ಯಾವುದೇ ಹೆಚ್ಚುವರಿ ಹಣ ಖರ್ಚು ಮಾಡದೆ OTT ಪ್ಲಾಟ್‌ಫಾರ್ಮ್‌ನಲ್ಲಿ ಫುಲ್ ಮಜಾ ಆನಂದಿಸಲು ಈ ಟ್ರಿಕ್ ಬಳಸಿ ಸಾಕು!

ಯಾವುದೇ ಹೆಚ್ಚುವರಿ ಹಣ ಖರ್ಚು ಮಾಡದೆ OTT ಪ್ಲಾಟ್‌ಫಾರ್ಮ್‌ನಲ್ಲಿ ಫುಲ್ ಮಜಾ ಆನಂದಿಸಲು ಈ ಟ್ರಿಕ್ ಬಳಸಿ ಸಾಕು!
HIGHLIGHTS

ನೀವು ಯಾವುದೇ ಹೆಚ್ಚುವರಿ ಹಣ ಖರ್ಚು ಮಾಡದೆ OTT ಪ್ಲಾಟ್‌ಫಾರ್ಮ್‌ನಲ್ಲಿ ಫುಲ್ ಮಜಾ ಆನಂದಿಸಬಹುದು!

ಮೊಬೈಲ್ ಫೋನ್‌ನಲ್ಲೇ ನ್ಯೂಸ್, ಕ್ರಿಕೆಟ್ ಚಲನಚಿತ್ರಗಳು ಇತ್ಯಾದಿಗಳ ವೀಡಿಯೊ ಪ್ರಸಾರದ ಸೌಲಭ್ಯವನ್ನು ಪಡೆಯುತ್ತೀರಿ.

ನೀವು ಈಗಾಗಲೇ ರಿಚಾರ್ಜ್ ಮಾಡುವ ಯೋಜನೆಯಲ್ಲೇ ಒಂದಿಷ್ಟು ಹೆಚ್ಚು ಹಣ ಸೇರಿಸಿ ಪೂರ್ತಿ ತಿಂಗಳಿಗೆ ನಿಮಗಿಷ್ಟ ಬಂದ ಮನೋರಂಜನೆ ಪಡೆಯಬಹದು

Latest Movies Free: ನೀವು ಯಾವುದೇ ಹೆಚ್ಚುವರಿ ಹಣ ಖರ್ಚು ಮಾಡದೆ OTT ಪ್ಲಾಟ್‌ಫಾರ್ಮ್‌ನಲ್ಲಿ (Netflix, Prime Video, Disney+ Hotstar) ಫುಲ್ ಮಜಾ ಆನಂದಿಸಬಹುದು. ನೀವು ನಿಮ್ಮ ಮೊಬೈಲ್ ಫೋನ್‌ನಲ್ಲೇ ನ್ಯೂಸ್, ಕ್ರಿಕೆಟ್ ಚಲನಚಿತ್ರಗಳು ಇತ್ಯಾದಿಗಳ ವೀಡಿಯೊ ಪ್ರಸಾರದ ಸೌಲಭ್ಯವನ್ನು ಪಡೆಯುತ್ತೀರಿ. ನೀವು ಈಗಾಗಲೇ ರಿಚಾರ್ಜ್ ಮಾಡುವ ಯೋಜನೆಯಲ್ಲೇ ಒಂದಿಷ್ಟು ಹೆಚ್ಚು ಹಣ ಸೇರಿಸಿ ಪೂರ್ತಿ ತಿಂಗಳಿಗೆ ನಿಮಗಿಷ್ಟ ಬಂದ ಮನೋರಂಜನೆ ಪಡೆಯಬಹದು. ಅದರಲ್ಲೂ HD ಕಂಟೆಂಟ್ ನೋಡಲು ನೆಟ್‌ಫ್ಲಿಕ್ಸ್ ಭಾರತದಲ್ಲಿನ ಅತ್ಯಂತ ದುಬಾರಿ ಚಂದಾದಾರಿಕೆ ಪ್ಯಾಕೇಜ್‌ ಆಗಿದೆ. ವೀಡಿಯೊಗಳನ್ನು ಸ್ಟ್ರೀಮ್ ಮಾಡಲು ಬಳಕೆದಾರರು ಹಲವಾರು OTT ಪ್ಲಾಟ್‌ಫಾರ್ಮ್‌ಗಳಿಗೆ ಚಂದಾದಾರರಾಗಿರಬೇಕು. 

500 ರೂ ಗಿಂತ ಕಡಿಮೆ ಬೆಲೆಯ ಜಿಯೋ ಯೋಜನೆಗಳು 

ಸುಮಾರು 500 ರೂ ಗಿಂತ ಕಡಿಮೆ ಬೆಲೆಯ ರೀಚಾರ್ಜ್ ಯೋಜನೆಗಳೊಂದಿಗೆ ನೀವು ಉಚಿತವಾಗಿ ನೆಟ್‌ಫ್ಲಿಕ್ಸ್ ಚಂದಾದಾರಿಕೆಯನ್ನು ಪಡೆಯಬಹುದು.ಹೆಚ್ಚುವರಿಯಾಗಿ ಈ ಯೋಜನೆಯು ಅಮೆಜಾನ್ ಪ್ರೈಮ್ ಚಂದಾದಾರಿಕೆಯನ್ನು ಸಹ ಒಳಗೊಂಡಿದೆ. ನೆಟ್‌ಫ್ಲಿಕ್ಸ್ ಚಂದಾದಾರಿಕೆಯನ್ನು ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್‌ನೊಂದಿಗೆ ಅತ್ಯಂತ ಕೈಗೆಟುಕುವ ಪ್ಯಾಕೇಜ್ ನ ಮೂಲಕ ನೀಡಲಾಗುತ್ತದೆ. ಕಂಪನಿಯ ಅಗ್ಗದ ಪೋಸ್ಟ್‌ಪೇಯ್ಡ್ ಪ್ಯಾಕೇಜ್ ಕೇವಲ ರೂ 399 ಆಗಿದ್ದು ಇದು ಅನೇಕ OTT ಪ್ಲಾಟ್‌ಫಾರ್ಮ್‌ಗಳ ಚಂದಾದಾರಿಕೆ ಮತ್ತು ಅನ್‌ಲಿಮಿಟೆಡ್ ಕರೆ ಹಾಗೂ ಡೇಟಾ ರೋಲ್‌ಓವರ್‌ನಂತಹ ಸೌಲಭ್ಯಗಳನ್ನು ಒಳಗೊಂಡಿದೆ. ಸದ್ಯಕ್ಕೆ ಇದಕ್ಕೆ ಪ್ರತಿಸ್ಪರ್ಧಿಯಾಗುವ ಯಾವುದೇ ಪೋಸ್ಟ್‌ಪೇಯ್ಡ್ ಅಥವಾ ಪ್ರಿಪೇಯ್ಡ್ ಯೋಜನೆಗಳಿಲ್ಲ.

ಜಿಯೋದ ರೂ. 399 ಯೋಜನೆ:

ರಿಲಯನ್ಸ್ ಜಿಯೋ ಬಳಕೆದಾರರು ರೂ 399 ರ ಪೋಸ್ಟ್‌ಪೇಯ್ಡ್ ಯೋಜನೆಯನ್ನು ಬಳಸಿಕೊಂಡು ರೀಚಾರ್ಜ್ ಮಾಡುವ ಆಯ್ಕೆಯನ್ನು ಹೊಂದಿದ್ದಾರೆ. ಒಂದು ತಿಂಗಳ ವ್ಯಾಲಿಡಿಟಿಯೊಂದಿಗೆ ಈ ಯೋಜನೆ ಎಲ್ಲಾ ನೆಟ್‌ವರ್ಕ್‌ಗಳಿಗೆ ಅನ್‌ಲಿಮಿಟೆಡ್ ಕರೆ ಪ್ರಯೋಜನಗಳನ್ನು ಒದಗಿಸುತ್ತದೆ. ಈ ಯೋಜನೆ ಒಟ್ಟು 75 GB ಡೇಟಾವನ್ನು ಹೊಂದಿದೆ. ಅದರ ನಂತರ ಪ್ರತಿ GB ಗೆ 10 ರೂ ಪಾವತಿಸಬೇಕು. ಅಷ್ಟೇ ಅಲ್ಲದೆ 200GB ವರೆಗಿನ ಡೇಟಾ ರೋಲ್‌ಓವರ್ ಸೌಲಭ್ಯವು ಯೋಜನೆಯಲ್ಲಿ ಲಭ್ಯವಿದೆ. ಅಂದರೆ ಆ ತಿಂಗಳಲ್ಲಿ ಉಳಿದ ಡೇಟಾವನ್ನು ಮುಂದಿನ ತಿಂಗಳಿಗೆ ವರ್ಗಾಯಿಸಲಾಗುತ್ತದೆ. ಹೆಚ್ಚುವರಿಯಾಗಿ ಈ ಯೋಜನೆಯು ಪ್ರತಿ ದಿನ 100 SMS ಗಳನ್ನು ಒಳಗೊಂಡಿರುತ್ತದೆ ಮತ್ತು ಅರ್ಹ ಸದಸ್ಯರಿಗೆ ಅನ್‌ಲಿಮಿಟೆಡ್ 5G ಡೇಟಾವನ್ನು ಬಳಸುವ ಅವಕಾಶವನ್ನು ನೀಡಲಾಗುತ್ತದೆ.

ಜಿಯೋ ಪೋಸ್ಟ್ಪೇಯ್ಡ್ ಯೋಜನೆಗಳಿಗೆ ಪ್ರತ್ಯೇಕವಾಗಿ GST ಶುಲ್ಕ:

ಈ ಯೋಜನೆಯೊಂದಿಗೆ ನೆಟ್‌ಫ್ಲಿಕ್ಸ್ (ಮೊಬೈಲ್) ಪ್ಲಾನ್ ಚಂದಾದಾರಿಕೆಯ ಜೊತೆಗೆ ಅಮೆಜಾನ್ ಪ್ರೈಮ್‌ಗೂ ಒಂದು ವರ್ಷದ ಸದಸ್ಯತ್ವವನ್ನು ನೀಡಲಾಗುತ್ತದೆ. ಬಳಕೆದಾರರು ಇವುಗಳ ಜೊತೆಗೆ ಜಿಯೋ ಟಿವಿ, ಜಿಯೋ ಸೆಕ್ಯುರಿಟಿ ಮತ್ತು ಜಿಯೋ ಕ್ಲೌಡ್ ಸೇವೆಗಳನ್ನು ಸಹ ಪಡೆಯಬಹುದು. ಅಲ್ಲದೆ ಯಾವುದೇ ಕಂಪನಿಯ ಪೋಸ್ಟ್‌ಪೇಯ್ಡ್ ಯೋಜನೆಗಳಲ್ಲಿ 18% GST ಪಾವತಿಯ ಅಗತ್ಯವಿರುತ್ತದೆ. ಉದಾಹರಣೆಗೆ 18% GST (ರೂ. 71.82) ನಂತರ ತಿಂಗಳಿಗೆ ರೂ 399 ಇದ್ದ ಪ್ಯಾಕೇಜ್ ಈಗ ರೂ 470.82 ವೆಚ್ಚವಾಗುತ್ತದೆ. ಇತರ ಪೋಸ್ಟ್‌ಪೇಯ್ಡ್ ಯೋಜನೆಗಳಿಗೂ ಇದು ಅನ್ವಯಿಸುತ್ತದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo