. ನೀವು ಲ್ಯಾಂಡ್‌ಲೈನ್ ಅಥವಾ ಹೆಚ್ಚಿನ ಡೇಟಾ ಕ್ಯಾಪ್ ಅನ್ನು ಆಡ್-ಆನ್‌ಗಳಾಗಿ ಸೇರಿಸಬಹುದು. ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಫೈಬರ್ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅಥವಾ ಗ್ರಾಹಕ ಸೇವೆಯನ್ನು ಸಂಪರ್ಕಿಸುವ ಮೂಲಕ ನೀವು ಯೋಜನೆಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಬಹುದು.